ಒಟಿಟಿಗೆ ಲಗ್ಗೆ ಇಟ್ಟ ಧ್ರುವ ಸರ್ಜಾ ನಟನೆಯ KD: ಸ್ಟ್ರೀಮಿಂಗ್ ಎಲ್ಲಿ, ಯಾವಾಗ ವೀಕ್ಷಿಸಬಹುದು?

ಕನ್ನಡ ಚಿತ್ರರಂಗದ ಮಾಸ್ ನಿರ್ದೇಶಕ ಪ್ರೇಮ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರ 'ಕೆಡಿ-ದಿ ಡೆವಿಲ್' (KD The Devil) ಕೊನೆಗೂ ಒಟಿಟಿ (OTT) ಅಂಗಳಕ್ಕೆ ಬರಲು ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿದ್ದ ಈ ಹೈ-ವೋಲ್ಟೇಜ್ ಆಕ್ಷನ್ ಸಿನಿಮಾ, ಈಗ ಚಿತ್ರಮಂದಿರಗಳ ಅಬ್ಬರದ ಬಳಿಕ ಡಿಜಿಟಲ್ ಪರದೆಯ ಮೇಲೆ ಧೂಳೆಬ್ಬಿಸಲು ರೆಡಿಯಾಗಿದೆ.

ವಿಶೇಷವೆಂದರೆ ಈ ಚಿತ್ರದ ಬಿಡುಗಡೆಗೂ ಮುನ್ನ ಕೇಳಿಬಂದಿದ್ದ ವಿವಾದಗಳು ಮತ್ತು ಬಾಲಿವುಡ್ ತಾರೆಯರ ದಂಡೇ ಚಿತ್ರದಲ್ಲಿದ್ದ ಕಾರಣ ಸಿನಿರಸಿಕರಲ್ಲಿ ಇದರ ಒಟಿಟಿ ಸ್ಟ್ರೀಮಿಂಗ್ ಬಗ್ಗೆ ಭಾರಿ ಕುತೂಹಲವಿತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದ್ದು, ಸ್ಟ್ರೀಮಿಂಗ್ ದಿನಾಂಕ ಅಧಿಕೃತವಾಗಿದೆ. 'ಕೆಡಿ-ದಿ ಡೆವಿಲ್' ಸಿನಿಮಾ ಪ್ರಸಿದ್ಧ ಒಟಿಟಿ ಸಂಸ್ಥೆಯಾದ ಜೀ5ನಲ್ಲಿ (Zee5) ಪ್ರಸಾರವಾಗಲಿದೆ.

Dhruva Sarja

ಈ ಕುರಿತು 'ಜೀ5 ಕನ್ನಡ' ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಟ್ರೈಲರ್ ಕಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಅಧಿಕೃತವಾಗಿ ಘೋಷಿಸಿದೆ. "ಕಾಲಿಟ್ಟಲ್ಲೆಲ್ಲಾ ಧೂಳು, ಊದಿದ ಕಡೆಯಲ್ಲೆಲ್ಲಾ ರಕ್ತ! ಡೆವಿಲ್ ಎಂಟ್ರಿಗೆ ಕೌಂಟ್‌ಡೌನ್ ಶುರುವಾಗಿದೆ" ಎಂಬ ಖಡಕ್ ಅಡಿಬರಹದೊಂದಿಗೆ ಜೂನ್ 5ರಿಂದ ಸಿನಿಮಾ ಲಭ್ಯವಿರಲಿದೆ ಎಂದು ತಿಳಿಸಿದೆ.

ಇಂದು ಏನಾದ್ರೂ ಆಗಬಹುದು, ಹುಷಾರಾಗಿರಿ ಅಂದಿದ್ರು: ಹೊರರಾಜ್ಯದ ಭೇಟಿ ವೇಳೆ ನಟಿ ಮೇಘನಾ ಗಾಂವ್ಕರ್‌ಗೆ ಆಗಿದ್ದೇನು?
ಇಂದು ಏನಾದ್ರೂ ಆಗಬಹುದು, ಹುಷಾರಾಗಿರಿ ಅಂದಿದ್ರು: ಹೊರರಾಜ್ಯದ ಭೇಟಿ ವೇಳೆ ನಟಿ ಮೇಘನಾ ಗಾಂವ್ಕರ್‌ಗೆ ಆಗಿದ್ದೇನು?

ಹೊಸ ಟ್ರೈಲರ್‌ನಲ್ಲಿ ಕನ್ನಡಿಗರ ನೆಚ್ಚಿನ ನಟ ಕಿಚ್ಚ ಸುದೀಪ್ ಅವರ ಧ್ವನಿಯಲ್ಲಿ, "ಕಾಳಿ ಎಂಬ ಅಪರಾಧಿಯನ್ನು ಪ್ರಧಾನ ಮಂತ್ರಿಗಿಂತಲೂ ಹೆಚ್ಚಿನ ಭದ್ರತೆಯಲ್ಲಿ ಕರೆತರಲಾಗುತ್ತಿದೆ" ಎನ್ನುವ ಹಿನ್ನೆಲೆ ಧ್ವನಿಯೊಂದಿಗೆ ಕಾಳಿದಾಸ್ ಅಲಿಯಾಸ್ 'ಕೆಡಿ' ಪಾತ್ರದ ಭೀಕರ ಎಂಟ್ರಿಯನ್ನು ತೋರಿಸಲಾಗಿದೆ. ಸಾಮಾನ್ಯ ವ್ಯಕ್ತಿಯೊಬ್ಬ ಅನಿವಾರ್ಯವಾಗಿ ದೊಡ್ಡದೊಂದು ಜಾಲಕ್ಕೆ ಸಿಲುಕಿಕೊಳ್ಳುವ ಕಥಾಹಂದರದ ಸುಳಿವು ಟ್ರೈಲರ್‌ನಲ್ಲಿದೆ.

ವಿವಾದ ಸೃಷ್ಟಿಸಿದ್ದ ಆ ಒಂದು ಸಾಂಗ್

ಈ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರಿ ವಿವಾದಕ್ಕೆ ಸಿಲುಕಿ ಸುದ್ದಿಯಾಗಿತ್ತು. ಚಿತ್ರದ 'ಸರ್ಸೆ ನಿನ್ನ ಸೆರಗ ಸರ್ಸೆ' ಎಂಬ ಹಾಡಿನ ಸಾಹಿತ್ಯ ಮತ್ತು ಅದರಲ್ಲಿನ ದೃಶ್ಯಗಳು ತೀವ್ರ ಟೀಕೆಗೆ ಒಳಗಾಗಿದ್ದವು. ಬಾಲಿವುಡ್ ನಟಿ ನೋರಾ ಫತೇಹಿ ಮತ್ತು ಸಂಜಯ್ ದತ್ ಕಾಂಬಿನೇಷನ್‌ನ ಈ ಹಾಡಿನ ವಿರುದ್ಧ ಕಾನೂನು ಹೋರಾಟಗಳು ನಡೆದು, ರಾಷ್ಟ್ರೀಯ ಮತ್ತು ರಾಜ್ಯ ಮಹಿಳಾ ಆಯೋಗಗಳು ಕೂಡ ಮಧ್ಯಪ್ರವೇಶಿಸಿದ್ದವು. ಬಳಿಕ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಈ ಹಾಡಿನ ಹಿಂದಿ ಆವೃತ್ತಿಯನ್ನು ಯೂಟ್ಯೂಬ್ ಹಾಗೂ ಇತರೆ ಪ್ಲಾಟ್‌ಫಾರ್ಮ್‌ಗಳಿಂದ ಡಿಲೀಟ್‌ ಮಾಡಲಾಯಿತು. ನಂತರದ ದಿನಗಳಲ್ಲಿ ನಟಿ ನೋರಾ ಫತೇಹಿ ತಮಗೆ ಹಾಡಿನ ಅಸಲಿ ಅರ್ಥ ಗೊತ್ತಿರಲಿಲ್ಲ ಎಂದು ಹೇಳಿ ವಿವಾದದಿಂದ ದೂರ ಸರಿದಿದ್ದರು.

ಸ್ಯಾಂಡಲ್‌ವುಡ್ ಟು ಬಾಲಿವುಡ್ ತಾರಾಗಣ

ಕೆವಿಎನ್ ಪ್ರೊಡಕ್ಷನ್ಸ್ (KVN Productions) ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಅವರು ನಿರ್ಮಿಸಿರುವ ಈ ಚಿತ್ರದಲ್ಲಿ ದಕ್ಷಿಣ ಭಾರತ ಹಾಗೂ ಬಾಲಿವುಡ್‌ನ ದೊಡ್ಡ ತಾರಾಬಳಗವೇ ಇದೆ. ಧ್ರುವ ಸರ್ಜಾ ಜೊತೆಗೆ ಬಾಲಿವುಡ್ ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ, ಕ್ರೇಜಿಸ್ಟಾರ್ ವಿ.ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ ಹಾಗೂ ಜಿಸ್ಸು ಸೇನ್‌ಗುಪ್ತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 24.19 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಥಿಯೇಟರ್‌ನಲ್ಲಿ ಮಿಸ್ ಮಾಡಿದವರು ಹಾಗೂ ಧ್ರುವ ಸರ್ಜಾ ಅವರ ರಗಡ್ ಲುಕ್ ಮತ್ತು ಮೈ ಜುಂ ಎನಿಸುವ ಆಕ್ಷನ್ ದೃಶ್ಯಗಳನ್ನು ಮತ್ತೊಮ್ಮೆ ನೋಡಬಯಸುವವರು ಜೂನ್ 5ರಿಂದ ಜೀ5ನಲ್ಲಿ ಈ ಚಿತ್ರವನ್ನು ಕಣ್ತುಂಬಿಕೊಳ್ಳಬಹುದು. ರಿಲೀಸ್‌ ಆದ ಕೆಲವೇ ಅಂತರದಲ್ಲಿ ಒಟಿಟಿಗೆ ಬರ್ತಿದೆ ಕೆಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+