ಇಂದು ಏನಾದ್ರೂ ಆಗಬಹುದು, ಹುಷಾರಾಗಿರಿ ಅಂದಿದ್ರು: ಹೊರರಾಜ್ಯದ ಭೇಟಿ ವೇಳೆ ನಟಿ ಮೇಘನಾ ಗಾಂವ್ಕರ್‌ಗೆ ಆಗಿದ್ದೇನು?

ಅಂದು ಇಡೀ ದೇಶವೇ ಉಸಿರು ಬಿಗಿಹಿಡಿದು ಕಾಯುತ್ತಿದ್ದ ಮಹತ್ವದ ಚುನಾವಣಾ ಫಲಿತಾಂಶದ ದಿನ. ದೇಶದ ರಾಜಕೀಯ ಭವಿಷ್ಯ ನಿರ್ಧಾರವಾಗುತ್ತಿದ್ದ ಆ ಕ್ಷಣದಲ್ಲಿ, ಆ ಒಂದು ಪ್ರಮುಖ ನಗರದಲ್ಲಿ ತೀವ್ರ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. 'ಇವತ್ತು ಈ ನಗರದಲ್ಲಿ ಏನು ಬೇಕಾದರೂ ಆಗಬಹುದು, ಹುಷಾರಾಗಿರಿ' ಎಂದು ಸ್ಥಳೀಯರು ಎಚ್ಚರಿಸುತ್ತಿದ್ದ ಆ ಆತಂಕದ ಸಂದರ್ಭದಲ್ಲಿ, ಸ್ಯಾಂಡಲ್‌ವುಡ್‌ನ ಖ್ಯಾತ ನಟಿಯೊಬ್ಬರು ಅಲ್ಲಿ ಸಿಲುಕಿಕೊಂಡಿದ್ದರು.

ಅಲ್ಲಿ ಸೃಷ್ಟಿಯಾಗಿದ್ದ ತೀವ್ರ ತಲ್ಲಣದ ನಡುವೆಯೂ, ಆಕೆ ಧೈರ್ಯ ಮಾಡಿ ಅಲ್ಲಿನ ಪ್ರಸಿದ್ಧ ದೇವಸ್ಥಾನಕ್ಕೆ ಭೇಟಿ ನೀಡಿದ್ದಲ್ಲದೆ, ತಮಗಾದ ವಿಶೇಷ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಆ ನಟಿ ಮತ್ಯಾರೂ ಅಲ್ಲ, ಕನ್ನಡ ಚಿತ್ರರಂಗದ "ಚಾರ್ಮಿನಾರ್‌" ಖ್ಯಾತಿಯ ನಟಿ ಮೇಘನಾ ಗಾಂವ್ಕರ್. ಚುನಾವಣಾ ಫಲಿತಾಂಶದ ದಿನದಂದು ತಮಗಾದ ಅನುಭವವನ್ನು ಮೇಘನಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Meghana Gaonkar

ಫಲಿತಾಂಶದ ದಿನವೇ ಅಲ್ಲಿಗೆ ಹೋಗಿದ್ದೆ

ನಟಿ ಮೇಘನಾ ಗಾಂವ್ಕರ್ ಅವರು ಇತ್ತೀಚೆಗೆ ಪಶ್ಚಿಮ ಬಂಗಾಳದ ಕೋಲ್ಕತ್ತಾ ನಗರಕ್ಕೆ ಭೇಟಿ ನೀಡಿದ್ದರು. ಅತ್ಯಂತ ಕುತೂಹಲ ಕೆರಳಿಸಿದ್ದ ಚುನಾವಣಾ ಫಲಿತಾಂಶ ಹೊರಬಿದ್ದ ದಿನದಂದೇ ಮೇಘನಾ ಅವರು ಕೋಲ್ಕತ್ತಾ ನಗರದ ಮೂಲಕ ಪ್ರಯಾಣಿಸುತ್ತಿದ್ದರು. ಆ ಸಂದರ್ಭದಲ್ಲಿ ನಗರದಲ್ಲಿದ್ದ ತೀವ್ರ ರಾಜಕೀಯ ತಲ್ಲಣ ಮತ್ತು ಆತಂಕದ ಪರಿಸ್ಥಿತಿಯನ್ನು ಅವರು ಮೇಘನಾ ನೆನಪಿಸಿಕೊಂಡಿದ್ದಾರೆ.

ಕೊನೆಯಿಲ್ಲದ ಪ್ರೀತಿ, ಮರೆಯಲಾಗದ ನೆನಪು: ಪತಿ ಅಂಬರೀಶ್ ಹುಟ್ಟುಹಬ್ಬಕ್ಕೆ ಸುಮಲತಾ ಭಾವುಕ ಪೋಸ್ಟ್
ಕೊನೆಯಿಲ್ಲದ ಪ್ರೀತಿ, ಮರೆಯಲಾಗದ ನೆನಪು: ಪತಿ ಅಂಬರೀಶ್ ಹುಟ್ಟುಹಬ್ಬಕ್ಕೆ ಸುಮಲತಾ ಭಾವುಕ ಪೋಸ್ಟ್

ಈ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಮೇಘನಾ, "ಚುನಾವಣಾ ಫಲಿತಾಂಶಗಳು ಪ್ರಕಟವಾದ ದಿನ ನಾನು ಕೋಲ್ಕತ್ತಾ ಮೂಲಕ ಪ್ರಯಾಣಿಸುತ್ತಿದ್ದೆ. ಆ ದಿನ ಇಡೀ ನಗರದಲ್ಲಿ ಒಂದು ರೀತಿಯ ತೀವ್ರವಾದ ಮತ್ತು ವಿಭಿನ್ನವಾದ ಶಕ್ತಿಯ ಬದಲಾವಣೆಯನ್ನು ನಾನು ಸ್ಪಷ್ಟವಾಗಿ ಅನುಭವಿಸಬಲ್ಲವಳಾಗಿದ್ದೆ. ಪರಿಸ್ಥಿತಿ ಎಷ್ಟು ಸೂಕ್ಷ್ಮವಾಗಿತ್ತೆಂದರೆ, 'ಇವತ್ತು ಇಲ್ಲಿ ಏನು ಬೇಕಾದರೂ ಆಗಬಹುದು, ದಯವಿಟ್ಟು ತುಂಬಾ ಜಾಗರೂಕರಾಗಿರಿ' ಎಂದು ಅಲ್ಲಿನ ಜನ ನನಗೆ ಎಚ್ಚರಿಸಿದ್ದರು" ಎಂದು ಅಂದಿನ ವಾತಾವರಣವನ್ನು ವಿವರಿಸಿದ್ದಾರೆ.

Meghana Gaonkar

ಕಾಳಿ ದರ್ಶನದ ನಂತರ ಬೆಂಗಾಳಿ ಭೋಜನ ಸವಿದೆ

ನಗರದಲ್ಲಿ ಅಂತಹ ಬಿಗುವಿನ ವಾತಾವರಣವಿದ್ದರೂ ಕೋಲ್ಕತ್ತಾದ ಪ್ರಸಿದ್ಧ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಲೇಬೇಕು ಎಂಬ ಬಲವಾದ ಹಂಬಲ ಮೇಘನಾ ಅವರಲ್ಲಿತ್ತು. "ಏನೇ ಆದರೂ ಸರಿ, ನಾನು ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಲೇಬೇಕು ಮತ್ತು ಸಾಧ್ಯವಾದರೆ ಒಂದು ಸಾಂಪ್ರದಾಯಿಕ ಬಂಗಾಳಿ ಊಟ ಸವಿಯಬೇಕು ಎಂದು ನಿರ್ಧರಿಸಿದ್ದೆ. ಅದರಂತೆ ನಾನು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದೆ. ಆ ಅನುಭವ ನಿಜಕ್ಕೂ ದೈವಿಕವಾಗಿತ್ತು" ಎಂದು ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ.

ಯಾವುದೇ ಅಡೆತಡೆಗಳಿಲ್ಲದೆ ದೇವಿಯ ದರ್ಶನ ಪಡೆದು, ಕೋಲ್ಕತ್ತಾದ ವಿಶೇಷ ಭೋಜನ ಸವಿದು ಮರಳಿದ ನಟಿ ಮೇಘನಾ ಅವರ ಈ ಪೋಸ್ಟ್‌ಗೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ಸಾಕಷ್ಟು ಲೈಕ್ಸ್ ಹಾಗೂ ಕಮೆಂಟ್‌ಗಳು ಹರಿದುಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+