ಆಂಧ್ರಕ್ಕೆ ವಿಶೇಷ ಸ್ಥಾನಮಾನ, ಏಪ್ರಿಲ್ 5ರ ಗಡುವು ನೀಡಿದ ಜಗನ್

ಹೈದರಾಬಾದ್, ಫೆಬ್ರವರಿ 13: ಬಜೆಟ್ ನಲ್ಲಿ ಆಂಧ್ರ ಪ್ರದೇಶಕ್ಕೆ ನಡೆದಿದೆ ಎನ್ನಲಾದ ಅನ್ಯಾಯವನ್ನು ಪ್ರತಿಭಟಿಸಿ ನಡೆಯುತ್ತಿರುವ ಹೋರಾಟ ನಿರ್ಣಾಯಕ ಹಂತ ತಲುಪಿದೆ.

ಏಪ್ರಿಲ್ 5ರ ಮೊದಲು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದಿದ್ದಲ್ಲಿ ವೈಎಸ್ಆರ್ ಕಾಂಗ್ರೆಸ್ ನ ಸಂಸದರು ರಾಜೀನಾಮೆ ನೀಡಲಿದ್ದಾರೆ ಎಂದು ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಗುಡುಗಿದ್ದಾರೆ.

ಆಂಧ್ರ ಪ್ರದೇಶವನ್ನು ಲೋಕಸಭೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ನ 9 ಜನ ಸಂಸದರು ಪ್ರತಿನಿಧಿಸುತ್ತಿದ್ದಾರೆ. "ನಮಗೆ ಏಪ್ರಿಲ್ 5ರ ಮೊದಲು ವಿಶೇಷ ಸ್ಥಾನಮಾನ ನೀಡದಿದ್ದಲ್ಲಿ, ಏಪ್ರಿಲ್ 6ರಂದು ನಮ್ಮ ಸಂಸದರು ರಾಜೀನಾಮೆ ನೀಡಲಿದ್ದಾರೆ," ಎಂದು ನೆಲ್ಲೋರ್ ನಲ್ಲಿ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. ಏಪ್ರಿಲ್ 5ರವರೆಗೆ ಲೋಕಸಭೆಯಲ್ಲಿ ನಮ್ಮ ಸಂಸದರು ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ ನಡೆಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

YSR Congress MPs will resign by 5th April, if special status is not given to Andhra: Jaganmohan Reddy

ಏಪ್ರಿಲ್ 6ರಂದು ಬಜೆಟ್ ಅಧಿವೇಶನ ಕೊನೆಯಾಗಲಿದೆ. ಅಂದೇ ರಾಜೀನಾಮೆ ನೀಡುವ ಬೆದರಿಕೆಯನ್ನು ರೆಡ್ಡಿ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+