ಕೇರಳ ಬಜೆಟ್: ಮದ್ಯದ ಮೇಲಿನ ತೆರಿಗೆ ಶೇ. 200ರಷ್ಟು ಏರಿಕೆ

ತಿರುವನಂತಪುರಂ, ಫೆಬ್ರವರಿ 2: ಕೇರಳ ವಿಧಾನಸಭೆಯಲ್ಲಿ ಇಂದು ಪಿಣರಾಯಿ ವಿಜಯನ್ ಸರಕಾರದ ಎರಡನೇ ಬಜೆಟ್ ಮಂಡನೆಯಾಯಿತು. ಹಣಕಾಸು ಸಚಿವ ಥೋಮಸ್ ಐಸಾಕ್ ಬಜೆಟ್ ಮಂಡಿಸಿದರು.

ಥೋಮಸ್ ಬಜೆಟ್ ನಲ್ಲಿ ಮದ್ಯ ಪ್ರಿಯರಿಗೆ ಭಾರೀ ಆಘಾತವನ್ನೇ ನೀಡಿದ್ದಾರೆ. ಭಾರತದಲ್ಲಿ ಉತ್ಪಾದನೆಯಾಗುವ ವಿದೇಶಿ ಕಂಪನಿಗಳ ಮದ್ಯದ ಮೇಲಿನ ತೆರಿಗೆಯನ್ನು ಅವರು ಶೇಕಡಾ 200 ರಷ್ಟು ಏರಿಕೆ ಮಾಡಿದ್ದಾರೆ. 400 ರೂಪಾಯಿ ಬೆಲೆಗಿತ ಹೆಚ್ಚಿನ ವಿದೇಶಿ ಬ್ರ್ಯಾಂಡ್ ಮದ್ಯಗಳಿಗೆ ಈ ತೆರಿಗೆ ಏರಿಕೆ ಅನ್ವಯವಾಗಲಿದೆ.

ಜತೆಗೆ ಬಿಯರ್ ದರವನ್ನು ಬಜೆಟ್ ನಲ್ಲಿ ದ್ವಿಗುಣಗೊಳಿಸಲಾಗಿದೆ. ಸದ್ಯ ಕೇರಳ ಸರಕಾರಕ್ಕೆ ಪ್ರತಿ ವರ್ಷ ಮದ್ಯದಿಂದ 12,000 ಕೋಟಿ ರೂಪಾಯಿ ಆದಾಯ ಹರಿದು ಬರುತ್ತದೆ. ಇದೀಗ ತೆರಿಗೆ ಏರಿಕೆಯಿಂದ ಮತ್ತಷ್ಟು ಆದಾಯ ಹರಿದು ಬರುವ ನಿರೀಕ್ಷೆ ಇದೆ.

Kerala Budget: 200% increase in the Liquor Tax

ಕೆಲವು ವರ್ಷಗಳ ಹಿಂದೆ ಕೇರಳದಲ್ಲಿ ಸಂಪುರ್ಣ ಮದ್ಯ ನಿಷೇಧ ಪ್ರಯತ್ನ ನಡೆದಿತ್ತು. ಆದರೆ ಬಾರ್ ಮಾಲಿಕರೆಲ್ಲಾ ಹೈಕೋರ್ಟ್ ಮೊರೆ ಹೋಗಿದ್ದರಿಂದ ಸದ್ಯ ಕೇರಳದಲ್ಲಿ 3 ಸ್ಟಾರ್ ಹೊಟೇಲ್ ಮತ್ತು ಅದಕ್ಕಿಂತ ಉನ್ನತ ದರ್ಜೆಯ ಹೊಟೇಲ್ ಗಳಲ್ಲಿ ಮಾತ್ರ ಬಾರ್ ತೆರೆಯಲು ಅವಕಾಶವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+