ಷೇರುಪೇಟೆ ಕುಸಿತ: ಚಿನ್ನದ ಬೆಲೆ ಮತ್ತೆ ಏರಿಕೆ
ಬೆಂಗಳೂರು, ಫೆಬ್ರವರಿ 06: ಷೇರುಪೇಟೆಯಲ್ಲಿ ಮಂಗಳವಾರದಂದು ಸರಿ ಸುಮಾರು 1,274 ಅಂಕಗಳು ಕುಸಿಯುವ ಮೂಲಕ ಬಂಡವಾಳ ಹೂಡಿಕೆದಾರರಿಗೆ ಕರಾಳ ಮಂಗಳವಾರವಾಗಿ ಪರಿಣಮಿಸಿತು. ಇದರ ಬೆನ್ನಲ್ಲೇ ಚಿನಿವಾರ ಪೇಟೆಯಲ್ಲೂ ಚಿನ್ನದ ಬೆಲೆ ಕುಸಿದಿದೆ.
ಶುಭ ಸಮಾರಂಭಗಳು ಹೆಚ್ಚಾಗಿರುವುದರಿಂದ ಹಳದಿ ಲೋಹದ ಬೇಡಿಕೆ ಏರಿಕೆಯಾಗಿದ್ದು, 330ರು ಹೆಚ್ಚಾಗಿ ಪ್ರತಿ 10 ಗ್ರಾಂಗೆ 31,600 ರು ನಂತೆ ವಹಿವಾಟು ನಡೆಸಿದೆ. ಕಳೆದ 14 ತಿಂಗಳಿನಲ್ಲಿ ಹೆಚ್ಚಿನ ಏರಿಕೆ ಇದಾಗಿದೆ. ಬೆಳ್ಳಿ 40,000 ಪ್ರತಿ ಕೆಜಿಯಂತೆ ವಹಿವಾಟು ನಡೆಸಿತು.

ಷೇರುಪೇಟೆ ಕುಸಿತದ ಪರಿಣಾಮವಾಗಿ ಹೂಡಿಕೆದಾರರಿಗೆ ಸೆಕೆಂಡುಗಳಲ್ಲಿ ಸರಿ ಸುಮಾರು 5.4 ಲಕ್ಷ ಕೋಟಿ ರು ನಷ್ಟವಾಗಿದೆ. ಕಳೆದ ಮೂರು ದಿನಗಳಲ್ಲಿ ಸುಮಾರು 9.6 ಲಕ್ಷ ಕೋಟಿ ರು ನಷ್ಟವಾಗಿದೆ.
ಈ ದಿನದ ಚಿನ್ನ/ಬೆಳ್ಳಿ ದರ ತಿಳಿದುಕೊಳ್ಳಿ
2007 ಬಳಿಕ ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯ ಕೂಡ ಸತತವಾಗಿ ಕುಸಿತ ಕಾಣುತ್ತಿದೆ.












Click it and Unblock the Notifications