ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ತಿ ಗಳಿಕೆಯಲ್ಲಿ ಡಿಕೆ ಶಿವಕುಮಾರ್ ವಿಶ್ವ ದಾಖಲೆ: ಇ.ಡಿ. ಮಾಹಿತಿ

|
Google Oneindia Kannada News

Recommended Video

DKS's world records in property earning: Says ED | Oneindia Kannada

ನವದೆಹಲಿ, ಅಕ್ಟೋಬರ್ 18: ಆಸ್ತಿ ಗಳಿಕೆಯಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ವಿಶ್ವದಾಖಲೆ ನಿರ್ಮಿಸಿದ್ದಾರೆ ಎಂದಿ ಜಾರಿ ನಿರ್ದೇಶನಾಲಯ ಪರ ವಕೀಲರು ವಾದಿಸಿದ್ದಾರೆ.

ಡಿಕೆ ಶಿವಕುಮಾರ್ ಅವರು 300 ಆಸ್ತಿ ಹೊಂದಿದ್ದು, ಕ್ರಿಕೆಟ್‌ನಲ್ಲಿ ಹೇಗೆ ತ್ರಿಬಲ್ ಸೆಂಚುರಿ ಬಾರಿಸುತ್ತಾರೋ ಹಾಗೆ ಡಿಕೆ ಶಿವಕುಮಾರ್ ಅವರು ಆಸ್ತಿ ಗಳಿಕೆಯಲ್ಲಿ ತ್ರಿಬಲ್ ಸೆಂಚುರಿ ಬಾರಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಪರ ವಕೀಲ ಕೆ.ಎಂ ನಟರಾಜ್ ವಾದ ಮಂಡಿಸಿದ್ದಾರೆ.

ಡಿಕೆಶಿ ಜಾಮೀನಿಗೆ ಆಕ್ಷೇಪ

ಡಿಕೆಶಿ ಜಾಮೀನಿಗೆ ಆಕ್ಷೇಪ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಎಎಸ್‌ಜಿ ನಟರಾಜ್ ಅವರು ನ್ಯಾ. ಸುರೇಶ್ ಕುಮಾರ್ ಕೈಟ್ ಅವರ ಏಕಸದಸ್ಯ ನ್ಯಾಯಪೀಠದ ಮುಂದೆ ಜಾಮೀನಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ದೆಹಲಿ ಕೋರ್ಟ್ ಮುಂದೆ 13 ಗಿಳಿಗಳನ್ನು ಹಾಜರುಪಡಿಸಿದ್ದೇಕೆ?ದೆಹಲಿ ಕೋರ್ಟ್ ಮುಂದೆ 13 ಗಿಳಿಗಳನ್ನು ಹಾಜರುಪಡಿಸಿದ್ದೇಕೆ?

300ಕ್ಕೂ ಹೆಚ್ಚು ಕೃಷಿಯೇತರ ಆಸ್ತಿ

300ಕ್ಕೂ ಹೆಚ್ಚು ಕೃಷಿಯೇತರ ಆಸ್ತಿ

ಡಿಕೆ ಶಿವಕುಮಾರ್ ಅವರ ಪ್ರಕರಣದಲ್ಲಿ ಅವರ ಸೋದರ ಡಿಕೆ ಸುರೇಶ್ 27, ತಾಯಿ ಗೌರಮ್ಮ 38, ಡಿಕೆ ಶಿವಕುಮಾರ್ 24 ಆಸ್ತಿ ಹೊಂದಿದ್ದಾರೆ. ಆದರೆ ಡಿಕೆ ಶಿವಕುಮಾರ್ ಮತ್ತವರ ಕುಟುಂಬದ ಸದಸ್ಯರ ಬಳಿ 300ಕ್ಕೂ ಹೆಚ್ಚು ಕೃಷಿಯೇತರ ಆಸ್ತಿಗಳಿವೆ. ಬಹುತೇಕ ಆಸ್ತಿಗಳನ್ನು ನಗದು ನೀಡಿ ಖರೀದಿಸಲಾಗಿದೆ.

ಆಸ್ತಿ ಖರೀದಿಗೆ ಹಣದ ಮೂಲ ಯಾವುದು?

ಆಸ್ತಿ ಖರೀದಿಗೆ ಹಣದ ಮೂಲ ಯಾವುದು?

ಈ ಎಲ್ಲಾ 300ಕ್ಕೂ ಹೆಚ್ಚು ಆಸ್ತಿ ಖರೀದಿಗೆ ಹಣದ ಮೂಲ ಯಾವುದು ಎಂದು ಶಿವಕುಮಾರ್ ಹೇಳಿಲ್ಲ. ಅವರ 22 ವರ್ಷದ ಮಗಳು ಐಶ್ವರ್ಯ 108 ಕೋಟಿ ರೂ ವ್ಯವಹಾರ ಹೊಂದಿದ್ದು,ಇದರಲ್ಲಿ 40 ಕೋಟಿ ರೂ. ಸಾಲವನ್ನು ಅವರಿಗೆ ಯಾರು ಕೊಟ್ಟಿದ್ದಾರೆ ಎಂಬುದೇ ಗೊತ್ತಿಲ್ಲ.ಇದೇ ಮನಿ ಲಾಂಡರಿಂಗ್ , ಶಿವಕುಮಾರ್ ಅವರದ್ದು ಮನಿ ಲಾಂಡರಿಂಗ್‌ನ ಕ್ಲಾಸಿಕ್ ಪ್ರಕರಣ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಶಿವಕುಮಾರ್ ಆಪ್ತರ ಮೇಲೆ ದಾಳಿ

ಶಿವಕುಮಾರ್ ಆಪ್ತರ ಮೇಲೆ ದಾಳಿ

ಡಿಕೆ ಶಿವಕುಮಾರ್ ಮತ್ತವರ ಆಪ್ತರಿಗೆ ಸೇರಿದ ಜಾಗದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ 8.59 ಕೋಟಿ ರೂ ಹಣ ಸಿಕ್ಕಿತ್ತು. ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಶಿವಕುಮಾರ್ ಈ ಹಣ ತಮ್ಮದೇ ಎಂದು ಹೇಳಿದ್ದಾರೆ. ಈ ಹಣದ ಮೂಲದ ಬಗ್ಗೆ ಪ್ರಶ್ನಿಸಿದಾಗ ಕೃಷಿಯಿಂದ ಬಂದಿದೆ ಎಂದು ಹೇಳಿದ್ದಾರೆ. 1989ರಿಂದ ಆರೋಪಿಗೆ ಸಾಕ್ಷ್ಯಾಧಾರಗಳನ್ನು ತಿರುಚುವ ಅಭ್ಯಾಸವಿದೆ ಎಂದು ವಕೀಲರು ವಾದಿಸಿದ್ದಾರೆ.

English summary
Former Minister DK Shivakumar has set a world record in property gains, says the Directorate of Enforcement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X