ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇದಾಧ್ಯಯನಕ್ಕಾಗಿ 2 ಖಾಸಗಿ ಶಾಲಾ ಮಂಡಳಿ ರಚನೆ: ಶಿಕ್ಷಣ ಸಚಿವಾಲಯ

|
Google Oneindia Kannada News

ನವದೆಹಲಿ, ಜುಲೈ, 20: ಶಿಕ್ಷಣ ಸಚಿವಾಲಯವು ವೇದಾಧ್ಯನಕ್ಕಾಗಿ ಎರಡು ವಿಶೇಷ ಖಾಸಗಿ ಶಾಲಾ ಮಂಡಳಿಗಳನ್ನು ರಚಿಸಿ, ಅದರಲ್ಲಿ ವೇದಾಭ್ಯಾಸದ ಜತೆಗೆ ಹೊಸ ವಿಷಯಗಳನ್ನು ಕಲಿಸಲು ಮುಂದಾಗಿದೆ ಎಂದು ಲೋಕಸಭೆಯಲ್ಲಿ ಸಚಿವ ಧರ್ಮೇಂದ್ರ ಪ್ರಧಾನ್ ಲಿಖಿತವಾಗಿ ತಿಳಿಸಿದ್ದಾರೆ.

ಈ ಕುರಿತು ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ಮಾತನಾಡಿ, ಕೇಂದ್ರವು ಪ್ರಸ್ತುತ ಸೆಂಟ್ರಲ್ ಬೋರ್ಡ್ ಆಫ್ ಸೆಕಂಎಡರಿ ಎಜುಕೇಷನ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಎರಡನ್ನು ಹೊಂದಿದೆ.

ಹಾಗೆಯೇ ಮಹರ್ಷಿ ಸಂದೀಪಾನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನ ಉಜ್ಜೈನವು ಸ್ವಾಯತ್ತ ಸಂಸ್ಥೆಯಾಗಿದ್ದು, ಶಿಕ್ಷಣ ಸಚಿವಾಲಯದ ಕೆಳಗೆ ಬರುತ್ತದೆ.

 Another Board For Oral Vedic Traditions, Modern Subjects Being Considered

ಇದೀಗ ಎಂಎಸ್‌ಆರ್‌ವಿವಿಪಿ ಜತೆಗೆ ಮತ್ತೊಂದು ಖಾಸಗಿ ವೇದ ಮಂಡಳಿಯನ್ನು ತೆರೆದು ಅದರಲ್ಲಿ ಆಧುನಿಕ ವಿಷಯಗಳನ್ನು ಕೂಡ ಕಲಿಸಬೇಕು ಎಂಬುದು ಸರ್ಕಾರದ ಯೋಜನೆಯಾಗಿದೆ.

ಆದರೆ, ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ಉಜ್ಜೈನ್ ಸಂಸ್ಥೆ ವೇದ, ಅಧ್ಯಯನ ಮತ್ತು ಆಧುನಿಕ ವಿಷಯಗಳು ಸೇರಿದಂತೆ ಸಂಯೋಜಿತ ಶಿಕ್ಷಣಕ್ಕಾಗಿ ಖಾಸಗಿ ಮಂಡಳಿಗೆ ಅನುಮತಿ ನೀಡಿದೆ.
ಎಂಎಸ್‌ಆರ್‌ವಿಪಿ ಆಧುನಿಕ ವಿಷಯಗಳೊಂದಿಗೆ ಮೌಖಿಕ ವೇದ ಸಂಪ್ರದಾಯಗಳಿಗಾಗಿ ಮತ್ತೊಂದು ಮಂಡಳಿಯನ್ನು ಸ್ಥಾಪಿಸಲು ಯೋಚಿಸುತ್ತಿದೆ ಎಂದು ಪ್ರಧಾನ್ ಹೇಳಿದ್ದಾರೆ.

ಬಿಜೆಪಿ ಸಂಸದ ವಿಜಯ್ ಬಾಘೇಲ್ ಮಾತನಾಡಿ, ಪ್ರಧಾನ್ ಹೇಳಿದಂತೆ ದೇಶದಲ್ಲಿ ನಿರ್ದೇಶಕ ಸ್ಥಾನಗಳಿಗೆ ನೇಮಕ ಮಾಡಲು ಯಾವುದೇ ಟೈಮ್‌ಲೈನ್ ಇಲ್ಲ. ಈಗಾಗಲೇ 21 ಸ್ಥಾನಗಳಿಗೆ ಮುಖ್ಯಸ್ಥರ ಆಯ್ಕೆಯಾಗಬೇಕಿದೆ.

ಪ್ರಸ್ತುತ ಐಐಟಿಯಲ್ಲಿ 8 ಸ್ಥಾನಗಳು ಖಾಲಿ ಇವೆ, ಎನ್‌ಐಟಿಯಲ್ಲಿ 21 ಸ್ಥಾನಗಳು ಖಾಲಿ ಇವೆ.

English summary
Another school board for oral vedic traditions with modern subjects was being considered by the Maharshi Rashtriya Ved Vidya Pratisthan (MSRVVP), Ujjain, Union Minister of Education Dharmendra Pradhan said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X