ನಾಡಿ ಜ್ಯೋತಿಷ್ಯದಿಂದ ನಿಮ್ಮ ಭವಿಷ್ಯ ತಿಳಿಯಬಹುದು

Posted By:
Subscribe to Oneindia Kannada
Nadi Astrology
ನಾಡಿ ಶಾಸ್ತ್ರ ಅಥವಾ ನಾಡಿ ಜ್ಯೋತಿಷ್ಯ ಅತಿ ಪುರಾತನ ಮತ್ತು ದೈವಿಕ ಕಾಲಜ್ಞಾನ. ನಾಡಿ ಜ್ಯೋತಿಷ್ಯ ಒಬ್ಬ ವ್ಯಕ್ತಿಯ ಭೂತಕಾಲ, ವರ್ತಮಾನ ಮತ್ತು ಭವಿಷ್ಯ ಕಾಲದ ಬಗೆಗಿನ ರಹಸ್ಯಗಳನ್ನು ಹೊರಹಾಕುವ ವಿಶಿಷ್ಟ ವಿದ್ಯೆ ಎಂದು ಪರಿಗಣಿಸಲಾಗಿದೆ.

ಪ್ರಾಚೀನ ಕಾಲದಲ್ಲಿ ದೈವಿಕ ಶಕ್ತಿಯಿಂದ ಗಳಿಸಿದ ಕೆಲವು ವಿದ್ಯೆಯನ್ನು ತಾಳೆಗರಿಯಲ್ಲಿ ಬರೆದಿಡಲಾಗುತ್ತಿತ್ತು. ಇದೇ ನಾಡಿ ಜ್ಯೋತಿಷ್ಯವೆಂಬ ಹೆಸರು ತಳೆಯಿತು. ಇದೀಗ ಈ ನಾಡಿ ಜ್ಯೋತಿಷ್ಯದ ಸಹಾಯದಿಂದ ಜ್ಯೋತಿಷಿಗಳು ಒಬ್ಬ ವ್ಯಕ್ತಿಯ ಇಡೀ ಜೀವನ ಚರಿತ್ರೆಯನ್ನು ತಿಳಿಸುತ್ತಾರೆ. ಹಿಂದಿನ ಜನ್ಮದ್ದೂ ಅಥವಾ ಈಗಿನ ಜನ್ಮದ ಬಗ್ಗೆಯೂ ತಾಳೆಗರಿಯಿಂದ ಮಾಹಿತಿ ಲಭ್ಯ.

ತಾಳೆಗರಿಯಲ್ಲಿ ನಿಮ್ಮ ಭವಿಷ್ಯವೂ ಇದೆ:
ವೈದಿಕ ವಿದ್ವಾಂಸರ ಪ್ರಕಾರ, ಸುಮಾರು 5000 ವರ್ಷಗಳ ಹಿಂದೆ ನಮ್ಮ ಜನ್ಮದ ಭೂತ, ವರ್ತಮಾನ ಮತ್ತು ಭವಿಷ್ಯ ಎಲ್ಲವನ್ನೂ ಗ್ರಹಿಸುವ ಶಕ್ತಿಯನ್ನು ಋಷಿ ಮುನಿಗಳು ಪಡೆದುಕೊಂಡಿದ್ದರು. ಈ ಗ್ರಹಿಕೆಯನ್ನೇ ತಾಳೆ ಗರಿ ಮೇಲೆ ಲಿಖಿತ ರೂಪಕ್ಕೆ ಇಳಿಸುತ್ತಿದ್ದರು. ತಮ್ಮ ಮೂರನೇ ಕಣ್ಣಿನ ಶಕ್ತಿಯಿಂದ ಎಲ್ಲವನ್ನೂ ತಿಳಿದುಕೊಂಡು ಮುನ್ನಡೆಯಲಿರುವ ರಹಸ್ಯಗಳನ್ನು ಭೇದಿಸುತ್ತಿದ್ದರು.

ಇದೇ ಲೋಕದ ಬಗ್ಗೆ ಹಲವು ನಿಗೂಢ ಸತ್ಯಗಳು ತೆರೆದುಕೊಳ್ಳಲು ಸಾಧ್ಯವಾಯಿತು. ಅದೇ ರೀತಿ ನಿಮ್ಮ ಜೀವನದ ಸತ್ಯವೂ ಕೂಡ ಈ ತಾಳೆ ಗರಿಗಳ ಮೇಲೆ ಮುದ್ರಿತವಾಗಿರುತ್ತದೆ. ಆದರೆ ಇದರ ಅವಶ್ಯಕತೆ ಹೆಚ್ಚಿದ್ದಾಗ ಮಾತ್ರ ನಿಮಗೆ ಲಭಿಸುತ್ತದೆ ಎನ್ನುತ್ತದೆ ನಾಡಿ ಶಾಸ್ತ್ರ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nadi Jyotish or Nadi Astrology is an ancient and divine predictive science that throws light on the past, present and future of an individual. A Nadi Astrology Reading can help you know the soul agenda of your life and the causes or reasons behind the current and past unfavorable events. It can also find answers to questions you always wanted to ask but knew not whom to turn towards.
Please Wait while comments are loading...