Get Updates
Get notified of breaking news, exclusive insights, and must-see stories!

ಬೆಂಗಳೂರಲ್ಲಿ 1010 ಆಸ್ತಿದಾರರಿಂದ 33.89 ಕೋಟಿ ರೂ. ಆಸ್ತಿ ತೆರಿಗೆ ಬಾಕಿ: ಆಸ್ತಿದಾರರಿಗೆ ಜಿಬಿಎ ಫೈನಲ್ ವಾರ್ನಿಂಗ್

ಬೆಂಗಳೂರು: ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಶಾಕ್ ಕೊಡುವುದನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದುವರಿಸಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ 5 ನಗರ ಪಾಲಿಕೆಗಳಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 510 ಸುಸ್ತಿದಾರರಿಂದ 14,26,65,515 ರೂ. ಹಾಗೂ 500 ಆಸ್ತಿ ತೆರಿಗೆ ಬೇಬಾಕಿ ಪರಿಷ್ಕರಣೆ ಪ್ರಕರಣಗಳಿಂದ 19,62,81,400 ರೂ. ಸೇರಿ ಒಟ್ಟು 3,38,94,6915 ರೂ. (33.89 ಕೋಟಿ ರೂ.) ಬಾಕಿ ಉಳಿದಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ಅವರು ತಿಳಿಸಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಹೆಚ್ಚು ಉಳಿಸಿಕೊಂಡಿರುವ ಸುಸ್ತಿದಾರರು ಹಾಗೂ ಬೇಬಾಕಿ ಪರಿಷ್ಕರಣೆ ಪ್ರಕರಣಗಳ ಮೇಲೆ ನಗರ ಪಾಲಿಕೆಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದು, ಪಾಲಿಕೆಗಳಿಗೆ ಬರಬೇಕಿರುವ ಆಸ್ತಿ ತೆರಿಗೆಯನ್ನು ತೆರಿಗೆದಾರರಿಂದ ಸಂಗ್ರಹಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ.

Bengaluru Property

ಹೆಚ್ಚು ಬಾಕಿ ಹೊಂದಿರುವ ಸುಸ್ತಿದಾರರು ಹಾಗೂ ಪರಿಷ್ಕರಣೆ ಪ್ರಕರಣಗಳಿಂದ ಬಾಕಿ ತೆರಿಗೆಯನ್ನು ತ್ವರಿತಗತಿಯಲ್ಲಿ ಸಂಗ್ರಹಿಸಲು ಸಂಬಂಧಿತ ನಗರ ಪಾಲಿಕೆಗಳ ವಲಯಗಳ ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ.

ಆಯಾ ನಗರ ಪಾಲಿಕೆಗಳಲ್ಲಿ 50 ಪ್ರಮುಖ ಸುಸ್ತಿದಾರರು, ಪರಿಷ್ಕರಣೆ ಪ್ರಕರಣಗಳ ಪಟ್ಟಿಯನ್ನು ಜಿಬಿಎ https://gba.karnataka.gov.in/Revenue/DEFAULTERSLISTOFPROPERTYTAXFORFY2025-26.pdf ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ.

ಬಾಕಿ ಉಳಿಸಿಕೊಂಡಿರುವ ಆಸ್ತಿ ಮಾಲೀಕರು ಕೂಡಲೇ ಪಾಲಿಕೆಗಳಿಗೆ ಬಾಕಿ ತೆರಿಗೆಯನ್ನು ಪಾವತಿಸಿ, ಮುಂದಾಗುವ ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳುವಂತೆ ಅವರು ಅಂತಿಮ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

Bengaluru Property ಬೆಂಗಳೂರಲ್ಲಿ ಆಸ್ತಿಗಳ ಹರಾಜು ಚುರುಕು

ಇನ್ನು ಬೆಂಗಳೂರಿನಲ್ಲಿ ಇದೇ ಸಂದರ್ಭದಲ್ಲಿ ಆಸ್ತಿಗಳ ಹರಾಜು ಪ್ರಕ್ರಿಯೆ ಸಹ ಚುರುಕು ಪಡೆದುಕೊಂಡಿದೆ. ಹರಾಜು ಪ್ರಕ್ರಿಯೆಲ್ಲಿ 6 ಸ್ವತ್ತುಗಳ ಪೈಕಿ‌ 2 ಆಸ್ತಿಗಳು ಹರಾಜು ಮಾಡಲಾಗಿದೆ. ಬೆಂಗಳೂರು ಪೂರ್ವನಗರ ಪಾಲಿಕೆ ಕೃಷ್ಣರಾಜಪುರ ವಲಯ ವ್ಯಾಪ್ತಿಯಲ್ಲಿ 6 ಸ್ವತ್ತುಗಳ ಪೈಕಿ‌ 2 ಆಸ್ತಿಗಳನ್ನು ಹರಾಜು ಮಾಡಲಾಗಿದೆ ಎಂದು ವಲಯದ ಜಂಟಿ ಆಯುಕ್ತರಾದ ಡಾ. ಸುಧಾ ಅವರು ತಿಳಿಸಿದ್ದಾರೆ.

ನಗರ ಪಾಲಿಕೆಗೆ ಒಂದಕ್ಕಿಂತಲೂ ಹೆಚ್ಚಿನ ವರ್ಷಗಳ ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ಸ್ವತ್ತುಗಳ ಹರಾಜಿನ ಮೂಲಕ ಬಾಕಿ ಆಸ್ತಿ ತೆರಿಗೆ ವಸೂಲಾತಿಗೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2025ರ ಅಡಿಯಲ್ಲಿ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ತರಹದ ಸ್ವತ್ತುಗಳ ಮಾಲೀಕರು ಅಥವಾ ಅಧಿಭೋಗದಾರರ ಪ್ರತಿವರ್ಷ ಆಸ್ತಿತೆರಿಗೆ ಪಾವತಿಸುವುದು ಕಡ್ಡಾಯವಾಗಿರುತ್ತದೆ. ಒಂದಕ್ಕಿಂತಲೂ ಹೆಚ್ಚಿನ ಸಾಲಿನ ಆಸ್ತಿ ತೆರಿಗೆ ಪಾವತಿಸದೇ ಇರುವ ಪ್ರಕರಣಗಳಲ್ಲಿ ಆಸ್ತಿ ತೆರಿಗೆ ವಸೂಲಿ ಮಾಡುವ ಕಾರ್ಯವಿಧಾನವನ್ನು ಆಸ್ತಿ ತೆರಿಗೆ ನಿರ್ಧರಣೆ, ವಸೂಲಾತಿ ಮತ್ತು ನಿರ್ವಹಣೆ ನಿಯಮಗಳು 2024ರ ಅಡಿಯಲ್ಲಿ ರೂಪಿಸಲಾಗಿರುತ್ತದೆ.

ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಹಾಗೂ ನಿಯಮಗಳಲ್ಲಿ ತಿಳಿಸಿರುವಂತೆ ಆಸ್ತಿ ತೆರಿಗೆ ಸುಸ್ಥಿದಾರರಿಗೆ ಕಾರಣ ಕೇಳಿ ಪತ್ರ, ಆಸ್ತಿ ತೆರಿಗೆ ಬೇಡಿಕೆ ಪತ್ರ ಜಾರಿ ಮಾಡಲಾಗಿದ್ದು, ಸಾಕಷ್ಟು ಕಾಲಾವಕಾಶವನ್ನು ನೀಡಿದ್ದರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುತ್ತಾರೆ. ಅಂತಹ ಪ್ರಕರಣಗಳ ಮಾಲೀಕರಿಗೆ ನಿಯತಕಾಲಿಕವಾಗಿ ಮೊಬೈಲ್ ಸಂದೇಶಗಳ ಮೂಲಕ ಸ್ವತ್ತಿನ ಬಾಕಿ ಆಸ್ತಿ ತೆರಿಗೆಯನ್ನು ಪಾವತಿಸುವಂತೆ ಹಲವು ಬಾರಿ ತಿಳಿಸಲಾಗಿತ್ತು.

ಮುಂದುವರಿದು ಸಾಕಷ್ಟು ಅವಕಾಶಗಳನ್ನು ನೀಡಿದ ನಂತರವು ಬಾಕಿ ಆಸ್ತಿ ತೆರಿಗೆಯನ್ನು ಪಾವತಿಸದ ಕೆ.ಆರ್ ಪುರ ವಲಯ ವ್ಯಾಪ್ತಿಯಲ್ಲಿನ 6 ಸ್ವತ್ತುಗಳನ್ನು ಕಾಯ್ದೆ ಹಾಗೂ ನಿಯಮಗಳನ್ವಯ ಹರಾಜು ಪ್ರಕ್ರಿಯೆಗೆ ಒಳಪಡಿಸಲು ತಿರ್ಮಾನಿಸಲಾದೆ. ಅದರಂತೆ, ಇಂದು ನಡೆದ ಹರಾಜು ಪ್ರಕ್ರಿಯಲ್ಲಿ 4 ಆಸ್ತಿ ಮಾಲೀಕರು ಸ್ಥಳದಲ್ಲಿಯೇ ಬಾಕಿ ಆಸ್ತಿ ತೆರಿಗೆ ಪಾವತಿಸಿದ ಕಾರಣ ಹರಾಜು ಪ್ರಕ್ರಿಯೆಯಿಂದ ಸ್ವತ್ತನ್ನು ಕೈ ಬಿಡಲಾಯಿತು. ಉಳಿದ 2 ಆಸ್ತಿ ಗಳನ್ನು ಹರಾಜಾಕಿದ್ದು, ಬಿಡ್ ಮಾಡಿ ಖರೀದಿಸಿದ್ದಾರೆ. ಹರಾಜು ಪ್ರಕ್ರಿಯೆ ವೇಳೆ ಕಂದಾಯ ಅಧಿಕಾರಿಯಾದ ಡಾ. ಬಸವರಾಜು ಮಗಿ, ಸಹಾಯಕ ಕಂದಾಯ ಅಧಿಕಾರಿ ಹಾಗೂ ಕಂದಾಯ ವಿಭಾಗದ ಅಧಿಕಾರಿ ಸಿಬ್ಬಂದಿ ಇದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+