Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ
Karnataka Property: ಕರ್ನಾಟಕ ಬಜೆಟ್ 2026 - 2027ರಲ್ಲಿ ಆಸ್ತಿಗಳಿಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್ ನೀಡಲಾಗಿದೆ. ಕರ್ನಾಟಕದಲ್ಲಿ ಆಸ್ತಿಗಳಿಗೆ ಸಂಬಂಧಿಸಿದಂತೆ ಇ ಖಾತಾ ಪರಿಚಯಿಸಲಾಗಿದೆ. ಅಲ್ಲದೆ ಬಿ - ಖಾತಾದಿಂದ ಎ - ಖಾತಾ ಬದಲಾವಣೆ, ಆಸ್ತಿಗಳ ಆನ್‌ಲೈನ್ ಅಪ್ಟೇಟ್ಸ್ ಸೇರಿದಂತೆ ಹಲವು ಬದಲಾವಣೆಗಳನ್ನು ಈಗಾಗಲೇ ಮಾಡಲಾಗಿದೆ. ಇದೀಗ ಇ - ಆಸ್ತಿ ಸಂಯೋಜನೆ ಹಾಗೂ ಆಸ್ತಿ ತೆರಿಗೆಯೊಂದಿಗೆ ಇ - ಆಸ್ತಿ ತಂತ್ರಾಂಶ ಸಂಯೋಜನೆಗಳೊಸುವ ಬಗ್ಗೆ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಪ್ಡೇಟ್ಸ್ ಕೊಟ್ಟಿದ್ದಾರೆ.
ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಆಸ್ತಿಗಳ ಮಾರಾಟ ಹಾಗೂ ಖರೀದಿಯಲ್ಲಿ ಲೋಪ ಮತ್ತು ಮೋಸವನ್ನು ತಪ್ಪಿಸುವ ಉದ್ದೇಶದಿಂದ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಇ ಖಾತಾವನ್ನು ಪರಿಚಯಿಸಿದೆ. ಅಲ್ಲದೆ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದವರು ಹಾಗೂ ನಿಖರವಾಗಿ ಆಸ್ತಿ ತೆರಿಗೆ ಪಾವತಿ ಮಾಡದೆ ಇರುವವರ ಮೇಲೆ ಕಣ್ಣಿರಿಸುವ ಉದ್ದೇಶದಿಂದ ಇ ಖಾತಾ ಯೋಜನೆಯು ಪರಿಣಾಮಕಾರಿಯಾಗಿತ್ತು. ಇದೀಗ ಆಸ್ತಿ ತೆರಿಗೆಯೊಂದಿಗೆ ಇ ಖಾತಾ ತಂತ್ರಾಂಶವನ್ನು ಸಂಯೋಜನೆಗೊಳಿಸುವುದಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ.

Karnataka Property: ಇ - ಆಸ್ತಿ ತಂತ್ರಾಂಶ ಸಂಯೋಜನೆ
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಏಕೀಕೃತ ಆಸ್ತಿ ತೆರಿಗೆ ತಂತ್ರಾಂಶದೊಂದಿಗೆ ಇ - ಆಸ್ತಿ ತಂತ್ರಾಂಶವನ್ನು ಸಂಯೋಜನೆಗೊಳಿಸುವುದಾಗಿ ಹೇಳಲಾಗಿದೆ. ತೆರಿಗೆ ಬೇಡಿಕೆ ಮತ್ತು ಬಾಕಿ ವಿವರಗಳನ್ನು ಸ್ವಯಂ ಚಾಲಿತವಾಗಿ ಸೃಷ್ಟಿಸುವ Unified Property Tax ವ್ಯವಸ್ಥೆಯನ್ನು ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಇನ್ನು ನಗರ ಸ್ಥಳೀಯ ಸಂಸ್ಥೆಗಳ ಸ್ಥಿರಾಸ್ತಿಗಳು ಹಾಗೂ ವಾಣಿಜ್ಯ ಸಂಕೀರ್ಣಗಳ ನಿರ್ವಹಣಾ ಪ್ರತಿಕ್ರಿಯೆಯನ್ನು ಸರಳಗೊಳಿಸಲು ಹಾಗೂ ಏಕರೂಪ ನೀತಿಯನ್ನು ಪಾಲಿಸಲು "The Estate Management Rules, 2026" ಅನ್ನು ಜಾರಿ ಮಾಡಲಾಗುವುದು ಎಂದು ಹೇಳಲಾಗಿದೆ.
ನಗರ ಸ್ಥಳೀಯ ಸಂಸ್ಥೆಗಳಲ್ಲಿ (ULBs) ಇ-ಆಸ್ತಿ (e-Property) ಸಾಫ್ಟ್‌ವೇರ್ ಅನ್ನು ಏಕೀಕೃತ ಆಸ್ತಿ ತೆರಿಗೆ (Unified Property Tax) ಸಾಫ್ಟ್‌ವೇರ್ ಜೊತೆಗೆ ಸಂಯೋಜಿಸಲಾಗುತ್ತದೆ. ತೆರಿಗೆ ಬೇಡಿಕೆ ಹಾಗೂ ಬಾಕಿ ವಿವರಗಳನ್ನು ಸ್ವಯಂಚಾಲಿತವಾಗಿ ಸೃಷ್ಟಿಸುವಂತೆ ಏಕೀಕೃತ ಆಸ್ತಿ ತೆರಿಗೆ ವ್ಯವಸ್ಥೆ ಜಾರಿಗೆ ತರಲಾಗುವುದು. ಮುಂದುವರಿದು ನಗರ ಸ್ಥಳೀಯ ಸಂಸ್ಥೆಗಳ (ULBs) ಮಾಲೀಕತ್ವದಲ್ಲಿರುವ ಸ್ಥಿರ ಆಸ್ತಿಗಳು ಹಾಗೂ ವಾಣಿಜ್ಯ ಸಂಕೀರ್ಣಗಳ ನಿರ್ವಹಣೆಯನ್ನು ಸರಳಗೊಳಿಸಲು ಮತ್ತು ಏಕೀಕೃತ ನೀತಿಯನ್ನು ಜಾರಿಗೆ ತರ ರಿಯಲ್ ಎಸ್ಟೇಟ್ ಮ್ಯಾನೇಜ್ಮೆಂಟ್ ನಿಯಮಗಳು 2026 ಜಾರಿಗೆ ತರಲಾಗುವುದು ಎಂದು ಹೇಳಲಾಗಿದೆ.












Click it and Unblock the Notifications