Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್‌ಲೋಡ್ ಮಾಡಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಮಾರ್ಚ್ 6) ವಿಧಾನಸಭೆಯಲ್ಲಿ ಕರ್ನಾಟಕ ಬಜೆಟ್ 2026-27 ಮಂಡಿಸಿದರು. ಕರ್ನಾಟಕ ಸರ್ಕಾರದ ಮುಂದಿನ ಒಂದಿಡೀ ವರ್ಷದ ದಿಕ್ಸೂಚಿ ಹೇಳಿಕೆ ಎಂದೇ ಪರಿಗಣಿಸುವ ಈ ಮಹತ್ವದ ದಾಖಲೆಯನ್ನು ಸಮಗ್ರವಾಗಿ ಓದಲು ಹಲವರು ಬಯಸುತ್ತಾರೆ. ಅಂಥವರಿಗಾಗಿ ಇಡೀ ಬಜೆಟ್ ದಾಖಲೆಯನ್ನು (Karnataka Budget 2026-27 PDF) ಸುದ್ದಿಯ ಕೊನೆಗೆ ನೀಡಲಾಗಿದೆ. ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಬಜೆಟ್ ದಾಖಲೆಯ ಪಿಡಿಎಫ್ ಪ್ರತಿಯನ್ನು ಡೌನ್‌ಲೋಡ್ ಮಾಡಬಹುದು.
ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಇನ್ನು ಸ್ವಲ್ಪ ಹೊತ್ತಿಗೆ ಬಜೆಟ್‌ನ ಅಧಿಕೃತ ಪ್ರತಿ ಅಪ್‌ಲೋಡ್ ಆಗಲಿದೆ. ಹಣಕಾಸು ಇಲಾಖೆಯ ವೆಬ್‌ಸೈಟ್‌ನಲ್ಲಿ ಬಜೆಟ್ ಪ್ರತಿಯನ್ನು ನೋಡಲು finance.karnataka.gov.in ಲಿಂಕ್ ಕ್ಲಿಕ್ ಮಾಡಿ.16 ವರ್ಷ ವಯೋಮಾನದ ಒಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧ ಸೇರಿ ಹಲವು ಮಹತ್ವದ ಘೋಷಣೆಗಳು ಈ ಬಾರಿಯ ಬಜೆಟ್ ಭಾಷಣದಲ್ಲಿ ಇತ್ತು.

2025-26ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ವಿವಿಧ ಸವಲತ್ತುಗಳನ್ನು ಮೊದಲ ಬಾರಿಗೆ ನೇರ ನಗದು ವರ್ಗಾವಣೆ (DBT) ಮಾಡಲಾಗುತ್ತಿದೆ. IIT ಧಾರವಾಡದ ಸಹಯೋಗದೊಂದಿಗೆ 8 ರಿಂದ 12ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 12.28 ಲಕ್ಷ ವಿದ್ಯಾರ್ಥಿಗಳಿಗೆ ಅಂದಾಜು ಐದು ಕೋಟಿ ರೂ.ಗಳ ವೆಚ್ಚದಲ್ಲಿ ಕಲಿಕಾ ಪ್ರಕ್ರಿಯೆಯಲ್ಲಿ AI ತಂತ್ರಜ್ಞಾನವನ್ನು ಅಳವಡಿಸಿಕೊಂಡು ವೈಯಕ್ತಿಕ ಸ್ವಯಂ-ಕಲಿಕಾ ಡಿಜಿಟಲ್ ಟ್ಯೂಟರ್ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದರು.
ಬಜೆಟ್ ಗಾತ್ರವು ಈ ಬಾರಿಇ ₹ 40 ಸಾವಿರ ಕೋಟಿಯಷ್ಟು ಹೆಚ್ಚಾಗಿದೆ. ಒಟ್ಟು ಬಜೆಟ್ ಗಾತ್ರ 4.48 ಲಕ್ಷ ಕೋಟಿ ರೂಪಾಯಿ. ಸರ್ಕಾರದ ಆದಾಯವು 4.47 ಲಕ್ಷ ಕೋಟಿ ಇದೆ. ಆದಾಯಕ್ಕಿಂತಲೂ ವೆಚ್ಚ ಹೆಚ್ಚಾಗಿರುವುದರಿಂದ ಇದು ಖೋತಾ ಬಜೆಟ್ ಆಗುತ್ತದೆ. ಮಹಿಳೆಯರ ಅಭಿವೃದ್ಧಿಗಾಗಿ 94,663 ಕೋಟಿ, ಮಕ್ಕಳ ಅಭಿವೃದ್ಧಿಗಾಗಿ 63,135 ಕೋಟಿ ರೂಪಾಯಿಗಳನ್ನು ಕರ್ನಾಟಕ ಸರ್ಕಾರವು ಮೀಸಲಿಟ್ಟಿದೆ.
ಈ ವರ್ಷ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 56,432 ಹುದ್ದೆಗಳ ಭರ್ತಿಗೂ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ಭರವಸೆ ನೀಡಿದ್ದಾರೆ. ಬಜೆಟ್ ಭಾಷಣದ ಇಡೀ ದಾಖಲೆಯನ್ನು ಇಲ್ಲಿ ನೀಡಲಾಗಿದೆ.












Click it and Unblock the Notifications