Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ
Gold Rate Today: ಬಂಗಾರ ದರ ಇಂದು (ಮಾರ್ಚ್ 6) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಳಿಕೆಯಾಗಿದೆ. ಹಾಗಾದ್ರೆ, ಯಾವ್ಯಾವ ನಗರಗಳಲ್ಲಿ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಂಗಾರ ದರಗಳ ವಿವರ
ನಿನ್ನೆ (ಮಾರ್ಚ್ 5) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 1,49,300 ರೂಪಾಯಿ ಇದ್ದರೆ, ಇಂದು (ಮಾರ್ಚ್ 6) 1,48,600 ರೂಪಾಯಿಗೆ ಇದೆ. ಇನ್ನೂ 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,62,880 ರೂಪಾಯಿ ಇತ್ತು. ಇನ್ನು ಇಂದು ಕೂಡ 1,62,110 ರೂಪಾಯಿಗೆ ಇದ್ದು, ನಿನ್ನೆಯ ದರವೇ ಮುಂದುವರೆದಿದೆ. ಹಾಗಾದ್ರೆ, ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 1,18,880 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 1,29,688 ರೂಪಾಯಿ
10 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ದರ - 1,48,600 ರೂಪಾಯಿ
* 24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,62,110 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,48,600 ರೂಪಾಯಿ
* ಚೆನ್ನೈ - 1,49,600 ರೂಪಾಯಿ
* ಮುಂಬೈ - 1,48,600 ರೂಪಾಯಿ
* ಕೋಲ್ಕತ್ತಾ - 1,48,600 ರೂಪಾಯಿ
* ನವದೆಹಲಿ - 1,48,750 ರೂಪಾಯಿ
* ಹೈದರಾಬಾದ್ - 1,48,600 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,62,110 ರೂಪಾಯಿ
* ಚೆನ್ನೈ - 1,63,200 ರೂಪಾಯಿ
* ಮುಂಬೈ - 1,62,110 ರೂಪಾಯಿ
* ಕೋಲ್ಕತ್ತಾ - 1,62,110 ರೂಪಾಯಿ
* ನವದೆಹಲಿ - 1,62,260 ರೂಪಾಯಿ
* ಹೈದರಾಬಾದ್ - 1,62,110 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆ.ಜಿ. ಲೆಕ್ಕದಲ್ಲಿ)
* ಬೆಂಗಳೂರು - 2,85,000 ರೂಪಾಯಿ
* ಚೆನ್ನೈ - 2,90,000 ರೂಪಾಯಿ
* ಮುಂಬೈ - 2,85,000 ರೂಪಾಯಿ
* ಕೋಲ್ಕತ್ತಾ - 2,85,000 ರೂಪಾಯಿ
* ನವದೆಹಲಿ - 2,85,000 ರೂಪಾಯಿ
* ಹೈದರಾಬಾದ್ - 2,90,000 ರೂಪಾಯಿ
ಚಿನ್ನದ ದರ ರಾಜ್ಯದಿಂದ ರಾಜ್ಯಕ್ಕೆ ಸ್ವಲ್ಪ ವ್ಯತ್ಯಾಸ ಇರುತ್ತದೆ. ಜಿಎಸ್‌ಟಿ, ತಯಾರಿಕಾ ಶುಲ್ಕ ಹಾಗೂ ಸ್ಥಳೀಯ ತೆರಿಗೆಗಳ ಪರಿಣಾಮದಿಂದ ಜ್ಯುವೆಲ್ಲರಿ ಅಂಗಡಿಗಳಲ್ಲಿ ಬೆಲೆ ಬದಲಾಗುತ್ತದೆ. ಆದ್ದರಿಂದ ಚಿನ್ನ ಖರೀದಿಸುವ ಮೊದಲು ಆ ದಿನದ ಅಪ್ಡೇಟ್ ದರವನ್ನು ಪರಿಶೀಲಿಸುವುದು ಉತ್ತಮ. ವಿಶೇಷವಾಗಿ ಯುಗಾದಿ, ರಂಜಾನ್, ದೀಪಾವಳಿ ಮುಂತಾದ ಹಬ್ಬಗಳ ಸಂದರ್ಭದಲ್ಲಿ ಜ್ಯುವೆಲ್ಲರಿ ಅಂಗಡಿಗಳು ರಿಯಾಯಿತಿಗಳನ್ನು ನೀಡುವುದರಿಂದ ಗ್ರಾಹಕರಿಗೆ ಹೆಚ್ಚು ಅನುಕೂಲ ಆದಂತಾಗುತ್ತದೆ.
ಅದರಲ್ಲೂ ಹಬ್ಬಗಳು ಮತ್ತು ಮದುವೆ ಸೀಸನ್ ಸಮಯದಲ್ಲಿ ಚಿನ್ನದ ಖರೀದಿ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಇನ್ನೂ ಇದೀಗ ಯುಗಾದಿ ಹಬ್ಬ ಸಮೀಪಿಸುತ್ತಿದ್ದು, ಈ ವೇಳೆಯೇ ದರ ಕಡಿಮೆಯಾಗಿದೆ. ಖರೀದಿಗೆ ಇದೇ ಸೂಕ್ತ ಸಮಯ ಎಂದು ಹೇಳಬಹುದು.ಯಾಕಂದ್ರೆ ಮುಂದಿನ ದಿನಗಳಲ್ಲಿ ಏರಿಕೆ ಆಗಬಹುದು ಅಥವಾ ಇಳಿಕೆಯಾಗಲೂಬಹುದು.












Click it and Unblock the Notifications