ಹೌದು! ನಮ್ಮ ಜನ ಕೈಯಿಂದಲೇ ತಿನ್ನುವುದು ಏಕೆ?
ಲೋಕಸಭಾ ಚುನಾವಣೆ ವೇಳೆ ಇದು ಕಾಂಗ್ರೆಸ್ ಪಕ್ಷ ಪರವಾದ paid news ಅಂದುಕೊಳ್ಳಬೇಡಿ. ಬದಲಿಗೆ ಅನಾದಿಕಾಲದಿಂದಲೂ ನಾವು ಭಾರತೀಯರು ಅನೂಚವಾಗಿ ಪಾಲಿಸಿಕೊಂಡು ಬಂದಿರುವ ಒಂದು ಶ್ರೇಷ್ಠ ಅಭ್ಯಾಸವಿದು.
ಆಯ್ತು ಹಳೆಯ ಕಾಲದ ಜನ ಕೈಯಿಂದಲೇ ತಿನ್ನುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಇದು ಅತ್ಯಾಧುನಿಕ ಯುಗ. ಇನ್ನಾದರೂ ಕೈಯನ್ನು ಬಳಸದೆ ಆಧುನಿಕ ಸಲಕರಣೆ/ಪರಿಕರಗಳೊಂದಿಗೆ ಬಾಯಿಗೆ ಆಹಾರ ಹಾಕಿಕೊಳ್ಳಬಹುದಲ್ಲಾ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ನೋಡಿದಾಗ...

ನಮ್ಮ ಕೈಗಳು ಮತ್ತು ಕಾಲುಗಳು ಐದು ಅಂಶಗಳಿಗೆ ಒತ್ತು ನೀಡುತ್ತವೆ: ಐದು ಬೆರಳುಗಳ ಪೈಕಿ ಒಂದೊಂದೂ ಮಹತ್ವ ಪಡೆದಿವೆ:
1. ಬೆಟ್ಟು- ಇದು ಅಗ್ನಿ. ಮಕ್ಕಳೂ ಬೆಟ್ಟು ಚೀಪುವುದು ಇದೇ ಕಾರಣಕ್ಕೆ. ಮಕ್ಕಳಲ್ಲಿ ಆಹಾರ ಜೀರ್ಣವಾಗದೆ ಇರುವಾಗ ಬೆಟ್ಟು ಚೀಪುವುದರಿಂದ ಅದು ಸಾಧ್ಯವಾಗುತ್ತದೆ.
2. ತೋರ್ಬೆರಳು - ಇದು ವಾಯು. 3. ಮಧ್ಯಬೆರಳು - ಇದು ಆಕಾಶ. 4. ಉಂಗುರ ಬೆರಳು - ಇದು ಭೂಮಿ ಮತ್ತು 5. ಕಿರುಬೆರಳು - ಇದು ಜಲ.
ಈ ವಿಚಾರದಲ್ಲಿ ಮಡಿಮೈಲಿಗೆಯ ಭಾರತೀಯರನ್ನು ವಿದೇಶಿಯರೂ ಅನುಸರಿಸುವುದುಂಟು. ಅದರಲ್ಲೂ ಭಾರತಕ್ಕೆ ಬಂದಾಗ ಕೈಯಿಂದಲೇ ಆಹಾರ ಸೇವನೆ ಮಾಡುವುದನ್ನು ರೂಢಿಮಾಡಿಕೊಳ್ಳುತ್ತಾರೆ. ಭಾರತೀಯ ಆಹಾರ ಪದ್ಧತಿಗಳಿಗೆ ಮಣೆ ಹಾಕುವ ತಾರಾ ಹೋಟೆಲುಗಳು ಸಹ ಈಗೀಗ ವಿದೇಶಿ ಅತಿಥಿಗಳಿಗೂ ಲಕ್ಷಣವಾಗಿ ಬಾಳೆ ಎಲೆ ಊಟ ಬಡಿಸುವುದುಂಟು. Vedic wisdom behind eating with your hands ಎಂದು ವಿದೇಶಿ ಅತಿಥಿಗಳಿಗೆ ತಿಳಿಯ ಹೇಳುತ್ತಾರೆ.












Click it and Unblock the Notifications