• search
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

2019ರಲ್ಲಿ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ: ಸಂಶೋಧಕ ಡೇವಿಡ್ ಫ್ರಾಲಿ

|

ಉಡುಪಿ, ನವೆಂಬರ್.05: ಪ್ರಧಾನಿ ನರೇಂದ್ರ ಮೋದಿ ಮುಂದಿನ ಚುನಾವಣೆಯಲ್ಲಿ ಗೆದ್ದು 2019ರಲ್ಲಿ ಮತ್ತೆ ಪ್ರಧಾನಿಯಾಗಿ ಅಧಿಕಾರ ಹಿಡಿಯುತ್ತಾರೆ ಎಂದು ಅಮೇರಿಕಾದ ವೇದ ವಿದ್ವಾಂಸ ಹಾಗೂ ಸಂಶೋಧಕ ಡೇವಿಡ್ ಫ್ರಾಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮೋದಿ ಭಾರತದ ಪುರಾತನ ಸಂಸ್ಕೃತಿ ಎತ್ತಿ ಹಿಡಿದಿದ್ದಾರೆ. ಹಿಂದೂಗಳು ತಮ್ಮ ಅಸ್ಮಿತೆಯನ್ನು ಮರಳಿ ಸ್ಥಾಪಿಸಬೇಕು.

ದೀಪಾವಳಿ ವಿಶೇಷ ಪುರವಣಿ

ಮೋದಿ ಆಡಳಿತಾತ್ಮಕ ಮತ್ತು ಭಾರತೀಯ ನಾಗರೀಕತೆ ಪ್ರತಿಪಾದಕ. ವಿಶ್ವದಾದ್ಯಂತ ಭಾರತದ ಧ್ವನಿಯನ್ನು ಮೋದಿ ತಲುಪಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಶಬರಿಮಲೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡೇವಿಡ್ ಫ್ರಾಲಿ ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರ ಭಾರತದಲ್ಲಿ ಬಹಳ ಚರ್ಚೆಯಾಗುತ್ತಿದೆ.

ಕೇರಳದಲ್ಲಿ ಆಢಳಿತರೂಢ ಕಮ್ಯುನಿಸ್ಟ್ ಸರ್ಕಾರಕ್ಕೆ ದೇವರ ಮೇಲೆ ನಂಬಿಕೆಯಿಲ್ಲ. ಕೇರಳದಲ್ಲಿ ಕಮ್ಯೂನಿಸ್ಟ್ ಪಾರ್ಟಿ ಅಧಿಕಾರದಲ್ಲಿ ಇರುವುದರಿಂದ ಕಮ್ಯೂನಿಸ್ಟರಿಗೆ ಹಿಂದೂ ಧರ್ಮದ ಬಗ್ಗೆ ಗೊತ್ತಿಲ್ಲ.

ಬುರ್ಹಾನ್ ವಾನಿಯಂತ ಉಗ್ರರಿಗೆ ಗರ್ಲ್ ಫ್ರೆಂಡ್ಸ್, ಸೆಲ್ಫಿ ಗೀಳಿರುತ್ತದೆ: ಗೌರವ್ ಆರ್ಯ

ಆತ್ಮ, ಈಶ್ವರ- ಭಗವಂತನ ಮೇಲೆ ಅವರಿಗೆ ನಂಬಿಕೆಯಿಲ್ಲ. ಹಿಂದೂ ದೇವಸ್ಥಾನದ ಆದಾಯ ಅಲ್ಲಿನ ಸರಕಾರಕ್ಕೆ ಬೇಕು. ಸಂಪ್ರದಾಯ, ನಂಬಿಕೆ ಬೇಕಾಗಿಲ್ಲ. ದೇವಸ್ಥಾನದ ವಿಚಾರದಲ್ಲಿ ಕೇರಳ ಸರ್ಕಾರ ಮೂಗು ತೂರಿಸಬಾರದು. ಶಬರಿಮಲೆ ದೇವಸ್ಥಾನಕ್ಕೆ ಅದರದ್ದೇ ಆದ ಪದ್ಧತಿ ಇದೆ. ಅಯ್ಯಪ್ಪ ಭಕ್ತರ ನಂಬಿಕೆಗೆ ಸರಕಾರ ಬೆಲೆ ಕೊಡಬೇಕು ಎಂದು ಡೇವಿಡ್ ಫ್ರಾಲಿ ಆಗ್ರಹಿಸಿದರು.

 ಭಾರತವನ್ನು ಒಗ್ಗೂಡಿಸಿದರು

ಭಾರತವನ್ನು ಒಗ್ಗೂಡಿಸಿದರು

ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಯೂನಿಟಿ ಆಫ್ ಸ್ಟ್ಯಾಚ್ಯು ಬಗ್ಗೆ ವಿರೋಧಿಸುತ್ತಿರುವುದು ಸರಿಯಲ್ಲ. ಪಟೇಲರು ಭಾರತವನ್ನು ಒಗ್ಗೂಡಿಸಿದವರು. ದೇಶದಲ್ಲಿ ಅವರಿಗೆ ಪುತ್ಥಳಿ ಮೂಲಕ ದೊಡ್ಡ ಗೌರವ ಸಿಕ್ಕಿದೆ ಎಂದು ಡೇವಿಡ್ ಪ್ರಾಲಿ ಪ್ರಶಂಸಿಸಿದರು.

 ಭಾರತದ ಸಾಮರ್ಥ್ಯ ವಿಶ್ವದ ಮುಂದೆ ಪ್ರದರ್ಶನ

ಭಾರತದ ಸಾಮರ್ಥ್ಯ ವಿಶ್ವದ ಮುಂದೆ ಪ್ರದರ್ಶನ

ಯೂನಿಟಿ ಆಫ್ ಸ್ಟ್ಯಾಚ್ಯು ಬಗ್ಗೆ ಯಾರಾದರೂ ವಿರೋಧ ಮಾಡಿದರೆ ಅದರಲ್ಲಿ ಅರ್ಥವಿಲ್ಲ. ಮೋದಿ ಭಾರತದ ಸಾಮರ್ಥ್ಯ ವಿಶ್ವದ ಮುಂದೆ ಪ್ರದರ್ಶಿಸಿದ್ದಾರೆ. ಪುತ್ಥಳಿಗೆ ತಗಲಿರುವ ವೆಚ್ಚದ ಬಗ್ಗೆ ಲೆಕ್ಕ ಹಾಕುವುದಕ್ಕಿಂತ ಮುಂದೆ ಅದರಿಂದ ದೇಶಕ್ಕೆ ಸಿಗುವ ಗೌರವ, ಲಾಭದ ಬಗ್ಗೆ ಆಲೋಚಿಸಿ ಎಂದು ಡೇವಿಡ್ ಪ್ರಾಲಿ ಕಿವಿಮಾತು ಹೇಳಿದರು.

ಎಡಪಂಥೀಯ ಚಿಂತನೆ ಪ್ರವೃತ್ತಿ ದೇಶಕ್ಕೆ ಗಂಡಾಂತರ: ಸಾಹಿತಿ ಭೈರಪ್ಪ

 ಡೇವಿಡ್ ಫ್ರಾಲಿ ಆದರು ವಾಮದೇವ ಶಾಸ್ರ್ತಿ

ಡೇವಿಡ್ ಫ್ರಾಲಿ ಆದರು ವಾಮದೇವ ಶಾಸ್ರ್ತಿ

ಡೇವಿಡ್ ಫ್ರಾಲಿ ಹುಟ್ಟಿದ್ದು ಅಮೇರಿಕಾದ ಕೆಥೋಲಿಕ್ ಕ್ರೈಸ್ತರ ಕುಟುಂಬದಲ್ಲಿ . ಬೆಳೆದಿದ್ದು ಕೆಥೋಲಿಸಂ ಪ್ರಭಾದಲ್ಲಿ . 70 ರ ದಶಕದಲ್ಲಿ ಮಹರ್ಷಿ ಶ್ರೀ ಅರವಿಂದರ ಮಾತುಗಳನ್ನು ಆಲಿಸುವ ಮೂಲಕ ಹಿಂದೂ ತತ್ವದ ಕಡೆ ಆಕರ್ಷಿತರಾದರು. ಮೆಕ್ಸಿಕೋದ ಸಂತಾಫೆ ಎಂಬಲ್ಲಿ 1980ರಲ್ಲಿ ವೇದ ಅಧ್ಯಯನ ಕೇಂದ್ರ ತೆರೆದರು. ಹಿಂದುತ್ವದ ಜತೆಗೆ ತಮಗಿರುವ ಅವಿನಭಾವ ಸಂಬಂಧ ದಿಂದಾಗಿ ತಮ್ಮ ಹೆಸರನ್ನು ಡೇವಿಡ್ ಫ್ರಾಲಿ ಯಿಂದ ವಾಮದೇವ ಶಾಸ್ರ್ತಿ ಎಂದು ಬದಲಾಯಿಸಿಕೊಂಡರು.

 50ಕ್ಕೂ ಹೆಚ್ಚು ಪುಸ್ತಕ ಬರೆದಿದ್ದಾರೆ

50ಕ್ಕೂ ಹೆಚ್ಚು ಪುಸ್ತಕ ಬರೆದಿದ್ದಾರೆ

ಅಮೆರಿಕದಲ್ಲಿ ಹುಟ್ಟಿ ಬೆಳೆದ ಡೇವಿಡ್ ಫ್ರಾಲಿ ಈಗ ಭಾರತದ ವೈಧಿಕ ಸಂಸ್ಕೃತಿಯ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲರು. ವೇದಗಳ ವಿಚಾರದಲ್ಲಿ ಪರಿಣಿತರಾದ ಡೇವಿಡ್ ಹಿಂದೂ ಧರ್ಮದ ಬಗ್ಗೆ ಗಾಢವಾದ ಪ್ರೀತಿ ಹೊಂದಿದ್ದಾರೆ. ವೇದ, ಜ್ಯೋತಿಷ್ಯ, ಆಯುರ್ವೇದ ವಿಚಾರದಲ್ಲಿ ಸಂಶೋಧಕನಾಗಿರುವ ಡೇವಿಡ್, ಭಾರತೀಯ ಸಂಸ್ಕೃತಿ ಬಗ್ಗೆ 50 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಹೆಚ್ಚಿನ ಪುಸ್ತಕಗಳು ಹಿಂದೂ ತತ್ವ ಚಿಂತನೆ ಮತ್ತು ವೇದ ವಿಜ್ಞಾನದ ಕುರಿತಾಗಿದೆ. ಅಮೇರಿಕಾದ ಪ್ರಜೆಯಾಗಿರುವ ಅವರು ಭಾರತವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದಾರೆ.

ಉಡುಪಿ ಚಿಕ್ಕಮಗಳೂರು ರಣಕಣ
ಡೆಮೊಗ್ರಫಿಕ್ಸ್
ಜನಸಂಖ್ಯೆ
18,18,242
ಜನಸಂಖ್ಯೆ
 • ಗ್ರಾಮೀಣ
  71.58%
  ಗ್ರಾಮೀಣ
 • ನಗರ
  28.42%
  ನಗರ
 • ಎಸ್ ಸಿ
  14.44%
  ಎಸ್ ಸಿ
 • ಎಸ್ ಟಿ
  4.47%
  ಎಸ್ ಟಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vedic writer Devid Frali said that Narendra Modi will be India's next Prime Minister.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more