ಲಾಕ್ ಡೌನ್ ನಡುವೆ ಜೂಜಾಟ; ಮೈಸೂರು ನಗರಸಭೆ ಸದಸ್ಯ ಸೇರಿ 12 ಜನ ವಶಕ್ಕೆ
ಮೈಸೂರು, ಏಪ್ರಿಲ್ 14: ಕೊರೊನಾ ನಿಯಂತ್ರಣಕ್ಕೆ ರಾಜ್ಯಾದ್ಯಂತ ಲಾಕ್ಡೌನ್ ಘೋಷಿಸಿದ್ದರೂ ಜನರು ಒಂದಿಲ್ಲೊಂದು ನೆಪದಿಂದ ಬೀದಿಗಿಳಿಯುತಿದ್ದಾರೆ. ಈ ಲಾಕ್ ಡೌನ್ ಸಮಯದಲ್ಲೂ ಜೂಜಾಟದಲ್ಲಿ ತೊಡಗಿದ್ದ ಮನೆಗಳ ಮೇಲೆ ಇಂದು ಪೊಲೀಸರು ದಾಳಿ ನಡೆಸಿ 12 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ನಂಜನಗೂಡು ಪಟ್ಟಣದಲ್ಲಿ ಜೂಜಾಟದಲ್ಲಿ ತೊಡಗಿಕೊಂಡಿದ್ದವರನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದಿರುವವರಲ್ಲಿ ನಗರಸಭಾ ಸದಸ್ಯರೊಬ್ಬರೂ ಸೇರಿದ್ದಾರೆ.
ನಂಜನಗೂಡಿನ 2 ಮನೆಗಳಲ್ಲಿ ಜೂಜು ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇಲೆ ಪೊಲೀಸರು ಹಳ್ಳದಕೇರಿಯ ಹಾಗೂ ಮುಸ್ಲಿಂ ಬಡಾವಣೆಯ 2 ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಳ್ಳದ ಕೇರಿಯ ಮನೆಯಲ್ಲಿ ನಗರಸಭೆಯ ಬಿಜೆಪಿ ಸದಸ್ಯ ಗಿರೀಶ್ ಸೇರಿದಂತೆ ಐವರನ್ನು ವಶಕ್ಕೆ ಪಡೆದಿದ್ದಾರೆ.

ಇದಾದ ನಂತರ ಮತ್ತೊಂದು ಮನೆ ಮೇಲೆ ದಾಳಿ ನಡೆಸಿದ ಪೊಲೀಸರು, 7 ಜನರನ್ನು ದಸ್ತಗಿರಿ ಮಾಡಿದ್ದಾರೆ. ಈ ಸಂಬಂಧ ನಂಜನಗೂಡು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ, ತನಿಖೆ ಕೈಗೊಂಡಿದ್ದಾರೆ.












Click it and Unblock the Notifications