ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೌದಿ ಅರೇಬಿಯಾದಲ್ಲಿ ಪುತ್ತೂರು ಮಹಿಳೆಗೆ ಜೀತಮುಕ್ತಿ

ಉದ್ಯೋಗ ಅರಸಿ ವಿದೇಶಕ್ಕೆ ತೆರಳಿದ್ದ ಮಹಿಳೆಯೊಬ್ಬರು ಸೌದಿ ಅರೇಬಿಯಾದ ರಿಯಾದ್ ನಲ್ಲಿ ದೈಹಿಕ, ಮಾನಸಿಕ ಹಿಂಸೆಗೆ ತುತ್ತಾಗಿ, ಒಂದೂವರೆ ತಿಂಗಳು ಜೀತದಾಳುವಾಗಿ ಪಡಬಾರದ ಕಷ್ಟ ಪಟ್ಟು ಇದೀಗ ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ.

By ಐಸಾಕ್ ರಿಚರ್ಡ್
|
Google Oneindia Kannada News

ಪುತ್ತೂರು, ಮಾರ್ಚ್ 7: ಉದ್ಯೋಗ ಅರಸಿ ವಿದೇಶಕ್ಕೆ ತೆರಳಿದ್ದ ಮಹಿಳೆಯೊಬ್ಬರು ಸೌದಿ ಅರೇಬಿಯಾದ ರಿಯಾದ್ ನಲ್ಲಿ ದೈಹಿಕ, ಮಾನಸಿಕ ಹಿಂಸೆಗೆ ತುತ್ತಾಗಿ, ಒಂದೂವರೆ ತಿಂಗಳು ಜೀತದಾಳುವಾಗಿ ಪಡಬಾರದ ಕಷ್ಟ ಪಟ್ಟು ಇದೀಗ ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ.

ಪುತ್ತೂರು ತಾಲೂಕಿನ ವಿಟ್ಲ ಸಮೀಪದ ಮಂಗಿಲಪದವು ಗ್ರಾಮದ ಅಬ್ದುಲ್ ಖಾದರ್ ಎಂಬವರ ಪತ್ನಿ ಶಬೀನಾ ಬಾನು(38) ಎಂಬವರೇ ರಿಯಾದ್ ನಲ್ಲಿ ಸಮಸ್ಯೆಗೆ ಸಿಲುಕಿ ಕೊನೆಗೂ ಬಚಾವಾಗಿ ಬಂದವರು.[ಕಾಸರಗೋಡು: ಯುವತಿ ಸಾವಿಗೆ ಕಾರಣವಾಯ್ತು ದುಪ್ಪಟ್ಟಾ]

Puttur woman freed from slavery in Saudi Arabia

ಶಬೀನಾ ಬಾನು ಸಂಕಷ್ಟಕ್ಕೆ ಸಿಲುಕಿದ್ದ ಮಾಹಿತಿ ಪಡೆದುಕೊಂಡ ಸೌದಿ ಅರೇಬಿಯಾದ "ಇಂಡಿಯನ್ ಸೋಷಿಯಲ್ ಫೋರಮ್" ತಕ್ಷಣ ಸಹಾಯಕ್ಕೆ ಧಾವಿಸಿ ಮಹಿಳೆಯನ್ನು ಅಪಾಯದಿಂದ ರಕ್ಷಿಸಿದ್ದಾರೆ. ಕೊನೆಗೂ ಭಾರತಕ್ಕೆ ಮರಳಿರುವ ಮಹಿಳೆ ತನ್ನ ಮನೆ ತಲುಪಿದ್ದು, ನಿರಾಳತೆಯ ನಿಟ್ಟಿಸಿರು ಬಿಟ್ಟಿದ್ದಾರೆ.

1500 ರಿಯಲ್ ಸಂಬಳದ ಆಮಿಷ
ಶಬೀನಾಗೆ ಹಣದ ಅಗತ್ಯವಿತ್ತು. ಇದನ್ನು ಮಂಗಳೂರಿನ ಬೆಂದೂರ್ ವೆಲ್ ನಲ್ಲಿರುವ ಅಲ್-ಹಸನ್ ಎಂಟರ್‌ಪ್ರೈಸಸ್ ನ ಹಮೀದ್ ಎಂಬ ಏಜೆಂಟರ ಬಳಿ ಶಬೀನಾ ಹೇಳಿಕೊಂಡಿದ್ದರು. ಇದನ್ನೇ ಬಂಡವಾಳವನ್ನಾಗಿಸಿದ ಏಜೆಂಟ್ ಹಮೀದ್ ಸೌದಿಯಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಮತ್ತು ಇದಕ್ಕೆ ಸುಮಾರು 1500 ರಿಯಾಲ್ ಸಂಬಳ ನೀಡುವ ಆಮಿಷವೊಡ್ಡಿ ಪುಸಲಾಯಿಸಿದ್ದಾನೆ. ಇದನ್ನು ನಂಬಿದ ಶಾಬೀನಾ ಬಾನು ಹೊಸ ಬದುಕಿನ ಕನಸು ಕಾಣುತ್ತಾ ವಿದೇಶಕ್ಕೆ ಹೊರಟಿದ್ದರು.[ವ್ಹೀಲ್ ಚೇರ್ನಲ್ಲೇ ಪರೀಕ್ಷೆ ಬರೆದವನ ಕರುಣಾಜನಕ ಕತೆಯನ್ನೊಮ್ಮೆ ಓದಿ]

ಜನವರಿಯಲ್ಲಿ ಸಂಬಂಧಿಕರೊಂದಿಗೆ ಮಂಗಳೂರಿನಿಂದ ಗೋವಾಕ್ಕೆ ತೆರಳಿ, ಅಲ್ಲಿಂದ 2017ರ ಜನವರಿ 12ರಂದು ಸೌದಿ ವಿಮಾನ ಹತ್ತಿದ್ದರು. ನಂತರ ಸೌದಿ ಪ್ರಜೆಯ ಮನೆಯಲ್ಲಿ ಮನೆ ಕೆಲಸ ಮಾಡಲು ಬಲವಂತ ಮಾಡಲಾಯಿತಲ್ಲದೆ, ಜೀತದಾಳುವಿನಂತೆ ದುಡಿಸಿಕೊಳ್ಳಲಾಯಿತು. ಮನೆಯವರನ್ನು ಸಂಪರ್ಕಿಸುವ ಅವಕಾಶವನ್ನೂ ನಿರಾಕರಿಸಲಾಗಿತ್ತು.

ಶಬೀನಾ ಬಾನುವನ್ನು ಸೌದಿ ಪ್ರಜೆ ಎರಡು ಮನೆಯ ಕೆಲಸ ಮಾಡಲು ಒತ್ತಾಯಿಸಿದ್ದ. ಇದಕ್ಕೆ ಒಪ್ಪದೇ ಇದ್ದಾಗ ದೈಹಿಕವಾಗಿ ಹಲ್ಲೆ ಕೂಡ ಮಾಡಿದ್ದ. ಇದರಿಂದ ಹೆದರಿ ಎರಡು ಮನೆಯ ಕೆಲಸ ಮಾಡಿದರೂ ಶಬೀನಾ ಬಾನುಗೆ ಸಿಕ್ಕಿದ್ದು ತಿಂಗಳಿಗೆ ಕೇವಲ 1000 ರಿಯಲ್ ಸಂಬಳ ಮಾತ್ರ.
ಕೊನೆಗೆ ವಿಷಯ ತಿಳಿದ ಇಂಡಿಯನ್ ಸೋಷಿಯಲ್ ಫಾರಂನ ಕರ್ನಾಟಕ ರಾಜ್ಯ ಸಮಿತಿಯು ತಕ್ಷಣವೇ ಇಸ್ಮಾಯಿಲ್ ಮಂಗಳಪೇಟೆ ಮತ್ತು ಅಶ್ರಫ್ ಅರ್ಕಾರನ್ನು ಸಂಪರ್ಕಿಸಿತು. ಅದರಂತೆ ಇಸ್ಮಾಯಿಲ್ ಮಂಗಳಪೇಟೆ ಮತ್ತು ಅಶ್ರಫ್ ಅರ್ಕಾನಾರವರು ರಿಯಾದಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ, ವಿಷಯದ ಮನವರಿಕೆ ಮಾಡಿದರು.

ನಂತರ ಶಾಬೀನಾ ಬಾನು ಅವರನ್ನು ಭಾರತಕ್ಕೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲಾಯಿತು.

13,600ರಿಯಲ್‌ಗೆ ಮಾರಾಟ
'ನನ್ನನ್ನು ಇಂಡಿಯಾಕೆ ಕಳುಹಿಸಿಕೊಡು' ಎಂದು ಸೌದಿ ಪ್ರಜೆಯಲ್ಲಿ ಶಬಿನಾ ಬಾನು ಕೇಳಿಕೊಂಡಾಗ ಆತ '13,600ರಿಯಾಲ್ ಗೆ ನಿನ್ನನ್ನು ಮಾರಿದ್ದಾರೆ. ನಾನು ಏಜೆಂಟನಿಗೂ ಹಣ ನೀಡಿದ್ದೇನೆ. ಭಟ್ಕಳದ ಇನ್ನೊಬ್ಬನಿಗೂ ಹಣ ನೀಡಿದ್ದೇನೆ,' ಎಂದಿದ್ದನಂತೆ. 'ನನಗೆ ಹೊಡೆದು ಬಡಿದು ಹಿಂಸೆ ನೀಡಿದ್ದನಲ್ಲದೆ ನನ್ನು ಮೊಬೈಲ್, ಚೈನ್, ಎಲ್ಲವನ್ನೂ ಅವರು ಎತ್ತಿಟ್ಟುಕೊಂಡಿದ್ದರು,' ಎಂದು ಶಬೀನಾ ಆ ಕರಾಳ ದಿನಗಳನ್ನು ನೆನಪು ಮಾಡಿಕೊಂಡರು.

English summary
Shabeena Banu, a woman from Vitla which belongs Puttur talluk of Dakshina Kannada freed from slavery in Riyadh, Saudi Arabia. A travel agent from Mangaluru sold her for 13,600 riyals to a Saudi citizen few months back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X