ಮಂಗಳೂರು : ಶಾಲಾ ವಾಹನಗಳು ಪಾಲಿಸಬೇಕಾದ ನಿಯಮಗಳು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜೂನ್ 23 : 'ಖಾಸಗಿ ವಾಹನ ಸೇರಿದಂತೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಎಲ್ಲಾ ವಾಹನಗಳು ಕಡ್ಡಾಯವಾಗಿ ಹಳದಿ ಬಣ್ಣ ಹೊಂದಿರಬೇಕು. ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳು ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು' ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಆದೇಶಿಸಿದ್ದಾರೆ.

ಬುಧವಾರ ತಮ್ಮ ಕಚೇರಿಯಲ್ಲಿ ಶಾಲಾ ವಾಹನಗಳ ಸುರಕ್ಷತೆ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, 'ನಿಯಮ ಉಲ್ಲಂಘಿಸಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ' ಎಂದು ಪೊಲೀಸ್ ಮತ್ತು ಆರ್‌ಟಿಒಗೆ ಸೂಚನೆ ನೀಡಿದರು. [ಕುಂದಾಪುರ : ಭೀಕರ ಅಪಘಾತ, 8 ಶಾಲಾ ಮಕ್ಕಳ ದುರ್ಮರಣ]

ab ibrahim

'ಶಾಲಾ ವಾಹನಗಳ ಕುರಿತಂತೆ ಜಾರಿಯಲ್ಲಿರುವ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಶಾಲಾ ಮಕ್ಕಳನ್ನು ಕರೆದೊಯ್ಯುವ ಎಲ್ಲಾ ವಾಹನಗಳಿಗೂ ಈ ಬಗ್ಗೆ ಸೂಚನೆಯನ್ನು ರವಾನಿಸಬೇಕು. ಜುಲೈ 1ರಿಂದ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ನಿರ್ದೇಶನ ನೀಡಿದರು. [ಲಿಂಗಾಯತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ]

ಆಟೋಗಳಿಗೆ ಸೂಚನೆ : ಶಾಲಾ ಟ್ರಿಪ್ ನಡೆಸುವ ಆಟೋರಿಕ್ಷಾಗಳಲ್ಲಿ 12 ವರ್ಷಕ್ಕಿಂತ ಕೆಳಗಿನ ಗರಿಷ್ಠ 6 ಮಕ್ಕಳು ಹಾಗೂ ಮಾರುತಿ ಓಮಿನಿಗಳಲ್ಲಿ ಗರಿಷ್ಠ 8 ಮಕ್ಕಳನ್ನು ಮಾತ್ರ ನಿಯಮಾನುಸಾರ ಕರೆದುಕೊಂಡು ಹೋಗಬಹುದು. [ಸರ್ಕಾರಿ ಶಾಲಾ ಮಕ್ಕಳಿಗೆ ಆಕಾಶವೇ ಸೂರು!]

ಕುಂದಾಪುರದಲ್ಲಿ ಮಂಗಳವಾರ ನಡೆದ ಭೀಕರ ಅಪಘಾತದಲ್ಲಿ 8 ಶಾಲಾ ಮಕ್ಕಳು ದುರ್ಮರಣಕ್ಕೀಡಾಗಿದ್ದರು. ಆದ್ದರಿಂದ, ಜಿಲ್ಲಾಡಳಿತ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಪಾಲಿಸಬೇಕಾದ ನಿಯಮಗಳ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಿದೆ.


ಶಾಲಾ ವಾಹನಗಳು ಪಾಲಿಸಬೇಕಾದ ನಿಯಮಗಳು

* ಶಾಲಾ ವಾಹನಗಳು ಕಡ್ಡಾಯವಾಗಿ ಹಳದಿ ಬಣ್ಣದಲ್ಲಿರಬೇಕು
* ವಾಹನಗಳ ಹಿಂದೆ, ಮುಂದೆ ಸ್ಕೂಲ್‌ಡ್ಯೂಟಿ ಮೇಲೆ ಎಂದು ಸ್ಪಷ್ಟವಾಗಿ ನಮೂದಿಸಬೇಕು
* ಪ್ರಥಮ ಚಿಕಿತ್ಸೆ ಬಾಕ್ಸ್ ಇರಬೇಕು
* ನಿರ್ದಿಷ್ಟಪಡಿಸಿದ ಗುಣಮಟ್ಟದ ಸ್ಪೀಡ್ ಗವರ್ನರ್ ಅಳವಡಿಸಬೇಕು
* ಕಿಟಕಿಗಳಲ್ಲಿ ಸಮತಲ ಗ್ರಿಲ್ಸ್‌ಗಳನ್ನು ಅಳವಡಿಸಿರಬೇಕು
* ಶಾಲೆಯ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ವಾಹನದ ಮೇಲೆ ಬರೆಯಬೇಕು
* ವಾಹನದ ಬಾಗಿಲುಗಳಿಗೆ ವಿಶ್ವಾಸಾರ್ಹ ಬೀಗಗಳನ್ನು ಅಳವಡಿಸಿರಬೇಕು.
* ಶಾಲಾ ಮಕ್ಕಳನ್ನು ನೋಡಿಕೊಳ್ಳಲು ವಾಹನದಲ್ಲಿ ಒಬ್ಬ ಅಟೆಂಡರ್ ಇರಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
All vehicles including private ones carrying school children to be painted yellow and fellow guidelines. Dakshina Kannada district deputy commissioner A.B.Ibrahim directed police and regional transport office to take action against vehicles who not following safety measures.
Please Wait while comments are loading...