• search
  • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ತೂರಿನಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ ಮೂವರ ಸಾವು

By ಕೋಲಾರ ಪ್ರತಿನಿಧಿ
|

ಕೋಲಾರ, ಮೇ 31: ಸಿಡಿಲು ಬಡಿದು ಒಂದೇ ಕುಟುಂಬದ ಮೂರು ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೋಲಾರದ ಗಡಿ ಸಮೀಪದ ಚಿತ್ತೂರಿನಲ್ಲಿ ನಡೆದಿದೆ.

ಕೋಲಾರದ ಗಡಿ ಆಂಧ್ರ ಪ್ರದೇಶದ ಚಿತ್ತೂರಿನ ಪೆದ್ದಪಂಜಾಣಿ ಮಂಡಲಂನ ತಿಪ್ಪಿರೆಡ್ಡಿಪಲ್ಲಿಯಲ್ಲಿ ನಿನ್ನೆ, ಮೇ 30ರ ರಾತ್ರಿ ಈ ಘಟನೆ ನಡೆದಿದ್ದು, ಸಿಡಿಲು ಬಡಿದು ತಂದೆ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

ಬಾಗಲಕೋಟೆ; ಮಕ್ಕಳನ್ನು ಕಾಪಾಡಿ ಸಿಡಿಲಿಗೆ ತಾನು ಬಲಿಯಾದ ತಾಯಿ

ತಂದೆ ಮಕ್ಕಳು ತೋಟಕ್ಕೆ ಹೋಗಿದ್ದು, ಹಸುವಿನ ಹಾಲು ಕರೆಯುತ್ತಿದ್ದರು. ಈ ಸಂದರ್ಭ ಮಳೆ ಆರಂಭವಾದಂತಾಗಿ ಜೋರಾಗಿ ಸಿಡಿಲು ಬಡಿದಿದೆ. ಸಿಡಿಲು ಬಡಿದು ರೈತ ರಾಮಕೃಷ್ಣ (52), ಮಕ್ಕಳಾದ ರಮಾದೇವಿ (24), ಮೀನಾ (22) ಸಾವನ್ನಪ್ಪಿದ್ದಾರೆ. ಹಸುವೂ ಮೃತಪಟ್ಟಿದೆ. ಸಿಡಿಲಾಘಾತದಿಂದ ಸಂಭವಿಸಿದ ಈ ಸಾವಿನಿಂದ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.

English summary
Three members of same family died by lightning strike in chittur of kolar district border yesterday night,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X