ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್‌ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್
ದೆಹಲಿಯ ಪ್ರಸಿದ್ಧ "ವಡಾಪಾವ್ ಗರ್ಲ್" ಖ್ಯಾತಿಯ ಚಂದ್ರಿಕಾ ದೀಕ್ಷಿತ್ (Chandrika Dixit) ಅವರು ತಮ್ಮ ವಿವಾದಾತ್ಮಕ ಹೇಳಿಕೆಯೊಂದರಿಂದಾಗಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಬಿಗ್ ಬಾಸ್ ಒಟಿಟಿ ಸ್ಪರ್ಧಿಯಾಗಿಯೂ ಗುರುತಿಸಿಕೊಂಡಿರುವ ಚಂದ್ರಿಕಾ, ಹಣಕಾಸಿನ ಸಂಕಷ್ಟ ಮತ್ತು ಮಗುವಿನ ಪಾಲನೆಯ ಕುರಿತು ಮಾತನಾಡುತ್ತಾ ನಾನು ಯಾರ ಜೊತೆಯಲ್ಲಾದರೂ ಮಲಗಲು ಸಿದ್ಧ ಎಂದಿರುವ ವಿಡಿಯೋ ತುಣುಕು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ "ವಡಾಪಾವ್ ಗರ್ಲ್" ಎಂದೇ ಜನಪ್ರಿಯರಾಗಿರುವ ಚಂದ್ರಿಕಾ ದೀಕ್ಷಿತ್, ಇದೀಗ ಭಾರಿ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಆನ್‌ಲೈನ್ ಸಂವಾದವೊಂದರಲ್ಲಿ ಭಾಗವಹಿಸಿದ್ದ ಅವರು, ಹಣಕಾಸಿನ ಸಮಸ್ಯೆ ಮತ್ತು ಮಗುವನ್ನು ಬೆಳೆಸುವ ಸವಾಲುಗಳ ಬಗ್ಗೆ ಮಾತನಾಡುವಾಗ ನೀಡಿದ ಒಂದು ಹೇಳಿಕೆ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?
ವೈರಲ್ ಆಗಿರುವ ವಿಡಿಯೋದಲ್ಲಿ ಚಂದ್ರಿಕಾ ದೀಕ್ಷಿತ್, "ಮಗುವನ್ನು ಸಾಕಿ ಸಲಹಲು ಹಣದ ಅವಶ್ಯಕತೆಯಿದ್ದರೆ, ನಾನು ಹಣಕ್ಕಾಗಿ ದೈಹಿಕ ಸುಖ ನೀಡುವ ಹಾದಿಯನ್ನು ಬೇಕಿದ್ದರೂ ಪರಿಗಣಿಸಬಹುದು. ಯಾರ ಜೊತೆಯಲ್ಲಾದರೂ ಮಲಗಲು ಸಿದ್ಧ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಈ ಹೇಳಿಕೆ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಆರಂಭವಾಗಿದ್ದು, ಬಹುತೇಕರು ಚಂದ್ರಿಕಾ ಅವರ ಆಲೋಚನೆಯನ್ನು ಕೀಳುಮಟ್ಟ ಎಂದು ಖಂಡಿಸಿದ್ದಾರೆ. ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಇನ್‌ಫ್ಲುಯೆನ್ಸರ್ ಒಬ್ಬರು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವುದು ಎಷ್ಟು ಸರಿ? ಎಂದು ಅನೇಕರು ಪ್ರಶ್ನಿಸಿದ್ದಾರೆ.
ಕುಟುಂಬವನ್ನು ನಡೆಸಲು ಮತ್ತು ಮಗುವನ್ನು ಬೆಳೆಸಲು ಸಾವಿರಾರು ಗೌರವಾನ್ವಿತ ಮತ್ತು ಕಾನೂನುಬದ್ಧ ದಾರಿಗಳಿವೆ. ಹಣಕ್ಕಾಗಿ ಇಂತಹ ಹಾದಿಯನ್ನು ಸಮರ್ಥಿಸಿಕೊಳ್ಳುವುದು ತಪ್ಪು ಎಂದು ನೆಟ್ಟಿಗರು ಟೀಕಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವವರು ಸಮಾಜಕ್ಕೆ ನೀಡುವ ಸಂದೇಶದ ಬಗ್ಗೆ ಎಚ್ಚರದಿಂದಿರಬೇಕು ಎಂದು ಅನೇಕರು ಕಿವಿಮಾತು ಹೇಳಿದ್ದಾರೆ. ಕೇವಲ ವೈರಲ್ ಆಗಲು ಅಥವಾ ಅನುಕಂಪ ಗಿಟ್ಟಿಸಲು ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದು ಟೀಕೆಯೂ ವ್ಯಕ್ತವಾಗಿದೆ.
ವಡಾಪಾವ್ ಸ್ಟಾಲ್‌ನಿಂದ ಬಿಗ್‌ಬಾಸ್‌ವರೆಗೆ
ದೆಹಲಿಯ ರಸ್ತೆ ಬದಿಯಲ್ಲಿ ವಡಾಪಾವ್ ಮಾರುತ್ತಿದ್ದ ಚಂದ್ರಿಕಾ ದೀಕ್ಷಿತ್, ತಮ್ಮ ಮಾತು ಮತ್ತು ವಿಡಿಯೋಗಳ ಮೂಲಕ ರಾತ್ರೋರಾತ್ರಿ ಪ್ರಸಿದ್ಧಿ ಪಡೆದಿದ್ದರು. ಇದೇ ಜನಪ್ರಿಯತೆ ಅವರನ್ನು ಸಲ್ಮಾನ್ ಖಾನ್ ನಡೆಸಿಕೊಡುವ 'ಬಿಗ್ ಬಾಸ್ ಒಟಿಟಿ'ವರೆಗೂ (Bigg Boss OTT) ಕರೆದೊಯ್ದಿತ್ತು. ಆದರೆ, ಬಿಗ್ ಬಾಸ್‌ನಿಂದ ಹೊರಬಂದ ನಂತರ ಅವರ ಪ್ರತಿ ಹೇಳಿಕೆಯೂ ಈಗ ತೀವ್ರವಾಗಿ ಟೀಕೆಗೆ ಗುರಿಯಾಗುತ್ತಿದೆ.

ಕೆಲವರು ಚಂದ್ರಿಕಾ ಅವರ ಪರವಾಗಿ ಧ್ವನಿ ಎತ್ತಿದ್ದು, "ಆಕೆ ಆ ಕ್ಷಣದ ಹತಾಶೆಯಲ್ಲಿ ಅಥವಾ ಸಂದರ್ಭದ ಒತ್ತಡದಲ್ಲಿ ಹಾಗೆ ಮಾತನಾಡಿರಬಹುದು. ಒಂದು ಸಣ್ಣ ವಿಡಿಯೋ ತುಣುಕನ್ನು ನೋಡಿ ವ್ಯಕ್ತಿತ್ವ ನಿರ್ಧರಿಸುವುದು ಬೇಡ" ಎಂದು ಹೇಳಿದ್ದಾರೆ. ಆದರೆ, ಬಹುತೇಕ ಜನರು ಮಾತ್ರ ಇಂತಹ ಹೇಳಿಕೆಗಳು ಸಮಾಜದ ಮೇಲೆ ತಪ್ಪು ಪ್ರಭಾವ ಬೀರುತ್ತವೆ ಎಂದು ಕಿಡಿಕಾರುತ್ತಿದ್ದಾರೆ. ಈ ವಿವಾದವು ಸಾಮಾಜಿಕ ಜಾಲತಾಣಗಳಲ್ಲಿ ಹಣಕಾಸಿನ ಒತ್ತಡ, ಇಂಟರ್ನೆಟ್ ಖ್ಯಾತಿ ಮತ್ತು ಇನ್‌ಫ್ಲುಯೆನ್ಸರ್‌ಗಳ ಮೇಲಿರುವ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.












Click it and Unblock the Notifications