ಇರಾನ್ ಸಂಘರ್ಷದ ಪರಿಣಾಮ ಹೊಸ ಸಮುದ್ರ ಮಾರ್ಗ ರೂಪಿಸಲು ಶುರುವಾಯ್ತು ಒತ್ತಡ... Iran Conflict

ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧವು ಜಗತ್ತಿನಲ್ಲಿ ಹಲವು ದೊಡ್ಡ ದೊಡ್ಡ ಬದಲಾವಣೆಗೆ ಈಗ ನಾಂದಿ ಹಾಡುತ್ತಿದೆ. ಒಂದು ಕಡೆ ಕಚ್ಚಾತೈಲ ಎಂಬ ಅತಿ ಅಗತ್ಯ ವಸ್ತುವಿನ ಬೆಲೆ ಏರಿಕೆಯು ತಲ್ಲಣ ಎಬ್ಬಿಸಿ ಜಗತ್ತಿನ ಆರ್ಥಿಕತೆ ಅಲ್ಲಾಡಿ ಹೋಗುವಂತೆ ಮಾಡುತ್ತಿದೆ. ಯಾವಾಗ ಕಚ್ಚಾತೈಲ ಬೆಲೆ ಪ್ರತಿ ಬ್ಯಾರಲ್‌ಗೆ 100 ಅಮೆರಿಕನ್ ಡಾಲರ್ ಮೀರಿ ಹೋಯ್ತೋ ಅಲ್ಲಿಂದಲೇ ಹೊಸ ಹೊಸ ಸಮಸ್ಯೆ ಕೂಡ ಶುರುವಾಗುತ್ತಿದೆ.

ಸ್ವತಃ ಅಮೆರಿಕ ಕೂಡ ಸಂಕಷ್ಟದ ಬಲೆಯಲ್ಲಿ ಸಿಲುಕಿ ವಿಲವಿಲ ಒದ್ದಾಡುವ ವಾತಾವರಣ ನಿರ್ಮಾಣ ಆಗಿದ್ದು, ಹೇಗಾದರೂ ಮಾಡಿ ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಬೇಕು ಎಂಬ ಅಮೆರಿಕದ ಪ್ರಯತ್ನ ವಿಫಲವಾಗುತ್ತಲೇ ಇದೆ. ಇಂತಹ ಸಮಯದಲ್ಲೇ ಹೊಸ ಸಮುದ್ರ ಮಾರ್ಗಕ್ಕೆ ಒತ್ತಡ ಶುರುವಾಗಿದೆ. ಈ ಮೂಲಕ ಇರಾನ್ ನಾಯಕರಿಗೆ ಆಘಾತ ನೀಡಲು ಅರಬ್ ದೇಶಗಳು ದಿಢೀರ್ ಹೊಸ ಪ್ಲಾನ್ ಮಾಡುವ ಸಾಧ್ಯತೆ ಈಗ ದಟ್ಟವಾಗಿದೆ. ಹಾಗಾದರೆ ಯಾವುದು ಆ ಹೊಸ ಜಲಮಾರ್ಗ? ಮುಂದೆ ಓದಿ.

Iran Conflict

ಕಚ್ಚಾತೈಲ ಎಂಬ ಕಪ್ಪು ಚಿನ್ನ

ಮಧ್ಯಪ್ರಾಚ್ಯ ಎಂಬುದು ಕಚ್ಚಾತೈಲದ ಬಟ್ಟಲು, ಇದೇ ಕಚ್ಚಾತೈಲ ಆಧುನಿಕ ಜಗತ್ತಿನಲ್ಲಿ ನೂರಾರು ಅತ್ಯಗತ್ಯ ವಸ್ತುಗಳ ತಯಾರಿಕೆಯಲ್ಲಿ ಬಳಕೆ ಆಗುತ್ತಿದೆ. ಪೆಟ್ರೋಲ್ & ಡೀಸೆಲ್ ಮಾತ್ರವಲ್ಲದೆ ಗ್ಯಾಸ್ ಹಾಗೂ ಇತರ ರಾಸಾಯನಿಕಗಳ ತಯಾರಿಕೆಗೆ ಕೂಡ ಇದೇ ಕಚ್ಚಾತೈಲ ಅತ್ಯಗತ್ಯ. ಹೀಗಿದ್ದಾಗ ಇಡೀ ಜಗತ್ತಿನ ಆರ್ಥಿಕ ಪರಿಸ್ಥಿತಿ ನಿರ್ಧಾರ ಮಾಡುವುದು ಕಚ್ಚಾತೈಲದ ಬೆಲೆ ಆಗಿದ್ದು, ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದರೂ ದೊಡ್ಡ ಬಿರುಗಾಳಿಗೆ ಸಾಕ್ಷಿ ಆಗುತ್ತೆ. ಈಗಲೂ ಅಷ್ಟೇ ಹಾರ್ಮುಜ್ ಜಲಸಂಧಿ ಇರಾನ್ ಕೈಗೆ ಸಿಲುಕಿ, ಅಲ್ಲಿಂದ ಹೊರಗೆ ಬರಬೇಕಿದ್ದ ಕಚ್ಚಾತೈಲದ ಹಡಗುಗಳು ಲಾಕ್ ಆಗಿಬಿಟ್ಟಿವೆ. ಇದೇ ಕಾರಣಕ್ಕೆ ಕಚ್ಚಾತೈಲದ ಬೆಲೆ ಭಾರಿ ಏರಿಕೆ ಕಾಣುತ್ತಿದೆ. ಇಂತಹ ಸಮಯದಲ್ಲೇ ಹಾರ್ಮುಜ್ ಜಲಸಂಧಿಗೆ ಪರ್ಯಾಯ ಜಲಮಾರ್ಗ ಸೃಷ್ಟಿಸಲು ಒತ್ತಡದ ವಾತಾವರಣ ಕೂಡ ಸೃಷ್ಟಿಯಾಗಿದೆ ಈಗ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+