ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರಾಜ್ಯದಲ್ಲಿ ನೆಲೆಯೇ ಇಲ್ಲದ ಬಿಜೆಪಿಯನ್ನು ಬೆಳೆಸಿದ್ದು ಎಸ್.ಬಂಗಾರಪ್ಪ'

By ಡಾ. ಎಚ್. ಸಿ. ಮಹದೇವಪ್ಪ
|
Google Oneindia Kannada News

ಕರ್ನಾಟಕದಲ್ಲಿ ಕೋಮುವಾದಿ ಬಿಜೆಪಿಗರಿಗೆ ಸರಿಯಾದ ನೆಲೆಯೇ ಇರಲಿಲ್ಲ. ಬಹುತೇಕ 40-45 ಸ್ಥಾನಗಳನ್ನು ಗಳಿಸುತ್ತಿದ್ದ ಬಿಜೆಪಿಯನ್ನು 45 ರಿಂದ 75 ಕ್ಕೆ ಕೊಂಡೊಯ್ದಿದದ್ದು ಎಸ್ ಬಂಗಾರಪ್ಪನವರು.

ಅವರು ಕಾಲವಾದ ನಂತರದಲ್ಲಿ ಮತ್ತೆ ಎಂದಿನ ರಾಜಕೀಯ ಸ್ಥಿತ್ಯಂತರಕ್ಕೆ ಸಾಗಿದ್ದ ಬಿಜೆಪಿಯ ಜೊತೆಗೆ ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡಿಕೊಂಡ ಕುಮಾರಸ್ವಾಮಿ ಅವರು ನೈತಿಕತೆಯನ್ನು ಮರೆತು 20-20 ಸರ್ಕಾರದ ಷರತ್ತನ್ನು ಗಾಳಿಗೆ ತೂರಿ, ಯಡಿಯೂರಪ್ಪನವರ ಪರವಾದ ಭಾವನಾತ್ಮಕ ಸನ್ನಿವೇಶ ಉಂಟುಮಾಡಿ ಬಿಜೆಪಿಯನ್ನು 100 ರ ಗಡಿಗೆ ತಂದು ನಿಲ್ಲಿಸಿದರು.

ಬಾಬಾ ಸಾಹೇಬರ ಜಯಂತಿ ಎಂದರೆ ರಾಜಕೀಯ ಜಯಂತಿಯಲ್ಲ ಬಾಬಾ ಸಾಹೇಬರ ಜಯಂತಿ ಎಂದರೆ ರಾಜಕೀಯ ಜಯಂತಿಯಲ್ಲ

ಕಾಂಗ್ರೆಸ್ - ಜೆಡಿಎಸ್ ಪಕ್ಷದ ಎರಡನೇ ಅವಧಿಯ ಆಡಳಿತದಲ್ಲೂ ಸರಿಯಾಗಿ ಜೆಡಿಎಸ್ & ಕಾಂಗ್ರೆಸ್ ಪಕ್ಷದ ಶಾಸಕರ ಸಂಕಷ್ಟಗಳಿಗೆ ಸ್ಪಂದಿಸದೇ ಎಲ್ಲರೂ ರೋಸಿ ಹೋಗುವಂತೆ ಮಾಡಿದ ಪರಿಣಾಮ ಮೈತ್ರಿಕೂಟದ ಎರಡೂ ಪಕ್ಷಗಳಿಂದಲೂ ಸಹ ಹಲವು ಶಾಸಕರು ಬಿಜೆಪಿಗೆ ಹೋದರು.

Rise Of BJP In Karnataka, Main Reason Is S Bangarappa, Article by Dr. H C Mahadevappa

ಇಲ್ಲಿಯೂ ಸಹ ಬಿಜೆಪಿಗೆ ಅನುಕೂಲ ಮಾಡಿಕೊಟ್ಟದ್ದು ಇದೇ ಕುಮಾರಸ್ವಾಮಿ ಅವರು ಎಂಬುದನ್ನು ನಾವು ಮರೆಯುವಂತಿಲ್ಲ. ಕರ್ನಾಟಕದಲ್ಲಿ ನೆಲೆ ಇಲ್ಲದೇ ಸೊರಗಿದ್ದ ಕೋಮುವಾದಿ ಬಿಜೆಪಿಯ ಬೆಳವಣಿಗೆ ಕಾರಣವಾಗಿದ್ದು ಎರಡೇ ಸಂಗತಿಗಳು. ಒಂದು ಎಸ್ ಬಂಗಾರಪ್ಪ ಅವರ ವರ್ಚಸ್ಸು ಮತ್ತು ಪಕ್ಷಾಂತರ, ಮತ್ತೊಂದು ಎಚ್ ಡಿ ಕುಮಾರಸ್ವಾಮಿ ಅವರ ನೈತಿಕತೆ ಇಲ್ಲದ ದ್ರೋಹದ ರಾಜಕಾರಣ.

Rise Of BJP In Karnataka, Main Reason Is S Bangarappa, Article by Dr. H C Mahadevappa

ಇನ್ನು ಸಿದ್ದರಾಮಯ್ಯ ಅವರ ವಿಷಯವಾಗಿ ಅತಿ ಎನಿಸುವಷ್ಟು ಅನಗತ್ಯವಾದ ಗೊಂದಲಗಳನ್ನು ಮೂಡಿಸುತ್ತಿದ್ದರೂ ಕೂಡಾ ಅವರೊಬ್ಬ ಪ್ರಾಮಾಣಿಕ ಮತ್ತು ಸಮಾಜಕ್ಕೆ ಬೇಕಾದ ಸಿದ್ದಾಂತವನ್ನು ಹೊಂದಿರುವ ಅಪರೂಪದ ಜನ ನಾಯಕ ಮತ್ತು ಸಮರ್ಥ ಆಡಳಿತಗಾರ ಎಂಬುದರಲ್ಲಿ ಎರಡು ಮಾತಿಲ್ಲ.

ಈ ಮಾತನ್ನು ನಾನಷ್ಟೇ ಹೇಳುತ್ತಿಲ್ಲ. ಬಿಜೆಪಿಯ ದುರಾಡಳಿತದಿಂದ ಬೇಸತ್ತಿರುವ ಜನ ಸಾಮಾನ್ಯರು, ಬಿಜೆಪಿಯ ಬಸವನಗೌಡ ಪಾಟೀಲ್ ಯತ್ನಾಳ್ ಆದಿಯಾಗಿ ಬಹಳಷ್ಟು ಮಂದಿ ಬಿಜೆಪಿ,ಆರ್ ಎಸ್ ಎಸ್ & ಜೆಡಿಎಸ್ ನವರೇ ತಮ್ಮ ವಲಯದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಜನಪರ ಆಡಳಿತಗಾರರ ವ್ಯಕ್ತಿತ್ವವನ್ನು ದುರ್ಬಲಗೊಳಿಸಿದರೆ ಸಮಾಜದ ಶಿಬಿಕೆಯನ್ನು ನಾವೇ ಹೊತ್ತಂತೆ. ಆದಷ್ಟು ಅಪಪ್ರಚಾರಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾದ್ದು ಈ ಹೊತ್ತಿನ ಜವಾಬ್ದಾರಿ ಆಗಿದೆ.

English summary
Rise Of BJP In Karnataka, Main Reason Is S Bangarappa, Article by Dr. H C Mahadevappa. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X