'ಸನಾತನ ಧರ್ಮ ಕೊರೊನಾ, ಮಲೇರಿಯಾಕ್ಕೆ ಸಮ': ಉದಯನಿಧಿ ಸ್ಟಾಲಿನ್ ಹೇಳಿಕೆ ಸಮರ್ಥಿಸಿಕೊಂಡ ಸಚಿವ ಮಹದೇವಪ್ಪ

ದಾವಣಗೆರೆ, ಸೆಪ್ಟೆಂಬರ್‌ 04: ಸನಾತನ ಧರ್ಮವು ಸಮಾನತೆ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದು, ಇದು ಕೊರೊನಾ, ಡೆಂಗ್ಯೂ ಹಾಗೂ ಮಲೇರಿಯಾಕ್ಕೆ ಸಮಾನವಾದುದು ಎಂಬ ತಮಿಳುನಾಡು ಸಿಎಂ ಎಂ. ಕೆ. ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಹೇಳಿಕೆಯನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ ಸಮರ್ಥಿಸಿಕೊಂಡಿದ್ದು, ಧರ್ಮ ಶುದ್ಧೀಕರಣವಾಗಬೇಕು ಎಂದು ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅಂಬೇಡ್ಕರ್ ಧರ್ಮ ಬೇಡ ಎಂದು ಹೇಳಿಲ್ಲ. ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಬೇಕು. ಮನುಷ್ಯನಿಗೆ ಮಾನವೀಯತೆ ಮುಖ್ಯ. ಯಾವ ಧರ್ಮವೂ ಮೇಲಲ್ಲ. ಕೆಳಗಲ್ಲ. ಸಂವಿಧಾನದ ಪ್ರಕಾರವೇ ಧರ್ಮ ಇರಬೇಕು. ಯಾವ ಧರ್ಮ ನ್ಯಾಯ, ಸಮಾನತೆ ಬೋಧಿಸುವುದಿಲ್ಲವೋ ಅದನ್ನು ಧರ್ಮ ಎಂದು ಕರೆಯಿಸಿಕೊಳ್ಳುವ ಯೋಗ್ಯತೆ ಇರುವುದಿಲ್ಲ. ಅದು ಯಾವ ಧರ್ಮವಾದರೂ ಸರಿ ಎಂದು ಹೇಳಿದರು.

minister-hc-mahadevappa

ಸಂವಿಧಾನ ಪೀಠಿಕೆಯಲ್ಲಿ ಸಮಾನತೆ, ಸ್ವಾತಂತ್ರ್ಯ ನ್ಯಾಯ, ಎಲ್ಲರೂ ಒಂದೇ ಎಂದಿದೆ. ಎಲ್ಲರೂ ಮುಕ್ತವಾಗುವಿರುವುದು. ಇನ್ನೊಬ್ಬರಿಗೆ ಧಕ್ಕೆ ಆಗಬಾರದು. ಅಮವಾಸ್ಯೆಗೆ ಮಹಾದೇಶ್ವರ ದೇವರು ಸೇರಿದಂತೆ ಇತರೆ ದೇವಸ್ಥಾನಗಳ ಕೆರೆಗೆ ಹೋಗುತ್ತಾರೆ. ಅಲ್ಲಿ ದೇವರು ಇರುವುದಿಲ್ಲ, ಕಲ್ಲು ತೆಗೆದು ನೀರಿನಲ್ಲಿ ತೊಳೆದು ವಿಭೂತಿ, ಬಿಲ್ವಾ ಪತ್ರೆ ಹಾಕಿ ಪೂಜೆ ಮಾಡಿದರೆ ಕಲುಷಿತವಾಗಿರುವ ನೀರು ಶುದ್ಧೀಕರಣವಾಗುತ್ತದೆಯಾ? ಎಲ್ಲವೂ ಸರಿ ಹೋಗುತ್ತದೆಯೋ ಎಂದು ಪ್ರಶ್ನಿಸಿದರು.

ಲಾರ್ಡ್ ಮೆಕಾಲಿಯಾ ವಿದ್ಯೆ ಕಲಿಸಿದರು. ಸಾವಿರಾರು ಮಂದಿ ವಿದ್ಯಾವಂತರಾದರು. ಡಾ.ಬಿ.ಆರ್. ಅಂಬೇಡ್ಕರ್ ಅವರು ಓದಲು ಸಾಧ್ಯವಾಗುತ್ತಿತ್ತಾ? ಇಂಗ್ಲೀಷ್ ಕಲಿಯಲು ಆಗುತಿತ್ತಾ? ಸಂವಿಧಾನ ಬರೆಯಲು ಆಗುತಿತ್ತಾ? ಆಗಿನ ಕಾಲದಲ್ಲಿ

ಓದಲು ಹೋದರೆ ಕಾಯಿಸಿದ ಎಣ್ಣೆ ಹಾಕುತ್ತಿದ್ದರು. ಮನುಷ್ಯ ಹುಟ್ಟಿದ ಮೇಲೆ ಧರ್ಮ ಹುಟ್ಟಿದೆಯೇ ಹೊರೆತು ಧರ್ಮ ಹುಟ್ಟಿದ ಮೇಲೆ ಮನುಷ್ಯ ಹುಟ್ಟಿದ್ದಲ್ಲ ಎಂದು ಹೇಳಿದರು.

ಸನಾತನದಲ್ಲಿ ಶೂದ್ರರಿಗೆ ಓದು ಕಲಿಸುತ್ತಿರಲಿಲ್ಲ. ಅಂಬೇಡ್ಕರ್ ಅವರು ಮನುವಾದವನ್ನು ಸುಟ್ಟು ಹಾಕಿದ್ದರು. ಯಾವ ಧರ್ಮವೂ ದೊಡ್ಡದಲ್ಲ, ಯಾವ ಧರ್ಮವೂ ಸಣ್ಣದ್ದಲ್ಲ. ಮಾನವೀಯತೆ, ಸಮಾನತೆ, ಸಾಮಾಜಿಕ ನ್ಯಾಯ ಅಗತ್ಯ ಎಂದು ಪ್ರತಿಪಾದಿಸಿದರು.

ಒಂದು ದೇಶ, ಒಂದು ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಕತ್ತು ಹಿಸುಕಿದಂತೆ. ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ನಾವು ಅಧಿಕಾರಕ್ಕೆ ಬಂದು ಒಂದು ವರ್ಷವಾಗುತ್ತದೆ. ಒಂದು ವರ್ಷಕ್ಕೆ ಚುನಾವಣೆಗೆ ಹೋಗಬೇಕಾ? ಇದು ಯಾವ ರೀತಿಯ ರಾಜಕೀಯ ಎಂದು ಹೇಳಿದರು.

ಡ್ಯಾಂನಲ್ಲಿ ನೀರಿಲ್ಲ. ನಮ್ಮ ರೈತರಿಗೆ ಬೆಳೆಗೆ ನೀರಿಲ್ಲ, ಕುಡಿಯಲು ನೀರಿಲ್ಲ

ರಾಜ್ಯದಲ್ಲಿ ಕಾವೇರಿ ವಿವಾದದ ಬಗ್ಗೆ ಮಾತನಾಡಿದ ಅವರು, ನೂರು ವರ್ಷಗಳಿಂದಲೂ ಕಾವೇರಿ ವಿವಾದ ಇದೆ. ಬರ ಪರಿಸ್ಥಿತಿ ಬಂದಾಗ, ಡ್ಯಾಂನಲ್ಲಿ ನೀರು ಸಂಗ್ರಹವಾಗದಿರುವಾಗ ಯಾವ ರೀತಿಯಲ್ಲಿ ಹಂಚಿಕೆ ಮಾಡಬೇಕು ಎಂಬ ಬಗ್ಗೆ ಉಲ್ಲೇಖವಿಲ್ಲ. ಇದರಿಂದಾಗಿ ಬರ ಬಂದಾಗ ಸಮಸ್ಯೆ ಆಗುತ್ತಲೇ ಇದೆ. ಡ್ಯಾಂನಲ್ಲಿ ನೀರಿಲ್ಲ. ನಮ್ಮ ರೈತರಿಗೆ ಬೆಳೆಗೆ ನೀರಿಲ್ಲ, ಕುಡಿಯಲು ನೀರಿಲ್ಲ. ನೀರು ಇಲ್ಲದ ಮೇಲೆ ಹೇಗೆ ಕೊಡುವುದು. ರೈತರಲ್ಲಿ ಆತಂಕ ಇದೆ. ನಾವು ರೈತರನ್ನು ರಕ್ಷಣೆ ಮಾಡುತ್ತೇವೆ. ನೀನು ಬದುಕು ಬೇರೆಯೊಬ್ಬರನ್ನೂ ಬದುಕಿಸು. ನಮ್ಮಲ್ಲಿ ನೀರು ಸಂಗ್ರಹ ಇದ್ದರೆ ನೀಡಬಹುದು. ಇಲ್ಲೇ ಖಾಲಿಯಾದರೆ ಏನು ಮಾಡೋದು. ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಸಚಿವ ಮಹಾದೇವಪ್ಪ ತಿಳಿಸಿದರು.

ಅದಾನಿ, ಅಂಬಾನಿ ಸೇರಿದಂತೆ ಹಲವರ ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರಕ್ಕೆ ಬಡವರು, ಮಧ್ಯಮ ವರ್ಗದವರ ಬಗ್ಗೆ ಕಾಳಜಿ ಇಲ್ಲ. ನಾವು 5 ಗ್ಯಾರಂಟಿಗಳ ಜಾರಿ ಮೂಲಕ ಕುಟುಂಬದ ಸ್ವಾವಲಂಬೀಕರಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದೇವೆ. ಪ್ರತಿ ಕುಟುಂಬವು ತಿಂಗಳಿಗೆ ನಾಲ್ಕರಿಂದ 5 ಸಾವಿರ ರೂಪಾಯಿ ಪಡೆಯುತ್ತದೆ. ವರ್ಷಕ್ಕೆ 60 ಸಾವಿರ ರೂಪಾಯಿ ಸಿಗುತ್ತದೆ. ಬೇರೆಯವರ ಮನೆಗೆ ಹೋಗಿ ಅನ್ನ, ಸಾಂಬಾರು, ಈರುಳ್ಳಿ, ಬೆಳ್ಳುಳ್ಳಿ ಕೊಡಿ ಎಂದು ಕೇಳುವುದು ನಿಲ್ಲುತ್ತದೆ. ಸ್ವಾವಲಂಬನೆಯೂ ಆಗಬೇಕಲ್ವಾ ಎಂದು ಹೇಳಿದರು.

minister-hc-mahadevappa

ಪ್ರಧಾನಿ ನರೇಂದ್ರ ಮೋದಿ ದನ, ಎಮ್ಮೆ ಮೇಯಿಸಿದ್ದಾರಾ?

ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಅವರೇನೂ ದನ, ಎಮ್ಮೆ ಮೇಯಿಸಿದ್ದಾರಾ? ಸಗಣಿ, ಗಂಜಲ ತೆಗೆದಿದ್ದಾರಾ? ಉಳುಮೆ ಮಾಡಿದ್ದಾರಾ? ಈ ಕೆಲಸಗಳನ್ನು ನಾವು ಮಾಡಿದ್ದೇವೆ. ಭಾವಾನಾತ್ಮಕ ಮಾತು ಬೇರೆ. ಆರ್ಥಿಕತೆಗೆ ಬುನಾದಿ ಹಾಕುವಂಥ ಕಾರ್ಯಕ್ರಮ ನಮ್ಮದು. ಬಿಜೆಪಿಯವರಿಗೆ ಬಡವರ ಪರ ಕೆಲಸ ಮಾಡಿ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಉಚಿತ ಬಸ್ ಪ್ರಯಾಣದಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ. ಅಲ್ಲಿಯೂ ಆದಾಯ ಬರುತ್ತದೆ. ಎಷ್ಟೋ ಮಂದಿಗೆ ವಿದ್ಯುತ್ ಬಿಲ್ ಕಟ್ಟಲಾಗದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ನಾವು ಉಚಿತವಾಗಿ ನೀಡುತ್ತಿರುವುದರಿಂದ ಬಡವರ ಬದುಕು ಸ್ವಾವಲಂಬನೆಯತ್ತ ಸಾಗುತ್ತಿದೆ ಎಂದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟಿದ್ದ ಹತ್ತು ಸಾವಿರ ಕೋಟಿ ರೂಪಾಯಿಯನ್ನು ಬೇರೆ ಬೇರೆ ಯೋಜನೆಗಳಿಗೆ ಬಳಕೆ ಮಾಡಲಾಗಿದೆ. ಈ ಸಮುದಾಯಗಳಿಗೆ ನೀಡಿದ್ದ ಹಣ ಬೇರೆ ಕಾಮಗಾರಿಗಳು, ಯೋಜನೆಗಳಿಗೆ ನೀಡುವ ಅಗತ್ಯ ಇರಲಿಲ್ಲ. ಎಸ್ಸಿ, ಎಸ್ಟಿ ಸಮುದಾಯದ ವಿದ್ಯಾರ್ಥಿಗಳಿಗೆ ನೀಡಬೇಕಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ನಾನೇ ದೆಹಲಿಗೆ ಹೋಗಿ ಈ ಬಗ್ಗೆ ಸಂಬಂಧಪಟ್ಟ ಕೇಂದ್ರ ಸಚಿವರ ಜೊತೆ ಚರ್ಚೆ ನಡೆಸಿದ್ದೇನೆ. ಎಸ್ಸಿ, ಎಸ್ಟಿ ಸಮುದಾಯಕ್ಕೆ ನೀಡುತ್ತಿದ್ದ ಅನುದಾನ ಕಡಿತಗೊಳಿಸಲಾಗಿದೆ ಎಂಬ ಆರೋಪದಲ್ಲಿ ಸತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+