Mysuru dasara 2023: ಬರ ಹಿನ್ನೆಲೆ ಈ ಬಾರಿ ಸರಳ ದಸರಾ: ಸಚಿವ ಎಚ್‌.ಸಿ.ಮಹದೇವಪ್ಪ

ಮೈಸೂರು, ಸೆಪ್ಟೆಂಬರ್‌, 22: ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಬಾರಿ ಸರಳ ದಸರಾವೋ ಅಥವಾ ಅದ್ದೂರಿ ದಸರಾವೋ ಎಂಬ ಜಿಜ್ಞಾಸೆಯಿದ್ದು, ಕೊನೆಗೂ ಸರ್ಕಾರ ಮೌನ ಮುರಿದಿದ್ದು, ಸರಳ ದಸರಾ ಆಚರಣೆಯ ಸೂಚನೆಯನ್ನು ಸಚಿವ ಎಚ್‌.ಸಿ.ಮಹದೇವಪ್ಪ ಅವರು ನೀಡಿದ್ದಾರೆ.

ರಾಜ್ಯದಲ್ಲಿ ಮಳೆ ಕೊರತೆಯಿಂದ ಬರ ಇರುವುದರಿಂದ ಕಾವೇರಿ ನೀರು ನಿರಂತವಾಗಿ ತಮಿಳುನಾಡಿಗೆ ಹೋಗುತ್ತಿದೆ. ಅಲ್ಲದೆ, ಸರ್ಕಾರ ಬರ ತಾಲೂಕು ಪಟ್ಟಿ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಬೇಕೋ ಅಥವಾ ಅದ್ಧೂರಿಯಾಗಿ ಆಚರಿಸಬೇಕೋ ಎಂಬ ಗೊಂದಲದಲ್ಲಿ ಸರಕಾರ ಸಿಲುಕಿತ್ತು. ಇದೀಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಾಮಾಜಿಕ ಜಾಲತಾಣದಲ್ಲಿ ಸರಳ ದಸರಾ ಬಗ್ಗೆ ಮಾಹಿತಿ ನೀಡಿದ್ದಾರೆ.

Mysuru dasara: Simple dasara celebration this time due to Rain shortage says H.C.Mahadevappa

ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ರೈತಾಪಿ ವರ್ಗವು ಸಂಕಷ್ಟದಲ್ಲಿದೆ. ಆದ್ದರಿಂದ ಈ ಬಾರಿ ಸರಳ ಮತ್ತು ಅರ್ಥಪೂರ್ಣ ದಸರಾ ಆಚರಿಸಿಲು ಸರ್ಕಾರ ನಿರ್ಧರಿಸಿದೆ. ರೈತರ ಸಂಕಷ್ಟದ ಸಂದರ್ಭಕ್ಕೆ ಪೂರಕವಾಗಿ ಸರ್ಕಾರವು ಈ ಬಾರಿ ಸರಳ ದಸರಾ ಆಚರಿಸಲಿದೆ ಎಂದು ಟ್ವೀಟ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಸಿದ್ಧತೆಗಳು ಹೇಗಿವೆ ಎಂದು ತಿಳಿಯಿರಿ

ಮೈಸೂರಿನ ಜಗದ್ವಿಖ್ಯಾತ ಅಂಬಾ ವಿಲಾಸ ಅರಮನೆಯು ಐತಿಹಾಸಿಕ ದಸರಾವನ್ನು ಸ್ವಾಗತಿಸಲು ಸರ್ವ ರೀತಿಯಲ್ಲಿ ತಯಾರಾಗುತ್ತಿದೆ. ಅರಮನೆಯ ಸುತ್ತಮುತ್ತಲೂ ಸ್ವಚ್ಛಗೊಳಿಸುವ, ಉದ್ಯಾನದಲ್ಲಿ ಹೂಗಿಡಗಳನ್ನು ಬೆಳೆಸುವ,ಹೂಕುಂಡಗಳನ್ನು ಶುಚಿಗೊಳಿಸಿ ಅಲಂಕಾರಗೊಳಿಸುವ ಕಾರ್ಯಗಳು ಆರಂಭವಾಗಿವೆ. ಅರಮನೆಯ ಆವರಣಲ್ಲಿ ದಸರಾ ಸಂದರ್ಭದಲ್ಲಿ ಫಲಪುಷ್ಪ ಪ್ರದರ್ಶನ ನಡೆಸಲಾಗುತ್ತಿದ್ದು, ಅದಕ್ಕೆ ಬೇಕಾದ ಸಿದ್ಧತೆಗಳು ಈಗಿನಿಂದಲೇ ಆರಂಭವಾಗಿವೆ.

ದಸರಾದ ಹತ್ತು ದಿನಗಳ ಕಾಲವೂ ಅರಮನೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಅದರಲ್ಲೂ ಖಾಸಗಿ ದರ್ಬಾರ್ ವಿಶೇಷವಾಗಿದೆ. ಇದಕ್ಕಾಗಿ ಎಲ್ಲವೂ ಶಾಸ್ತ್ರೋಕ್ತವಾಗಿಯೇ ನಡೆಯಬೇಕಾಗಿದೆ. ಅರಮನೆಗೆ ಸುಣ್ಣಬಣ್ಣ ಬಳಿಯುವ ಕೆಲಸವಲ್ಲದೆ, ಕೆಟ್ಟು ಹೋಗಿರುವ ವಿದ್ಯುತ್ ಬಲ್ಭ್ ಗಳನ್ನು ತೆಗೆದು ಹೊಸತಾಗಿರುವ ಬಲ್ಭ್ ಗಳನ್ನು ಅಳವಡಿಸಬೇಕಾಗಿದೆ. ದಸರಾ ಕಾರ್ಯಕ್ರಮ ಆರಂಭಕ್ಕೆ ಕೇವಲ ಇಪ್ಪತ್ತೈದು ದಿನಗಳಷ್ಟೆ ಬಾಕಿಯಿದ್ದು, ಎಲ್ಲವೂ ಶೀಘ್ರಗತಿಯಲ್ಲಿ ನಡೆಯಬೇಕಾಗಿದೆ.

ದಸರಾ ವೇಳೆಯಲ್ಲಿ ಪ್ರವಾಸಿಗರು ಅರಮನೆಯನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ದಸರಾ ಕಾರ್ಯಕ್ರಮಕ್ಕೆ ಚಾಮುಂಡಿಬೆಟ್ಟದಲ್ಲಿ ಚಾಲನೆ ದೊರೆತರೂ ದಸರಾ ಸಂಬಂಧಿಸಿದ ಶರನ್ನವರಾತ್ರಿಯ ಆಚರಣೆ ಹತ್ತು ದಿನಗಳ ಕಾಲ ಅರಮನೆ ಆವರಣದಲ್ಲಿಯೇ ನಡೆಯಲಿದೆ. ಅತ್ತ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆಯೊಂದಿಗೆ ನಾಡಹಬ್ಬ ದಸರಾಕ್ಕೆ ಚಾಲನೆ ನೀಡುತ್ತಿದ್ದರೆ ಇತ್ತ ಅರಮನೆಯಲ್ಲಿ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಖಾಸಗಿ ದರ್ಬಾರ್ ಆರಂಭವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+