Get Updates
Get notified of breaking news, exclusive insights, and must-see stories!

Lok sabha election 2024: ಮಗನ ಪರ ಟಿಕೆಟ್‌ಗೆ ಟವೆಲ್‌ ಹಾಕಿದ ಸಚಿವ ಎಚ್‌ಸಿ ಮಹದೇವಪ್ಪ- ಯಾವ ಕ್ಷೇತ್ರ? ವರದಿ, ವಿವರ

ಚಾಮರಾಜನಗರ, ನವೆಂಬರ್‌ 25: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ ಟಿಕೆಟ್‌ಗಾಗಿ ಈಗಾಗಲೇ ಟವಲ್‌ ಹಾಕುವ ಪ್ರಕ್ರಿಯೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಪಕ್ಷದಿಂದ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಕುತೂಹಲ ಕೆರಳಿದೆ.

ಮಾಜಿ ಸಂಸದ, ದಿವಂಗತ ಆರ್‌ ಧ್ರುವನಾರಾಯಣ್‌ ಅವರ ಅಪಾರ ಅಭಿಮಾನ ಬಳಗ ಚಾಮರಾಜನಗರದಲ್ಲಿ ಕಾಂಗ್ರೆಸ್‌ಗೆ ಬೆನ್ನೆಲುಬಾಗಿ ಕೆಲಸ ಮಾಡಲಿದ್ದಾರೆ. ಆದ್ದರಿಂದ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗುವವರು ಗೆಲ್ಲುವ ಸಾಧ್ಯತೆ ಹೆಚ್ಚು. ಹೀಗಾಗಿ ಪಕ್ಷದಿಂದ ಅಭ್ಯರ್ಥಿ ಯಾರಾಗಬೇಕು ಎಂಬ ಚರ್ಚೆ ಆರಂಭವಾಗಿದ್ದು, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌ಸಿ ಮಹದೇವಪ್ಪ ತಮ್ಮ ಮಗನ ಪರ ಟಿಕೆಟ್‌ಗೆ ಟವಲ್‌ ಎಸೆದಿದ್ದಾರೆ.

Minister HC Mahadevappa put a towel on his sons ticket - which constituency? Report, detail

ನಿನ್ನೆ ಮೈಸೂರಿನಲ್ಲಿ ಮಾತನಾಡಿರುವ ಸಚಿವ ಎಚ್‌ಸಿ ಮಹದೇವಪ್ಪ ನನ್ನ ಮಗ ಸುನೀಲ್‌ ಬೋಸ್‌ ಕಳೆದ ಮೂರು ಚುನಾವಣೆಗಳಿಂದಲೂ ಕಾಂಗ್ರೆಸ್‌ ಪಕ್ಷದ ಪರವಾಗಿ ಕೆಲಸ ಮಾಡಿದ್ದಾನೆ. ಅವನಿಗೆ ಒಮ್ಮೆಯೂ ಟಿಕೆಟ್‌ ಸಿಕ್ಕಿಲ್ಲ. ಕಳೆದ ಬಾರಿಯೇ ಅವನಿಗೆ ಟಿಕೆಟ್‌ ಸಿಗಬೇಕಿತ್ತು. ಆದರೆ ಪಕ್ಷದ ಸದಸ್ಯತ್ವ ಇಲ್ಲದಿರುವವರೂ ಶಾಸಕರಾಗಿ ಆಯ್ಕೆಯಾಗಬೇಕಾಯಿತು. ಇದೆಲ್ಲಾ ರಾಜಕೀಯದಲ್ಲಿ ಸಹಜ ಎಂದು ಅವರು ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನನ್ನ ಮಗ ಸುನೀಲ್‌ ಬೋಸ್‌ ಕೂಡ ಟಿಕೆಟ್‌ ಆಕಾಂಕ್ಷಿಯಾಗಿದ್ದಾನೆ. ನಮ್ಮ ಪಕ್ಷದ ಹೈಕಮಾಂಡ್‌ ನಿರ್ಧರಿಸಿದರೆ ಅವನು ಕಣಕ್ಕಿಳಿಯುತ್ತಾನೆ, ಸ್ಪರ್ಧೆ ಬಗ್ಗೆ ನಾನು ಯೋಚಿಸಿಲ್ಲ. ಪಕ್ಷದ ತೀರ್ಮಾನಿಸಿದರೆ ಸ್ಪರ್ಧೆ ಮಾಡುತ್ತೇನೆ. ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್‌ ಸಿಗಬೇಕು. ಚಾಮರಾಜನಗರ, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್‌ ಅಂತಿಮಗೊಂಡಿಲ್ಲ. ನನ್ನ ಮಗ ಮೂರು ಚುನಾವಣೆಯಿಂದಲೂ ಟಿಕೆಟ್‌ ಸಿಗದಿದ್ದರೂ ಅವನು ಮುನಿಸಿಕೊಳ್ಳದೆ ಕೆಲಸ ಮಾಡಿದ್ದಾನೆ ಎಂದು ಮಗನ ಪರ ಬ್ಯಾಟ್‌ ಬೀಸಿದ್ದಾರೆ.

ಇನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಈಗಾಗಲೇ ಟಿಕೆಟ್‌ ಆಕಾಂಕ್ಷಿಗಳು ತಮ್ಮ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಅವರನ್ನು ಪ್ರಮುಖವಾಗಿ ಕಳೆದ ಕಳೆದ ಚುನಾವಣೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಜಿಎನ್‌ ನಂಜುಡಸ್ವಾಮಿ ಹಾಗೂ ಕಾಂಗ್ರೆಸ್‌ ಮಹಿಳಾ ನಾಯಕಿ ಪುಷ್ಪ ಅಮರನಾಥ್‌ ಅವರು ರೇಸ್‌ನಲ್ಲಿದ್ದಾರೆ ಎನ್ನಲಾಗಿದೆ.

ಪುಷ್ಟ ಅಮರನಾಥ್‌ ಅವರು ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಯಂತಹ ರಾಷ್ಟ್ರಮಟ್ಟದ ನಾಯಕರ ಜೊತೆ ಗುರುತಿಸಿಕೊಂಡವರು. ಅಲ್ಲದೆ ರಾಜ್ಯ ಮಹಿಳಾ ಕಾಂಗ್ರೆಸ್‌ನಲ್ಲೂ ಅವರದೇ ಮಹತ್ವ ಪಾತ್ರವನ್ನು ನಿರ್ವಹಿಸಿರುವ ನಾಯಕಿಯಾಗಿದ್ದಾರೆ. ಮೈಸೂರು ಭಾಗದಲ್ಲಿ ಕಾಂಗ್ರೆಸ್‌ನಲ್ಲಿ ತಮ್ಮ ಆದ ಛಾಪು ಮೂಡಿಸಿ ಪಕ್ಷದ ಬಲವರ್ಧನೆಗೆ ತೊಡಗಿಸಿಕೊಂಡಿದ್ದಾರೆ. ಅವರಿಗೆ ಕಳೆದ ಬಾರಿಯೇ ವಿಧಾನಸಭಾ ಟಿಕೆಟ್‌ ಸಿಗಬೇಕಿತ್ತು. ಈಗ ಚಾಮರಾಜನಗರ ಲೋಕಸಭಾ ಚುನಾವಣೆಗೆ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಹೈಕಮಾಂಡ್‌ ತೀರ್ಮಾನದ ಬಗ್ಗೆ ಕಾದುನೋಡಬೇಕಿದೆ.

ಬಿಜೆಪಿಯಲ್ಲೂ ಭಾರೀ ಪೈಪೋಟಿ:

ಕಾಂಗ್ರೆಸ್‌ನಂತೆ ಬಿಜೆಪಿಯಲ್ಲೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್‌ಗೆ ಆಕಾಂಕ್ಷಿಗಳ ದಂಡೇ ಇದೆ. ಇದರಲ್ಲಿ ಮಾಜಿ ಐಎಎಸ್‌ ಅಧಿಕಾರಿ ಕೆ. ಶಿವರಾಂ, ಮಾಜಿ ಶಿಕ್ಷಣ ಸಚಿವ ಎನ್‌ ಮಹೇಶ್‌, ಬಾಲರಾಜ್‌, ಚಾಮರಾಜನಗರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ವಿ ಶ್ರೀನಿವಾಸ್‌ ಪ್ರಸಾದ್‌ ಅವರ ಅಳಿಯ ಡಾ. ಮೋಹನ್‌ ಕೂಡ ಆಕಾಂಕ್ಷಿಗಳು ಎನ್ನಲಾಗುತ್ತಿದೆ.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಬಿಎಸ್‌ಪಿ ಟಿಕೆಟ್‌ನಿಂದ ಗೆದ್ದು ಶಾಸಕರಾಗಿದ್ದ ಎನ್‌ ಮಹೇಶ್‌ ಅವರು ಮೈತ್ರಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದರು. ಆದರೆ ಅವರನ್ನು ಪಕ್ಷ ಉಚ್ಚಾಟಿಸಿದ ಮೇಲೆ ಅವರು ತಮ್ಮ ರಾಜಕೀಯ ಉಳಿವಿಗಾಗಿ ಬಿಜೆಪಿ ಸೇರಿಕೊಂಡರು. ಈಗ ಅವರ ಬಿಜೆಪಿಯ ಹಿರಿಯ ನಾಯಕರು ಮಾತ್ರವಲ್ಲದೆ ಕೇಶವ ಕೃಪದವರ ಕೃಪಕಟಾಕ್ಷದಲ್ಲೂ ಇದ್ದಾರೆ. ಹೀಗಾಗಿ ಬಿಜೆಪಿಯಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರೂ ಟಿಕೆಟ್‌ ಆಕಾಂಕ್ಷಿ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಅವರಿಗೆ ಪಕ್ಷ ಟಿಕೆಟ್‌ ಕೊಟ್ಟರೂ ಆಶ್ಚರ್ಯವಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+