'ಕರ್ನಾಟಕ ಕಾಫಿ ಕಾರ್ಪೊರೇಷನ್, ಕಾಫಿ ಆಫ್ ಕರ್ನಾಟಕ' ಬ್ರ್ಯಾಂಡ್ ಮಾಡಲು ಆಗ್ರಹ: ಸರ್ಕಾರಕ್ಕೆ ಮಹತ್ವದ ಪ್ರಸ್ತಾವನೆ

ಬೆಂಗಳೂರು: ದೇಶದಲ್ಲೇ ಅತೀ ಹೆಚ್ಚು ಕಾಫಿ ಬೆಳೆಯುವ ನಾಡು ಕರ್ನಾಟಕ. ಉತ್ಪಾದನೆಯಲ್ಲಿ ಶೇ.70ರಷ್ಟು ಪಾಲು ಕರ್ನಾಟಕ ಹೊಂದಿದೆ. ಅದಕ್ಕೆ ಮಾನ್ಯತೆ ಅಷ್ಟಾಗಿ ಸಿಗದ ಹಿನ್ನೆಲೆಯಲ್ಲಿ ಇದೀಗ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನೆ ಆಯೋಗ ಮಹತ್ವದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.

ರಾಜ್ಯದಲ್ಲಿ ಕರ್ನಾಟಕ ಕಾಫಿ ಕಾರ್ಪೊರೇಷನ್ (ಕೆಸಿಸಿ) ಸ್ಥಾಪಿಸಬೇಕು. ಜೊತೆಗೆ "ಕಾಫಿ ಆಫ್ ಕರ್ನಾಟಕ" ವನ್ನು ಜಾಗತಿಕ ಬ್ರಾಂಡ್ ಆಗಿ ಅಭಿವೃದ್ಧಿಪಡಿಸುವಂತೆ ಡಿಕೆ ಶಿವಕುಮಾರ್ ಅವರಿಗೆ ಪ್ರಸ್ತಾವನೆ ಸಲ್ಲಿಸಿದೆ. ಕೆಸಿಸಿ ಸ್ಥಾಪನೆ ಮತ್ತು "ಕಾಫಿ ಆಫ್ ಕರ್ನಾಟಕ' ಬ್ರಾಂಡ್ ಮಾಡುವ ಮೂಲಕ "ಮೇಕ್ ಇನ್ ಕರ್ನಾಟಕ" ವನ್ನು ಉತ್ತೇಜಿಸಬೇಕು. ಕರ್ನಾಟಕ ರಾಜ್ಯ ಬಜೆಟ್ 2027-28-ಬಜೆಟ್‌ನಲ್ಲಿ ಸೇರಿಸುವ ಮೂಲಕ ಸ್ಥಳೀಯ ಕಾಫೀ ಕ್ಷೇತ್ರದ ಮೌಲ್ಯವರ್ಧನೆ, ಉದ್ಯೋಗ ಸೃಷ್ಟಿಗೆ ಅವಕಾಶ ನೀಡುವಂತೆ ಕೋರಿದೆ.

Karnataka Policy Commission Proposes Coffee Corporation and Coffee of Karnataka Global Brand

ಕರ್ನಾಟಕ ಕಾಫಿ ಕಾರ್ಪೊರೇಷನ್ (ಕೆಸಿಸಿ) ಅನ್ನು ಸರ್ಕಾರಿ ಸ್ವಾಮ್ಯದ ವಾಣಿಜ್ಯ ಉದ್ಯಮವಾಗಿ ಸ್ಥಾಪಿಸಲು ಮತ್ತು "ಕಾಫಿ ಆಫ್ ಕರ್ನಾಟಕ" ವನ್ನು ಏಕೀಕೃತ ರಾಜ್ಯ ಮಟ್ಟದ ಜಾಗತಿಕ ಕಾಫಿ ಬ್ರಾಂಡ್ ಆಗಿ ಅಭಿವೃದ್ಧಿಪಡಿಸುವುದು ಅತ್ಯಗತ್ಯವಾಗಿದೆ ಎಂದು ಆಯೋಗ ತಿಳಿಸಿದೆ.

'ವಂದೇ ಭಾರತ್ ಅಲ್ಲ, ಖಾಯೇಗಾ ಭಾರತ್ ಎಕ್ಸ್‌ಪ್ರೆಸ್': ರೈಲಲ್ಲಿ ಊಟ ಸವಿದು ಫ್ಯಾಮಿಲಿ ರಿವ್ಯೂ! ವಿಡಿಯೋ ವೈರಲ್
'ವಂದೇ ಭಾರತ್ ಅಲ್ಲ, ಖಾಯೇಗಾ ಭಾರತ್ ಎಕ್ಸ್‌ಪ್ರೆಸ್': ರೈಲಲ್ಲಿ ಊಟ ಸವಿದು ಫ್ಯಾಮಿಲಿ ರಿವ್ಯೂ! ವಿಡಿಯೋ ವೈರಲ್

ಬ್ರ್ಯಾಂಡಿಂಗ್, ಮಾರ್ಕೆಟಿಂಗ್, ರಫ್ತು ಉತ್ತೇಜನ

ಸ್ಥಳೀಯ ಸಂಸ್ಕರಣೆ, ಉತ್ಪಾದನೆ, ಮೌಲ್ಯವರ್ಧನೆ, ಬ್ರ್ಯಾಂಡಿಂಗ್, ಮಾರ್ಕೆಟಿಂಗ್, ರಫ್ತು ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವ ಮೂಲಕ "ಕಾಫಿ ಇನ್ ಕರ್ನಾಟಕ"ದ ದೃಷ್ಟಿಕೋನಕ್ಕೆ ಅನುಗುಣವಾಗಿ ಕಾಫಿ ಉತ್ಪಾದನೆಯಲ್ಲಿ ಕರ್ನಾಟಕದ ನಾಯಕತ್ವ ಸಮಗ್ರ ಕಾಫಿ ಆಧಾರಿತ ಆರ್ಥಿಕ ಅಭಿವೃದ್ಧಿ ಉಪಕ್ರಮವಾಗಿ ಪರಿವರ್ತಿಸುವ ಗುರಿ ಸರ್ಕಾರ ಹಾಕಿಕೊಳ್ಳಬೇಕು. ಈ ರೀತಿ ಆದಲ್ಲಿ ನಾಡಿನ ಕಾಫಿ ಘಮ ದೇಶದಲ್ಲೆಡೆ ಪರಿಸರಿಸಬೇಕು.

MSIL ಮಾದರಿಯಲ್ಲಿ ಮಾರುಕಟ್ಟೆ ಪ್ರವಶಿಸಬೇಕು

ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (MSIL) ಮಾದರಿಯಲ್ಲಿ ಪ್ರಸ್ತಾವಿತ ನಿಗಮವು, ಕಾಫಿ ಬೆಳೆಗಾರರಿಗೆ ಮಾರುಕಟ್ಟೆ ಪ್ರವೇಶ ಬಲಪಡಿಸಬೇಕು. ರಾಜ್ಯದೊಳಗೆ ಆಧುನಿಕ ಕಾಫಿ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಸೌಲಭ್ಯಗಳನ್ನು ಸ್ಥಾಪಿಸಲು, ಪ್ರೀಮಿಯಂ ಕಾಫಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ರಾಜ್ಯದ ಉಪಸ್ಥಿತಿ ವಿಸ್ತರಿಸಲು ಸಮಗ್ರ ವಾಣಿಜ್ಯ ವೇದಿಕೆಯನ್ನು ಒದಗಿಸುವಂತೆ ಕೋರಲಾಗಿದೆ.

ಕಚ್ಚಾ ಸರಕಾಗಿ ಮಾರದೇ ಪ್ಯಾಕ್ ಮಾಡಿ, ಬ್ರಾಂಡ್ ಆಗಿಸಬೇಕು!

ಕರ್ನಾಟಕದ ಕಾಫಿಯನ್ನು ಕೇವಲ ಕಚ್ಚಾ ಸರಕಾಗಿ ಉತ್ಪಾದಿಸಿ ಮಾರಾಟ ಮಾಡದೇ ಸಂಸ್ಕರಿಸಿ, ಹುರಿದು, ಪ್ಯಾಕ್ ಮಾಡಿ, ಬ್ರಾಂಡ್ ಮಾಡಿ ಮತ್ತು ರಾಜ್ಯದೊಳಗೆ ಮೌಲ್ಯವರ್ಧಿತ ಉತ್ಪನ್ನವಾಗಿ ಮಾರಾಟ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಇದು ಹೊಸ ವ್ಯವಹಾರ ಮತ್ತು ಹೂಡಿಕೆ ಅವಕಾಶಗಳನ್ನು ಸೃಷ್ಟಿಸಿದರೆ ಸ್ಥಳೀಯವಾಗಿ ಕಾಫಿ ಆರ್ಥಿಕತೆಯ ಬಹುಪಾಲು ಉಳಿಸಿಕೊಳ್ಳಬಹುದು.

ಕಾಫಿ ಸಂಸ್ಕರಣೆ, ಉತ್ಪಾದನೆ, ಚಿಲ್ಲರೆ ಮಾರಾಟ ಮಳಿಗೆಗಳು, ಬ್ರಾಂಡೆಡ್ ಕೆಫೆಗಳು, ಇ-ವಾಣಿಜ್ಯ, ರಫ್ತು ಮತ್ತು ಕಾಫಿ ಪ್ರವಾಸೋದ್ಯಮದ ಮೂಲಕ ಗ್ರಾಮೀಣ ಯುವಕರು ಮತ್ತು ಮಹಿಳೆಯರಿಗೆ ಉದ್ಯೋಗ ಮತ್ತು ಉದ್ಯಮಶೀಲತಾ ಅವಕಾಶಗಳು ಸಿಗುತ್ತದೆ. ಜೊತೆಗೆ ರೈತ ಉತ್ಪಾದಕ ಸಂಸ್ಥೆಗಳು (FPOಗಳು), ಸಹಕಾರಿ ಸಂಘಗಳು ಮತ್ತು ಖಾಸಗಿ ಉದ್ಯಮಗ ಪಾಲುದಾರಿಕೆಗೂ ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದು ಆಯೋಗ ತಿಳಿಸಿದೆ.

ಆಶಾ ಕಾರ್ಯಕರ್ತೆಯರಿಗೆ ₹2,000 ಹೆಚ್ಚಳದ ಲಿಖಿತ ಭರವಸೆ, ಹೋರಾಟ ಹಿಂಪಡೆಯಲು ನಿರ್ಧಾರ?: ಸಿಎಂ ಕಾರ್ಯದರ್ಶಿ
ಆಶಾ ಕಾರ್ಯಕರ್ತೆಯರಿಗೆ ₹2,000 ಹೆಚ್ಚಳದ ಲಿಖಿತ ಭರವಸೆ, ಹೋರಾಟ ಹಿಂಪಡೆಯಲು ನಿರ್ಧಾರ?: ಸಿಎಂ ಕಾರ್ಯದರ್ಶಿ

ಕಾಫಿಗೆ ಸಂಬಂಧಿಸಿದಂತೆ ಇತರ ಬೇಡಿಕೆಗಳು

1. KCC, ಕರ್ನಾಟಕದ ಕಾಫಿ ಬ್ರಾಂಡ್ ಜೊತೆಗೆ ಮುಂದಿನ ರಾಜ್ಯ ಬಜೆಟ್‌ನಲ್ಲಿ ಆರಂಭಿಕ ಸರ್ಕಾರಿ ಬಂಡವಾಳ ಒದಗಿಸಬೇಕು.

* ಸಮಗ್ರವಾದ 'ವಿವರವಾದ ಯೋಜನಾ ವರದಿ'ಯನ್ನು ಸಿದ್ಧಪಡಿಸಬೇಕು

* ಕರ್ನಾಟಕ ಸರ್ಕಾರದ ಹೆಸರಿನಲ್ಲಿ ಬ್ರಾಂಡ್ ಟ್ರೇಡ್‌ಮಾರ್ಕ್ ನೋಂದಾಯಿಸಿ ರಕ್ಷಿಸುವುದು. KCCಗೆ ಅದರ ವಾಣಿಜ್ಯ ಬಳಕೆಯ ಅಧಿಕೃತ ಹಕ್ಕುಗಳನ್ನು ನೀಡಬೇಕು.

6. "MAKE IN KARNATAKA" (ಕರ್ನಾಟಕದಲ್ಲಿ ತಯಾರಿಸಿ) ಪರಿಕಲ್ಪನೆಯಡಿ, ಕರ್ನಾಟಕದೊಳಗೆ ಕಾಫಿ ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಮೌಲ್ಯವರ್ಧಿತ ಉತ್ಪಾದನಾ ಚಟುವಟಿಕೆ ಆರಂಭಿಸುವುದು.

* ಸರ್ಕಾರದ ಅನುಮೋದನೆ, ಆರ್ಥಿಕ ಕಾರ್ಯಸಾಧ್ಯತೆಗೆ ಒಳಪಟ್ಟು, 2027-2037ರ ಅವಧಿಯಲ್ಲಿ ಈ ಉಪಕ್ರಮ ಹಂತ ಹಂತವಾಗಿ ಜಾರಿಗೊಳಿಸುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+