NDA ಇತಿಹಾಸದಲ್ಲೇ ಐತಿಹಾಸಿಕ ಸಾಧನೆ: ಕಂಪ್ಯೂಟರ್ ಸೈನ್ಸ್, ಕಲಾ ವಿಭಾಗದಲ್ಲಿ ಇಬ್ಬರು ಮಹಿಳಾ ಕೆಡೆಟ್‌ಗಳು ಫಸ್ಟ್ ರ‍್ಯಾಂಕ್

ಪುಣೆ: ಭಾರತೀಯ ಸೇನೆ, ನೌಕಾಪಡೆ ಹಾಗೂ ವಾಯುಪಡೆಗೆ ಅಧಿಕಾರಿಗಳನ್ನ ತರಬೇತಿಗೊಳಿಸುವ ಪುಣೆಯ ಪ್ರತಿಷ್ಠಿತ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಇತಿಹಾಸದಲ್ಲಿ ಹೊಸದೊಂದು ಸುವರ್ಣ ಅಧ್ಯಾಯ ಬರೆಯಲಾಗಿದೆ. 2022ರಲ್ಲಿ ಮಹಿಳಾ ಕೆಡೆಟ್‌ಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿತ್ತು. ಇದಾದ ಕೇವಲ ನಾಲ್ಕು ವರ್ಷಗಳಲ್ಲೇ, ಎನ್‌ಡಿಎ ಮಹಿಳಾ ಕೆಡೆಟ್‌ಗಳ ಸಾಧನೆ ಇದೀಗ ದೇಶದ ಗಮನ ಸೆಳೆದಿದೆ.

ಅಕಾಡೆಮಿಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಬ್ಬರು ಮಹಿಳಾ ಕೆಡೆಟ್‌ಗಳು ತಮ್ಮ ಶೈಕ್ಷಣಿಕ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ.

Historic First At NDA Two Women Cadets Gargi Paliwal And Divya Godara Top Computer Science amp amp Arts Streams

ಗಾರ್ಗಿ ಪಾಲಿವಾಲ್ ಮತ್ತು ದಿವ್ಯಾ ಗೋದಾರಾ: ಎನ್‌ಡಿಎ 151ನೇ ಕೋರ್ಸ್‌ನಲ್ಲಿ ಐತಿಹಾಸಿಕ ಗೌರವ

ಪುಣೆಯ ಎನ್‌ಡಿಎ ಪ್ರಕಟಣೆಯ ಪ್ರಕಾರ, 'ಎನ್‌ಡಿಎ 151ನೇ ಕೋರ್ಸ್‌ನ ಪದವಿ ಪ್ರದಾನ ಸಮಾರಂಭದಲ್ಲಿ ಕೆಡೆಟ್ ಗಾರ್ಗಿ ಪಾಲಿವಾಲ್ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಹಾಗೂ ಕೆಡೆಟ್ ದಿವ್ಯಾ ಗೋದಾರಾ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಈ ಶೈಕ್ಷಣಿಕ ಸಾಧನೆಗಾಗಿ ಗಾರ್ಗಿ ಪಾಲಿವಾಲ್ ಅವರಿಗೆ ನೌಕಾಪಡೆಯ ಮುಖ್ಯಸ್ಥರ ಟ್ರೋಫಿ ಮತ್ತು ಕಮಾಂಡೆಂಟ್ ಬೆಳ್ಳಿ ಪದಕ ನೀಡಿ ಗೌರವಿಸಲಾಗುತ್ತದೆ. ಅದೇ ರೀತಿ, ಕಲಾ ವಿಭಾಗದಲ್ಲಿ ಅಗ್ರಸ್ಥಾನ ಪಡೆದ ದಿವ್ಯಾ ಗೋದಾರಾ ಅವರಿಗೆ ವಾಯುಪಡೆಯ ಮುಖ್ಯಸ್ಥರ ಟ್ರೋಫಿ ಹಾಗೂ ಕಮಾಂಡೆಂಟ್ ಬೆಳ್ಳಿ ಪದಕ ಪ್ರದಾನ ಮಾಡಲಾಗುತ್ತದೆ.

ವೈದ್ಯೆಯಾಗಿ ಸೇನೆಗೆ ಸೇರಿ, ತ್ರೀ-ಸ್ಟಾರ್ ಜನರಲ್ ಹುದ್ದೆಗೇರಿದ ವೀರ ಮಹಿಳೆ: ಇದು ಡಾ. ಮಾಧುರಿ ಕಾನಿಟ್ಕರ್ ಅವರ ಸಾಧನೆ
ವೈದ್ಯೆಯಾಗಿ ಸೇನೆಗೆ ಸೇರಿ, ತ್ರೀ-ಸ್ಟಾರ್ ಜನರಲ್ ಹುದ್ದೆಗೇರಿದ ವೀರ ಮಹಿಳೆ: ಇದು ಡಾ. ಮಾಧುರಿ ಕಾನಿಟ್ಕರ್ ಅವರ ಸಾಧನೆ

ವಿಜ್ಞಾನ ಮತ್ತು ಬಿ.ಟೆಕ್ ವಿಭಾಗದ ಟಾಪರ್ಸ್: ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪದವಿ ಪ್ರದಾನ ವಿವರ

ಶನಿವಾರ ನಡೆದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ 151ನೇ ಕೋರ್ಸ್‌ನ ಪದವಿ ಪ್ರದಾನ ಸಮಾರಂಭದಲ್ಲಿ ಮಿತ್ರ ರಾಷ್ಟ್ರಗಳ 12 ಕೆಡೆಟ್‌ಗಳು ಸೇರಿದಂತೆ ಒಟ್ಟು 365 ಕೆಡೆಟ್‌ಗಳು ಪದವಿ ಪಡೆದರು. ಈ ಸಮಾರಂಭಕ್ಕೆ ಡಿಫೆನ್ಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಟೆಕ್ನಾಲಜಿ (DIAT) ಉಪಕುಲಪತಿ ಡಾ. ಬಿಎಚ್‌ವಿಎಸ್ ನಾರಾಯಣ ಮೂರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಇನ್ನುಳಿದ ವಿಭಾಗಗಳಲ್ಲಿ, ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕೆಡೆಟ್ ಆಯುಷ್ ಕುಮಾರ್ ಅವರಿಗೆ ಸೇನಾ ಮುಖ್ಯಸ್ಥರ ಟ್ರೋಫಿ ಹಾಗೂ ಕಮಾಂಡೆಂಟ್ ಬೆಳ್ಳಿ ಪದಕ ಲಭಿಸಿದೆ. ಬಿ.ಟೆಕ್ ವಿಭಾಗದಲ್ಲಿ 1ರಿಂದ 6ನೇ ಸೆಮಿಸ್ಟರ್‌ನ ಮೆರಿಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಕೆಡೆಟ್ ಪ್ರಶಾಂತ್ ಕುಮಾರ್ ಅವರಿಗೆ ಸಿಐಎಸ್‌ಸಿ, ಎಚ್‌ಕ್ಯು ಐಡಿಎಸ್ ಟ್ರೋಫಿ ಹಾಗೂ ಕಮಾಂಡೆಂಟ್ ಬೆಳ್ಳಿ ಪದಕ ಘೋಷಿಸಲಾಗಿದೆ.

ಎನ್‌ಡಿಎಯಲ್ಲಿ ಪ್ರಾಥಮಿಕ ತರಬೇತಿ ಪೂರ್ಣಗೊಳಿಸಿದ ಈ ಕೆಡೆಟ್‌ಗಳು ಮುಂದಿನ ಹಂತದ ತರಬೇತಿಗಾಗಿ ತಮ್ಮ ತಮ್ಮ ಸೇವಾ ಅಕಾಡೆಮಿಗಳಿಗೆ ತೆರಳಲಿದ್ದಾರೆ.

ದೇಶ ಕಾಯಲು ಹೊರಟ ಮಲೆನಾಡಿನ ಹೆಣ್ಣುಮಗಳು: UPSC NDA ಪರೀಕ್ಷೆಯಲ್ಲಿ ದೇಶಕ್ಕೇ ಫಸ್ಟ್ ರ‍್ಯಾಂಕ್ ಪಡೆದ ಭದ್ರಾವತಿಯ ಶ್ರೇಯಾ ಗೌಡ
ದೇಶ ಕಾಯಲು ಹೊರಟ ಮಲೆನಾಡಿನ ಹೆಣ್ಣುಮಗಳು: UPSC NDA ಪರೀಕ್ಷೆಯಲ್ಲಿ ದೇಶಕ್ಕೇ ಫಸ್ಟ್ ರ‍್ಯಾಂಕ್ ಪಡೆದ ಭದ್ರಾವತಿಯ ಶ್ರೇಯಾ ಗೌಡ

ಪೋಷಕರಿಗೆ ಟ್ರೋಫಿ ಅರ್ಪಣೆ: ರಾಜಸ್ಥಾನದ ಗಾರ್ಗಿ ಪಾಲಿವಾಲ್ ಯಶಸ್ಸಿನ ಮಾತು

ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿರುವ ಗಾರ್ಗಿ ಪಾಲಿವಾಲ್ ಮೂಲತಃ ರಾಜಸ್ಥಾನದ ಚಿತ್ತೋರ್‌ಗಢದವರು. ಸೇನಾ ಹಿನ್ನೆಲೆಯ ಕುಟುಂಬದಿಂದ ಬಂದಿರುವ ಇವರ ಹಿರಿಯ ಸಹೋದರ ಪ್ರಸ್ತುತ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರೆ, ಸಹೋದರಿ ಆರ್ಮ್ಡ್ ಫೋರ್ಸಸ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.

ತಮ್ಮ ಯಶಸ್ಸಿನ ಕುರಿತು ಹರ್ಷ ವ್ಯಕ್ತಪಡಿಸಿರುವ ಗಾರ್ಗಿ, "ಎನ್‌ಡಿಎಗೆ ಸೇರಿದ ಆರಂಭಿಕ ದಿನಗಳಲ್ಲಿ ಶಿಕ್ಷಣ ಮತ್ತು ಕಠಿಣ ದೈಹಿಕ ತರಬೇತಿಯನ್ನ ಒಟ್ಟಿಗೆ ನಿಭಾಯಿಸುವುದು ತುಸು ಕಷ್ಟವೆನಿಸಿತ್ತು. ಆದರೆ ಕ್ರಮೇಣ ಹೊಂದಿಕೊಂಡೆ. ನನ್ನ ಸೀನಿಯರ್ಸ್ ಹಾಗೂ ತರಬೇತುದಾರರು ನೀಡಿದ ಬೆಂಬಲ ನನ್ನಲ್ಲಿ ಆತ್ಮವಿಶ್ವಾಸ ತುಂಬಿತು. ಈ ಟ್ರೋಫಿಯನ್ನ ನನ್ನ ಪೋಷಕರಿಗೆ ಅರ್ಪಿಸುತ್ತೇನೆ" ಎಂದು ಭಾವುಕರಾಗಿ ನುಡಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+