ಇಂದಿನಿಂದ ನಂದಿನಿ ಮೊಸರು ದರ ಇಳಿಕೆ! ಅರ್ಧ ಲೀಟರ್, 1 ಲೀಟರ್ ಪ್ಯಾಕೆಟ್ ಹೊಸ ಬೆಲೆ ಎಷ್ಟು?

ಬೆಂಗಳೂರು: ಬೆಲೆ ಏರಿಕೆಯ ಬಿಸಿಯಿಂದ ಕಂಗೆಟ್ಟಿದ್ದ ರಾಜ್ಯದ ಗ್ರಾಹಕರಿಗೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (KMF) ತುಸು ನೆಮ್ಮದಿ ನೀಡಿದೆ. ಇಂದಿನಿಂದ (ಭಾನುವಾರ, ನವೆಂಬರ್ 29, 2026) ರಾಜ್ಯಾದ್ಯಂತ ನಂದಿನಿ ಮೊಸರು ದರ ಇಳಿಕೆ ಜಾರಿಗೆ ಬಂದಿದ್ದು, ಪ್ರತಿ ಕೆ.ಜಿ ಅಂದರೆ 1 ಲೀಟರ್ ಮೊಸರಿನ ಮೇಲೆ 2 ರೂಪಾಯಿ ಹಾಗೂ ಅರ್ಧ ಕೆ.ಜಿ (500 ಗ್ರಾಂ) ಪ್ಯಾಕೆಟ್ ಮೇಲೆ 1 ರೂಪಾಯಿ ಕಡಿತಗೊಳಿಸಲಾಗಿದೆ.

ಕಳೆದ ತಿಂಗಳಷ್ಟೇ ಮೊಸರಿನ ದರವನ್ನ ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ಈ ಪರಿಷ್ಕರಣೆ ಮಾಡಲಾಗಿದೆ.

KMF Cuts Nandini Curd Price By Rs 2 Per Kg From Today Nov 29 Check Revised 500g amp amp 1 Kg Pack Rates

ಕೆಎಂಎಫ್ ಪರಿಷ್ಕೃತ ದರಪಟ್ಟಿ: ಇಂದಿನಿಂದ ನಂದಿನಿ ಮೊಸರು ಎಷ್ಟಕ್ಕೆ ಸಿಗಲಿದೆ?

ಕೆಎಂಎಫ್ ಬಿಡುಗಡೆ ಮಾಡಿರುವ ಪರಿಷ್ಕೃತ ದರಪಟ್ಟಿಯ ಪ್ರಕಾರ, ಭಾನುವಾರದಿಂದ ರಾಜ್ಯದ ಎಲ್ಲಾ ನಂದಿನಿ ಮಳಿಗೆಗಳಲ್ಲಿ ಹೊಸ ದರ ಅನ್ವಯವಾಗಲಿದೆ:

* ಅರ್ಧ ಲೀಟರ್ (500 ಗ್ರಾಂ) ಪ್ಯಾಕೆಟ್: ಹಳೆಯ ದರ 34 ರೂಪಾಯಿಯಿದ್ದು, ಈಗ 1 ರೂ. ಕಡಿತಗೊಂಡು 33 ರೂಪಾಯಿಗೆ ಲಭ್ಯವಾಗಲಿದೆ.

* ಒಂದು ಲೀಟರ್ (1 ಕೆ.ಜಿ) ಪ್ಯಾಕೆಟ್: ಹಳೆಯ ದರ 68 ರೂಪಾಯಿಯಿದ್ದು, ಈಗ 2 ರೂ. ಇಳಿಕೆಯಾಗಿ 66 ರೂಪಾಯಿಗೆ ನಿಗದಿಯಾಗಿದೆ.

ನಂದಿನಿ ಹಾಲಿನ ರೇಟ್ ಹೆಚ್ಚಿದ ಬೆನ್ನಲ್ಲೇ ಮೊಸರಿನ ದರವೂ ಭಾರಿ ಏರಿಕೆ: ಸಚಿವ ಕೃಷ್ಣ ಬೈರೇಗೌಡ ಹೇಳಿದ್ದೇನು? ಪರಿಷ್ಕೃತ ದರ ಇಲ್ಲಿದೆ
ನಂದಿನಿ ಹಾಲಿನ ರೇಟ್ ಹೆಚ್ಚಿದ ಬೆನ್ನಲ್ಲೇ ಮೊಸರಿನ ದರವೂ ಭಾರಿ ಏರಿಕೆ: ಸಚಿವ ಕೃಷ್ಣ ಬೈರೇಗೌಡ ಹೇಳಿದ್ದೇನು? ಪರಿಷ್ಕೃತ ದರ ಇಲ್ಲಿದೆ

₹14 ಏರಿಕೆ, ₹2 ಇಳಿಕೆ: ಸಿಎಂ ಡಿ ಕೆ ಶಿವಕುಮಾರ್ ಸೂಚನೆ ಬೆನ್ನಲ್ಲೇ ಕ್ರಮ

ಹಾಲು ಉತ್ಪಾದಕರು ಹಾಗೂ ಜಿಲ್ಲಾ ಹಾಲು ಒಕ್ಕೂಟಗಳ ಒತ್ತಡದ ಮೇರೆಗೆ ನವೆಂಬರ್ 1, 2026ರಿಂದ ಜಾರಿಗೆ ಬರುವಂತೆ ಕೆಎಂಎಫ್ ಹಾಲು ಮತ್ತು ಮೊಸರಿನ ದರವನ್ನ ಪರಿಷ್ಕರಿಸಿತ್ತು. ಆಗ ನಂದಿನಿ ಹಾಲಿನ ದರವನ್ನ ಲೀಟರ್‌ಗೆ 8ರಿಂದ 12 ರೂಪಾಯಿವರೆಗೆ ಹೆಚ್ಚಿಸಿದ್ದರೆ, ಮೊಸರಿನ ದರವನ್ನ ಒಮ್ಮೆಲೇ ಕೆ.ಜಿಗೆ ಬರೋಬ್ಬರಿ 14 ರೂಪಾಯಿ ಅಂದರೆ 54 ರೂಪಾಯಿಯಿಂದ 68 ರೂಪಾಯಿಗೆ ಏರಿಕೆಯಾಗಿತ್ತು. ಹಾಗೂ ಅರ್ಧ ಕೆ.ಜಿಗೆ 6 ರೂ. ಅಂದರೆ 28 ರೂ.ನಿಂದ 34 ರೂಪಾಯಿ ಏರಿಕೆ ಮಾಡಲಾಗಿತ್ತು.

ದೈನಂದಿನ ಅಗತ್ಯ ವಸ್ತುವಿನ ಬೆಲೆಯನ್ನ ಏಕಾಏಕಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿದ್ದಕ್ಕೆ ರಾಜ್ಯಾದ್ಯಂತ ಗ್ರಾಹಕರು, ಗೃಹಿಣಿಯರು, ಪ್ರತಿಪಕ್ಷಗಳು ಹಾಗೂ ಹೋಟೆಲ್ ಉದ್ಯಮಿಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಜನಾಕ್ರೋಶ ಹೆಚ್ಚಾಗುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ಸಿಎಂ ಡಿ ಕೆ ಶಿವಕುಮಾರ್ ಅವರು, ಗ್ರಾಹಕರ ಹಿತದೃಷ್ಟಿಯಿಂದ ಮೊಸರಿನ ದರವನ್ನ ಇಳಿಕೆ ಮಾಡುವಂತೆ ಕೆಎಂಎಫ್‌ಗೆ ಸೂಚಿಸಿದ್ದರು. ಸಿಎಂ ಸೂಚನೆ ನೀಡಿ ಸುಮಾರು 20 ದಿನಗಳ ಬಳಿಕ ಇದೀಗ ದರ ಕಡಿತ ಜಾರಿಗೆ ಬಂದಿದೆ.

Milk Price Hike: ರಾಜ್ಯೋತ್ಸವಕ್ಕೆ ಗಿಫ್ಟ್‌ ಹೆಸರಲ್ಲಿ ಹಾಲಿನ ದರ ಏರಿಕೆ ಶಾಕ್! ₹8 ಬದಲು ₹12 ಹೆಚ್ಚಳ, ಮೊಸರಿಗೆ ₹14 ಏರಿಕೆ
Milk Price Hike: ರಾಜ್ಯೋತ್ಸವಕ್ಕೆ ಗಿಫ್ಟ್‌ ಹೆಸರಲ್ಲಿ ಹಾಲಿನ ದರ ಏರಿಕೆ ಶಾಕ್! ₹8 ಬದಲು ₹12 ಹೆಚ್ಚಳ, ಮೊಸರಿಗೆ ₹14 ಏರಿಕೆ

ನಂದಿನಿ ಮೊಸರು ಹೊಸ ಬೆಲೆ: ಗ್ರಾಹಕರು ಮತ್ತು ಹೋಟೆಲ್ ಉದ್ಯಮಿಗಳ ಪ್ರತಿಕ್ರಿಯೆ ಏನು?

ರೈತರ ಹಿತರಕ್ಷಣೆ ಹಾಗೂ ಗ್ರಾಹಕರ ಕೈಗೆಟಕುವ ದರದ ನಡುವೆ ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ ಸರ್ಕಾರದ ನಿರ್ದೇಶನದಂತೆ ದರ ಇಳಿಸಲಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎನ್. ಸುರೇಶ್ ತಿಳಿಸಿದ್ದಾರೆ. ಆದರೆ, ಈ ಹೊಸ ಬೆಲೆ ಜಾರಿಯಾದರೂ, ನವೆಂಬರ್ 1ರ ಹಿಂದಿನ ದರಕ್ಕೆ (54 ರೂ.) ಹೋಲಿಸಿದರೆ ಇನ್ನೂ 12 ರೂ. ಹೆಚ್ಚಾಗಿಯೇ ಇದೆ.

ಹಾಲಿನ ದರದಲ್ಲಿ ಯಾವುದೇ ಇಳಿಕೆ ಮಾಡದೆ ಕೇವಲ ಮೊಸರಿನ ಮೇಲೆ 2 ರೂ. ಕಡಿಮೆ ಮಾಡಿರುವುದು ಸಣ್ಣ ಸಮಾಧಾನವಷ್ಟೇ, ಇದರಿಂದ ಹೋಟೆಲ್ ತಿಂಡಿಗಳ ದರ ಇಳಿಸಲು ಸಾಧ್ಯವಿಲ್ಲ ಎಂದು ಹೋಟೆಲ್ ಉದ್ಯಮಿಗಳು ಅಸಮಾಧಾನ ಹೊರಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+