Milk Price Hike: ರಾಜ್ಯೋತ್ಸವಕ್ಕೆ ಗಿಫ್ಟ್ ಹೆಸರಲ್ಲಿ ಹಾಲಿನ ದರ ಏರಿಕೆ ಶಾಕ್! ₹8 ಬದಲು ₹12 ಹೆಚ್ಚಳ, ಮೊಸರಿಗೆ ₹14 ಏರಿಕೆ
ಬೆಂಗಳೂರು: ರಾಜ್ಯ ಸರ್ಕಾರ ಕನ್ನಡಿಗರಿಗೆ ರಾಜ್ಯೋತ್ಸವದ ಭರ್ಜರಿ ಕೊಡುಗೆಯಾಗಿ ಹಾಲಿನ ದರ ಏರಿಕೆ ಮಾಡಿ ಶಾಕ್ ಕೊಟ್ಟಿದೆ. ಜನರು ಈ ಹಾಲಿನ ದರ ಕಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರ ಪ್ರತಿ ಲೀಟರ್ ಹಾಲಿಗೆ 8 ರೂಪಾಯಿ ಏರಿಕೆ ಮಾಡುವುದಾಗಿ ಹೇಳಿದತ್ತು. ಆದರೆ ಜನರಿಂದ ಲೀಟರ್ ಗೆ 12 ರೂಪಾಯಿ ಕಸಿದುಕೊಳ್ಳುತ್ತಿದೆ ಎಂದು ಹಳೇಯ ಹಾಲಿ ದರ ಹೊಸ MRP ದರಗಳ ಪೋಟೋ ಹಾಕಿ ಪೋಸ್ಟ್ ಮಾಡುತ್ತಿದ್ದಾರೆ. ಈ ಮೂಲ ಜನರಿಂದ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ವ್ಯಾಪಕ ಆಕ್ರೋಶ ಹೊರ ಹಾಕಿದ್ದಾರೆ.
'ಇದು ಬೆಲೆ ಏರಿಕೆಯಲ್ಲ, ಜನರ ಜೇಬಿಗೆ ಹಾಕುತ್ತಿರುವ ನೇರ ದರೋಡೆ' ಎಂದಿರುವ ಜನರಿಗೆ ಸರ್ಕಾರವು ಅಧಿಕೃತ ಹಾಲಿನ ಏರಿಕೆ ದರ ಪಟ್ಟಿ ನೀಡಿದೆ. ನವೆಂಬರ್ 1ರಿಂದ ಹೊಸ ಹಾಲಿನ ದರ ಜಾರಿಯಾಗಿದ್ದು, ಟೋನ್ಡ್ ಹಾಲಿನ ದರ ಕಂಡು ಗ್ರಾಹಕರು ದಂಗಾಗಿದ್ದಾರೆ. 8 ರೂ. ಬದಲಾಗಿ 12 ರೂಪಾಯಿ ನೀಡಬೇಕಿದೆ, ಮೊಸರಿನ ದರವು ಏರಿಕೆ ಆಗಿದೆ ಎಂದು ಕಿಡಿ ಕಾರಿದ್ದಾರೆ.

ಒಂದು ಲೀಟರ್ ಹಾಲಿನ ದರ 64 ರೂ, ಒಂದು ಲೀಟರ್ ಮೊಸರು 68, ಹಳೆ ದರ 54 ರೂ. ಇದ್ದದ್ದು. ಹೊಸ ದರ 64 ರೂ. ಏರಿಕೆ ಆಗಿದೆ. ಮೊಸರು ಹಳೆ ದರ 56 ರಿಂದ ಹೊಸ ದರ 68 ಕ್ಕೆ ಜಿಗಿದಿದೆ. ಬರೋಬ್ಬರಿ 12 ರೂ. ಏರಿಕೆ ಆಗಿದೆ. ಒಟ್ಟು ಒಂದು ಲೀ. ಹಾಲಿನ ಮೇಲೆ 10 ರೂ ಏರಿಕೆ ಮೊಸರಿನ ಮೇಲೆ 12 ರೂ ಏರಿಕೆ ಆಗಿದೆ ಎಂದು ಎಕ್ಸ್ ಪೋಸ್ಟ್ ಮಾಡಲಾಗಿದೆ. ಇದು ಅಸಹ್ಯದ ಬದುಕಲ್ಲವೇ ಎಂದು ಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯ ಸರ್ಕಾರವನ್ನು ಟ್ಯಾಗ್ ಮಾಡಿದ್ದಾರೆ.
ಹೇಳಿದ್ದು ₹8 ಏರಿದ್ದು ₹12! ಯಾಕೆ?
ಈ ರಾಜ್ಯ ಸರ್ಕಾರ ಜನರಿಗೆ ಒಂದು ಲೆಕ್ಕ ಹೇಳಿ, ಜೇಬಿಗೆ ಇನ್ನೊಂದು ಲೆಕ್ಕದ ಕತ್ತರಿ ಹಾಕುವ ಸರ್ಕಾರಕ್ಕೆ ನಾಚಿಕೆಯಾಗಬೇಕು. ಹಾಲಿ ದರ 8 ರೂ. ಹೆಚ್ಚಳ ಎಂದು ಸಮರ್ಥನೆ ನೀಡಿದವರು, 'ಸ್ಪೆಷಲ್ ಟೋನ್ಡ್ ಮಿಲ್ಕ್' ಮತ್ತು 'ಶುಭಂ ಹಾಲಿನ' ದರವನ್ನು ಬರೋಬ್ಬರಿ ₹12 ಹೆಚ್ಚಿಸಿದ್ದಾರೆ. ಮೊಸರಿನ ದರವನ್ನು ಲೀಟರ್ ₹14 ಏರಿಕೆ ಮಾಡುವ ಮೂಲಕ ಮಧ್ಯಮ ವರ್ಗದ ಕುಟುಂಬಗಳ ದಿನನಿತ್ಯದ ಖರ್ಚಿಗೆ ಮತ್ತೊಂದು ಬರೆ ಎಳೆದಿದ್ದಾರೆ ಜನ ಆರೋಪಿಸಿದ್ದಾರೆ.
ಇದು ಯಾವ ರೀತಿಯ ಜನಪರ ಆಡಳಿತ?
ರೈತರ ಹಿತದ ಹೆಸರಿನಲ್ಲಿ ಜನರ ಜೇಬಿಗೆ ಕತ್ತರಿ! ರೈತರಿಗೆ ನಿಜವಾಗಿಯೂ ಲಾಭವಾಗುತ್ತಿದೆಯೇ ಅಥವಾ ಜನರ ಮೇಲೆ ಮಾತ್ರ ಹೊರೆ ಬೀಳುತ್ತಿದೆಯೇ?. ಹಾಲು ಐಷಾರಾಮಿ ವಸ್ತುವಲ್ಲ! ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರಿಗೂ ಅಗತ್ಯವಾದ ಆಹಾರ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೆಕು. ಮೊಸರಿನ ಬೆಲೆಯೂ ಗಗನಕ್ಕೇರಿದರೆ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಬದುಕುವುದಾದರೂ ಹೇಗೆ? ಎಂದು ಜನ ಪ್ರಶ್ನಿಸುತ್ತಿದ್ದಾರೆ. .
ಗ್ಯಾರಂಟಿಗಳ ಹೆಸರಿನಲ್ಲಿ ಒಂದು ಕಡೆ ಪ್ರಚಾರ, ಮತ್ತೊಂದು ಕಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮೂಲಕ ಜನರ ಜೇಬಿಗೆ ಕತ್ತರಿ ಹಾಕುವುದೇ ಸರ್ಕಾರದ ಸಾಧನೆಯೇ? ಎಂದು ಸರ್ಕಾರವನ್ನು ನೇರವಾಗಿ ಪ್ರಶ್ನಿಸಲಾಗಿದೆ. ಜನರು ಮತ ಹಾಕಿದ್ದು ನೆಮ್ಮದಿಯಿಂದ ಬದುಕಲು ಹೊರತು, ಪ್ರತಿದಿನ ಬೆಲೆ ಏರಿಕೆಯ ಬರೆ ಹೊತ್ತು ಬದುಕಲು ಅಲ್ಲ.ರೈತರ ಹೆಸರಿನಲ್ಲಿ ರಾಜಕೀಯ ಮಾಡಬೇಡಿ. ಜನರ ಕಣ್ಣಿಗೆ ಮಣ್ಣೆರಚಬೇಡಿ. ಹಾಲಿನ ದರ ಏರಿಕೆಯ ಹೊರೆ ಯಾರ ಮೇಲೆ ಬೀಳುತ್ತಿದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕೆಂದು ಜನ ಆಗ್ರಹಿಸಿದ್ದಾರೆ.
ಜನರ ಸಹನೆಯನ್ನು ದೌರ್ಬಲ್ಯ ಎಂದು ಭಾವಿಸಬೇಡಿ. ಜನರ ಹೊಟ್ಟೆಯ ಮೇಲೆ ಹೊಡೆದು ಯಾವ ಸರ್ಕಾರವೂ ಹೆಚ್ಚು ದಿನ ಜನರ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಕೂಡಲೇ ಈ ಅವೈಜ್ಞಾನಿಕ ಮತ್ತು ಜನವಿರೋಧಿ ಬೆಲೆ ಏರಿಕೆಯನ್ನು ಹಿಂಪಡೆಯಬೇಕು. ಜನರ ಬದುಕು ಮುಖ್ಯವೇ ಹೊರತ ನಿಮ್ಮ ಸಮರ್ಥನೆಗಳಲ್ಲ ಎಂದಿದ್ದಾರೆ.
ಸರ್ಕಾರ ನೀಡಿದ ಹಾಲಿನ ದರ ಏರಿಕೆ ಪಟ್ಟಿ
* ಹೋಮೊಜೀನೈಸ್ಟೋ ನ್ಡ್ ಹಾಲು (ಹಸಿರು): 1 ಲೀಟರ್ ಹಳೆಯ ದರ 50 ರೂ. ಇಂದಿನ ಬೆಲೆ 58 ರೂ. ಏರಿಕೆ ಆಗಿದ್ದು 8 ರೂ.
* ಸ್ಪೆಷಲ್ ಟೋನ್ಸ್ ಹಾಲು-1 ಲೀಟರ್: ಹಳೆಯ ದರ 52 ರೂ. ಹೊಸ ಬೆಲೆ 64 ರೂ!, ಒಟ್ಟು ಏರಿಕೆ 12 ರೂ.
* ಟೋನ್ಡ್ ಹಾಲು (ಬ್ಲೂ ಪ್ಯಾಕೆಟ್)-1 ಲೀಟರ್: ಹಳೆಯ ದರ 46 ರೂ. ಹೊಸ ದರ 54 ರೂ. ಏರಿಕೆ ಆಗಿದ್ದು 8 ರೂ.
* ಹೋಮೊಜೀನೈಸ್-1 ಲೀಟರ್: ಹಿಂದಿನ ದರ 47, ಹೊಸ ಬೆಲೆ 56, ಏರಿಕೆ ಆಗಿದ್ದು 9 ರೂ.
* ಶುಭಂ ಹಾಲು- 1 ಲೀಟರ್: ಹಿಂದಿನ ಬೆಲೆ 52 ರೂ. ಹೊಸ ದರ 64 ರೂ. ಏರಿಕೆ ಆಗಿದ್ದು 12 ರೂ.
ಹೇಳಿದ್ದು ₹8 ಏರಿಕೆ… ಕಿತ್ತಿದ್ದು ₹12! ಇದು ಬೆಲೆ ಏರಿಕೆಯಲ್ಲ, ಜನರ ಜೇಬಿಗೆ ಹಾಕುತ್ತಿರುವ ನೇರ ದರೋಡೆ......ಜನರಿಗೆ ಒಂದು ಲೆಕ್ಕ ಹೇಳಿ, ಜೇಬಿಗೆ ಇನ್ನೊಂದು ಲೆಕ್ಕದ ಕತ್ತರಿ ಹಾಕುವ ಸರ್ಕಾರಕ್ಕೆ ನಾಚಿಕೆಯಾಗಬೇಕು......₹8 ಹೆಚ್ಚಳ ಎಂದು ಸಮರ್ಥನೆ ನೀಡಿದವರು, ‘ಸ್ಪೆಷಲ್ ಟೋನ್ಡ್ ಮಿಲ್ಕ್’ ಮತ್ತು ‘ಶುಭಂ ಹಾಲಿನ’ ದರವನ್ನು ಬರೋಬ್ಬರಿ ₹12 ಹೆಚ್ಚಿಸಿದ್ದಾರೆ. ಮೊಸರಿನ ದರವನ್ನು ಕೆಜಿಗೆ ₹14 ಏರಿಸಿ ಮಧ್ಯಮ ವರ್ಗದ ಕುಟುಂಬಗಳ ದಿನನಿತ್ಯದ ಖರ್ಚಿಗೆ ಮತ್ತೊಂದು ಬರೆ ಎಳೆದಿದ್ದಾರೆ.ಇದು ಯಾವ ರೀತಿಯ ಜನಪರ ಆಡಳಿತ?◽ ರೈತರ ಹಿತದ ಹೆಸರಿನಲ್ಲಿ ಜನರ ಜೇಬಿಗೆ ಕತ್ತರಿ! ರೈತರಿಗೆ ನಿಜವಾಗಿಯೂ ಲಾಭವಾಗುತ್ತಿದೆಯೇ ಅಥವಾ ಜನರ ಮೇಲೆ ಮಾತ್ರ ಹೊರೆ ಬೀಳುತ್ತಿದೆಯೇ?◽ ಹಾಲು ಐಷಾರಾಮಿ ವಸ್ತುವಲ್ಲ! ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರಿಗೂ ಅಗತ್ಯವಾದ ಆಹಾರ.◽ ಮೊಸರಿನ ಬೆಲೆಯೂ ಗಗನಕ್ಕೇರಿದರೆ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಬದುಕುವುದಾದರೂ ಹೇಗೆ?◽ ಗ್ಯಾರಂಟಿಗಳ ಹೆಸರಿನಲ್ಲಿ ಒಂದು ಕಡೆ ಪ್ರಚಾರ, ಮತ್ತೊಂದು ಕಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮೂಲಕ ಜನರ ಜೇಬಿಗೆ ಕತ್ತರಿ ಹಾಕುವುದೇ ಸರ್ಕಾರದ ಸಾಧನೆಯೇ?ಸರ್ಕಾರಕ್ಕೆ ಒಂದು ನೇರ ಪ್ರಶ್ನೆ:ಜನರು ಮತ ಹಾಕಿದ್ದು ನೆಮ್ಮದಿಯಿಂದ ಬದುಕಲು ಹೊರತು, ಪ್ರತಿದಿನ ಬೆಲೆ ಏರಿಕೆಯ ಬರೆ ಹೊತ್ತು ಬದುಕಲು ಅಲ್ಲ.ರೈತರ ಹೆಸರಿನಲ್ಲಿ ರಾಜಕೀಯ ಮಾಡಬೇಡಿ. ಜನರ ಕಣ್ಣಿಗೆ ಮಣ್ಣೆರಚಬೇಡಿ. ಹಾಲಿನ ದರ ಏರಿಕೆಯ ಹೊರೆ ಯಾರ ಮೇಲೆ ಬೀಳುತ್ತಿದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಿ.ಜನರ ಸಹನೆಯನ್ನು ದೌರ್ಬಲ್ಯ ಎಂದು ಭಾವಿಸಬೇಡಿ. ಜನರ ಹೊಟ್ಟೆಯ ಮೇಲೆ ಹೊಡೆದು ಯಾವ ಸರ್ಕಾರವೂ ಹೆಚ್ಚು ದಿನ ಜನರ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯವಿಲ್ಲ.ಕೂಡಲೇ ಈ ಅವೈಜ್ಞಾನಿಕ ಮತ್ತು ಜನವಿರೋಧಿ ಬೆಲೆ ಏರಿಕೆಯನ್ನು ಹಿಂಪಡೆಯಿರಿ. ಇಲ್ಲದಿದ್ದರೆ ಜನರ ಆಕ್ರೋಶಕ್ಕೆ ಉತ್ತರಿಸಬೇಕಾಗುತ್ತದೆ.ಜನರ ಬದುಕು ಮುಖ್ಯವೇ ಹೊರತು ಸರ್ಕಾರದ ಸಮರ್ಥನೆಗಳಲ್ಲ.#MilkPriceHike #NandiniMilk #ಜನವಿರೋಧಿನೀತಿ #ಬೆಲೆಏರಿಕೆ #ಜನಸಾಮಾನ್ಯರಧ್ವನಿ #ಕರ್ನಾಟಕ
— 𝗚𝘂𝗿𝘂🇮🇳 (мσ∂ιʝι кα Y̺o̺d̺h̺a̺) (@Gururaj1972) November 1, 2026
* ಹೋಮೊಜಿನೈಸ್ ಶುಭಂ- 1 ಲೀಟರ್: ಹಳೆಯ ದರ 53 ರೂ. ಇಂದಿನ ದರ 65 ರೂ. ಒಟ್ಟು ಏರಿಕೆ 12 ರೂಪಾಯಿ.
* ಮೊಸರು-ಅರ್ಧ ಲೀಟರ್ (500ml) : ಮೊದಲಿನ ದರ 28 ರೂ. ಇಂದಿನ ಹೊಸ ದರ 34 ರೂ. ಏರಿಕೆ ಆಗಿದ್ದು 6 ರೂ.
* ಮೊಸರು-1 ಲೀಟರ್: ಹಳೆಯ ದರ 54 ರೂ. ಇಂದಿನ ಬೆಲೆ 68 ರೂಪಾಯಿ ಒಟ್ಟು ಏರಿಕೆಯಾಗಿದ್ದು 14 ರೂಪಾಯಿ
ಕಾಂಗ್ರೆಸ್ ಸರ್ಕಾರದಿಂದ ಕನ್ನಡಿಗರಿಗೆ ದೀಪಾವಳಿ ಉಡುಗೊರೆ; ಮೂರೂವರೆ ವರ್ಷದಲ್ಲಿ ನಾಲ್ಕನೇ ಬಾರಿ ಹಾಲಿನ ದರ ಏರಿಕೆಯ ಬರೆ!ಕಾಂಗ್ರೆಸ್ ಆಡಳಿತದಲ್ಲಿ ಜನಸಾಮಾನ್ಯರು ಬದುಕುವುದೇ ದೊಡ್ಡ ಸಾಹಸವಾಗಿದೆ. ಕಾಂಗ್ರೆಸ್ ಸರ್ಕಾರೀ ಕನ್ನಡಿಗರ ಮೇಲೇಕೆ ಈ ಪರಿ ಆಕ್ರೋಶ?ಸಾಮಾನ್ಯ ಕುಟುಂಬವೊಂದು ಬೆಳಿಗ್ಗೆ ಎದ್ದು ಕುಡಿಯುವ ಒಂದು ಲೋಟ ಹಾಲಿನಿಂದ ಹಿಡಿದು, ಸಂಜೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುವ ಬಸ್ ಪ್ರಯಾಣದವರೆಗೂ ಎಲ್ಲದಕ್ಕೂ ದರ ಏರಿಕೆಯ 'ಬರೆ' ಎಳೆಯಲಾಗುತ್ತಿದೆ.ಹಾಲಿನ ದರ ಏರಿಕೆ ಗ್ಯಾರೆಂಟಿ ಇಲ್ಲಿದೆ ನೋಡಿ:⬆️ಜುಲೈ 2023: ಲೀಟರ್ಗೆ ₹3⬆️ಜೂನ್ 2024: ಲೀಟರ್ಗೆ ₹2⬆️ಮಾರ್ಚ್ 2025: ಲೀಟರ್ಗೆ ₹4⬆️ಈಗ ಅಕ್ಟೋಬರ್ 2026: ಬರೋಬ್ಬರಿ ₹8 ಹೆಚ್ಚಳ!ಅಂದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕೇವಲ ಹಾಲಿನ ಮೇಲೆಯೇ ಒಟ್ಟು ₹17 ದರ ಹೆಚ್ಚಳ! ₹46 ಕ್ಕೆ ಸಿಗುತ್ತಿದ್ದ ಹಾಲು ಶೀಘ್ರದಲ್ಲೇ ₹54 ತಲುಪಲಿದೆ. ಇದರ ಬೆನ್ನಲ್ಲೇ KSRTC ಮತ್ತು BMTC ಬಸ್ ಟಿಕೆಟ್ ದರಗಳನ್ನು ಹೆಚ್ಚಿಸಲು ಸರ್ಕಾರ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆ.ಗ್ಯಾರಂಟಿ ಕೊಡ್ತೀವಿ, ಫ್ರೀ ಕೊಡ್ತೀವಿ ಎಂದು ಹೇಳಿ ಅಧಿಕಾರಕ್ಕೆ ಬಂದವರು, ಈಗ ದೈನಂದಿನ ಅಗತ್ಯ ವಸ್ತುಗಳ ದರ ಏರಿಸಿ ಉಚಿತ ನೀಡಿದ್ದನ್ನು ಬಡ್ಡಿ ಸಮೇತ ವಸೂಲಿ ಮಾಡುತ್ತಿದ್ದಾರೆ. ಆಡಳಿತ ಯಂತ್ರದ ಸಂಪೂರ್ಣ ವೈಫಲ್ಯ ಮತ್ತು ಆರ್ಥಿಕ ಶಿಸ್ತಿನ ಅಭಾವವೇ ಈ ಸತತ ದರ ಏರಿಕೆಗೆ ಕಾರಣ.ಬಡ ಮತ್ತು ಮಧ್ಯಮ ವರ್ಗದ ಜನರ ಸಹನೆಯನ್ನು ಪರೀಕ್ಷಿಸುವುದನ್ನು ನಿಲ್ಲಿಸಿ. ಈ ಸಾರ್ವಜನಿಕ ವಿರೋಧಿ ದರ ಏರಿಕೆ ಪ್ರಸ್ತಾವನೆಗಳನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು, ಇಲ್ಲದಿದ್ದರೆ ಜನಸಾಮಾನ್ಯರ ಆಕ್ರೋಶದಲ್ಲಿ ಈ ಸರ್ಕಾರ ಧೂಳೀಪಟ ಆಗುವುದು ಗ್ಯಾರೆಂಟಿ!#CongressFailsKarnataka#CongressLootsKarnataka
— Dr Sudhakar K (@DrSudhakar_) October 29, 2026


Click it and Unblock the Notifications
