ATM ಬಳಕೆದಾರರಿಗೆ ಹೊಸ ರೂಲ್ಸ್: ಇತರ ಬ್ಯಾಂಕ್ ಎಟಿಎಂನಲ್ಲಿ ಒಮ್ಮೆ ₹10,000 ಮಾತ್ರ ವಿತ್‌ಡ್ರಾ, ಹೆಚ್ಚುವರಿ ವಹಿವಾಟಿಗೆ ಶುಲ್ಕ

ನವದೆಹಲಿ: ಎಟಿಎಂ ಹಾಗೂ ಪಾಯಿಂಟ್ ಆಫ್ ಸೇಲ್ ಯಂತ್ರಗಳ ಮೂಲಕ ನಗದು ಹಿಂಪಡೆಯುವ ಪ್ರಕ್ರಿಯೆಯನ್ನ ಮತ್ತಷ್ಟು ಪಾರದರ್ಶಕ ಹಾಗೂ ಗ್ರಾಹಕ ಸ್ನೇಹಿಯಾಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ಸಮಗ್ರ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ.

ಈ ಹಿಂದೆ ಇದ್ದ 17 ಪ್ರತ್ಯೇಕ ಸುತ್ತೋಲೆಗಳನ್ನ ಒಗ್ಗೂಡಿಸಿ ರೂಪಿಸಲಾದ ಎಟಿಎಂ ನಿಯಮ 2026 ನವೆಂಬರ್ 27ರಿಂದಲೇ ತಕ್ಷಣದಿಂದ ಜಾರಿಗೆ ಬಂದಿದೆ. ಈ ಹೊಸ ನಿಯಮ, ಇತರ ಬ್ಯಾಂಕ್ ಎಟಿಎಂಗಳಲ್ಲಿ ನಗದು ಹಿಂಪಡೆಯುವ ಮಿತಿ, ಉಚಿತ ವಹಿವಾಟುಗಳ ಸಂಖ್ಯೆ ಹಾಗೂ ಬ್ಯಾಂಕ್‌ಗಳು ಗ್ರಾಹಕರಿಗೆ ನೀಡಬೇಕಾದ ಮುನ್ನೆಚ್ಚರಿಕೆಗಳ ಕುರಿತು ಸ್ಪಷ್ಟ ಮಾಹಿತಿ ನೀಡಲಾಗಿದೆ.

RBI New ATM amp amp PoS Cash Withdrawal Rules 2026 Rs 10 000 Cap At Other Bank ATMs Rs 23 Max Fee amp amp Mandatory Alerts

ಎಟಿಎಂ ನಗದು ಹಿಂಪಡೆಯುವಿಕೆ ಮಿತಿ ಮತ್ತು ಉಚಿತ ವಹಿವಾಟುಗಳ ವಿವರ

ಹೊಸ ಮಾರ್ಗಸೂಚಿಯ ಪ್ರಕಾರ, ಉಳಿತಾಯ ಖಾತೆದಾರರಿಗೆ ಉಚಿತ ವಹಿವಾಟು ಹಾಗೂ ನಗದು ಹಿಂಪಡೆಯುವಿಕೆ ಮಿತಿ ಈ ಕೆಳಗಿನಂತಿದೆ:

* ಸ್ವಂತ ಬ್ಯಾಂಕ್ ಎಟಿಎಂ: ಗ್ರಾಹಕರು ತಮ್ಮದೇ ಬ್ಯಾಂಕ್‌ನ ಎಟಿಎಂಗಳಲ್ಲಿ ತಿಂಗಳಿಗೆ 5 ಉಚಿತ ವಹಿವಾಟುಗಳನ್ನ ಅಂದರೆ ನಗದು ಹಿಂಪಡೆಯುವಿಕೆ ಮತ್ತು ಬ್ಯಾಲೆನ್ಸ್ ಪರಿಶೀಲನೆಯಂತಹ ಹಣಕಾಸೇತರ ವಹಿವಾಟು ಸೇರಿ 5 ಉಚಿತ ವಹಿವಾಟನ್ನ ನಡೆಸಬಹುದು.

* ಇತರ ಬ್ಯಾಂಕ್ ಎಟಿಎಂ: ಬೆಂಗಳೂರು, ಮುಂಬೈ, ನವದೆಹಲಿ, ಚೆನ್ನೈ, ಕೋಲ್ಕತ್ತಾ ಮತ್ತು ಹೈದರಾಬಾದ್‌ನಂತಹ 6 ಮಹಾನಗರಗಳಲ್ಲಿ ತಿಂಗಳಿಗೆ 3 ಹಾಗೂ ಇತರ ಪ್ರದೇಶಗಳಲ್ಲಿ 5 ಉಚಿತ ವಹಿವಾಟುಗಳಿಗೆ ಅವಕಾಶವಿದೆ. ಒಂದು ವೇಳೆ ಎರಡೂ ಪ್ರದೇಶಗಳಲ್ಲಿ ಬಳಸಿದರೆ ಒಟ್ಟು ಉಚಿತ ಮಿತಿ 5ಕ್ಕೆ ಸೀಮಿತವಾಗಿರುತ್ತದೆ.

Viral: ಸಹಾಯ ಮಾಡುವ ನೆಪದಲ್ಲಿ ಆಟೋ ಚಾಲಕನ ATMನಿಂದ ₹1 ಲಕ್ಷ ಎಗರಿಸಿದ ಭೂಪ
Viral: ಸಹಾಯ ಮಾಡುವ ನೆಪದಲ್ಲಿ ಆಟೋ ಚಾಲಕನ ATMನಿಂದ ₹1 ಲಕ್ಷ ಎಗರಿಸಿದ ಭೂಪ

* ₹10,000 ಮಿತಿ: ಇತರ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಪ್ರತಿ ವಹಿವಾಟಿಗೆ ಗರಿಷ್ಠ 10,000 ರೂ. ಮಾತ್ರ ನಗದು ಹಿಂಪಡೆಯಲು ಅವಕಾಶ ನೀಡಲಾಗಿದೆ.

ಎಟಿಎಂ ಶುಲ್ಕ 23 ರೂ ಮತ್ತು ಬ್ಯಾಂಕ್ ಅಲರ್ಟ್ ಕಡ್ಡಾಯ!

ತಿಂಗಳ ಉಚಿತ ವಹಿವಾಟಿನ ಮಿತಿ ಮುಗಿದ ಬಳಿಕ, ಬ್ಯಾಂಕ್‌ಗಳು ಪ್ರತಿ ವಹಿವಾಟಿಗೆ ಗರಿಷ್ಠ ಶುಲ್ಕ 23 ರೂ ಹಾಗೂ ಅನ್ವಯವಾಗುವ ತೆರಿಗೆಯನ್ನ ವಿಧಿಸಬಹುದು. ಆದರೆ, ಗ್ರಾಹಕರು ಈಗಾಗಲೇ ಎಷ್ಟು ಉಚಿತ ವಹಿವಾಟುಗಳನ್ನ ಬಳಸಿದ್ದಾರೆ ಮತ್ತು ಮುಂದಿನ ವಹಿವಾಟಿಗೆ ಎಷ್ಟು ಶುಲ್ಕ ಅನ್ವಯವಾಗುತ್ತದೆ ಎಂಬ ಬಗ್ಗೆ ಬ್ಯಾಂಕ್‌ಗಳು ಮುಂಚಿತವಾಗಿಯೇ ಗ್ರಾಹಕರಿಗೆ ಎಚ್ಚರಿಕೆ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಆರ್‌ಬಿಐ ಕಟ್ಟುನಿಟ್ಟಾಗಿ ಸೂಚಿಸಿದೆ.

ಅಲ್ಲದೆ, ತಾಂತ್ರಿಕ ದೋಷ, ನೆಟ್‌ವರ್ಕ್ ಸಮಸ್ಯೆ ಅಥವಾ ಎಟಿಎಂನಲ್ಲಿ ಹಣ ಇಲ್ಲದ ಕಾರಣ ವಹಿವಾಟು ವಿಫಲವಾದರೆ ಅದನ್ನು ಉಚಿತ ವಹಿವಾಟಿನ ಲೆಕ್ಕಕ್ಕೆ ಸೇರಿಸುವಂತಿಲ್ಲ ಮತ್ತು ಯಾವುದೇ ಶುಲ್ಕ ವಿಧಿಸುವಂತಿಲ್ಲ.

ಎಟಿಎಂ ಕೇಂದ್ರಗಳಲ್ಲಿ ಇಂಗ್ಲೀಷ್, ಹಿಂದಿ ಹಾಗೂ ಸ್ಥಳೀಯ ಭಾಷೆಯಲ್ಲಿ ಶುಲ್ಕ, ಮಿತಿ, ಎಟಿಎಂ ಐಡಿ ಹಾಗೂ ಸಹಾಯವಾಣಿ ವಿವರಗಳನ್ನ ಕಡ್ಡಾಯವಾಗಿ ಪ್ರದರ್ಶಿಸಬೇಕು.

ಪಿಒಎಸ್ ನಗದು ವಿತ್‌ಡ್ರಾ: ಖರೀದಿ ಮಾಡದೆಯೇ ಅಂಗಡಿಗಳಲ್ಲಿ ಹಣ ಪಡೆಯಿರಿ!

ಎಟಿಎಂ ಮಾತ್ರವಲ್ಲದೆ ವ್ಯಾಪಾರಿ ಕೇಂದ್ರಗಳ ಪಾಯಿಂಟ್ ಆಫ್ ಸೇಲ್ ಯಂತ್ರಗಳ ಮೂಲಕವೂ ನಗದು ವಿತ್‌ಡ್ರಾ (PoS cash withdrawal) ಸೌಲಭ್ಯವನ್ನ ಆರ್‌ಬಿಐ ಸ್ಪಷ್ಟಪಡಿಸಿದೆ. ಗ್ರಾಹಕರು ಡೆಬಿಟ್ ಕಾರ್ಡ್, ಪೂರ್ಣ ಕೆವೈಸಿ ಹೊಂದಿರುವ ಪ್ರಿಪೇಯ್ಡ್ ಪಾವತಿ ಸಾಧನ ಹಾಗೂ ಯುಪಿಐ ಬಳಸಿ ಪಿಒಎಸ್ ಯಂತ್ರಗಳಲ್ಲಿ ಹಣ ಪಡೆಯಬಹುದು.

ATMನಲ್ಲಿ ಹಣ ಬರಲಿಲ್ಲವೇ? ಈ ಗ್ರಾಹಕರಿಗೆ ಸಿಕ್ಕ ನ್ಯಾಯ ನಿಮಗೂ ದಾರಿ ತೋರಿಸಬಹುದು!
ATMನಲ್ಲಿ ಹಣ ಬರಲಿಲ್ಲವೇ? ಈ ಗ್ರಾಹಕರಿಗೆ ಸಿಕ್ಕ ನ್ಯಾಯ ನಿಮಗೂ ದಾರಿ ತೋರಿಸಬಹುದು!

* ಎಲ್ಲಾ ಪ್ರದೇಶಗಳಲ್ಲೂ ಪ್ರತಿ ವಹಿವಾಟಿಗೆ ಗರಿಷ್ಠ 2,000 ರೂ. ಹಾಗೂ ತಿಂಗಳಿಗೆ ಒಟ್ಟು 10,000 ರೂ. ಮಿತಿ ನಿಗದಿಪಡಿಸಲಾಗಿದೆ.

* ಈ ಸೇವೆಗೆ ವಿಧಿಸುವ ಶುಲ್ಕವು ವಹಿವಾಟಿನ ಮೊತ್ತದ ಶೇ. 1ಕ್ಕಿಂತ ಹೆಚ್ಚಿರಬಾರದು.

* ವಿಶೇಷವೆಂದರೆ, ಅಂಗಡಿಗಳಲ್ಲಿ ಯಾವುದೇ ವಸ್ತು ಖರೀದಿಸದೆಯೂ ಈ ಸೌಲಭ್ಯದಡಿ ನಗದು ಪಡೆಯಬಹುದು. ಒಂದು ವೇಳೆ ಖರೀದಿಯೊಂದಿಗೆ ನಗದು ಪಡೆದರೆ, ರಸೀದಿಯಲ್ಲಿ ನಗದು ಮೊತ್ತವನ್ನ ಪ್ರತ್ಯೇಕವಾಗಿ ನಮೂದಿಸಬೇಕು.

ಇದರೊಂದಿಗೆ ಎಟಿಎಂಗಳಲ್ಲಿ ಯುಪಿಐ ಆಧಾರಿತ ಕಾರ್ಡ್‌ರಹಿತ ನಗದು ಹಿಂಪಡೆಯುವಿಕೆ ಸೌಲಭ್ಯವೂ ಎಂದಿನಂತೆ ಮುಂದುವರಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+