Viral: ಸಹಾಯ ಮಾಡುವ ನೆಪದಲ್ಲಿ ಆಟೋ ಚಾಲಕನ ATMನಿಂದ ₹1 ಲಕ್ಷ ಎಗರಿಸಿದ ಭೂಪ
Viral News: ಆಟೋ ಚಾಲಕರೊಬ್ಬರ ಹಣವನ್ನು ಎಟಿಎಂನಿಂದ ತೆಗೆದುಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬ ಯಾಮಾರಿಸಿ ಸುಮಾರು 1 ಲಕ್ಷ ರೂಪಾಯಿ ಡ್ರಾ ಮಾಡಿದ್ದಾನೆ. ಬೇರೊಂದು ಎಟಿಎಂಗೆ ತೆರಳಿದ ಆಟೋ ಚಾಲಕನಿಗೆ ವಿಷಯ ಗೊತ್ತಾಗುವಷ್ಟರದಲ್ಲಿ ಆತನ ಖಾತೆಯಲ್ಲಿ ಒಂದು ಲಕ್ಷ ರೂಪಾಯಿ ಮಾಯವಾಗಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯಾರೇ ಆಗಲಿ ಹಣಕಾಸು ವಿಚಾರದಲ್ಲಿ ಬೇರೆಯವರಿಂದ ಸಹಾಯ ಕೇಳುವಾಗ, ಅಪರಿಚಿತರನ್ನು ನಂಬುವಾಗ ಅಗತ್ಯ ಎಚ್ಚರಿಕೆ ವಹಿಸದಿದ್ದರೆ ಈ ರೀತಿ ಹಣ ಕಳೆದುಕೊಳ್ಳಬೇಕಾಗುತ್ತದೆ ಎಂಬುದಕ್ಕೆ ಈ ಘಟನೆ ನಿದರ್ಶನವಾಗಿದೆ.
ಹೌದು, ಮಹಾರಾಷ್ಟ್ರ ರಾಜ್ಯದ ಮಹಾನಗರ ಪುಣೆಯ ಹದಪ್ಸಾರ್‌ನಲ್ಲಿ ಆಟೋರಿಕ್ಷಾ ಚಾಲಕರೊಬ್ಬರಿಗೆ ಹಣ ಡ್ರಾ ಮಾಡಲು ಎಟಿಎಂಗೆ ಹೋಗಿದ್ದರು. ಹಣ ಡ್ರಾ ಮಾಡುವುದು, ಪಾಸವರ್ಡ್ ಹಾಕುವುದು ಸೇರಿದಂತೆ ಎಟಿಎಂ ಬಳಕೆ ಬಗ್ಗೆ ಅವರಿಗೆ ಅಷ್ಟಾಗಿ ಗೊತ್ತಿರಲಿಲ್ಲ ಎನ್ನಲಾಗಿದೆ. ಈ ವೇಳೆ ಅಲ್ಲಿಗೆ ಬಂದ ವ್ಯಕ್ತಿಯೊಬ್ಬರ ಚಾಲಕನಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಎಟಿಎಂ ಬದಲಾವಣೆ ಮಾಡಿ ಒಂದು ಲಕ್ಷ ರೂಪಾಯಿ ಲಪಟಾಯಿಸಿದ್ದಾನೆ.

ಪೊಲೀಸರು ಹೇಳಿದ್ದೇನು?
38 ವರ್ಷದ ಆಟೋರಿಕ್ಷಾ ಚಾಲಕ ಕಳೆದ ಶನಿವಾರ ಹದಪ್ಸಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಚಾಲಕರು ಸಾರ್ವಜನಿಕ ವಲಯದ ಬ್ಯಾಂಕ್ ಒಂದರ ಎಟಿಎಂ ಕೇಂದ್ರಕ್ಕೆ ತೆರಳಿ ಹಣ ಡ್ರಾ ಮಾಡಲು ಮುಂದಾಗಿದ್ದರು. ಆಗ ಅವರಿಗೆ ಹಣ ತೆಗೆಯಲು ಬಾರದಿದ್ದಾಗ, ಈ ಹಣ ಕದ್ದ ವ್ಯಕ್ತಿ ಅಲ್ಲಿಗೆ ಬಂದು ಸಹಾಯ ಮಾಡುವ ನೆಪದಲ್ಲಿ ಇವರಿಗೆ ವಂಚನೆ ಮಾಡಿದ್ದಾನೆ ಎಂದು ಹದಪ್ಸಾರ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಹೇಮಂತ್ ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.
ಎಟಿಎಂ ಕಾರ್ಡ್ ಬದಲಿಸಿ ಮೋಸ
ಪೊಲೀಸ್ ಅಧಿಕಾರಿ ಮುಂದುವರಿದು, ಆರಂಭದಲ್ಲಿ ಚಾಲಕರಿಗೆ ತಕ್ಷಣ ಹಣ ಡ್ರಾ ಮಾಡಲು ಸಾಧ್ಯವಾಗಲಿಲ್ಲ. ಚಾಲಕ ಮರಳಿ ಮರಳಿ ಪ್ರಯತ್ನಿಸಿದರು. ಆಗ ಅಲ್ಲಿಗೆ ಬಂದಿದ್ದ ಶಂಕಿತ ವ್ಯಕ್ತಿ, 'ಎಟಿಎಂ ಕೆಲಸ ಮಾಡುತ್ತಿಲ್ಲ' ಎಂದು ಹೇಳಿದ್ದಾನೆ. ತಾನು ಸಹಾಯ ಮಾಡುವ ನೆಪದಲ್ಲಿ ಚಾಲಕನ ಎಟಿಎಂ ಕಾರ್ಡ್ ಅನ್ನು ಪಡೆದುಕೊಂಡು, ಬಳಿಕ ಪಿನ್ ಸಹ ಅವರ ಬಾಯಿಂದ ಕೇಳಿ ತಿಳಿದುಕೊಂಡಿದ್ದಾನೆ.
ಹಣ ಯಾಕೋ ಬರುತ್ತಿಲ್ಲ. ತಾಂತ್ರಿಕ ಸಮಸ್ಯೆ ಆಗಿರಬೇಕು ಎಂದು ಹೇಳಿದ್ದು, ಸರಿಯಾಗಿ ಕಾರ್ಡ್ ಬಳಸುತ್ತಿರುವಂತೆ ನಾಟಕವಾಡಿದ್ದಾನೆ. ಮರಳಿ ಚಾಲಕನಿಗೆ ಆತನ ಎಟಿಎಂ ಕೊಡುವ ಬದಲಿಗೆ ಬೇರೊಂದು ಎಟಿಎಂ ಕಾರ್ಡ್ ಕೊಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಅದೇ ದಿನ ರಾತ್ರಿಯೇ ಆ ಶಂಕಿತ ವ್ಯಕ್ತಿ ಚಾಲಕನ ಎಟಿಎಂ ಕಾರ್ಡ್ ಹಾಗೂ ಪಿನ್ ಸಂಖ್ಯೆಯನ್ನು ಬಳಸಿ ಒಂದು ಲಕ್ಷ ರೂಪಾಯಿ ಹಣವನ್ನು ಡ್ರಾ ಮಾಡಿಕೊಂಡಿದ್ದಾನೆ. ಆತನ ಪತ್ತೆಗಾಗಿ ಬಲೆ ಬೀಸಿದ್ದೇವೆ. ಚಾಲಕನ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.


Click it and Unblock the Notifications
