ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ: ಈ ಕಾರಣಕ್ಕೆ ಗಡಿ ಬದಲಾವಣೆ ಸಿಜೆಪಿ ಅಭಿಜೀತ್ ದೀಪ್ಕೆ, ರಾಹುಲ್ ಗಾಂಧಿ ಹೇಳಿದ್ದೇನು ?
ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ವಿಚಾರದಲ್ಲಿ ಕಳೆದ ಬಾರಿಗಿಂತಲೂ ಈ ಬಾರಿ ಕೇಂದ್ರ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಮೇಲುಗೈ ಸಾಧಿಸಿದೆ. ಆದರೆ, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ - ಇಂಡಿಯಾ ಮೈತ್ರಿಕೂಟದ ಕೆಲವು ವಿರೋಧ ಪಕ್ಷಗಳು ಹಾಗೂ ಕಾಕ್ರೋಚ್ ಜನತಾ ಪಾರ್ಟಿ ಆಕ್ರೋಶ ಹೊರ ಹಾಕಿದೆ. ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.
ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸನಲ್ಲಿ ಟ್ವೀಟ್ ಮಾಡಿರುವ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ: ಹೊಸ ಮತಗಳನ್ನು ಪಡೆಯದೆ ಬಿಜೆಪಿ ಹೇಗೆ ಹೆಚ್ಚಿನ ಸ್ಥಾನಗಳನ್ನು ಪಡೆಯಬಹುದು
1,000 ಮತದಾರರನ್ನು ಹೊಂದಿರುವ ಕ್ಷೇತ್ರವನ್ನು ಕಲ್ಪಿಸಿಕೊಳ್ಳಿ.
ಬಿಜೆಪಿ: 400 ಮತಗಳು
ವಿರೋಧ: 600 ಮತಗಳು
ಫಲಿತಾಂಶ: ಪ್ರತಿಪಕ್ಷಗಳು ಸ್ಥಾನವನ್ನು ಗೆಲ್ಲುತ್ತವೆ
ಲೋಕಸಭಾ ಕ್ಷೇತ್ರಗಳ ವಿಂಗಡಣೆಯ ನಂತರ (ತಲಾ 500 ಮತದಾರರಿರುವ 2 ಕ್ಷೇತ್ರಗಳು):
ಸ್ಥಾನ 1: ಬಿಜೆಪಿ 260, ವಿರೋಧ 240.
ಸ್ಥಾನ 2: ಬಿಜೆಪಿ 140, ವಿರೋಧ 360.
ಫಲಿತಾಂಶ: ಬಿಜೆಪಿ 1 ಸ್ಥಾನವನ್ನು ಗೆಲ್ಲುತ್ತದೆ. ಪ್ರತಿಪಕ್ಷಗಳು 1 ಸ್ಥಾನವನ್ನು ಗೆಲ್ಲುತ್ತವೆ.
ವಿರೋಧ ಪಕ್ಷಗಳು ತನ್ನ ಅಸ್ತಿತ್ವದಲ್ಲಿರುವ ನೆಲೆಯನ್ನು ಹಿಡಿದಿಟ್ಟುಕೊಂಡಿವೆ (ಬಹುಶಃ ಕೆಲವರು ಲೋಕಸಭಾ ಕ್ಷೇತ್ರಗಳ ವಿಂಗಡಣೆಯನ್ನು ಬೆಂಬಲಿಸುತ್ತಿರುವುದು ಇದಕ್ಕಾಗಿಯೇ ಇರಬಹುದು), ಆದರೆ ಬಿಜೆಪಿ ಹಿಂದೆ ಯಾವುದೇ ಸ್ಥಾನವನ್ನು ಹೊಂದಿರದ ಪ್ರದೇಶದಲ್ಲಿ ಹೊಸ ಸ್ಥಾನವನ್ನು ಪಡೆಯುತ್ತದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು.
ಕ್ಷೇತ್ರ ನಿರ್ಣಯವು ಬಿಜೆಪಿಗೆ ಮುಂದೆ ಹೋಗುವ ಚುನಾವಣಾ ಪ್ರಯೋಜನವನ್ನು ನೀಡುತ್ತದೆ. ಮತದಾರರು ಹಾಗೆಯೇ ಇರುತ್ತಾರೆ, ಅವರ ಮತದಾನದ ಮಾದರಿಗಳು ಒಂದೇ ಆಗಿರುತ್ತವೆ ಆದರೆ ಪುನಃ ರಚಿಸಲಾದ ಗಡಿಗಳು ಚುನಾವಣಾ ಫಲಿತಾಂಶವನ್ನು ಬದಲಾಯಿಸುತ್ತವೆ ಎಂದು ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ ಹೇಳಿದ್ದೇನು ?
ಇನ್ನು ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಪ್ರತಿಯೊಬ್ಬ ಯುವ ಭಾರತೀಯನು ಇದನ್ನು ಅರ್ಥಮಾಡಿಕೊಳ್ಳಬೇಕು - ಬಿಜೆಪಿಯನ್ನು ಅಧಿಕಾರದಲ್ಲಿಡಲು ಮತ್ತು ನಿಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು 850ರ ಅಂಕಿ ಅಂಶವನ್ನು ರೂಪಿಸಲಾಗಿದೆ.
ನ್ಯಾಯಯುತವಾದ ಕ್ಷೇತ್ರ ವಿಂಗಡಣೆಯು ಈ ರೀತಿ ಕಾಣುತ್ತದೆ:
- 850 ಸ್ಥಾನಗಳಲ್ಲ, 543 ಸ್ಥಾನಗಳು
- 2011 ರ ಜನಗಣತಿಯಲ್ಲ, 2027 ರ ಜಾತಿ ಜನಗಣತಿಯ ಆಧಾರದ ಮೇಲೆ ಸೀಮಾ ನಿರ್ಣಯ
- ಜ್ಞಾನೇಶ್ ಕುಮಾರ್ ಅವರ ನೆಕ್ಸಸ್ ಅಲ್ಲ, ಸರ್ವಪಕ್ಷ, ನಿಷ್ಪಕ್ಷಪಾತ ಸೀಮಾ ನಿರ್ಣಯ ಆಯೋಗ
- ಒಬಿಸಿ ಉಪ-ಕೋಟಾದೊಂದಿಗೆ 543 ಸ್ಥಾನಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ.





Click it and Unblock the Notifications
