ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ: ಡಿಎಂಕೆ ಬೆಂಬಲ, ಕಾಂಗ್ರೆಸ್ ವಿರೋಧ; ಇಂಡಿಯಾ ಮೈತ್ರಿಕೂಟದ 3 ಬೇಡಿಕೆಗಳೇನು?

ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿಚಾರದಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವು ಮಹಿಳಾ ಮೀಸಲಾತಿ ಬಿಲ್‌ಗೆ ಮೌಖಿಕ ಸಮ್ಮತಿ ಸೂಚಿಸಿದೆ. ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ / ಪುನರ್ ವಿಂಗಡಣೆ ಮಸೂದೆಯು ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ಇಂಡಿಯಾ ಮೈತ್ರಿಕೂ ಮಸೂದೆಯನ್ನು ವಿರೋಧಿಸಲಿದೆ ಎಂದು ಕಾಂಗ್ರೆಸ್ ಹೇಳಿದೆ. ಅಲ್ಲದೆ ಮಸೂದೆಗೆ ಸಂಬಂಧಿಸಿದಂತೆ 3 ಬೇಡಿಕೆಗಳನ್ನು ಪಟ್ಟಿ ಮಾಡಿದೆ.

ಕಳೆದ ಬಾರಿ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಹಾಗೂ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಬಿಲ್‌ಗೆ ಹಿನ್ನಡೆ ಆಗಿತ್ತು. ಇದೀಗ ಡಿಎಂಕೆ ಪಕ್ಷ, ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಪರೋಕ್ಷ ಬೆಂಬಲ ಸೂಚಿಸುತ್ತಿರುವುದರಿಂದ ಬಿಲ್ ಪಾಸ್ ಆಗುವ ಸಾಧ್ಯತೆ ದಟ್ಟವಾಗಿದೆ. ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಸೂದೆಯು ಎಸ್‌ಸಿ/ಎಸ್‌ಟಿ ಸಮುದಾಯಗಳ ಹಿತಾಸಕ್ತಿಯನ್ನು ಒಳಗೊಂಡಿಲ್ಲ, ಪ್ರಜಾಪ್ರಭುತ್ವವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದೆ ಎಂದು ಆರೋಪಿಸಿರುವ ಇಂಡಿಯಾ ಮೈತ್ರಿಕೂಟವು, ಅದನ್ನು ವಿರೋಧಿಸಲು ನಿರ್ಧರಿಸಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.

Lok Sabha Delimitation DMK Backs Bill Congress Opposes INDIA Bloc Puts Forward 3 Demands

ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ / ಪುನರ್ ವಿಂಗಡಣೆಗೆ ಕೇಂದ್ರ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಇತ್ತೀಚಿನ ಜನಗಣತಿಯನ್ನು ತಪ್ಪಿಸುತ್ತಿದೆ ಏಕೆಂದರೆ ಇದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸ್ಥಾನಗಳ ಹೆಚ್ಚಳಕ್ಕೆ ಕಾರಣವಾಗಬಹುದು. ಇತ್ತೀಚಿನ ಜನಗಣತಿಯನ್ನು ಬಳಸಿದರೆ ಎಸ್‌ಸಿ/ಎಸ್‌ಟಿ ಹೆಚ್ಚಿನ ಸ್ಥಾನಗಳನ್ನು ಪಡೆಯಲಿವೆ ಎಂದು ಕಾಂಗ್ರೆಸ್ ಪಕ್ಷವು ಹೇಳಿದೆ.

ಕಾಂಗ್ರೆಸ್ / ಇಂಡಿಯಾ ಮೈತ್ರಿಕೂಟದಿಂದ ಮೂರು ಬೇಡಿಕೆಗಳೇನು ?

ಇನ್ನು ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಗೆ ಸಂಬಂಧಿಸಿದಂತೆ ಇಂಡಿಯಾ ಮೈತ್ರಿಕೂಟವು ಮೂರು ಬೇಡಿಕೆಗಳನ್ನು ಇರಿಸಿದೆ. ಇಂಡಿಯಾ ಮೈತ್ರಿಕೂಟವು, ಲೋಕಸಭೆಯ ಅಸ್ತಿತ್ವದಲ್ಲಿರುವ ಬಲವನ್ನು ಕಾಯ್ದುಕೊಳ್ಳಬೇಕು, ಪ್ರಸ್ತುತ ಸದನದ ಬಲದೊಳಗೆ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಬೇಕು ಮತ್ತು ರಾಜ್ಯಗಳ ನಡುವೆ ಪ್ರಸ್ತುತ ಸ್ಥಾನಗಳ ಹಂಚಿಕೆ ಮುಂದಿನ 25 ವರ್ಷಗಳವರೆಗೆ ಬದಲಾಗದೆ ಇರಬೇಕು ಎಂದು ಹೇಳಿದೆ.

ನವದೆಹಲಿಯ ಎಐಸಿಸಿ ಅಧ್ಯಕ್ಷ ಖರ್ಗೆ ಅವರ ನಿವಾಸದಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆಯ ನಂತರ ಕಾಂಗ್ರೆಸ್ ಈ ಬೇಡಿಕೆಗಳನ್ನು ವಿವರಿಸಿದೆ. ನವೆಂಬರ್ 30 ರಿಂದ ಪ್ರಾರಂಭವಾಗುವ ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಮುಂಚಿತವಾಗಿ ಪ್ರಸ್ತಾವಿತ ಮಸೂದೆಯನ್ನು ಚರ್ಚಿಸಲು ಮತ್ತು ಜಂಟಿ ಕಾರ್ಯತಂತ್ರವನ್ನು ರೂಪಿಸಲು ನಡೆದ ಸಭೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸೇರಿದಂತೆ ವಿವಿಧ ವಿರೋಧ ಪಕ್ಷದ ನಾಯಕರು ಭಾಗವಹಿಸಿದ್ದರು.

ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ: ಬಿಜೆಪಿ ಬೆಂಬಲಿಸಲಿದೆಯೇ ಡಿಎಂಕೆ ?

ಇನ್ನು ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವು ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿದೆ. ನ್ಯಾಯಸಮ್ಮತ ಕ್ಷೇತ್ರ ಮರುವಿಂಗಡಣೆಯ ಬೇಡಿಕೆಗಳನ್ನು ಒಳಗೊಂಡಿರುವ ಮಸೂದೆಗೆ ಡಿಎಂಕೆ ಬೆಂಬಲ ನೀಡುತ್ತದೆ ಎಂದು ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ರಾಜ್ಯಾಧ್ಯಕ್ಷ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಹೇಳಿದ್ದಾರೆ.

ಕರ್ನಾಟಕವೇ ನಮ್ಮ ಮೊದಲ ಆದ್ಯತೆ ಎಂದಿದ್ಯಾಕೆ ಮುಖ್ಯಮಂತ್ರಿ ಡಿಕೆಶಿ: ರಾಜ್ಯದ ಜನರಿಗೆ ಕೊಟ್ಟ ಗುಡ್‌ನ್ಯೂಸ್ ಏನು ?
ಕರ್ನಾಟಕವೇ ನಮ್ಮ ಮೊದಲ ಆದ್ಯತೆ ಎಂದಿದ್ಯಾಕೆ ಮುಖ್ಯಮಂತ್ರಿ ಡಿಕೆಶಿ: ರಾಜ್ಯದ ಜನರಿಗೆ ಕೊಟ್ಟ ಗುಡ್‌ನ್ಯೂಸ್ ಏನು ?

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಕಳೆದ ಏಪ್ರಿಲ್‌ನಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ವಿರೋಧಿಸಲು ನಾವು ಮುಂದಿಟ್ಟಿದ್ದ ಎರಡು ಪ್ರಮುಖ ಬೇಡಿಕೆಗಳನ್ನು ಈಗಿನ ಹೊಸ ಮಸೂದೆಯಲ್ಲಿ ಲಿಖಿತವಾಗಿ ಸೇರಿಸಲಾಗಿದೆ. 2024ರಿಂದ ಡಿಎಂಕೆ ನಡೆಸಿಕೊಂಡು ಬಂದ ನಿರಂತರ ಹೋರಾಟಕ್ಕೆ ಇದು ದೊರೆತ ಜಯವಾಗಿದೆ. ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗೂ ಇದು ಗೆಲುವಾಗಿದೆ.

ಕರ್ನಾಟಕ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್, ಮಾಸಿಕ ಗೌರವ ವೇತನ ಎಷ್ಟು ಹೆಚ್ಚಳ ?
ಕರ್ನಾಟಕ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್, ಮಾಸಿಕ ಗೌರವ ವೇತನ ಎಷ್ಟು ಹೆಚ್ಚಳ ?

1971ರ ಜನಗಣತಿಯ ಜನಸಂಖ್ಯೆ ಆಧಾರದಲ್ಲಿ ಎಲ್ಲಾ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾವನೆ ಈ ಮಸೂದೆಯಲ್ಲಿದೆ. ಈ ಮಸೂದೆಯನ್ನು ಕೈಬಿಟ್ಟರೆ ಮುಂದೆ ಏನಾಗಬಹುದು ಎಂಬುದನ್ನು ಭಾವನಾತ್ಮಕವಾಗಿ ಯೋಚಿಸದೆ, ಶಾಂತವಾಗಿ ಪರಿಶೀಲಿಸಬೇಕು. ಎಲ್ಲಾ ವಿಷಯಗಳನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕ, ಪ್ರಾಯೋಗಿಕವಾಗಿ ಜಾರಿಗೆ ತರಲು ಸಾಧ್ಯವಾಗುವ ಮತ್ತು ನಮಗೆ ಅನುಕೂಲಕರವಾಗಿರುವ ಈ ರೂಪದ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಬೆಂಬಲಿಸಲು ಇಂದಿನ ಸಂಸದರ ಸಭೆಯಲ್ಲಿ ಡಿಎಂಕೆ ನಿರ್ಧರಿಸಿದೆ ಎಂದು ಎಂ.ಕೆ ಸ್ಟಾಲಿನ್ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+