ಕರ್ನಾಟಕವೇ ನಮ್ಮ ಮೊದಲ ಆದ್ಯತೆ ಎಂದಿದ್ಯಾಕೆ ಮುಖ್ಯಮಂತ್ರಿ ಡಿಕೆಶಿ: ರಾಜ್ಯದ ಜನರಿಗೆ ಕೊಟ್ಟ ಗುಡ್‌ನ್ಯೂಸ್ ಏನು ?

ಕರ್ನಾಟಕವೇ ನಮ್ಮ ಮೊದಲ ಆದ್ಯತೆ ಎಂದಿರುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ರಾಜ್ಯದ ಜನರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಮೂರು ದಿನಗಳ (ನವೆಂಬರ್ 23-25) ಜಪಾನ್ ಪ್ರವಾಸಕ್ಕೆ ಸಂಬಂಧಿಸಿದಂತೆ ನವೆಂಬರ್ 28ರ ಶನಿವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಕೈಗಾರಿಕಾ ಸಚಿವರಾದ ಎಂ. ಬಿ. ಪಾಟೀಲ್ ಹಾಗೂ ಹಿರಿಯ ಅಧಿಕಾರಿಗಳನ್ನೊಳಗೊಂಡ ಈ ಉನ್ನತ ಮಟ್ಟದ ನಿಯೋಗದ ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ. ಪ್ರವಾಸದ ದೂರದೃಷ್ಟಿ: ವಿದೇಶಿ ನೇರ ಹೂಡಿಕೆಯಲ್ಲಿ (FDI) ಕರ್ನಾಟಕವನ್ನು ದೇಶದ ನಂ. 1 ರಾಜ್ಯವನ್ನಾಗಿ ಮಾಡುವುದು, ಬೆಂಗಳೂರಿನ ಆಚೆಗೂ ಕೈಗಾರಿಕೆಗಳನ್ನು ವಿಸ್ತರಿಸುವುದು ಹಾಗೂ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಸುವುದು ಉದ್ದೇಶವಾಗಿದೆ.

Karnataka First CM D K Shivakumar Announces Good News for State Residents

Karnataka First: ಪ್ರಮುಖ ಹೂಡಿಕೆ ಮತ್ತು ಕೈಗಾರಿಕಾ ಒಪ್ಪಂದಗಳು

• ಹಾರೋಹಳ್ಳಿ ಘಟಕದ ವಿಸ್ತರಣೆಗಾಗಿ ಕವಾಸಕಿ-ವಿಪ್ರೋ ಕವಾಸಕಿಯಿಂದ 10 ವರ್ಷಗಳಲ್ಲಿ ₹800 ಕೋಟಿ ಹೂಡಿಕೆ ಒಪ್ಪಂದ (600 ಉದ್ಯೋಗ ಸೃಷ್ಟಿ).

• ಟೊಯೊಟಾ, ಪ್ಯಾನಾಸೋನಿಕ್, ಜೆಎಫ್‌ಇ ಸ್ಟೀಲ್, ಜೆಎಕ್ಸ್ ಮೆಟಲ್ಸ್, ಟಕೆಡಾ ಸೇರಿದಂತೆ ಹಲವು ದಿಗ್ಗಜ ಕಂಪನಿಗಳೊಂದಿಗೆ ಸ್ಥಳೀಕರಣ (Localisation), ಹೈಬ್ರಿಡ್ ಮೊಬಿಲಿಟಿ, ಎಲೆಕ್ಟ್ರಾನಿಕ್ಸ್ ಮತ್ತು ಉಕ್ಕು ಉತ್ಪಾದನೆ ಕುರಿತು ಚರ್ಚೆ.

• ಸುಮಿಟೊಮೊ ಜೊತೆ ಪ್ರಸ್ತಾವಿತ 'ಜಪಾನಿನ ಕೈಗಾರಿಕಾ ಪಾರ್ಕ್', ಸಮೀಪದಲ್ಲೇ ಜಪಾನಿನ ಶಾಲೆ ಹಾಗೂ ಐಟಿಐ ವಿದ್ಯಾರ್ಥಿಗಳಿಗೆ ಜಪಾನಿ ಭಾಷಾ ತರಬೇತಿ ಕುರಿತು ಜೆಟ್ರೊ (JETRO) ಜೊತೆ ಸಮಾಲೋಚನೆ.

ಕರ್ನಾಟಕ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್, ಮಾಸಿಕ ಗೌರವ ವೇತನ ಎಷ್ಟು ಹೆಚ್ಚಳ ?
ಕರ್ನಾಟಕ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್, ಮಾಸಿಕ ಗೌರವ ವೇತನ ಎಷ್ಟು ಹೆಚ್ಚಳ ?

Karnataka First: ನಗರಾಭಿವೃದ್ಧಿ ಮತ್ತು ತ್ಯಾಜ್ಯ ನಿರ್ವಹಣೆ

• ಒಯಾಸಿಸ್ 21, ಅಜಬುದೈ ಹಿಲ್ಸ್, ಶಿಬುಯಾದ ಸಾರಿಗೆ ಆಧಾರಿತ ಅಭಿವೃದ್ಧಿ ಮಾದರಿಯಲ್ಲಿ ಬೆಂಗಳೂರಿನ ಮೆಟ್ರೋ ನಿಲ್ದಾಣಗಳ ಸುತ್ತಮುತ್ತ ಪುನರಾಭಿವೃದ್ಧಿ, ನೆಲಮಾಳಿಗೆ ವಾಣಿಜ್ಯ ಸ್ಥಳ ಹಾಗೂ 'ಸಿಗ್ನೇಚರ್ ಲ್ಯಾಂಡ್‌ಮಾರ್ಕ್ ಟವರ್' ನಿರ್ಮಾಣದ ಕುರಿತು ಅಧ್ಯಯನ.

• ಒಸಾಕಾದ ಮೈಶಿಮಾ ಘಟಕದ ಮಾದರಿಯಲ್ಲಿ ವೈಜ್ಞಾನಿಕ ತ್ಯಾಜ್ಯದಿಂದ ಇಂಧನ (Waste-to-Energy) ವ್ಯವಸ್ಥೆ ಅಳವಡಿಕೆಗೆ ಚಿಂತನೆ.

ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ: ಸಿದ್ದರಾಮಯ್ಯ-ತೇಜಸ್ವಿ ಸೂರ್ಯ ನಡುವೆ ಸೋಷಿಯಲ್ ಮೀಡಿಯಾ ವಾಕ್ಸಮರ
ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ: ಸಿದ್ದರಾಮಯ್ಯ-ತೇಜಸ್ವಿ ಸೂರ್ಯ ನಡುವೆ ಸೋಷಿಯಲ್ ಮೀಡಿಯಾ ವಾಕ್ಸಮರ

ಇನ್ವೆಸ್ಟ್ ಕರ್ನಾಟಕ 2027

• ಜಪಾನ್ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ಯಸುತಾಕಾ ನಕಸೋನೆ ಮತ್ತು ಭಾರತದ ರಾಯಭಾರಿ ಶ್ರೀಮತಿ ನಗ್ಮಾ ಮೊಹಮ್ಮದ್ ಮಲ್ಲಿಕ್ ಅವರೊಂದಿಗೆ ಮೂಲಸೌಕರ್ಯ ಸಹಕಾರ ಕುರಿತು ಭೇಟಿ.

• ಏಪ್ರಿಲ್ 20-22, 2027 ರಂದು ಬೆಂಗಳೂರಿನಲ್ಲಿ ನಡೆಯಲಿರುವ 'ಇನ್ವೆಸ್ಟ್ ಕರ್ನಾಟಕ 2027' ಸಮಾವೇಶಕ್ಕೆ ಜಪಾನ್ ಸರ್ಕಾರ ಹಾಗೂ ಉದ್ಯಮಿಗಳಿಗೆ ಆಹ್ವಾನ ಮತ್ತು ಪ್ರತ್ಯೇಕ 'ಜಪಾನ್ ಕಂಟ್ರಿ ಪೆವಿಲಿಯನ್' ಪ್ರಸ್ತಾವನೆ.

ಟಿವಿಕೆ - ವಿಜಯ್‌ಗೆ ತಮಿಳುನಾಡಿನ ಅಧಿಕಾರ ಸಿಕ್ಕಿರೋದು ಮಂಗನ ಕೈಯಲ್ಲಿ ಮಾಣಿಕ್ಯ ಸಿಕ್ಕಂತೆ ಆಗಿದೆ: ಎಂ.ಕೆ ಸ್ಟಾಲಿನ್
ಟಿವಿಕೆ - ವಿಜಯ್‌ಗೆ ತಮಿಳುನಾಡಿನ ಅಧಿಕಾರ ಸಿಕ್ಕಿರೋದು ಮಂಗನ ಕೈಯಲ್ಲಿ ಮಾಣಿಕ್ಯ ಸಿಕ್ಕಂತೆ ಆಗಿದೆ: ಎಂ.ಕೆ ಸ್ಟಾಲಿನ್

ಆಶಾ ಕಾರ್ಯಕರ್ತೆಯರು ನಮ್ಮ ಆಸ್ತಿ: ಸರ್ಕಾರದಿಂದ ಗುಡ್‌ನ್ಯೂಸ್

ಇನ್ನು ಇದೇ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ ₹2,000 ಹೆಚ್ಚಳ ಮಾಡಿರುವುದಾಗಿ ಹೇಳಿದ್ದಾರೆ. ಆಶಾ ಸಹೋದರಿಯರು ನಮ್ಮ ರಾಜ್ಯದ ಆಸ್ತಿ. ಅವರೆಲ್ಲರೂ ಹಳ್ಳಿ ಹಾಗೂ ನಗರಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ಆರೋಗ್ಯ ಕ್ಷೇತ್ರದ ಪ್ರಗತಿಗೆ ಆಶಾ ಕಾರ್ಯಕರ್ತೆಯರ ಸೇವೆ ಮುಂದುವರಿಯಲಿದೆ.

ಆಶಾ ಕಾರ್ಯಕರ್ತೆಯರು ನಮ್ಮ ಆಸ್ತಿ ಎಂದಿರುವ ಡಿ.ಕೆ ಶಿವಕುಮಾರ್ ಅವರು, ಜನವರಿ 1ರಿಂದ ₹2,000 ಮಾಸಿಕ ಗೌರವಧನ ಹೆಚ್ಚಳ ಮಾಡುವುದಾಗಿ ಹೇಳಿದ್ದಾರೆ. ಆಶಾ ಕಾರ್ಯಕರ್ತೆಯರು ನಮ್ಮ ಆಸ್ತಿ. ಅವರ ಸೇವೆಯನ್ನು ಗೌರವಿಸಿ, ಅವರ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. ಪ್ರಸ್ತುತ ಮಾಸಿಕ ಗೌರವಧನವನ್ನು ₹2,000 ಹೆಚ್ಚಿಸಲು ತೀರ್ಮಾನಿಸಲಾಗಿದ್ದು, ಈ ಹೆಚ್ಚಳವು ಜನವರಿ 1, 2027ರಿಂದ ಜಾರಿಗೆ ಬರಲಿದೆ.

ನನ್ನ ಮನವಿಗೆ ಸ್ಪಂದಿಸಿ ಹೋರಾಟವನ್ನು ಕೈಬಿಟ್ಟ ಆಶಾ ಸಹೋದರಿಯರಿಗೆ ಹೃದಯಪೂರ್ವಕ ಅಭಿನಂದನೆಗಳು. ಆಶಾ ಸಹೋದರಿಯರ ಕಷ್ಟಕ್ಕೆ ಸ್ಪಂದಿಸಿ, ಅವರ ಬದುಕಿನಲ್ಲಿ ಭರವಸೆಯ ಬೆಳಕು ಮೂಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+