ಡಿಸೆಂಬರ್ 1ರಿಂದ LPG ಸೇರಿ ಹಲವು ನಿಯಮಗಳಲ್ಲಿ ಮಹತ್ವದ ಬದಲಾವಣೆ

ಪ್ರತಿ ತಿಂಗಳಿನಂತೆ ಮುಂಬರುವ ಡಿಸೆಂಬರ್ ಆರಂಭದಲ್ಲೂ ಕೂಡ ಎಲ್‌ಪಿಜಿ ಸೇರಿದಂತೆ ಹಲವು ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಾಗಲಿದೆ. ಹಾಗಾದ್ರೆ, ಯಾವೆಲ್ಲಾ ಹೊಸ ಚೇಂಜಸ್ ಆಗಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಡಿಸೆಂಬರ್ ತಿಂಗಳ ಆರಂಭದೊಂದಿಗೆ ದೇಶದ ಆರ್ಥಿಕ, ದೂರಸಂಪರ್ಕ, ಇಂಧನ, ಬ್ಯಾಂಕಿಂಗ್ ಮತ್ತು ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಹಲವು ಮಹತ್ವದ ಬದಲಾವಣೆಗಳು ಜಾರಿಗೆ ಬರುತ್ತಿವೆ. ಡಿಜಿಟಲ್ ಭದ್ರತೆ ಬಲಪಡಿಸುವುದು, ಹಣಕಾಸಿನ ಪಾರದರ್ಶಕತೆ ತರುವುದು ಹಾಗೂ ನಾಗರಿಕ ಸೇವೆಗಳನ್ನು ಚುರುಕುಗೊಳಿಸುವುದು ಈ ಪರಿಷ್ಕರಣೆಗಳ ಪ್ರಮುಖ ಉದ್ದೇಶವಾಗಿದೆ.

December 1 Rules Changes LPG Prices Banking TRAI Pension and More Know complete details

ಇಂಧನ ದರ ಪರಿಷ್ಕರಣೆ

ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಜಾಗತಿಕ ಕಚ್ಚಾತೈಲ ದರಗಳ ಆಧಾರದ ಮೇಲೆ ಎಲ್‌ಪಿಜಿ ದರಗಳನ್ನು ಪರಿಷ್ಕರಿಸುತ್ತವೆ. ಡಿಸೆಂಬರ್ 1ರ ಬೆಳಗ್ಗೆ 19 ಕೆ.ಜಿ. ವಾಣಿಜ್ಯ ಸಿಲಿಂಡರ್ ಮತ್ತು 14.2 ಕೆ.ಜಿ. ಗೃಹಬಳಕೆಯ ಸಿಲಿಂಡರ್‌ಗಳ ಹೊಸ ದರಗಳು ಪ್ರಕಟವಾಗಲಿವೆ. ಜೊತೆಗೆ ವಿಮಾನ ಇಂಧನ ದರದಲ್ಲೂ ಬದಲಾವಣೆಯಾಗಲಿದ್ದು, ಇದು ಹೋಟೆಲ್ ಉದ್ಯಮ ಹಾಗೂ ಮನೆಬಳಕೆಯ ವೆಚ್ಚಗಳ ಮೇಲೆ ನೇರ ಪರಿಣಾಮ ಬೀರಲಿದೆ.

ಬ್ಯಾಂಕಿಂಗ್ ಮತ್ತು ಆರ್‌ಬಿಐ ನಿರ್ಧಾರಗಳು

ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರು ನಿಗದಿತ ಮಿತಿಗಿಂತ ಹೆಚ್ಚಿನ ಖರ್ಚು ಮಾಡಿದರೆ ಹೆಚ್ಚುವರಿ ಶುಲ್ಕ ತೆರಬೇಕಾಗುತ್ತದೆ ಮತ್ತು ಆನ್‌ಲೈನ್ ಗೇಮಿಂಗ್ ವಹಿವಾಟುಗಳಿಗೆ ರಿವಾರ್ಡ್ ಪಾಯಿಂಟ್‌ಗಳು ಕಡಿಮೆಯಾಗಲಿವೆ. ಎಚ್‌ಡಿಎಫ್‌ಸಿ, ಯೆಸ್ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್‌ಗಳು ಕೂಡ ಲಾಂಜ್ ಬಳಕೆ, ರಿವಾರ್ಡ್ ರಿಡೆಂಪ್ಶನ್ ಮತ್ತು ನಿರ್ವಹಣಾ ಶುಲ್ಕದ ನಿಯಮಗಳನ್ನು ಬದಲಾಯಿಸುತ್ತಿವೆ. ಇದೇ ವೇಳೆ ಡಿಸೆಂಬರ್ ಮೊದಲ ವಾರದಲ್ಲಿ ನಡೆಯುವ ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆಯ ರೆಪೊ ದರ ನಿರ್ಧಾರವು ಗೃಹ ಮತ್ತು ವಾಹನ ಸಾಲಗಳ ಇಎಂಐ ಮೇಲೆ ಪ್ರಭಾವ ಬೀರಲಿದೆ.

ಆನ್‌ಲೈನ್ ವಂಚನೆ ಹಾಗೂ ನಕಲಿ ಸಂದೇಶಗಳಿಗೆ ಕಡಿವಾಣ ಹಾಕಲು ಟ್ರಾಯ್ ಜಾರಿಗೊಳಿಸಿರುವ ಮೆಸೇಜ್ ಟ್ರೇಸಿಬಿಲಿಟಿ ನಿಯಮ ಡಿಸೆಂಬರ್‌ನಿಂದ ಜಾರಿಯಾಗಲಿದೆ. ಬ್ಯಾಂಕ್‌ಗಳು ಮತ್ತು ಇ-ಕಾಮರ್ಸ್ ಸಂಸ್ಥೆಗಳ ಒಟಿಪಿ ಹಾಗೂ ವಹಿವಾಟು ಸಂದೇಶಗಳು ಸುರಕ್ಷಿತ ಜಾಲದ ಮೂಲಕವೇ ರವಾನೆಯಾಗಬೇಕಿದ್ದು, ಅನಧಿಕೃತ ಟೆಲಿಮಾರ್ಕೆಟಿಂಗ್ ಕರೆಗಳು ಮತ್ತು ಸ್ಪ್ಯಾಮ್ ಸಂದೇಶಗಳಿಗೆ ಕಠಿಣ ನಿರ್ಬಂಧ ಬೀಳಲಿದೆ.

ಪಿಂಚಣಿ ಪಾವತಿಯಲ್ಲಿ ವ್ಯತ್ಯಯ..

ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಿಂಚಣಿದಾರರು ವಾರ್ಷಿಕ 'ಜೀವನ್ ಪ್ರಮಾಣ ಪತ್ರ' ಸಲ್ಲಿಸಲು ನವೆಂಬರ್ 30 ಕೊನೆಯ ದಿನವಾಗಿದ್ದು, ಡಿಸೆಂಬರ್ 1ರೊಳಗೆ ಪೂರ್ಣಗೊಳಿಸದಿದ್ದರೆ ಪಿಂಚಣಿ ಪಾವತಿಯಲ್ಲಿ ವ್ಯತ್ಯಯ ಆಗಬಹುದು. ಡಿಜಿಟಲ್ ಫೇಸ್ ಅಥೆಂಟಿಕೇಶನ್ ಮೂಲಕ ಇದನ್ನು ಸುಲಭವಾಗಿ ಸಲ್ಲಿಸಬಹುದು. ಆಧಾರ್ ಪೋರ್ಟಲ್ ಮೂಲಕ ವಿವರಗಳನ್ನು ಉಚಿತವಾಗಿ ನವೀಕರಿಸಲು ಡಿಸೆಂಬರ್ 14 ಅಂತಿಮ ದಿನವಾಗಿದ್ದು, ತಡವಾದರೆ ಶುಲ್ಕ ಬೀಳಲಿದೆ. ದಂಡದೊಂದಿಗೆ ವಿಳಂಬಿತ ಐಟಿಆರ್ ಸಲ್ಲಿಸಲು ಡಿಸೆಂಬರ್ 31 ಕಡೆಯ ಗಡುವಾಗಿದೆ.

ಇದರ ಜೊತೆಗೆ ಡಿಸೆಂಬರ್ 15ರಿಂದ ಐಆರ್‌ಡಿಎಐ ವಾಹನ ವಿಮೆಯಲ್ಲಿ ನಾಲ್ಕು ಹಂತಗಳ ವ್ಯವಸ್ಥೆ ಜಾರಿಗೆ ತರುತ್ತಿದೆ. ಥರ್ಡ್ ಪಾರ್ಟಿ ಮತ್ತು ಮಾಲೀಕರ ವೈಯಕ್ತಿಕ ಅಪಘಾತ ವಿಮೆ ಕಡ್ಡಾಯವಾಗಿದ್ದು, ಸ್ವಂತ ವಾಹನ ಹಾನಿ ಹಾಗೂ ಹಿಂಬದಿ ಸವಾರರ ರಕ್ಷಣೆ ಐಚ್ಛಿಕವಾಗಿರಲಿದೆ. ಐಚ್ಛಿಕ ರಕ್ಷಣೆ ಬಿಟ್ಟರೆ ಅಪಘಾತದ ಖರ್ಚನ್ನು ಮಾಲೀಕರೇ ಭರಿಸಬೇಕಾಗುತ್ತದೆ.

ರಾಜ್ಯ ಸರ್ಕಾರಿ ನೌಕರರಿಗೆ ಹೊಸ ನಿಯಮ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಕಚೇರಿಗೆ ಬರುವಾಗ ತಮ್ಮಲ್ಲಿರುವ ನಗದು ವಿವರ ಹಾಗೂ ಕಚೇರಿ ಹೊರಗಿನ ಸಂಚಾರದ ಮಾಹಿತಿಯನ್ನು ಭೌತಿಕ ರಿಜಿಸ್ಟರ್ ಬದಲು 'ಕರ್ತವ್ಯ' ಮೊಬೈಲ್ ಆ್ಯಪ್‌ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ಭ್ರಷ್ಟಾಚಾರ ತಡೆಯಲು ಈ ನಿಯಮ ಜಾರಿಗೆ ಬಂದಿದ್ದು, ತಪ್ಪಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+