ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಹಾಗೂ ಸೊಸೆ ಸಾನಿಯಾ ಚಾಂದೋಕ್ ಮಹತ್ವದ ಕಾರ್ಯ

ಕ್ರಿಕೆಟ್‌ ದೇವರು ಅಂತಲೇ ಹಸರುವಾಸಿಯಾಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಹಾಗೂ ಸೊಸೆ ಸಾನಿಯಾ ಚಾಂದೋಕ್ ಮಹತ್ವದ ಕಾರ್ಯ ಮಾಡಿ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಫುಟ್‌ಬಾಲ್ ಮೈದಾನದಲ್ಲಿ ಮೊಳಗುವ ಕಿಚ್ಚು ಮತ್ತು ತರಗತಿ ಕೊಠಡಿಯ ಕಲಿಕೆಯ ಬೆಳಕು ಒಂದಾದಾಗ ಹೆಣ್ಣುಮಕ್ಕಳ ಬದುಕು ಹೇಗೆ ಬದಲಾಗುತ್ತದೆ ಎಂಬುದನ್ನು ಕಣ್ಣಾರೆ ಕಂಡ ಸಾರಾ ತೆಂಡೂಲ್ಕರ್ ಮತ್ತು ಸಾನಿಯಾ ಚಾಂದೋಕ್, ಈ ಸಂಸ್ಥೆಯ ವಿದ್ಯಾರ್ಥಿನಿಯರ ಹೊಸ ಶಾಲೆಯ ಕನಸನ್ನು ನನಸು ಮಾಡಲು ಮುಂದಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಫೌಂಡೇಶನ್‌ನ ಈ ದಿಟ್ಟ ಹೆಜ್ಜೆಯು ವಂಚಿತ ಸಮುದಾಯದ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಕ್ರೀಡಾ ಭವಿಷ್ಯಕ್ಕೆ ಹೊಸ ರೆಕ್ಕೆ ಕಟ್ಟಲು ಸಜ್ಜಾಗಿದೆ.

Sara Tendulkar and Sania Chandhok Announce New School for Girls in Ranchi Know complete details

ವಿದ್ಯಾರ್ಥಿನಿಯರ ಕೌಶಲ್ಯಗಳ ವೀಕ್ಷಣೆ

ಸಚಿನ್ ತೆಂಡೂಲ್ಕರ್ ಫೌಂಡೇಶನ್ ನಿರ್ದೇಶಕಿ ಸಾರಾ ತೆಂಡೂಲ್ಕರ್ ಮತ್ತು ಸಾನಿಯಾ ಚಾಂದೋಕ್ ಅವರು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿರುವ 'ಯುವ' (Yuwa) ಶಾಲೆಗೆ ಭೇಟಿ ನೀಡಿದರು. ಈ ವೇಳೆ ಅಲ್ಲಿನ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಕ್ರೀಡಾ ಚಟುವಟಿಕೆಗಳಿಗಾಗಿ ಹೊಸ ಶಾಲೆ ನಿರ್ಮಿಸುವ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ನವೆಂಬರ್ 25ರಂದು ನಡೆದ ಈ ಭೇಟಿಯ ಸಂದರ್ಭದಲ್ಲಿ ಇಬ್ಬರೂ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ, ಶಿಕ್ಷಣ ಮತ್ತು ಫುಟ್‌ಬಾಲ್ ಮೂಲಕ ಅವರ ಬದುಕಿನಲ್ಲಿ ಆಗುತ್ತಿರುವ ಸಕಾರಾತ್ಮಕ ಬದಲಾವಣೆಗಳನ್ನು ಹತ್ತಿರದಿಂದ ವೀಕ್ಷಿಸಿದರು.

ಯೋಜನೆಯ ಪ್ರಮುಖ ಉದ್ದೇಶ ಏನು?

ಸಚಿನ್ ತೆಂಡೂಲ್ಕರ್ ಫೌಂಡೇಶನ್ ಮತ್ತು 'ಯುವ' ಸಂಸ್ಥೆಯ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಈ ಹೊಸ ಶಾಲೆಯು, ಹಿಂದುಳಿದ ಮತ್ತು ವಂಚಿತ ಸಮುದಾಯಗಳ ಹೆಚ್ಚಿನ ಹೆಣ್ಣುಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ತಮ್ಮ ಸಾಮರ್ಥ್ಯವನ್ನು ಅನಾವರಣಗೊಳಿಸಲು ಅವಕಾಶ ನೀಡುವ ಗುರಿ ಹೊಂದಿದೆ. ಫುಟ್‌ಬಾಲ್ ಕ್ರೀಡೆಯಿಂದ ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ ಮತ್ತು ಸ್ವಾವಲಂಬನೆಯನ್ನು ಬೆಳೆಸುವುದು 'ಯುವ' ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಶೈಕ್ಷಣಿಕ ಕಾರ್ಯಕ್ರಮಗಳ ಜೊತೆಗೆ ಈ ಕ್ರೀಡಾ ತರಬೇತಿಯು ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಿದೆ.

ಸಾರಾ ತೆಂಡೂಲ್ಕರ್ ಹೇಳಿದ್ದೇನು?

ಮಾಧ್ಯಮವೊಂದರಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮಾತನಾಡಿದ ಸಾರಾ ತೆಂಡೂಲ್ಕರ್, 'ರಾಂಚಿಯಲ್ಲಿರುವ ಈ ಹೆಣ್ಣುಮಕ್ಕಳಿಗಾಗಿ ಹೊಸ ಶಾಲೆ ನಿರ್ಮಿಸಲು ಸಚಿನ್ ತೆಂಡೂಲ್ಕರ್ ಫೌಂಡೇಶನ್ 'ಯುವ' ಸಂಸ್ಥೆಯೊಂದಿಗೆ ಕೈಜೋಡಿಸಿರುವುದನ್ನು ಘೋಷಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಸುಮಾರು ಎರಡು ವರ್ಷಗಳ ಹಿಂದೆ ನನ್ನ ಪೋಷಕರು ಇಲ್ಲಿಗೆ ಬಂದಿದ್ದರು ಮತ್ತು ಇಲ್ಲಿನ ಹೆಣ್ಣುಮಕ್ಕಳು ತೋರಿದ ಆತ್ಮವಿಶ್ವಾಸದಿಂದ ಅವರು ತುಂಬಾ ಪ್ರಭಾವಿತರಾಗಿದ್ದರು,' ಎಂದು ಸ್ಮರಿಸಿದರು.

ಮುಂದುವರೆದು ಮಾತನಾಡಿರುವ ಅವರು, 'ನಾನು ಮತ್ತು ಸಾನಿಯಾ ಇಂದು ಇಲ್ಲಿ ನಡೆದಿರುವ ಕೆಲಸಗಳನ್ನು ಕಂಡು ಸ್ಫೂರ್ತಿದಾಯಕವಾಗಿದ್ದೇವೆ. ಈ ಹುಡುಗಿಯರ ಭವಿಷ್ಯ ಹೇಗಿರುತ್ತದೆ ಎಂಬುದನ್ನು ನೋಡಲು ಕಾತರರಾಗಿದ್ದೇವೆ. ಅವರಿಗೆ ಆಕಾಶವೇ ಮಿತಿಯಾಗಿದ್ದು, ಅವರಿಗೆ ಶುಭವಾಗಲಿ,' ಎಂದು ಹಾರೈಸಿದರು.

ವಿದ್ಯಾರ್ಥಿನಿಯರ ಉತ್ಸಾಹಕ್ಕೆ ಚಾಂದೋಕ್ ಮೆಚ್ಚುಗೆ

ಸಾರಾ ಅವರ ಸಹೋದರ ಹಾಗೂ ಕ್ರಿಕೆಟಿಗ ಅರ್ಜುನ್ ತೆಂಡೂಲ್ಕರ್ ಅವರ ಪತ್ನಿ ಸಾನಿಯಾ ಚಂದೋಕ್ ಕೂಡ ಸಂಸ್ಥೆಯ ಕಾರ್ಯಚಟುವಟಿಕೆ ಮತ್ತು ವಿದ್ಯಾರ್ಥಿನಿಯರ ಉತ್ಸಾಹವನ್ನು ಶ್ಲಾಘಿಸಿದರು. ''ಯುವ' ಸಂಸ್ಥೆಯಲ್ಲಿ ನಡೆಯುತ್ತಿರುವ ಅದ್ಭುತ ಕೆಲಸಗಳನ್ನು ನೋಡುವುದು ನಿಜಕ್ಕೂ ಸ್ಮರಣೀಯ ಅನುಭವ. ಈ ವಿದ್ಯಾರ್ಥಿನಿಯರ ಆತ್ಮವಿಶ್ವಾಸ ಮತ್ತು ಚೈತನ್ಯ ನಿಜವಾಗಿಯೂ ಪ್ರೇರಣಾದಾಯಕವಾಗಿದೆ,' ಎಂದು ಅವರು ಹೇಳಿದರು.

ಸಚಿನ್ ತೆಂಡೂಲ್ಕರ್ ಫೌಂಡೇಶನ್ ಮತ್ತು 'ಯುವ' ಸಂಸ್ಥೆಯ ನಡುವಿನ ಸಹಭಾಗಿತ್ವವು ಕಳೆದ ಮೂರು ವರ್ಷಗಳಿಂದ ಸಕ್ರಿಯವಾಗಿದ್ದು, ಶಿಕ್ಷಣ, ಕ್ರೀಡೆ ಮತ್ತು ವ್ಯಕ್ತಿತ್ವ ವಿಕಸನದ ಮೂಲಕ ಹೆಣ್ಣುಮಕ್ಕಳಿಗೆ ಬೆಂಬಲ ನೀಡುತ್ತಾ ಬಂದಿದೆ. ಈಗ ಪ್ರಕಟವಾಗಿರುವ ಹೊಸ ಶಾಲಾ ಯೋಜನೆಯು ರಾಂಚಿಯಲ್ಲಿ ಈ ಉಪಕ್ರಮವನ್ನು ಇನ್ನಷ್ಟು ಬಲಪಡಿಸಲಿದ್ದು, ತರಗತಿ ಕೊಠಡಿಗಳ ಹೊರತಾಗಿಯೂ ಹೆಚ್ಚಿನ ಹೆಣ್ಣುಮಕ್ಕಳು ಕಲಿಯಲು, ಬೆಳೆಯಲು ಮತ್ತು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಹೊಸ ದಾರಿ ತೆರೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+