ಸುದೀಪ್ ಹೊಸ ಸಿನಿಮಾಕ್ಕೆ ದರ್ಶನ್ ಸಿನಿಮಾದ ಟ್ಯೂನ್! ಕಿಚ್ಚ ದಚ್ಚು ಒಂದ್ಮಾಡ್ತಾರಾ ಜೋಗಿ ಪ್ರೇಮ್?

ಕಿಚ್ಚ ಸುದೀಪ್ ಮತ್ತು ಜೋಗಿ ಪ್ರೇಮ್ ಕಾಂಬಿನೇಷನ್‌ನ ಹೊಸ ಸಿನಿಮಾ ಈಗ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಚರ್ಚೆಯಲ್ಲಿದೆ. ಸಿನಿಮಾಗೆ 'ದಾದಾ ಆನ್ ಹಾಲಿಡೇ' ಅಂತ ಟೈಟಲ್ ಇಟ್ಟಿದ್ದಾರೆ. ಟೈಟಲ್ ಟೀಸರ್ ಹೊರಬರುತ್ತಿದ್ದಂತೆ ಅಭಿಮಾನಿಗಳ ಗಮನ ಸೆಳೆದಿದ್ದು ಮಾತ್ರ ಸುದೀಪ್ ಅವರ ಹೊಸ ಗೆಟಪ್ ಅಲ್ಲ. ಟೀಸರ್‌ನಲ್ಲಿ ಕೇಳಿಬಂದ ದರ್ಶನ್ ಅವರ 'ಕರಿಯಾ' ಸಿನಿಮಾದ ಟ್ಯೂನ್!

ಉದ್ದೇಶಪೂರ್ವಕವಾಗಿ ಬಳಸಿದ್ರಾ!

ದರ್ಶನ್ ಅಭಿನಯದ ಕರಿಯಾ ಸಿನಿಮಾದ 'ಕೆಂಚಾಲೋ ಮಚ್ಚಾಲೋ' ಹಾಡಿನ ಟ್ಯೂನ್ ಟೀಸರ್‌ನಲ್ಲಿ ಕೇಳಿಸಿದೆ. ಇದನ್ನು ಕೇಳಿದ ಸಿನಿಪ್ರಿಯರು ಈಗ ಒಂದೇ ಪ್ರಶ್ನೆ ಕೇಳುತ್ತಿದ್ದಾರೆ. ಜೋಗಿ ಪ್ರೇಮ್ ಉದ್ದೇಶಪೂರ್ವಕವಾಗಿಯೇ ಈ ಟ್ಯೂನ್ ಬಳಸಿದ್ದಾರಾ? ಕಿಚ್ಚ ಮತ್ತು ದಚ್ಚು ಅಭಿಮಾನಿಗಳ ನಡುವೆ ಹೊಸ ಕುತೂಹಲ ಹುಟ್ಟಿಸುವ ಪ್ರಯತ್ನ ಇದರ ಹಿಂದಿದೆಯಾ.

New Movie of Kichcha Sudeep Uses Darshan s Kaariya Tune Is Jogi Prem Trying to Bring Kichcha and D Boss Together

ವೈರತ್ವ ಮರೆಸುವ ಪ್ರಯತ್ನವಾ..

sudeep ಹಾಗೂ darshan ನಡುವೆ ಎಲ್ಲವೂ ಸರಿಯಿಲ್ಲ ಅನ್ನೋದು ಗೊತ್ತಿರುವ ವಿಚಾರ, ದರ್ಶನ್ ಅಭಿಮಾನಿಗಳು ಹಾಗೂ ಸುದೀಪ್ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಕಚ್ಚಾಡುವುದು ನಡೆಯುತ್ತಲೇ ಇರುತ್ತೆ. ಆದರೆ ಪ್ರೇಮ್ ಅತ್ತ ದರ್ಶನ್ ಗೂ ಆಪ್ತ, ಇತ್ತ ಸುದೀಪ್ ಗೂ ಗೆಳೆಯ. ಹೀಗಿರುವಾಗ ದರ್ಶನ್ ಮತ್ತು ಸುದೀಪ್ ನ ಹತ್ತಿರ ತರುವ ಪ್ರಯತ್ನ ಅವರದಾ ಅನ್ನೋದು ಪ್ರಶ್ನೆ.

ಹಿಟ್ ಹಾಡುಗಳ ಮೆರವಣಿಗೆ

ಪ್ರೇಮ್ ಅವರ ಸಿನಿಮಾಗಳಲ್ಲಿ ಸಂಗೀತ ಮತ್ತು ಹಳೆಯ ಹಿಟ್‌ಗಳ ನೆನಪುಗಳಿಗೆ ವಿಶೇಷ ಜಾಗ ಇರುತ್ತೆ. ಈ ಬಾರಿ ಕೂಡ ಕರಿಯಾ, ಜೋಗಿ ಮತ್ತು ಎಕ್ಸ್‌ಕ್ಯೂಸ್ ಮೀ ಸಿನಿಮಾಗಳ ಟ್ಯೂನ್‌ಗಳ ಛಾಯೆ ಟೀಸರ್‌ನಲ್ಲಿ ಕಾಣಿಸಿಕೊಂಡಿದೆ. ಅದರಲ್ಲೂ ಕರಿಯಾ ಟ್ಯೂನ್ ಕೇಳಿಬಂದಿದ್ದು ಅಭಿಮಾನಿಗಳಿಗೆ ಹಳೆಯ ಮಾಸ್ ದಿನಗಳನ್ನು ನೆನಪಿಸಿದೆ. ಆದರೆ ಈ ಬಳಕೆಯ ಹಿಂದೆ ವಿಶೇಷ ಉದ್ದೇಶ ಇದೆಯಾ, ಅಥವಾ ಪ್ರೇಮ್ ಅವರ ಸಂಗೀತದ ನಾಸ್ಟಾಲ್ಜಿಯಾ ಅಷ್ಟೇನಾ ಅನ್ನೋದು ಈಗಿನ ಕುತೂಹಲ.

Kichaha Sudeep: ನವೆಂಬರ್ 27ಕ್ಕೆ ನಾವು-ನೀವು ಸಿಗೋಣ ಎಂದ 'ಕಿಚ್ಚ', ಫ್ಯಾನ್ಸ್‌ ಭರ್ಜರಿ ಖುಷ್! ಕಾರಣವೇನು?
Kichaha Sudeep: ನವೆಂಬರ್ 27ಕ್ಕೆ ನಾವು-ನೀವು ಸಿಗೋಣ ಎಂದ 'ಕಿಚ್ಚ', ಫ್ಯಾನ್ಸ್‌ ಭರ್ಜರಿ ಖುಷ್! ಕಾರಣವೇನು?

ದೇಸಿ ಟ್ರಾವೆಲ್ ಕಥೆಯಾ..

ಇನ್ನು ಸಿನಿಮಾದ ಟೈಟಲ್ ಕೂಡ ಕಥೆಯ ಬಗ್ಗೆ ಸಾಕಷ್ಟು ಸುಳಿವು ಕೊಡುತ್ತಿದೆ. ದಾದಾ ಆನ್ ಹಾಲಿಡೇ ಅಂದರೆ ರೌಡಿಸಂ ಬಿಟ್ಟು ರಜೆಗೆ ಹೊರಟ ದಾದಾನ ಕಥೆಯಾ? ಟೀಸರ್‌ನಲ್ಲಿ ಸುದೀಪ್ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪಂಚೆ, ಬಣ್ಣದ ಶರ್ಟ್, ಬಾಯಲ್ಲಿ ಕಡ್ಡಿ, ಜೊತೆಗೆ ತಮ್ಮದೇ ಸ್ಟೈಲಿನ ಮ್ಯಾನರಿಸಂ. ಒಟ್ಟಾರೆ ಹಳೆಯ ಕಾಲದ ದೇಸಿ ರೌಡಿ ಲುಕ್‌ಗೆ ಹೊಸ ಕಾಮಿಡಿ ಟಚ್ ಕೊಟ್ಟಂತಿದೆ.

ಕಾಮಿಡಿ ಆಕ್ಷನ್ ಸಿನಿಮಾದಲ್ಲಿ ಕಿಚ್ಚ

ಟೀಸರ್‌ನಲ್ಲಿ ವಿದೇಶಕ್ಕೆ ಹೋಗುವ ಆಸೆ, ಪೊಲೀಸ್ ಸ್ಟೇಷನ್, ಪಾಸ್‌ಪೋರ್ಟ್ ಮತ್ತು ಕುಟುಂಬದ ಬಗ್ಗೆ ಕೆಲವು ಸುಳಿವುಗಳೂ ಸಿಗುತ್ತವೆ. ಇದನ್ನೆಲ್ಲ ನೋಡಿದರೆ ಇದು ಪಕ್ಕಾ ದೇಸಿ ಟ್ರಾವೆಲ್ ಕಥೆಯಾಗಿರಬಹುದಾ ಅನ್ನೋ ಪ್ರಶ್ನೆ ಮೂಡುತ್ತೆ. ಊರಿನ ದಾದಾ ಒಬ್ಬ ಹಾಲಿಡೇಗೆ ಹೊರಟಾಗ ಏನೆಲ್ಲಾ ಗಲಾಟೆ ಆಗುತ್ತೆ? ಆ ಪ್ರಯಾಣದಲ್ಲಿ ಕಾಮಿಡಿ, ಆಕ್ಷನ್ ಮತ್ತು ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಹೇಗೆ ಬೆರೆಯುತ್ತೆ?

Kichcha Sudeep ಹೊಸ ಗೆಟಪ್

ಸದ್ಯಕ್ಕೆ ಚಿತ್ರತಂಡ ಕಥೆಯ ಪೂರ್ಣ ವಿವರ ಬಿಟ್ಟುಕೊಟ್ಟಿಲ್ಲ. ಆದರೆ ಟೈಟಲ್ ಮತ್ತು ಟೀಸರ್ ಮಾತ್ರ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಸಿವೆ. ಕಿಚ್ಚನ ಹೊಸ ಅವತಾರ, ಪ್ರೇಮ್ ಅವರ ವಿಭಿನ್ನ ಶೈಲಿ ಮತ್ತು ಕರಿಯಾ ಟ್ಯೂನ್‌ನ ಸರ್ಪ್ರೈಸ್. ಈ ಮೂರು ಅಂಶಗಳು 'ದಾದಾ ಆನ್ ಹಾಲಿಡೇ'ಗೆ ಈಗಲೇ ಚರ್ಚೆಯ ವಿಷಯವಾಗಿವೆ.

ಹೀರೋಗಳಿಗೆ ಒಂದು, ನಟಿಯರಿಗೆ ಇನ್ನೊಂದು ನ್ಯಾಯನಾ: ಚಿತ್ರರಂಗದ ವಿರುದ್ಧ ನಟಿ ರಕ್ಷಿತಾ ಪ್ರೇಮ್ ಗರಂ ಆಗಿದ್ದೇಕೆ?
ಹೀರೋಗಳಿಗೆ ಒಂದು, ನಟಿಯರಿಗೆ ಇನ್ನೊಂದು ನ್ಯಾಯನಾ: ಚಿತ್ರರಂಗದ ವಿರುದ್ಧ ನಟಿ ರಕ್ಷಿತಾ ಪ್ರೇಮ್ ಗರಂ ಆಗಿದ್ದೇಕೆ?

ಕಿಚ್ಚ ದಚ್ಚು ಒಂದಾಗ್ತಾರಾ ಅನ್ನೋ ಪ್ರಶ್ನೆಗೆ ಈಗಲೇ ಉತ್ತರ ಸಿಗದಿರಬಹುದು. ಆದರೆ ಅವರ ಸಿನಿಮಾಗಳ ನೆನಪು ಒಂದೇ ಟೀಸರ್‌ನಲ್ಲಿ ಕೇಳಿಬಂದಿದ್ದು ಮಾತ್ರ ಸ್ಯಾಂಡಲ್‌ವುಡ್‌ಗೆ ಹೊಸ ಚರ್ಚೆ ಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+