ರಾಂಚಿಯಲ್ಲಿ ಮತ್ತೊಂದು ಐಷಾರಾಮಿ ಮನೆ ನಿರ್ಮಿಸುತ್ತಿರುವ ಎಂಎಸ್ ಧೋನಿ; ಫಾರ್ಮ್‌ಹೌಸ್‌ನ ವಿಶೇಷತೆಗಳೇನು?

MS Dhoni New House: ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ತವರು ರಾಂಚಿಯಲ್ಲಿ ಮತ್ತೊಂದು ಹೊಸ ಮನೆಯನ್ನು ನಿರ್ಮಿಸಲು ಮುಂದಾಗಿದ್ದಾರೆ. ರಾಂಚಿ ರಿಂಗ್ ರೋಡ್ ಬಳಿಯ ಸಾಂಬೋ ಹಿಲ್ ಪ್ರದೇಶದಲ್ಲಿ ನೂತನ ನಿವಾಸದ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಧೋನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳು ವೈರಲ್‌ ಆಗಿವೆ.

ಮಾಹಿತಿ ಪ್ರಕಾರ, ಸಾಂಬೋ ಪ್ರದೇಶದಲ್ಲಿ ಸುಮಾರು ಎರಡು ಎಕರೆ ಜಾಗದಲ್ಲಿ ಧೋನಿ ಅವರ ಹೊಸ ಮನೆ ತಲೆಯೆತ್ತುತ್ತಿದೆ. ಎತ್ತರದ ಬೆಟ್ಟದ ಪ್ರದೇಶದಲ್ಲಿರುವ ಈ ಜಾಗದಿಂದ ಇಡೀ ರಾಂಚಿ ನಗರದ ಸುಂದರ ನೋಟ ಕಾಣಿಸುತ್ತದೆ. ಇದರ ಸಮೀಪದಲ್ಲೇ ಸಿಆರ್‌ಪಿಎಫ್ ಶಿಬಿರವೂ ಇದೆ. ನಗರದ ಗದ್ದಲ ಮತ್ತು ಜಂಜಾಟದಿಂದ ದೂರವಿದ್ದು, ಪ್ರಕೃತಿ ಸೌಂದರ್ಯ, ಮುಕ್ತ ಜಾಗ ಹಾಗೂ ಶಾಂತಿಯುತ ಪರಿಸರದ ನಡುವೆ ಈ ನೂತನ ನಿವಾಸ ರೂಪುಗೊಳ್ಳುತ್ತಿದೆ.

MS Dhoni Building a New House in Ranchi Inside His Farmhouse Luxury Cars and Bike Collection

ಮಹೇಂದ್ರ ಸಿಂಗ್ ಧೋನಿಯವರ ಫಾರ್ಮ್‌ಹೌಸ್ ವಿಶೇಷತೆಗಳು

ಹೊಸ ಮನೆಯ ಸುದ್ದಿಯ ನಡುವೆಯೇ, ರಾಂಚಿಯಲ್ಲಿರುವ ಧೋನಿ ಅವರ ಪ್ರಸ್ತುತ 7 ಎಕರೆ ವಿಸ್ತೀರ್ಣದ ಹಾಗೂ ಸುಮಾರು 6 ಕೋಟಿ ರೂಪಾಯಿ ಮೌಲ್ಯದ ಫಾರ್ಮ್‌ಹೌಸ್‌ನ ವಿವರಗಳು ಮತ್ತೊಮ್ಮೆ ಗಮನ ಸೆಳೆದಿವೆ. ಬಿಳಿಯ ಹೊರಗೋಡೆ ಮತ್ತು ಕಡುಬಣ್ಣದ ಚಾವಣಿಯ ಆಧುನಿಕ ವಾಸ್ತುಶಿಲ್ಪವನ್ನು ಈ ಫಾರ್ಮ್‌ಹೌಸ್ ಹೊಂದಿದೆ. ದೊಡ್ಡ ಕಿಟಕಿಗಳು, ಗಾಳಿಯಾಡುವ ಒಳಾಂಗಣ ಮತ್ತು ಹಚ್ಚಹಸಿರಿನಿಂದ ಕೂಡಿದ ಮುಕ್ತ ಜಾಗದ ಮೂಲಕ ನೈಸರ್ಗಿಕ ಬೆಳಕಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಫಾರ್ಮ್‌ಹೌಸ್‌ನಲ್ಲಿರುವ ಪ್ರಮುಖ ಸೌಲಭ್ಯಗಳು

* ಅತ್ಯಾಧುನಿಕ ಖಾಸಗಿ ಜಿಮ್ ಮತ್ತು ಫಿಟ್‌ನೆಸ್ ವ್ಯವಸ್ಥೆ
* ಹಸಿರಿನ ನಡುವೆ ಕಂಗೊಳಿಸುವ ಸ್ವಿಮ್ಮಿಂಗ್ ಪೂಲ್
* ಒಳಾಂಗಣ ಕ್ರೀಡಾ ಸೌಲಭ್ಯಗಳು ಮತ್ತು ಪ್ರತ್ಯೇಕ ಅಭ್ಯಾಸದ ಜಾಗ
* ಧೋನಿ ಅವರ ಆಟದ ಅಭ್ಯಾಸಕ್ಕಾಗಿ ಪ್ರತ್ಯೇಕ ಕ್ರಿಕೆಟ್ ಪ್ರಾಕ್ಟೀಸ್ ನೆಟ್ಸ್
* ನಾಯಿಗಳು ಮತ್ತು ಕುದುರೆಗಳು ಸೇರಿದಂತೆ ಸಾಕುಪ್ರಾಣಿಗಳಿಗಾಗಿ ಪ್ರತ್ಯೇಕ ಜಾಗ

ಧೋನಿ ಅವರಿಗೆ ಕ್ರಿಕೆಟ್ ಹೊರತಾಗಿ ವಾಹನಗಳ ಮೇಲೂ ಅಪಾರ ಪ್ರೀತಿ ಹೊಂದಿದ್ದಾರೆ. ರಾಂಚಿಯ ಅವರ ಗ್ಯಾರೇಜ್‌ನಲ್ಲಿ ವಿಂಟೇಜ್ ಬೈಕ್‌ಗಳು ಮತ್ತು ಹೈ-ಪರ್ಫಾರ್ಮೆನ್ಸ್ ಕಾರುಗಳ ದೊಡ್ಡ ಸಂಗ್ರಹವೇ ಇದೆ. ಶೋರೂಮ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿರುವ ಗಾಜಿನ ಮುಂಭಾಗದ ಗ್ಯಾರೇಜ್‌ನಲ್ಲಿ ತಮ್ಮ ನೆಚ್ಚಿನ ಬೈಕ್‌ಗಳನ್ನು ಪ್ರದರ್ಶಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಎಂಎಸ್ ಧೋನಿ ಬಳಿ ಇರುವ ಪ್ರಮುಖ ಬೈಕ್‌ಗಳು

* ಬೈಕ್‌ಗಳು: ಕಾನ್ಫೆಡರೇಟ್ ಎಕ್ಸ್132 ಹೆಲ್‌ಕ್ಯಾಟ್ (Confederate X132 Hellcat), ಕವಾಸಕಿ ನಿಂಜಾ ಎಚ್2 (Kawasaki Ninja H2), ಸುಜುಕಿ ಹಯಾಬುಸಾ, ಯಮಹಾ ಆರ್‌ಡಿ350, ಹಾರ್ಲಿ-ಡೇವಿಡ್ಸನ್ ಫ್ಯಾಟ್ ಬಾಯ್ ಮತ್ತು ನಾರ್ಟನ್ ಜುಬಿಲಿ 250

ಎಂಎಸ್ ಧೋನಿ ಬಳಿ ಇರುವ ಪ್ರಮುಖ ಕಾರುಗಳು

* ಕಾರುಗಳು: ಫೆರಾರಿ 599 ಜಿಟಿಒ (Ferrari 599 GTO), ಹಮ್ಮರ್ ಎಚ್2 (Hummer H2), ನಿಸ್ಸಾನ್ ಜೊಂಗಾ, ಜೀಪ್ ಗ್ರ್ಯಾಂಡ್ ಚೆರೋಕೀ ಟ್ರ್ಯಾಕ್‌ಹಾಕ್ ಮತ್ತು ವಿಂಟೇಜ್ ರೋಲ್ಸ್ ರಾಯ್ಸ್

ಒಟ್ಟಿನಲ್ಲಿ ಹೇಳುವುದಾದರೆ ಶಾಂತಿಯುತ ಜೀವನಶೈಲಿ ಮತ್ತು ತಮ್ಮ ಮೆಚ್ಚಿನ ಹವ್ಯಾಸಗಳಿಗೆ ಪೂರಕವಾಗಿ ಧೋನಿ ಅವರು ರಾಂಚಿಯಲ್ಲಿ ಮತ್ತೊಂದು ಮನೆಯನ್ನು ಸಜ್ಜುಗೊಳಿಸುತ್ತಿರುವುದು ಅಭಿಮಾನಿಗಳಲ್ಲಿ ಭಾರಿ ಸಂತಸ ತರಿಸಿದೆ. ಅಲ್ಲದೆ ಈ ಹೊಸ ಮನೆಯೊಳಗಿನ ವಿಶೇಷತೆಗಳು ಮಾತ್ರ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+