ಟೋಲ್ ತಪ್ಪಿಸಲು ನಂಬರ್ ಪ್ಲೇಟ್ ಮುಚ್ಚುವ ಸವಾರರಿಗೆ ಕೇಂದ್ರದ ಬಿಗ್ ಶಾಕ್: 5 ಪಟ್ಟು ಹಣ ಕಟ್ಟಬೇಕಾದೀತು ಎಚ್ಚರ!

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಪಾವತಿಸುವುದರಿಂದ ತಪ್ಪಿಸಿಕೊಳ್ಳಲು ಅಡ್ಡದಾರಿ ಹಿಡಿಯುವ ವಾಹನ ಸವಾರರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಕಠಿಣ ಎಚ್ಚರಿಕೆ ನೀಡಿದೆ. ಅಡೆತಡೆರಹಿತ ಬಹುಪಥ ಮುಕ್ತ ಸಂಚಾರ ಟೋಲ್ ವ್ಯವಸ್ಥೆಯಲ್ಲಿ (MLFF) ಉದ್ದೇಶಪೂರ್ವಕವಾಗಿ ವಾಹನದ ನಂಬರ್ ಪ್ಲೇಟ್ ಮುಚ್ಚುವ, ತಿರುಚುವ ಅಥವಾ ಫಾಸ್ಟ್‌ಟ್ಯಾಗ್ (FASTag) ಅಳವಡಿಸದ ವಾಹನಗಳಿಗೆ ಮೂಲ ಟೋಲ್ ಶುಲ್ಕದ ಐದು ಪಟ್ಟು ದಂಡ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ಹೊಸ ನಿಯಮದಡಿ, ನಿಯಮ ಉಲ್ಲಂಘಿಸುವ ಸವಾರರು ಮೂಲ ಶುಲ್ಕವೂ ಸೇರಿ ಒಟ್ಟು ಆರು ಪಟ್ಟು ಹಣ ಪಾವತಿಸಬೇಕಾಗುತ್ತದೆ.

Hiding Number Plates Or Avoiding FASTag At MLFF Toll Plazas To Attract 5 Times Penalty Over User Fee MoRTH

100 ರೂ. ಟೋಲ್‌ಗೆ 600 ರೂ. ಪಾವತಿ: ಫಾಸ್ಟ್‌ಟ್ಯಾಗ್ ಹೊಸ ನಿಯಮ ಏನು ಹೇಳುತ್ತದೆ?

ಸಚಿವಾಲಯದ ಪ್ರಕಟಣೆಯ ಪ್ರಕಾರ, ವಾಹನದ ಮುಂಭಾಗ, ಹಿಂಭಾಗ ಅಥವಾ ಎರಡೂ ಬದಿಯ ನೋಂದಣಿ ಫಲಕಗಳನ್ನ ಮರೆಮಾಚುವುದು, ಅಂಕಿಗಳನ್ನ ತಿರುಚುವುದು ಹಾಗೂ ಶುಲ್ಕ ತಪ್ಪಿಸುವ ಉದ್ದೇಶದಿಂದ ಫಾಸ್ಟ್‌ಟ್ಯಾಗ್ ಅಳವಡಿಸದಿರುವುದನ್ನ ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ. ಈ ಫಾಸ್ಟ್‌ಟ್ಯಾಗ್ ಹೊಸ ನಿಯಮದ ಪ್ರಕಾರ, ವಸೂಲಿ ಮಾಡಲಾಗುವ ಐದು ಪಟ್ಟು ದಂಡದ ಮೊತ್ತವನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ (NHAI) ವರ್ಗಾಯಿಸಲಾಗುತ್ತದೆ.

ಉದಾಹರಣೆಗೆ, ಒಂದು ವೇಳೆ ನಿಗದಿತ ಟೋಲ್ ಶುಲ್ಕ 100 ರೂ. ಇದ್ದರೆ, ಉದ್ದೇಶಪೂರ್ವಕವಾಗಿ ನಂಬರ್ ಪ್ಲೇಟ್ ಮರೆಮಾಚಿದ ಸವಾರರಿಗೆ 500 ರೂ. ದಂಡ ವಿಧಿಸಲಾಗುತ್ತದೆ. ಮೂಲ 100 ರೂ. ಶುಲ್ಕ ಸೇರಿ ಒಟ್ಟು 600 ರೂ. ಪಾವತಿಸಬೇಕಾಗುತ್ತದೆ. ಆದರೆ, ಟೋಲ್ ತಪ್ಪಿಸುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂಬುದು ದೃಢಪಟ್ಟ ಪ್ರಕರಣಗಳಲ್ಲಿ ಮಾತ್ರ ಈ ದಂಡ ಅನ್ವಯವಾಗಲಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ರಾಷ್ಟ್ರೀಯ ಹೆದ್ದಾರಿಯ ಟೋಲ್‌ಗಳಲ್ಲಿ ಇಂತಹ ವಾಹನ ಸವಾರರಿಗೆ ದುಪ್ಪಟ್ಟು ಶುಲ್ಕ
ರಾಷ್ಟ್ರೀಯ ಹೆದ್ದಾರಿಯ ಟೋಲ್‌ಗಳಲ್ಲಿ ಇಂತಹ ವಾಹನ ಸವಾರರಿಗೆ ದುಪ್ಪಟ್ಟು ಶುಲ್ಕ

ಎಂಎಲ್‌ಎಫ್‌ಎಫ್ ಟೋಲ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ? ವಂಚಕರ ಪತ್ತೆ ಹೇಗೆ?

'ಎಂಎಲ್‌ಎಫ್‌ಎಫ್ ಟೋಲ್ ವ್ಯವಸ್ಥೆ' (Multi-Lane Free Flow - MLFF) ಎಂಬುದು ಯಾವುದೇ ಬ್ಯಾರಿಯರ್ ಅಥವಾ ತಡೆಗೋಡೆಗಳಿಲ್ಲದ ಆಧುನಿಕ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಾಗಿದೆ. ಹೆದ್ದಾರಿಗಳ ಮೇಲಿನ ಗ್ಯಾಂಟ್ರಿಗಳಲ್ಲಿ ಅಳವಡಿಸಿರುವ ಫಾಸ್ಟ್‌ಟ್ಯಾಗ್ ರೀಡರ್‌ಗಳು ಹಾಗೂ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ ಕ್ಯಾಮೆರಾಗಳು ಚಲಿಸುತ್ತಿರುವ ವಾಹನಗಳನ್ನ ಗುರುತಿಸಿ, ಸ್ವಯಂಚಾಲಿತವಾಗಿ ಟೋಲ್ ಶುಲ್ಕ ಕಡಿತಗೊಳಿಸುತ್ತವೆ.

ಇದರಿಂದ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ನಿಲ್ಲುವ ಅಗತ್ಯವಿರುವುದಿಲ್ಲ. ಸಮಯ, ಇಂಧನ ಹಾಗೂ ವಾಯು ಮಾಲಿನ್ಯವೂ ಉಳಿತಾಯವಾಗುತ್ತದೆ. ಒಂದು ವೇಳೆ ಫಾಸ್ಟ್‌ಟ್ಯಾಗ್ ಪತ್ತೆಯಾಗದಿದ್ದರೂ ಅಥವಾ ನಂಬರ್ ಪ್ಲೇಟ್ ಮುಚ್ಚಿದ್ದರೂ, ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯ ಮೂಲಕ ಅಂತಹ ವಾಹನಗಳನ್ನ ಪತ್ತೆಹಚ್ಚಿ ದಂಡ ವಿಧಿಸಲಾಗುತ್ತದೆ.

NHAI Toll Hike: ಇಂದಿನಿಂದ ಟೋಲ್ ದರ ಹೆಚ್ಚಳ! ಬೆಂಗಳೂರು-ಹಾಸನ ವಾಹನ ಸವಾರರೇ ಗಮನಿಸಿ
NHAI Toll Hike: ಇಂದಿನಿಂದ ಟೋಲ್ ದರ ಹೆಚ್ಚಳ! ಬೆಂಗಳೂರು-ಹಾಸನ ವಾಹನ ಸವಾರರೇ ಗಮನಿಸಿ

ಎಲ್ಲೆಲ್ಲಿ ಈ ಕಠಿಣ ನಿಯಮ ಜಾರಿಯಾಗಲಿದೆ?

ಈ ಪ್ರಕಟಣೆಯ ಪ್ರಕಾರ, ಸದ್ಯ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಎಂಎಲ್‌ಎಫ್‌ಎಫ್ ಟೋಲ್ ಕೇಂದ್ರಗಳಲ್ಲಿ ಈ ದಂಡದ ನಿಯಮ ಅನ್ವಯವಾಗಲಿದೆ. ಅಷ್ಟೇ ಅಲ್ಲ, ಭವಿಷ್ಯದಲ್ಲಿ ಹೊಸದಾಗಿ ಎಂಎಲ್‌ಎಫ್‌ಎಫ್ ವ್ಯವಸ್ಥೆ ಆರಂಭವಾಗುವ ಎಲ್ಲಾ ಹೆದ್ದಾರಿಗಳಲ್ಲೂ ಇದು ಜಾರಿಯಲ್ಲಿರಲಿದೆ.

2029ರ ಮಾರ್ಚ್ ವೇಳೆಗೆ ದೇಶದ ಎಲ್ಲಾ ಚತುಷ್ಪಥ ಮತ್ತು ಅದಕ್ಕಿಂತ ಮೇಲ್ಪಟ್ಟ ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಎಂಎಲ್‌ಎಫ್‌ಎಫ್ ಜಾರಿಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಹೀಗಾಗಿ ವಾಹನ ಸವಾರರು ತಮ್ಮ ನಂಬರ್ ಪ್ಲೇಟ್ ಸ್ಪಷ್ಟವಾಗಿ ಕಾಣುವಂತೆ ಇಟ್ಟುಕೊಳ್ಳಬೇಕು ಹಾಗೂ ಸರಿಯಾದ ಫಾಸ್ಟ್‌ಟ್ಯಾಗ್ ಅಳವಡಿಸಿಕೊಂಡು ನಿಯಮ ಪಾಲಿಸಬೇಕು ಎಂದು ಸಚಿವಾಲಯ ಸಲಹೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+