NHAI Toll Hike: ಇಂದಿನಿಂದ ಟೋಲ್ ದರ ಹೆಚ್ಚಳ! ಬೆಂಗಳೂರು-ಹಾಸನ ವಾಹನ ಸವಾರರೇ ಗಮನಿಸಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ಹಾಸನಕ್ಕೆ ಪ್ರಯಾಣ ಮಾಡುವ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ( NHAI) ಟೋಲ್ ಶುಲ್ಕವನ್ನು ಏರಿಕೆ ಮಾಡುವ ಮೂಲಕ ಆಘಾತ ನೀಡಿದೆ. ಈ ಮಾರ್ಗದಲ್ಲಿ ಸಂಚಾರ ಮಾಡುವವರು ಇದೇ ಸೆಪ್ಟಂಬರ್ 1ರಿಂದಲೇ ಹೆಚ್ಚಿನ ಟೋಲ್ ಶುಲ್ಕ ಪಾವತಿ ಮಾಡಬೇಕಿದೆ. ಈಗಾಗಲೇ ದರ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಮತ್ತೊಂದು ಆರ್ಥಿಕ ಬರೆ ಬಿದ್ದಂತಾಗಿದೆ. ಯಾವೆಲ್ಲ ವಾಹನಗಳಿಗೆ ಎಷ್ಟು ದರ ಏರಿಕೆ ಆಗಿದೆ ಎಂಬ ಮಾಹಿತಿ ಮುಂದಿದೆ.

ನೆಲಮಂಗಲ-ಹಾಸನ ಹೆದ್ದಾರಿ 75 (National Highway-75) ರಲ್ಲಿ ಇಂದಿನಿಂದ ಹಳೇ ಟೋಲ್ ದರ ಬದಲಾಗಿ ಪರಿಷ್ಕರ ದರ ಪಾವತಿಸಬೇಕಿದೆ. ನೆಲಮಂಗಲ ದೇವಿಹಳ್ಳಿ ಎಕ್ಸ್‌ಪ್ರೆಸ್ ಕಂಪನಿ ಟೋಲ್‌ಗಳಲ್ಲಿ ಶುಲ್ಕವು ಶೇ.5ರಷ್ಟು ಏರಿಕೆ ಮಾಡಿದೆ. ಕಾರಬೈಲು ಮತ್ತು ದೊಡ್ಡಕರೇನಹಳ್ಳಿಯಲ್ಲೂ ದರ ಹೆಚ್ಚಿಸಿ ಆದೇಶಿಸಲಾಗಿದೆ. ಪ್ರಾಧಿಕಾರದ ಈ ನಿರ್ಧಾರವನ್ನು ವಾಹನ ಸವಾರರು ಖಂಡಿಸಿದ್ದಾರೆ.

NHAI Toll Hike Bengaluru-Hassan Highway Toll Rates Increased by 5pc From Sep 1 Know Rates List Here

NHAI Toll Hike ಬಗ್ಗೆ ಹೇಳುವುದೇನು?

ಹಣದುಬ್ಬರ, ಹೆದ್ದಾರಿ ರಸ್ತೆ ನಿರ್ವಹಣೆಯ ಕಾರಣದಿಂದಾಗಿ ಪ್ರತಿ ವರ್ಷ ಟೋಲ್ ಶುಲ್ಕ ದರ ಪರಿಷ್ಕರಣೆ ಭಾಗವಾಗಿ ಶೇ.5ರಷ್ಟು ಹಣ ಏರಿಕೆ ಮಾಡಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ನೆಲಮಂಗಲ-ಹಾಸನ ಹೆದ್ದಾರಿಯ ದುರಸ್ತಿ, ನಿರ್ವಹಣೆಗೆ ಹಣದ ಅಗತ್ಯ ಇರುವ ಕಾರಣಕ್ಕೆ ಬೆಲೆ ಏರಿಕೆ ನಮಗೆ ಅನಿವಾರ್ಯವಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಮ್ಮ ದರ ಏರಿಕೆ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಯಾವೆಲ್ಲ ವಾಹನಗಳಿಗೆ ಎಷ್ಟು ಟೋಲ್ ದರ ಏರಿಕೆ?

ನಾಲ್ಕು ಚಕ್ರಗಳ ಕಾರು, ಜೀಪ್, ವ್ಯಾನ್ ಸೇರಿದಂತೆ ಇನ್ನಿತರ ಲಘು ವಾಹನಗಳ ಫಾಸ್ಟ್‌ಟ್ಯಾಗ್ ಚಾಲಕರು ಒಂದು ಕಡೆಗಿನ ಸಂಚಾರಕ್ಕೆ 60 ರೂಪಾಯಿ ಪಾವತಿಸಬೇಕಿದೆ. ಅದೇ ಎರಡು ಕಡೆಗಿನ ಸಂಚಾರಕ್ಕೆ ಅವರು 85 ರೂಪಾಯಿ ಇದ್ದ ದರ 90 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಅದೇ ರೀತಿ ಲಘು ವಾಣಿಜ್ಯ ಮತ್ತು ಸರಕು ವಾಹನಗಳಿಗೆ ಏಕಮುಖ ಸಂಚಾರ ಟೋಲ್ ದರ 100 ರೂ. ಇದ್ದದ್ದು 105 ರೂಪಾಯಿಗೆ ಹೆಚ್ಚಾಗಿದೆ. ಎರಡು ಕಡೆಗಿನ ಸಂಚಾರ ಮಾಡುವವರು ಟೋಲ್ ಶುಲ್ಕ 150ಕ್ಕೆ ಬದಲಾಗಿ 155 ರೂಪಾಯಿ ಪಾವತಿಸಬೇಕಿದೆ.

ಲಾರಿ, ಬಸ್ ಗಳು ಈ ಮಾರ್ಗದಲ್ಲಿ ಸಂಚಾರ ಮಾಡಬೇಕಿದ್ದರೆ ಒಂದು ಕಡೆಗಿನ ಪ್ರಯಾಣ ವೇಳೆ 205 ರೂಪಾಯಿ, ಎರಡು ಬದಿಯ ಸಂಚಾರದ ಟೋಲ್ ಶುಲ್ಕ 310ರೂಪಾಯಿಗೆ ಏರಿಕೆ ಆಗಿದೆ. ಇನ್ನೂ ಬಹು (ಮಲ್ಟಿ) ಆಕ್ಸಲ್ ಮತ್ತು ಬೃಹತ್ ವಾಹನಗಳಿಗೆ ಏಕಮುಖ ಸಂಚಾರ 330 ರೂಪಾಯಿ ಒಂದು ದಿನದ ಸಂಚಾರಕ್ಕೆ 495 ರೂಪಾಯಿ ಪಾವತಿಸಬೇಕಿದೆ.

ಹೆಚ್ಚುವರಿ ಸೇರಿ ಟೋಲ್ ಹಣವು ಫಾಸ್ಟ್ಯಾಗ್ ನಿಂದ ಕಡಿತಗೊಳ್ಳುತ್ತಿದ್ದಂತೆ ಮೊಬೈಲ್‌ಗೆ ಬಂದ ಟೆಕ್ಟ್ಸ್ ಸಂದೇಶ ನೋಡಿದ ಸವಾರರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಈಗಾಗಲೇ ಏರಿಕೆ ಆಗಿದೆ. ಹೀಗಿದ್ದಾಗ ಟೋಲ್ ದರವು ಹೆಚ್ಚಾದರೆ ನಮ್ಮ ಗತಿ ಏನು? ಎಂದು ಪ್ರಶ್ನಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+