ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮಿಂಚಿದ ತೃತೀಯ ಲಿಂಗಿ ನಟಿ, ರಜನಿಕಾಂತ್‌ರಿಂದ ಶಹಬ್ಬಾಸ್‌: ಆದ್ರೆ ಬಾಡಿಗೆಗೆ ಮನೆ ಸಿಗದೇ ಪರದಾಟ

ಚೆನ್ನೈ: ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರೆಡ್‌ ಕಾರ್ಪೆಟ್‌ ಮೇಲೆ ಮಿಂಚಿ, ಸೂಪರ್ ಸ್ಟಾರ್ ರಜನಿಕಾಂತ್ ಅವರಿಂದಲೇ ಮೆಚ್ಚುಗೆ ಪಡೆದ ಕಲಾವಿದೆಯೊಬ್ಬರಿಗೆ ಇಂದಿಗೂ ನೆಮ್ಮದಿಯಿಂದ ಬದುಕಲು ಬಾಡಿಗೆಗೆ ಒಂದು ಸೂರು ಸಿಗುತ್ತಿಲ್ಲ ಎಂದರೆ ನಂಬಲೇಬೇಕು.

ಕಾರ್ತಿಕ್ ಸುಬ್ಬರಾಜ್ ಅವರ ಡೊರೊಥಿ (Dorothy) ಚಿತ್ರದ ಮೂಲಕ 2026ರ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (TIFF) ಗಮನ ಸೆಳೆದಿರುವ ತೃತೀಯ ಲಿಂಗಿ ನಟಿ ಜೀವ ಅವರ ಬದುಕಿನ ಕಥೆ ಎಂಥವರ ಮನವನ್ನೂ ಕಲಕುವಂತಿದೆ. ಪರದೆಯ ಮೇಲೆ ಚಪ್ಪಾಳೆ ಗಿಟ್ಟಿಸಿಕೊಂಡರೂ, ನಿಜ ಜೀವನದಲ್ಲಿ ಒಂದು ಬಾಡಿಗೆ ಮನೆಗಾಗಿ ಅವರು ಪಡುತ್ತಿರುವ ಪಾಡು ಸಮಾಜದ ಕಟು ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ.

Trans Actor Jeeva Subramaniam Shines At TIFF 2026 With Dorothy Yet Struggles To Find A Rental Home In Chennai

ಕೊಯಂಬೇಡು ಬಸ್ ನಿಲ್ದಾಣದಿಂದ ಸಿನಿಮಾ ಸೆಟ್‌ವರೆಗೆ: ಜೀವ ಸುಬ್ರಮಣಿಯಂ ಬದುಕಿನ ಹೋರಾಟ

ಶಿವಕಾಶಿ ಬಳಿಯ ಹಳ್ಳಿಯೊಂದರಿಂದ ಕೇವಲ 13ನೇ ವಯಸ್ಸಿನಲ್ಲಿ ಕೈಯಲ್ಲಿ 300 ರೂ. ಹಿಡಿದು ಚೆನ್ನೈಗೆ ಬಂದ ಜೀವ ಸುಬ್ರಮಣಿಯಂ ಅವರ ಬದುಕು ಆರಂಭದಿಂದಲೂ ಮುಳ್ಳಿನ ಹಾದಿಯಾಗಿತ್ತು. ಜೊತೆಗೆ ಬಂದಿದ್ದ ಸಹೋದರ ಕೊಯಂಬೇಡು ಜೀವ ಅವರನ್ನಾ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋದಾಗ, ಆತ ಮರಳಿ ಬರುತ್ತಾನೆ ಎಂದು ಮೂರು ದಿನ ಅಲ್ಲೇ ಕಾದಿದ್ದರು. ಬಳಿಕ ಬದುಕಿಗಾಗಿ ದಿನಕ್ಕೆ 40 ರೂ. ಕೂಲಿಗೆ ಅಂಗಡಿ ಕೆಲಸ, ಮಾರ್ಕೆಟ್‌ನಲ್ಲಿ ತರಕಾರಿ ಹೊರುವುದು, ಕಲ್ಯಾಣ ಮಂಟಪಗಳಲ್ಲಿ ಎಂಜಲು ಎಲೆ ಎತ್ತುವ ಕೆಲಸ ಮಾಡಿದರು.

ಕ್ರಮೇಣ ಸಿನಿಮಾ ರಂಗದಲ್ಲಿ ಟಚ್-ಅಪ್ ಅಸಿಸ್ಟೆಂಟ್ ಹಾಗೂ ಮೇಕಪ್ ಆರ್ಟಿಸ್ಟ್ ಆಗಿ ವೃತ್ತಿ ಆರಂಭಿಸಿದ ಜೀವ, ಅನುಷ್ಕಾ ಶೆಟ್ಟಿ, ತಾಪ್ಸಿ ಪನ್ನು, ಶ್ರಿಯಾ ಸರನ್ ಅವರಂತಹ ನಟಿಯರೊಂದಿಗೆ ಕೆಲಸ ಮಾಡಿದರು. ನಟ ಬಾಲಾ ಸಿಂಗ್ ಜೀವ ಅವರನ್ನಾ ಮಗಳಂತೆ ಕಂಡು ಬೆಂಬಲಿಸಿದರೆ, ಶ್ರಿಯಾ ಮೇಕಪ್ ಕಲಿಯಲು ಪ್ರೋತ್ಸಾಹಿಸಿದರು. ಆದರೆ, ತೃತೀಯ ಲಿಂಗಿ ಎಂಬ ಕಾರಣಕ್ಕೆ ಅಲ್ಲೂ ತಾರತಮ್ಯ ಮಾತ್ರ ತಪ್ಪಲಿಲ್ಲ.

ದೇಶ ಕಾಯಲು ಹೊರಟ ಮಲೆನಾಡಿನ ಹೆಣ್ಣುಮಗಳು: UPSC NDA ಪರೀಕ್ಷೆಯಲ್ಲಿ ದೇಶಕ್ಕೇ ಫಸ್ಟ್ ರ‍್ಯಾಂಕ್ ಪಡೆದ ಭದ್ರಾವತಿಯ ಶ್ರೇಯಾ ಗೌಡ
ದೇಶ ಕಾಯಲು ಹೊರಟ ಮಲೆನಾಡಿನ ಹೆಣ್ಣುಮಗಳು: UPSC NDA ಪರೀಕ್ಷೆಯಲ್ಲಿ ದೇಶಕ್ಕೇ ಫಸ್ಟ್ ರ‍್ಯಾಂಕ್ ಪಡೆದ ಭದ್ರಾವತಿಯ ಶ್ರೇಯಾ ಗೌಡ

ಧರ್ಮ ದುರೈ ಮತ್ತು ಡೊರೊಥಿ ಚಿತ್ರಗಳ ತಿರುವು: ವಿಜಯ್ ಸೇತುಪತಿ, ಕಾರ್ತಿ ಬೆಂಬಲ

2015ರ ಚೆನ್ನೈ ಪ್ರವಾಹದಲ್ಲಿ ಮನೆ ಕಳೆದುಕೊಂಡು ಊರು ಬಿಡಲು ನಿರ್ಧರಿಸಿದ್ದ ಜೀವ ಅವರಿಗೆ ಧರ್ಮ ದುರೈ (2016) ಸಿನಿಮಾ ಹೊಸ ಬದುಕು ನೀಡಿತು. ಚಿತ್ರೀಕರಣದ ವೇಳೆ ಗುಂಪಿನಲ್ಲಿದ್ದ ಕೆಲವರು ಅಸಭ್ಯವಾಗಿ ನಿಂದಿಸಿದಾಗ ಜೀವ ಕಣ್ಣೀರಿಟ್ಟಿದ್ದರು. ಇದನ್ನು ಗಮನಿಸಿದ ನಟ ವಿಜಯ್ ಸೇತುಪತಿ, "ಇವಳು ನನ್ನ ತಂಗಿ" ಎಂದು ಹೇಳಿ ಜೀವ ಅವರನ್ನ ಅಪ್ಪಿಕೊಂಡು ಹಣೆಗೆ ಮುತ್ತಿಟ್ಟಿದ್ದರು. ನಿರ್ದೇಶಕ ಸೀನು ರಾಮಸಾಮಿ ಕೂಡ ಆತ್ಮವಿಶ್ವಾಸ ತುಂಬಿದ್ದರು.

ಬಳಿಕ 'ಐರಾ', 'ದರ್ಬಾರ್', 'ಸುಳಲ್' ಮುಂತಾದ ಪ್ರಾಜೆಕ್ಟ್‌ಗಳಲ್ಲಿ ನಟಿಸಿದ ಜೀವ ಅವರಿಗೆ ಕಾರ್ತಿಕ್ ಸುಬ್ಬರಾಜ್ ಅವರ ಡೊರೊಥಿ ದೊಡ್ಡ ಮನ್ನಣೆ ತಂದುಕೊಟ್ಟಿತು. ಈ ಪಾತ್ರಕ್ಕಾಗಿ ಅವರು ಬರೋಬ್ಬರಿ 13 ಕೆ.ಜಿ ತೂಕ ಹೆಚ್ಚಿಸಿಕೊಂಡು, ಯಾವುದೇ ಡ್ಯೂಪ್ ಇಲ್ಲದೆ ಕಠಿಣ ದೃಶ್ಯಗಳಲ್ಲಿ ನಟಿಸಿದರು.

ಚಿತ್ರೀಕರಣದ ವೇಳೆ ಗಾಯಗೊಂಡಾಗ ನಟ ಕಾರ್ತಿ ತೋರಿದ ಕಾಳಜಿ ಹಾಗೂ ಟೊರೊಂಟೊ ಚಿತ್ರೋತ್ಸವದಲ್ಲಿ ಸಿಕ್ಕ ಸ್ವಾಗತ, ಜೊತೆಗೆ ರಜನಿಕಾಂತ್ ಅವರ ಪ್ರಶಂಸೆ ಜೀವ ಅವರ ಕಲಾಸೇವೆಗೆ ಸಂದ ಗೌರವವಾಗಿದೆ.

ಪೋಷಕರ ₹1 ಕೋಟಿ ಸಾಲ ತೀರಿಸಲು ಗೂಗಲ್ ಸೇರಿದ IIT ಯುವಕ: ಉದ್ಯೋಗ ಬಿಟ್ಟು ಉದ್ಯಮಿಯಾದ IIT ಪದವೀಧರ
ಪೋಷಕರ ₹1 ಕೋಟಿ ಸಾಲ ತೀರಿಸಲು ಗೂಗಲ್ ಸೇರಿದ IIT ಯುವಕ: ಉದ್ಯೋಗ ಬಿಟ್ಟು ಉದ್ಯಮಿಯಾದ IIT ಪದವೀಧರ

ಚೆನ್ನೈ ಬಾಡಿಗೆ ಮನೆ ಸಮಸ್ಯೆ: 400 ಚದರ ಅಡಿಯ ಸ್ವಂತ ಮನೆಯ ಕನಸು!

ಇಷ್ಟೆಲ್ಲಾ ಹೆಸರು ಮಾಡಿದ್ದರೂ, ಕಳೆದ ಆರು ತಿಂಗಳಿನಿಂದ ಜೀವ ಬಾಡಿಗೆ ಮನೆ ಸಮಸ್ಯೆಯಿಂದ ಕಂಗಾಲಾಗಿದ್ದಾರೆ. ಸಾಮಾನ್ಯವಾಗಿ 10 ಸಾವಿರ ರೂ. ಬಾಡಿಗೆ ಇರುವ ಮನೆಗೆ, ತೃತೀಯ ಲಿಂಗಿ ಎಂಬ ಕಾರಣಕ್ಕೆ ಬ್ರೋಕರ್‌ಗಳು ಹಾಗೂ ಮಾಲೀಕರು 30 ಸಾವಿರ ರೂಪಾಯಿ ಕೇಳುತ್ತಿದ್ದಾರೆ. ಒಮ್ಮೆ 40 ಸಾವಿರ ರೂಪಾಯಿ ಅಡ್ವಾನ್ಸ್ ನೀಡಿದ್ದರೂ, ಬೀದಿಯ ಜನರ ವಿರೋಧದಿಂದಾಗಿ ಮಾಲೀಕರು ಹಣ ವಾಪಸ್ ಕೊಟ್ಟು ಮನೆ ನಿರಾಕರಿಸಿದ್ದಾರೆ.

"ಮನೆ ಕೇಳಲು ಹೋದಾಗಲೆಲ್ಲಾ ಜನರು ಕೇಳುವ ಅವಮಾನಕರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕಣ್ಣೀರಿಟ್ಟಿದ್ದೇನೆ. ನನಗೆ ಯಾರೂ ಉಚಿತವಾಗಿ ಮನೆ ಕೊಡುವುದು ಬೇಡ. 4-5 ಲಕ್ಷ ರೂಪಾಯಿ ಕಟ್ಟಲು ನಾನು ಸಿದ್ಧನಿದ್ದೇನೆ. ಸರ್ಕಾರ ನನಗೊಂದು 400 ಚದರ ಅಡಿಯ ಪುಟ್ಟ ಮನೆ ಮಂಜೂರು ಮಾಡಲಿ. ನಾನು ಒಳ್ಳೆಯವಳು ಎಂದು ಪ್ರತಿದಿನ ಯಾರಿಗೂ ಸಾಬೀತುಪಡಿಸದೆ, ನನ್ನದೇ ಮನೆಯಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡುವುದಷ್ಟೇ ನನ್ನ ಆಸೆ" ಎಂದು ಜೀವ ಭಾವುಕರಾಗಿ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+