ರಾಷ್ಟ್ರೀಯ ಹೆದ್ದಾರಿಯ ಟೋಲ್‌ಗಳಲ್ಲಿ ಇಂತಹ ವಾಹನ ಸವಾರರಿಗೆ ದುಪ್ಪಟ್ಟು ಶುಲ್ಕ

Fastag New Rules: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆದ್ದಾರಿಗಳ ಟೋಡ್‌ಗೇಟ್‌ಗಳಲ್ಲಿ ಟೋಲ್ ಪಾವತಿಯನ್ನ ವೇಗಗೊಳಿಸಲು ಮತ್ತು ವಾಹನಗಳ ಸರದಿ ಸಾಲು ನಿಯಂತ್ರಿಸಲು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಆದರೆ ಪಾಸ್ಟ್ಯಾಗ್‌ನಲ್ಲಿ ಸ್ಕ್ಯಾನ್ ಆಗದಿದ್ದರೆ ನಿಜವಾಗಿಯೂ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತದೆಯೇ ಎಂಬ ಗೊಂದಲ ಸಾರ್ವಜನಿಕರಲ್ಲಿ ಮೂಡಿದ್ದು, ಎನ್‌ಎಚ್‌ಎಐ ಈ ಕುರಿತು ಸ್ಪಷ್ಟನೆ ನೀಡಿದೆ.

ವಾಹನದಲ್ಲಿ ಸರಿಯಾದ ಮತ್ತು ಚಾಲ್ತಿಯಲ್ಲಿರುವ ಫಾಸ್ಟ್ಯಾಗ್ ಇದ್ದು, ಅದರಲ್ಲಿ ಹಣ ಇದ್ದಾಗಲೂ ಟೋಲ್ ಪ್ಲಾಜಾದ ಸ್ಕ್ಯಾನರ್ ಅಥವಾ ರೀಡರ್ ಯಂತ್ರದ ತಾಂತ್ರಿಕ ದೋಷದಿಂದ ಸ್ಕ್ಯಾನ್ ಆಗದಿದ್ದರೆ, ಚಾಲಕರು ಯಾವುದೇ ಟೋಲ್ ಶುಲ್ಕ ಪಾವತಿಸುವಂತಿಲ್ಲ. ಇಂತಹ ಸಂದರ್ಭದಲ್ಲಿ ವಾಹನ ಸವಾರರಿಗೆ ಉಚಿತವಾಗಿ ಸಾಗಲು ಅವಕಾಶ ನೀಡಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಷ್ಟಪಡಿಸಿದೆ.

FASTag New Rules Will You Pay Double Toll If Scan Fails to Scan Check NHAI Rules Know details

ದುಪ್ಪಟ್ಟು ಟೋಲ್ ಶುಲ್ಕ ಯಾವಾಗ ಅನ್ವಯ?

* ವಾಹನದಲ್ಲಿ ಫಾಸ್ಟ್ಯಾಗ್ ಇಲ್ಲದಿರುವುದು ಅಥವಾ ಫಾಸ್ಟ್ಯಾಗ್ ನಿಷ್ಕ್ರಿಯಗೊಂಡಿರುವುದು
* ಫಾಸ್ಟ್ಯಾಗ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದಿರುವುದು.
* ಫಾಸ್ಟ್ಯಾಗ್ ಹೊಂದಿರದ ವಾಹನಗಳು ಕೇವಲ FASTag Lane ಪ್ರವೇಶಿಸಿದರೆ, ಅಂತಹ ವಾಹನ ಸವಾರರು ನಿಯಮಗಳ ಪ್ರಕಾರ ದುಪ್ಪಟ್ಟು ಟೋಲ್ ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸಬೇಕಾಗುತ್ತದೆ.

ಫಾಸ್ಟ್ಯಾಗ್ ಸರಿಯಾಗಿ ಅಂಟಿಸುವುದು ಕಡ್ಡಾಯ

ವಾಹನದ ಮುಂಭಾಗದ ಗಾಜಿನ ಮೇಲೆ ಒಳಗಿನಿಂದ ಸರಿಯಾದ ಜಾಗದಲ್ಲಿ ಫಾಸ್ಟಾಗ್ ಅಂಟಿಸಿರಬೇಕು. ಗಾಜಿಗೆ ಅಂಟಿಸದೆ ಕೈಯಲ್ಲಿ ಹಿಡಿದುಕೊಳ್ಳುವುದು ಅಥವಾ ಬೇರೆಡೆ ಇಡುವುದು ಕಂಡುಬಂದರೆ ಸ್ಕ್ಯಾನ್ ಮಾಡಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ವಾಹನ ಚಾಲಕರನ್ನೇ ಜವಾಬ್ದಾರರನ್ನಾಗಿ ಮಾಡಿ ದಂಡ ವಿಧಿಸುವ ಸಾಧ್ಯತೆ ಇರುತ್ತದೆ.

ಕೆವೈಸಿ ಪೂರ್ಣಗೊಳಿಸುವುದು ಯಾಕೆ ಕಡ್ಡಾಯ?

ಎಲ್ಲಾ ಫಾಸ್ಟ್ಯಾಗ್ ಬಳಕೆದಾರರು ತಮ್ಮ ಖಾತೆಯ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಬೇಕು. ಪೂರ್ಣಗೊಳ್ಳದಿದ್ದರೆ ಬ್ಯಾಂಕುಗಳು ಫಾಸ್ಟ್ಯಾಗ್ ಅನ್ನು ಬ್ಲಾಕ್‌ಲಿಸ್ಟ್ ಮಾಡುತ್ತವೆ. ಇದರಿಂದ ಟೋಲ್‌ನಲ್ಲಿ ಸ್ಕ್ಯಾನ್ ಆಗುವುದಿಲ್ಲ.

ಟೋಲ್ ಬೂತ್‌ನಲ್ಲಿ ಫಾಸ್ಟಾಗ್ ಸ್ಕ್ಯಾನ್ ಆಗದಿರಲು ನಿಮ್ಮ ಫಾಸ್ಟಾಗ್ ಬ್ಯಾಲೆನ್ಸ್ ಅಥವಾ ಕೆವೈಸಿ ಕೊರತೆ ಕಾರಣವಾಗಿದ್ದರೆ ಮಾತ್ರ ದುಪ್ಪಟ್ಟು ದಂಡ ತೆರಬೇಕಾಗುತ್ತದೆ. ಆದರೆ, ಟೋಲ್ ಆಡಳಿತ ಮಂಡಳಿಯ ಯಂತ್ರೋಪಕರಣಗಳ ದೋಷದಿಂದ ಸ್ಕ್ಯಾನ್ ಆಗದಿದ್ದರೆ ನಿಮಗೆ ಉಚಿತ ಪ್ರಯಾಣಕ್ಕೆ ಅವಕಾಶ ಇರುತ್ತದೆ.

ಹಿಂದಿನ ನಿಯಮಗಳ ಪ್ರಕಾರ, ವಾಹನದಲ್ಲಿ ಮಾನ್ಯವಾದ ಫಾಸ್ಟ್ಯಾಗ್ ಇಲ್ಲದಿದ್ದರೆ ಅಥವಾ ಸ್ಕ್ಯಾನ್ ಆಗದಿದ್ದರೆ ಪೂರ್ಣ ದುಪ್ಪಟ್ಟು ಟೋಲ್ ಶುಲ್ಕವನ್ನು ನಗದು ರೂಪದಲ್ಲಿ ವಸೂಲಿ ಮಾಡಲಾಗುತ್ತಿತ್ತು. ಆದರೆ, ಇತ್ತೀಚಿನ ಮಾರ್ಗಸೂಚಿಗಳ ಅನ್ವಯ ಈ ನಿಯಮದಲ್ಲಿ ಬದಲಾವಣೆ ತರಲಾಗಿದ್ದು, ಪಾವತಿ ಮಾಡುವ ವಿಧಾನದ ಆಧಾರದ ಮೇಲೆ ಶುಲ್ಕ ನಿರ್ಧಾರವಾಗುತ್ತದೆ.

ಡಿಜಿಟಲ್ ಪಾವತಿಗೆ ವಿನಾಯಿತಿ ಇರುತ್ತದೆ

ಟೋಲ್ ಪ್ಲಾಜಾದಲ್ಲಿ ಫಾಸ್ಟ್ಯಾಗ್ ಸ್ಕ್ಯಾನ್ ಆಗದಿದ್ದಾಗ, ವಾಹನ ಸವಾರರು ನಗದಿನ ಬದಲಿಗೆ ಯುಪಿಐ ಅಥವಾ ಇತರ ಡಿಜಿಟಲ್ ಮಾದರಿಯಲ್ಲಿ ಪಾವತಿಸಿದರೆ ದುಪ್ಪಟ್ಟು ಶುಲ್ಕ ನೀಡಬೇಕಿಲ್ಲ. ಇಂತಹ ಸಂದರ್ಭಗಳಲ್ಲಿ ಮೂಲ ಶುಲ್ಕದ ಮೇಲೆ ಶೇಕಡ 25ರಷ್ಟು ಹೆಚ್ಚುವರಿ ಅಂದರೆ ಮೂಲ ಟೋಲ್ ಮೊತ್ತದ 1.25 ಪಟ್ಟು ಪಾವತಿಸಿದರೆ ಸಾಕಾಗುತ್ತದೆ.

ಡಿಜಿಟಲ್ ಮಾಧ್ಯಮ ಬಳಸದೆ ನಗದು ರೂಪದಲ್ಲಿ ಹಣ ಪಾವತಿಸಲು ಮುಂದಾದರೆ ಮಾತ್ರ ನಿಯಮಾನುಸಾರ ದುಪ್ಪಟ್ಟು ಶುಲ್ಕವನ್ನು ಭರಿಸಬೇಕಾಗುತ್ತದೆ. ಒಂದು ವೇಳೆ ವಾಹನ ಸವಾರರು ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಪಾವತಿಸದೆ ಹಾದುಹೋದರೆ ಮತ್ತು ನಿಗದಿತ ಕಾಲಮಿತಿಯೊಳಗೆ ಬಾಕಿ ಮೊತ್ತವನ್ನು ಪಾವತಿಸದಿದ್ದರೆ, ಅಂತಹ ಸಂದರ್ಭಗಳಲ್ಲಿ ದಂಡದ ರೂಪದಲ್ಲಿ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+