ವಾರಾಂತ್ಯದಲ್ಲಿ ಆಭರಣ ಪ್ರಿಯರಿಗೆ ಸಿಹಿಸುದ್ದಿ! ಸತತ ಏರಿಕೆಗೆ ಬ್ರೇಕ್ ಹಾಕಿದ ಚಿನ್ನದ ದರ

ವಾರಾಂತ್ಯದ ಶನಿವಾರದಂದು ಶಾಪಿಂಗ್ ಹಾಗೂ ಶುಭ ಕಾರ್ಯಗಳಿಗೆ ಸಿದ್ಧತೆ ನಡೆಸುತ್ತಿರುವವರಿಗೆ ಆಭರಣ ಮಾರುಕಟ್ಟೆಯಿಂದ ಒಂದು ಸಮಾಧಾನಕರ ಸುದ್ದಿ ಹೊರಬಿದ್ದಿದೆ. ಕಳೆದ ಎರಡು ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಿದ್ದ ಹಳದಿ ಲೋಹದ ಓಟಕ್ಕೆ ಇಂದು ಬ್ರೇಕ್ ಬಿದ್ದಿದ್ದು, ಬಂಗಾರದ ದರ ಇಳಿಕೆಯತ್ತ ಮುಖ ಮಾಡಿದೆ.

ಇಂದು ಅಂದರೆ ನವೆಂಬರ್ 28, 2026ರಂದು ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ? ಪ್ರಮುಖ ನಗರಗಳ ಬೆಲೆ ಪಟ್ಟಿ ಏನು ಹೇಳುತ್ತದೆ ಎಂಬ ವಿವರ ಇಲ್ಲಿದೆ.

Gold and Silver Price Today in India 28 November 2026 MCX Rates in Bengaluru and Top Indian Cities

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಏಷ್ಟಿದೆ?

ಇಂದು ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ 22 ಕ್ಯಾರಟ್ ಆಭರಣ ಚಿನ್ನದ ದರ ಪ್ರತಿ 1 ಗ್ರಾಂಗೆ 11,720 ರೂಪಾಯಿಗಳಿಗೆ ಇಳಿದಿದೆ. 10 ಗ್ರಾಂ ಚಿನ್ನಕ್ಕೆ 1,17,200 ರೂಪಾಯಿಯಾಗಿದೆ. ಇನ್ನು 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ 1 ಗ್ರಾಂಗೆ 12,786 ರೂಪಾಯಿಗಳಾಗಿದ್ದು, 10 ಗ್ರಾಂಗೆ 1,27,860 ರೂಪಾಯಿ ನಿಗದಿಯಾಗಿದೆ. ಹಾಗೆಯೇ 18 ಕ್ಯಾರಟ್ ಚಿನ್ನದ ದರ 1 ಗ್ರಾಂಗೆ 9,589 ರೂಪಾಯಿ ಇದೆ.

ಇನ್ನು ಬೆಳ್ಳಿಯ ವಿಚಾರಕ್ಕೆ ಬಂದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ 170.10 ರೂಪಾಯಿಗಳಾಗಿದ್ದು, 1 ಕೆಜಿ ಬೆಳ್ಳಿಗೆ 1,70,100 ರೂಪಾಯಿ ದರವಿದೆ. ವಾರಾಂತ್ಯದ ಕಾರಣ ಇಂದು ಎಂಸಿಎಕ್ಸ್ ಮಾರುಕಟ್ಟೆಗೆ ರಜೆ ಇದ್ದು, ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ MCX ಚಿನ್ನದ ಸ್ಪಾಟ್ ದರ 10 ಗ್ರಾಂಗೆ 1,25,833 ರೂಪಾಯಿ ಹಾಗೂ ಡಿಸೆಂಬರ್ ಫ್ಯೂಚರ್ಸ್ ದರ 1,25,350 ರೂಪಾಯಿಯಲ್ಲಿ ಮುಕ್ತಾಯಗೊಂಡಿತ್ತು.

ಬೆಲೆ ಕಡಿಮೆಯಾಗಿದೆ ಅಂತ ಬೇಕಾಬಿಟ್ಟಿ ಚಿನ್ನ ಕೊಳ್ಳುವ ಮುನ್ನ ಎಚ್ಚರ! ITAT ಪ್ರಕಾರ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು?
ಬೆಲೆ ಕಡಿಮೆಯಾಗಿದೆ ಅಂತ ಬೇಕಾಬಿಟ್ಟಿ ಚಿನ್ನ ಕೊಳ್ಳುವ ಮುನ್ನ ಎಚ್ಚರ! ITAT ಪ್ರಕಾರ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು?

ನಿನ್ನೆಯ ಚಿನ್ನ ಮತ್ತು ಬೆಳ್ಳಿ ಬೆಲೆಯೊಂದಿಗೆ ಹೋಲಿಕೆ

ನಿನ್ನೆಯ (ನವೆಂಬರ್ 27) ಮಾರುಕಟ್ಟೆ ದರಕ್ಕೆ ಹೋಲಿಕೆ ಮಾಡಿ ನೋಡಿದರೆ, ಇಂದು ಚಿನ್ನ ಖರೀದಿಸುವವರಿಗೆ ತುಸು ಉಳಿತಾಯವಾಗಿದೆ. ನಿನ್ನೆ ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ 1 ಗ್ರಾಂಗೆ 11,770 ರೂಪಾಯಿಗಳಷ್ಟಿತ್ತು. ಆದರೆ ಇಂದು ಪ್ರತಿ ಗ್ರಾಂಗೆ 50 ರೂಪಾಯಿಗಳಷ್ಟು ಇಳಿಕೆಯಾಗಿ 11,720 ರೂಪಾಯಿಗೆ ತಲುಪಿದೆ. ಅಂದರೆ 10 ಗ್ರಾಂಗೆ 500 ರೂಪಾಯಿ ಇಳಿಕೆಯಾಗಿದೆ. ಅದೇ ರೀತಿ ನಿನ್ನೆ 12,840 ರೂಪಾಯಿಗಳಷ್ಟಿದ್ದ 1 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ, ಇಂದು 54 ರೂಪಾಯಿಗಳಷ್ಟು ಕಡಿಮೆಯಾಗಿ 12,786 ರೂಪಾಯಿಗೆ ಇಳಿದಿದೆ. 10 ಗ್ರಾಂಗೆ 540 ರೂಪಾಯಿ ಇಳಿಕೆಯಾಗಿದೆ. 18 ಕ್ಯಾರಟ್ ಚಿನ್ನದ ದರವೂ ಪ್ರತಿ ಗ್ರಾಂಗೆ 41 ರೂಪಾಯಿ ಇಳಿಕೆಯಾಗಿದೆ.

ಮತ್ತೊಂದೆಡೆ, ಬೆಳ್ಳಿಯ ದರದಲ್ಲಿ ಅಲ್ಪ ಏರಿಕೆ ಕಂಡುಬಂದಿದ್ದು, ನಿನ್ನೆ ಪ್ರತಿ ಕೆಜಿಗೆ 1,70,000 ರೂಪಾಯಿಗಳಷ್ಟಿದ್ದ ಚಿಲ್ಲರೆ ಬೆಳ್ಳಿ ಬೆಲೆ ಇಂದು 100 ರೂಪಾಯಿ ಹೆಚ್ಚಳವಾಗಿ 1,70,100 ರೂಪಾಯಿಗೆ ತಲುಪಿದೆ.

ನಗರವಾರು 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ಪಟ್ಟಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಗಳ ಪಟ್ಟಿ ಈ ಕೆಳಗಿನಂತಿದೆ:

ಬೆಂಗಳೂರು - 11,720 ರೂಪಾಯಿ

ದೆಹಲಿ - 11,735 ರೂಪಾಯಿ

ಚೆನ್ನೈ - 11,720 ರೂಪಾಯಿ

ಮುಂಬೈ - 11,720 ರೂಪಾಯಿ

ಹೈದರಾಬಾದ್ - 11,720 ರೂಪಾಯಿ

ಅಹಮದಾಬಾದ್ - 11,725 ರೂಪಾಯಿ

ಪುಣೆ - 11,720 ರೂಪಾಯಿ

ಕೋಲ್ಕತ್ತಾ - 11,720 ರೂಪಾಯಿ

ಚಿನ್ನದ ಬೆಲೆ ಇಳಿದಿದ್ದೇ ಮುಳುವಾಯ್ತು! ಹೆಚ್ಚು ಹಣ ಕಟ್ಟಿ, ಇಲ್ಲ ಚಿನ್ನ ಇಡಿ.. ಗೋಲ್ಡ್ ಲೋನ್ ಗ್ರಾಹಕರಿಗೆ ಫೈನಾನ್ಸ್ ಕಿರುಕುಳ
ಚಿನ್ನದ ಬೆಲೆ ಇಳಿದಿದ್ದೇ ಮುಳುವಾಯ್ತು! ಹೆಚ್ಚು ಹಣ ಕಟ್ಟಿ, ಇಲ್ಲ ಚಿನ್ನ ಇಡಿ.. ಗೋಲ್ಡ್ ಲೋನ್ ಗ್ರಾಹಕರಿಗೆ ಫೈನಾನ್ಸ್ ಕಿರುಕುಳ

ಗಮನಿಸಿ: ಮೇಲೆ ನೀಡಲಾದ ಚಿನ್ನ ಮತ್ತು ಬೆಳ್ಳಿಯ ದರಗಳು ಮಾರುಕಟ್ಟೆಯ ಮೂಲ ದರಗಳಾಗಿವೆ. ಇವುಗಳಲ್ಲಿ ಜಿಎಸ್‌ಟಿ ಮತ್ತು ಇತರೆ ತೆರಿಗೆಗಳು ಸೇರಿರುವುದಿಲ್ಲ. ನೀವು ಆಭರಣ ಮಳಿಗೆಗಳಲ್ಲಿ ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸುವಾಗ ಈ ಬೆಲೆಯ ಜೊತೆಗೆ ಶೇಕಡಾ 3ರಷ್ಟು ಜಿಎಸ್‌ಟಿ ಹಾಗೂ ತಯಾರಿಕಾ ವೆಚ್ಚ ಸೇರ್ಪಡೆಯಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+