ರೊಮ್ಯಾನ್ಸ್ ವೇಳೆಗೂ ಮ್ಯಾಥ್ಸ್ ಹೋಂವರ್ಕ್ ಆಯ್ತಾ ಮಗಳೇ ಅಂತ ಕೇಳಬೇಕನಿಸುತ್ತಿತ್ತು : ಶಾರೂಖ್ ಖಾನ್
ಬಾಲಿವುಡ್‌ನಲ್ಲಿ ಶಾರುಖ್ ಖಾನ್ ಅಂದ್ರೆ ರೊಮ್ಯಾನ್ಸ್, ಸ್ಟೈಲ್, ಎನರ್ಜಿ ಎಲ್ಲವೂ ನೆನಪಾಗುತ್ತೆ. ವಯಸ್ಸು ಎಷ್ಟೇ ಆದರೂ ಅವರ ಸಿನಿಮಾಗಳಲ್ಲಿ ಪ್ರೀತಿಯ ಡೈಲಾಗ್‌ಗಳಿಗೆ ಮಾತ್ರ ಕೊರತೆಯಿಲ್ಲ. ಆದರೆ ಈಗ ಶಾರುಖ್ ಖಾನ್ ತಮ್ಮ ವಯಸ್ಸಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅದೂ ಕೂಡ ತಮಗಿಂತ ತುಂಬಾ ಚಿಕ್ಕ ವಯಸ್ಸಿನ ನಟಿಯರ ಜೊತೆ ರೊಮ್ಯಾಂಟಿಕ್ ಸೀನ್ ಮಾಡುತ್ತಿದ್ದಾಗ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.
ಬಿಳಿಕೂದಲ ಲುಕ್ ಗೆ ಕಾರಣ ಕೊಟ್ಟ ShahRukh Khan
mumbaiನಲ್ಲಿ ನಡೆದ ಮೆಟಾ ಕಾರ್ಯಕ್ರಮದಲ್ಲಿ ನಿರ್ದೇಶಕ ಕರಣ್ ಜೋಹರ್ ಜೊತೆ ಭಾಗವಹಿಸಿದ್ದ ಶಾರುಖ್ ಖಾನ್, ತನ್ನ ಮುಂಬರುವ 'ಕಿಂಗ್' ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ತಾವು ಯಾಕೆ ಸಿನಿಮಾದಲ್ಲಿ ಬಿಳಿ ಕೂದಲಿನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇನೆ ಎಂಬುದಕ್ಕೂ ಕಾರಣ ಹೇಳಿದ್ದಾರೆ.

ನಾನು ಚೆನ್ನಾಗಿಲ್ಲ ಅನ್ನೋ ಫೀಲ್
ಶಾರುಖ್ ಖಾನ್ ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 'ನಾನು ಯಾವಾಗಲೂ ಹೀರೋ ಆಗಬೇಕು ಅಂತ ಬಯಸುತ್ತಿದ್ದೆ. ಸಿನಿಮಾ ಇಂಡಸ್ಟ್ರಿಗೆ ಬಂದಾಗ ನಾನು ಅಷ್ಟೇನೂ ಸುಂದರವಾಗಿಲ್ಲ ಅನ್ನೋ ಭಾವನೆ ಇತ್ತು. ಆದರೂ ಹೀರೋ ಆಗುವ ಅವಕಾಶ ಸಿಕ್ಕಾಗ ಅದನ್ನು ತುಂಬಾ ಪ್ರೀತಿಯಿಂದ ಸ್ವೀಕರಿಸಿದೆ' ಎಂದು ಹೇಳಿದ್ದಾರೆ.
ರೊಮ್ಯಾಂಟಿಕ್ ಸೀನ್‌ನಲ್ಲಿ ಮಗಳಂತೆ ಕಂಡ ನಟಿ
ಒಂದು cinemaದ ಚಿತ್ರೀಕರಣದ ವೇಳೆ ಶಾರೂಖ್ ಅವರಿಗೆ ವಿಚಿತ್ರ ಅನುಭವವಾಗಿದೆಯಂತೆ. ತಮ್ಮ ಜೊತೆ ನಟಿಸುತ್ತಿದ್ದ ಯುವ ನಟಿಗೆ ಪ್ರೀತಿಯ ಡೈಲಾಗ್ ಹೇಳುವಾಗ, ಆ ಡೈಲಾಗ್ ಕೇಳಿದರೆ ರೊಮ್ಯಾಂಟಿಕ್ ಆಗಿರಬೇಕಿತ್ತು. ಆದರೆ ಶಾರುಖ್ ಮನಸ್ಸಿನಲ್ಲಿ ಮಾತ್ರ ಬೇರೆ ಲೆಕ್ಕಾಚಾರ ಶುರುವಾಗಿತ್ತು.
'ನಿನ್ನ ಕಣ್ಣುಗಳಲ್ಲಿ ಕಳೆದುಹೋಗಬೇಕು, ನಿನ್ನನ್ನು ನೋಡಿದರೆ ಇಡೀ ಜಗತ್ತನ್ನೇ ನೋಡಿದ ಹಾಗೆ ಅನ್ನಿಸುತ್ತೆ.. ಅಂತ ಪ್ರೀತಿಯ ಮಾತು ಹೇಳುತ್ತಿದ್ದೆ. ಅದೇ ಸಮಯದಲ್ಲಿ, ನಾಳೆಯ ಗಣಿತದ ಹೋಂವರ್ಕ್ ಮುಗಿಸಿದ್ದೀಯಾ ಮಗಳೇ? ಅಂತ ಕೇಳುವ ಭಾವನೆ ಬರುತ್ತಿತ್ತು' ಎಂದು ತಮಾಷೆಯಾಗಿ ಹೇಳಿದ್ದಾರೆ.
ವಯಸ್ಸಿಗೆ ತಕ್ಕ ಪಾತ್ರ ಮಾಡುವಾಸೆ
ತಮ್ಮ ಜೊತೆ ನಟಿಸುತ್ತಿರುವ ನಾಯಕಿಯರು ಮತ್ತು ತಮ್ಮ ನಡುವಿನ ವಯಸ್ಸಿನ ಅಂತರವನ್ನು ಗಮನಿಸಿದಾಗ, ಇನ್ನು ಮುಂದೆ ತಮ್ಮ ವಯಸ್ಸಿಗೆ ತಕ್ಕ ಪಾತ್ರಗಳನ್ನು ಮಾಡಬೇಕು ಅನ್ನಿಸಿತಂತೆ. ಈಗ ಶಾರುಖ್ ಖಾನ್ ಅವರಿಗೆ 61 ವರ್ಷ. ಅದಕ್ಕಾಗಿಯೇ 'ಕಿಂಗ್' ಸಿನಿಮಾದಲ್ಲಿ ತಮ್ಮ ವಯಸ್ಸಿಗೆ ತಕ್ಕಂತೆ ಕಾಣಿಸಿಕೊಳ್ಳಲು ನಿರ್ಧರಿಸಿದ್ದಾರೆ. ಬಿಳಿ ಕೂದಲಿನ ಲುಕ್ ಕೂಡ ಅದೇ ಕಾರಣಕ್ಕೆ. 'ನಾನು ಈಗ 61 ವರ್ಷದ ಹೀರೋ ಆಗಿ ಕಾಣಿಸಿಕೊಳ್ಳಬೇಕು. ನನ್ನ ವಯಸ್ಸಿಗೆ ತಕ್ಕಂತೆ ಕೂಲ್ ಆಗಿರಬೇಕು' ಅನ್ನೋದು ಶಾರುಖ್ ಆಸೆ.
ಸುಹಾನಾ ಏನಂತಾರೆ?
ಶಾರೂಖ್ ಮಗಳು ಸುಹಾನಾ ಖಾನ್ ಕೂಡ 'ಕಿಂಗ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಅವರನ್ನು ನೋಡಿದರೆ, ನಮ್ಮ ಅಪ್ಪ ಕೂಡ ಹೀಗೇ ಇರಬೇಕು ಅಂತ ಎಲ್ಲ ಹುಡುಗಿಯರು ಅಂದುಕೊಳ್ಳಬೇಕು ಅನ್ನೋದು ಸುಹಾನಾ ಆಸೆ.
ಕಿಂಗ್ ಸಿನಿಮಾ ರಿಲೀಸ್ ಯಾವಾಗ?
ಡಿಸೆಂಬರ್ 24 ಕ್ಕೆ ರಿಲೀಸ್. ಸಿದ್ಧಾರ್ಥ್ ಆನಂದ್ ನಿರ್ದೇಶನದ 'ಕಿಂಗ್' ಸಿನಿಮಾದಲ್ಲಿ ಶಾರುಖ್ ಜೊತೆ ಸುಹಾನಾ ಖಾನ್, ಅಭಿಷೇಕ್ ಬಚ್ಚನ್, ದೀಪಿಕಾ ಪಡುಕೋಣೆ, ಅನಿಲ್ ಕಪೂರ್, ರಾಣಿ ಮುಖರ್ಜಿ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಡಿಸೆಂಬರ್ 24ರಂದು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಒಟ್ಟಿನಲ್ಲಿ 60 ಕ್ರಾಸ್ ಆದ ಶಾರುಖ್ ಖಾನ್ ಕಿಂಗ್ ಚಿತ್ರದಲ್ಲಿ ಹೇಗೆ ಕಾಣಿಸಬಹುದೆಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.





Click it and Unblock the Notifications
