ಸೆಲೆಬ್ರಿಟಿ ಭದ್ರತಾ ಸಿಬ್ಬಂದಿಗೆ ಕೋಟಿ ಕೋಟಿ ಸಂಬಳ: ಸತ್ಯ ಹೇಳಿದ ಶಾರುಖ್ ಖಾನ್ ಮಾಜಿ ಬಾಡಿಗಾರ್ಡ್
ಬಾಲಿವುಡ್ ತಾರೆಯರ ಭದ್ರತೆಗಾಗಿ ಬಾಡಿಗಾರ್ಡ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಸಾರ್ವಜನಿಕ ಸ್ಥಳಗಳು, ವಿಮಾನ ನಿಲ್ದಾಣಗಳು ಮತ್ತು ಕಾರ್ಯಕ್ರಮಗಳಲ್ಲಿ ಅಭಿಮಾನಿಗಳ ಗುಂಪಿನಿಂದ ನಟರನ್ನು ರಕ್ಷಿಸುವ ಜವಾಬ್ದಾರಿ ಇವರ ಮೇಲಿರುತ್ತದೆ. ಆದರೆ, ಇವರಿಗೆ ವರ್ಷಕ್ಕೆ ಕೋಟಿ ಕೋಟಿ ಸಂಬಳ ಸಿಗುತ್ತದೆ ಎನ್ನುವ ಸುದ್ದಿ ಎಷ್ಟು ಸತ್ಯ ಎಂಬುದರ ಬಗ್ಗೆ ಇದೀಗ ಸ್ಪಷ್ಟತೆ ದೊರೆತಿದೆ.
ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಾಜಿ ಬಾಡಿಗಾರ್ಡ್ ಯಾಸೀನ್ ಖಾನ್ ಈಗ ಈ ಬಗ್ಗೆ ಸ್ಫೋಟಕ ಸತ್ಯವೊಂದನ್ನು ಬಹಿರಂಗಪಡಿಸಿದ್ದು, ಅಂಗರಕ್ಷಕರು ವರ್ಷಕ್ಕೆ ಕೋಟಿ ಕೋಟಿ ಸಂಬಳ ಪಡೆಯುತ್ತಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹರಿದಾಡುತ್ತಲೇ ಇರುತ್ತದೆ, ಅದು ಕೇವಲ ವದಂತಿ ಎಂದು ಅವರು ತಿಳಿಸಿದ್ದಾರೆ.

ಬಾಲಿವುಡ್ ನಟ ಶಾರುಖ್ ಖಾನ್ ಅವರೊಂದಿಗೆ ಹಲವು ವರ್ಷಗಳ ಕಾಲ ಕೆಲಸ ಮಾಡಿರುವ ಯಾಸೀನ್ ಖಾನ್ ಈ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಬಾಡಿಗಾರ್ಡ್‌ಗಳಿಗೆ ವರ್ಷಕ್ಕೆ 2ರಿಂದ 2.5 ಕೋಟಿ ರೂಪಾಯಿ ಸಂಬಳ ಸಿಗುತ್ತದೆ ಎಂಬ ವರದಿಗಳನ್ನು ಅವರು ತಳ್ಳಿಹಾಕಿದ್ದಾರೆ.
ಅದು ನಿಜ ಅಲ್ಲ ಎಂದು ಯಾಸಿನ್ ಖಾನ್ ಸ್ಪಷ್ಟಪಡಿಸಿದ್ದಾರೆ. ಇವರ ಪ್ರಕಾರ ಬಾಡಿಗಾರ್ಡ್ ಗಳು ತಿಂಗಳ ಸಂಬಳದ ಮೇಲೆ ಕೆಲಸವನ್ನು ಮಾಡುತ್ತಾರೆ. ಕೆಲವೊಮ್ಮೆ ಹೊರಾಂಗಣ ಚಿತ್ರೀಕರಣದ ಸಮಯದಲ್ಲಿ ಸ್ವಲ್ಪ ಹೆಚ್ಚಿಗೆ ಹಣ ಸಿಗಬಹುದು. ಆದರೆ ಅದು ಅದು ಎಲ್ಲರಿಗೂ ಅನ್ವಯಿಸುವುದಿಲ್ಲ ಎಂದಿದ್ದಾರೆ.
ಮಾಸಿಕ ಸಂಬಳ ಎಷ್ಟು?
ಯಾಸಿನ್ ಖಾನ್ ಹೇಳುವಂತೆ ಅನುಭವ ಹೊಂದಿದ ಭದ್ರತಾ ಸಿಬ್ಬಂದಿಗೆ ತಿಂಗಳಿಗೆ ಸುಮಾರು ಒಂದು ಲಕ್ಷದವರೆಗೆ ಸಂಬಳ ಸಿಗುತ್ತದೆ. ಕೆಲವೆಡೆ ಕೆಲಸದ ಸ್ವರೂಪ ಮತ್ತು ಅನುಭವದ ಮೇಲೆ ಸಂಬಳದಲ್ಲಿ ವ್ಯತ್ಯಾಸ ಆಗಬಹುದು. ಆದರೆ ತಿಂಗಳಿಗೆ 10 ಲಕ್ಷ ಯಾರು ಕೊಡುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ಸಂಬಳದ ವ್ಯವಸ್ಥೆ ಹೇಗೆ?
ಬಾಡಿಗಾರ್ಡ್‌ಗಳು ಸಾಮಾನ್ಯವಾಗಿ ಒಪ್ಪಂದದ ಆಧಾರದ ಮೇಲೆ ಕೆಲಸ ಮಾಡುತ್ತಾರೆ. ಅವರಿಗೆ ನಿರಂತರ ಮಾಸಿಕ ಆದಾಯ ಇರುತ್ತದೆ. ಚಿತ್ರರಂಗದಲ್ಲಿ ಚಿತ್ರೀಕರಣದ ವೇಳೆ ಸರಿಯಾದ ಒಪ್ಪಂದ ವ್ಯವಸ್ಥೆ ತರಲು ತಾವು ಪ್ರಯತ್ನಿಸಿದ್ದಾಗಿ ಯಾಸೀನ್ ಖಾನ್ ಹೇಳಿದ್ದಾರೆ.
ಭದ್ರತಾ ಸಿಬ್ಬಂದಿಯ ಕೆಲಸ ತುಂಬಾ ಮುಖ್ಯವಾದರೂ ಅದು ಸಾಮಾನ್ಯವಾಗಿ ಯಾರ ಗಮನಕ್ಕೆ ಬರುವುದಿಲ್ಲ. ಏನಾದರೂ ಘಟನೆ ಸಂಭವಿಸಿದಾಗ ಮಾತ್ರ ಅವರ ಪಾತ್ರ ಮಾತ್ರ ಹೆಚ್ಚು ಚರ್ಚೆಗೆ ಬರುತ್ತದೆ ಎಂದು ಯಾಸೀನ್ ವಿಷಾದ ವ್ಯಕ್ತಪಡಿಸಿದ್ದಾರೆ.
ಶಾರುಖ್ ಖಾನ್ ಜೊತೆಗೆ 10 ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ ನಂತರ ಯಾಸೀನ್ ಖಾನ್ ತಮ್ಮದೇ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. 2015ರಲ್ಲಿ ಮುಂಬೈನಲ್ಲಿ 'YK PROSEC' ಎಂಬ ಸೆಕ್ಯೂರಿಟಿ ಸಂಸ್ಥೆಯನ್ನು ಮುಂಬೈನಲ್ಲಿ ಪ್ರಾರಂಭಿಸಿದ್ದು, ಈಗ ವಿಐಪಿಗಳ ಭದ್ರತೆ ಮತ್ತು ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದಾರೆ. ಅವರ ಸಂಸ್ಥೆ ಈಗಾಗಲೇ ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಅವರಂತಹ ಮೊದಲಾದ ದಿಗ್ಗಜರಿಗೆ ವಿಐಪಿ ಭದ್ರತೆಯನ್ನು ಒದಗಿಸುತ್ತಿದೆ.














Click it and Unblock the Notifications