ಬೆಂಗಳೂರು: ನವೆಂಬರ್ 30ರಿಂದ ರ‍್ಯಾಪಿಡೊ ಓನ್ಲಿಯಲ್ಲಿ ಡೆಲಿವರಿ ಶುಲ್ಕ ಜಾರಿ, ಯಾವ ಆರ್ಡರ್‌ಗೆ ಫ್ರೀ, ಯಾವುದಕ್ಕೆ ಶುಲ್ಕ?

ಬೆಂಗಳೂರು: ಕಡಿಮೆ ದರ ಹಾಗೂ ಶೂನ್ಯ ಕಮಿಷನ್ ಮಾದರಿಯ ಮೂಲಕ ಸ್ವಿಗ್ಗಿ ಮತ್ತು ಝೊಮ್ಯಾಟೊಗೆ ಪೈಪೋಟಿ ನೀಡುತ್ತಿರುವ ರ‍್ಯಾಪಿಡೊ ಒಡೆತನದ ಓನ್ಲಿ ಫುಡ್ ಡೆಲಿವರಿ ಆ್ಯಪ್, ಇದೀಗ ತನ್ನ ವಹಿವಾಟಿನಿಂದ ಆದಾಯ ಗಳಿಸುವತ್ತ ಮೊದಲ ಹೆಜ್ಜೆ ಇಟ್ಟಿದೆ.

ಹೌದು, ಕಳೆದ ಮಾರ್ಚ್ ತಿಂಗಳಿನಿಂದ ಬೆಂಗಳೂರಿನಲ್ಲಿ ಉಚಿತ ಫುಡ್‌ ಡೆಲಿವರಿ ಸೇವೆ ನೀಡುತ್ತಿದ್ದ ಕಂಪನಿಯು, ನವೆಂಬರ್ 30ರಿಂದ ಗ್ರಾಹಕರಿಗೆ ದೂರ ಆಧಾರಿತ ಡೆಲಿವರಿ ಶುಲ್ಕ ವಿಧಿಸಲು ನಿರ್ಧರಿಸಿದೆ.

Rapidos Ownly To Charge Delivery Fees On Food Orders In Bengaluru From November 30 Check New Rates

ಓನ್ಲಿ ಆ್ಯಪ್ ಹೊಸ ದರ ಎಷ್ಟು? ಯಾವ ಆರ್ಡರ್‌ಗಳಿಗೆ ಉಚಿತ ಡೆಲಿವರಿ?

ಬೆಂಗಳೂರಿನ ರೆಸ್ಟೋರೆಂಟ್ ಪಾಲುದಾರರಿಗೆ ಕಂಪನಿಯು ಕಳುಹಿಸಿರುವ ಸಂದೇಶದ ಪ್ರಕಾರ, ನವೆಂಬರ್ 30, 2026ರಿಂದ ಗ್ರಾಹಕರ ಆರ್ಡರ್‌ಗಳಿಗೆ ಡೆಲಿವರಿ ಶುಲ್ಕ ಸೇರ್ಪಡೆಯಾಗಲಿದೆ. ಈ'ಓನ್ಲಿ ಆ್ಯಪ್‌ನಲ್ಲಿ ಹೊಸ ದರ ಹೀಗಿದೆ:

* ₹99ಕ್ಕಿಂತ ಕಡಿಮೆ ಆರ್ಡರ್: 99 ರೂ.ಗಿಂತ ಕಡಿಮೆ ಮೊತ್ತದ ಆಹಾರ ಆರ್ಡರ್ ಮಾಡುವ ಗ್ರಾಹಕರಿಗೆ 25 ರೂ. ಡೆಲಿವರಿ ಶುಲ್ಕ ವಿಧಿಸಲಾಗುತ್ತದೆ.

* ₹99ಕ್ಕಿಂತ ಹೆಚ್ಚಿನ ಆರ್ಡರ್: 99 ರೂ.ಗಿಂತ ಹೆಚ್ಚಿನ ಮೊತ್ತದ ಆರ್ಡರ್‌ಗಳಿಗೆ ಎಂದಿನಂತೆ ಉಚಿತ ಡೆಲಿವರಿ ಸೌಲಭ್ಯ ಮುಂದುವರಿಯಲಿದೆ.

ದೀಪಾವಳಿಗೂ ಮುನ್ನ Zepto, Blinkit ಸೇರಿ ಬರೋಬ್ಬರಿ 105 ಮಳಿಗೆಗಳ ಮೇಲೆ FDA ದಾಳಿ: ಲೈಸೆನ್ಸ್ ರದ್ದು
ದೀಪಾವಳಿಗೂ ಮುನ್ನ Zepto, Blinkit ಸೇರಿ ಬರೋಬ್ಬರಿ 105 ಮಳಿಗೆಗಳ ಮೇಲೆ FDA ದಾಳಿ: ಲೈಸೆನ್ಸ್ ರದ್ದು

* 7 ಕಿ.ಮೀ.ಗಿಂತ ದೂರದ ಡೆಲಿವರಿ: ರೆಸ್ಟೋರೆಂಟ್‌ನಿಂದ 7 ಕಿಲೋಮೀಟರ್‌ಗಿಂತ ಹೆಚ್ಚು ದೂರದ ಸ್ಥಳಗಳಿಗೆ ಆಹಾರ ತಲುಪಿಸಲು 70 ರೂ. ಶುಲ್ಕ ಅನ್ವಯವಾಗಲಿದೆ.

ವಿಶೇಷವೆಂದರೆ, ಇತರ ಆ್ಯಪ್‌ಗಳಂತೆ ಓನ್ಲಿ ಯಾವುದೇ ಪ್ರತ್ಯೇಕ ಪ್ಲಾಟ್‌ಫಾರ್ಮ್ ಶುಲ್ಕ ಅಥವಾ ಪ್ಯಾಕೇಜಿಂಗ್ ಶುಲ್ಕವನ್ನ ವಿಧಿಸುತ್ತಿಲ್ಲ. ಈ ಹೊಸ ಶುಲ್ಕದಿಂದ ಆರ್ಡರ್‌ಗಳ ಸಂಖ್ಯೆಯಲ್ಲಿ ತುಸು ಏರಿಳಿತವಾಗಬಹುದು, ಆದರೆ ರೆಸ್ಟೋರೆಂಟ್‌ಗಳಿಗೆ ನೀಡುವ ಪಾವತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಝೀರೋ ಕಮಿಷನ್ ಫುಡ್ ಡೆಲಿವರಿ

ಇತರ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್‌ಗಳು ರೆಸ್ಟೋರೆಂಟ್‌ಗಳಿಂದ ಭಾರಿ ಕಮಿಷನ್ ಪಡೆಯುವುದಲ್ಲದೆ, ಮೆನು ದರವನ್ನ ಹೆಚ್ಚಿಸಿ ಗ್ರಾಹಕರಿಗೆ ಹೊರೆ ಮಾಡುತ್ತಿವೆ ಎಂಬುದು ರ‍್ಯಾಪಿಡೊ ಸಹ-ಸಂಸ್ಥಾಪಕ ಹಾಗೂ ಸಿಇಒ ಅರವಿಂದ್ ಸಂಕಾ ಅವರ ವಾದವಾಗಿದೆ.

"20 ರೂ. ಇಡ್ಲಿಗೆ ಡೆಲಿವರಿ ವೆಚ್ಚ ಸೇರಿ 65 ರೂ. ನೀಡಲು ಗ್ರಾಹಕರು ಸಿದ್ಧರಿರುತ್ತಾರೆ, ಆದರೆ ಇತರ ಆ್ಯಪ್‌ಗಳಂತೆ 120 ರೂ. ನೀಡಲು ಇಷ್ಟಪಡುವುದಿಲ್ಲ" ಎಂದು ಅವರು ಈ ಹಿಂದೆ ಹೇಳಿದ್ದರು.

ಹೀಗಾಗಿ ರೆಸ್ಟೋರೆಂಟ್‌ಗಳಿಗೆ ಝೀರೋ ಕಮಿಷನ್ ಫುಡ್ ಡೆಲಿವರಿ ಮಾದರಿಯನ್ನ ಮುಂದುವರಿಸಿರುವ ಓನ್ಲಿ, ಆಹಾರದ ದರವನ್ನ ರೆಸ್ಟೋರೆಂಟ್‌ನ ಮೂಲ ದರದಷ್ಟೇ ಉಳಿಸಿಕೊಂಡಿದೆ. ಆದರೆ, ದಿನೇ ದಿನೇ ಹೆಚ್ಚುತ್ತಿರುವ ಲಾಜಿಸ್ಟಿಕ್ಸ್ ವೆಚ್ಚವನ್ನ ಸರಿದೂಗಿಸಲು ಸಣ್ಣ ಮತ್ತು ದೂರದ ಆರ್ಡರ್‌ಗಳಿಗೆ ಮಾತ್ರ ಡೆಲಿವರಿ ಶುಲ್ಕ ವಿಧಿಸುವ ತೀರ್ಮಾನಕ್ಕೆ ಬಂದಿದೆ.

ಬೆಂಗಳೂರು ಫುಡ್ ಡೆಲಿವರಿ ಮಾರುಕಟ್ಟೆಯಲ್ಲಿ ಓನ್ಲಿ ಬೆಳವಣಿಗೆ

ಬೆಂಗಳೂರು ಫುಡ್ ಡೆಲಿವರಿ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಓನ್ಲಿ, ಜುಲೈ ವೇಳೆಗೆ ಶೇ. 7ರಷ್ಟು ಮಾರುಕಟ್ಟೆ ಪಾಲನ್ನ ತನ್ನದಾಗಿಸಿಕೊಂಡಿತ್ತು ಹಾಗೂ ಆಗಸ್ಟ್ ವೇಳೆಗೆ ದಿನಕ್ಕೆ 50,000ಕ್ಕೂ ಅಧಿಕ ಆರ್ಡರ್‌ಗಳನ್ನ ದಾಟಿದೆ.

 Blink Movie: ನನ್ನ ಸಿನಿಮಾ ನೋಡದಿದ್ರೂ ಪರ್ವಾಗಿಲ್ಲ ಈ ಸಿನಿಮಾ ನೋಡಿ ಎಂದ ಸಿಂಪಲ್ ಸುನಿ!
Blink Movie: ನನ್ನ ಸಿನಿಮಾ ನೋಡದಿದ್ರೂ ಪರ್ವಾಗಿಲ್ಲ ಈ ಸಿನಿಮಾ ನೋಡಿ ಎಂದ ಸಿಂಪಲ್ ಸುನಿ!

ಸದ್ಯ ಬೆಂಗಳೂರು ಮಾತ್ರವಲ್ಲದೆ ಹೈದರಾಬಾದ್, ಕೋಲ್ಕತ್ತಾ ಸೇರಿದಂತೆ ದೇಶದ ಏಳು ನಗರಗಳಿಗೆ ತನ್ನ ಸೇವೆಯನ್ನ ವಿಸ್ತರಿಸಿದೆ. ರ‍್ಯಾಪಿಡೊದ ಅಸ್ತಿತ್ವದಲ್ಲಿರುವ ಕ್ಯಾಪ್ಟನ್‌ಗಳನ್ನೇ (ರೈಡರ್‌ಗಳು) ಬಳಸಿಕೊಂಡು ಪ್ರಯಾಣಿಕರ ಸೇವೆ, ಪಾರ್ಸೆಲ್ ಹಾಗೂ ಆಹಾರ ವಿತರಣೆಯನ್ನ ಒಟ್ಟಾಗಿ ನಿರ್ವಹಿಸುವುದು ಕಂಪನಿಯ ಪ್ರಮುಖ ಕಾರ್ಯತಂತ್ರವಾಗಿದೆ.

ಇದೀಗ ಡೆಲಿವರಿ ಶುಲ್ಕ ಜಾರಿಯಾದ ಬಳಿಕ ಬೆಂಗಳೂರಿನ ಗ್ರಾಹಕರು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+