ದಕ್ಷಿಣ ಭಾರತದ ಪ್ರಮುಖ ರಾಜಕಾರಣಿಗೆ ನಿಮ್ಮ ಉತ್ತರ VS ದಕ್ಷಿಣ ಡ್ರಾಮಾ ನಿಲ್ಲಿಸಿ ಎಂದ ಖ್ಯಾತ ಯೂಟ್ಯೂಬರ್ ಧ್ರುವರಾಠಿ!, ಕಾರಣವೇನು
ದಕ್ಷಿಣ Vs ಉತ್ತರ ಎನ್ನುವ ಡ್ರಾಮಾವನ್ನು ನಿಲ್ಲಿಸಿ ಎಂದು ಖ್ಯಾತ ಯೂಟ್ಯೂಬರ್ ಧ್ರುವರಾಠಿ ಹೇಳಿರುವುದು ಸೋಷಿಯಲ್ ಮೀಡಿಯಾದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ. ಈಚೆಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಕನ್ನಡಿಗರು, ಕನ್ನಡ ಭಾಷೆಯ ಬಗ್ಗೆ ಧ್ರುವರಾಠಿ ಹೇಳಿದ್ದು ಗಂಭೀರ ಚರ್ಚೆಗೆ ಕಾರಣವಾಗಿತ್ತು. ಇದೀಗ ದಕ್ಷಿಣ Vs ಉತ್ತರ ಎನ್ನುವ ನಿಮ್ಮ ಡ್ರಾಮಾವನ್ನು ನಿಲ್ಲಿಸಿ ಎಂದಿದ್ದಾರೆ. ಧ್ರುವರಾಠಿ ಈ ರೀತಿ ಹೇಳಿದ್ದು ಯಾರಿಗೆ, ಯಾಕೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ವಿಚಾರವು ದೇಶದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ. ಈ ವಿಚಾರವಾಗಿ ವಿವಿಧ ರಾಜಕೀಯ ಪಕ್ಷಗಳ ನಾಯಕರು, ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ರಿಯಾಕ್ಟ್ ಮಾಡುತ್ತಿದ್ದಾರೆ. ಇದೀಗ ಈ ಚರ್ಚೆಯಲ್ಲಿ ಉತ್ತರ Vs ದಕ್ಷಿಣ ಎನ್ನುವ ಡ್ರಾಮಾವನ್ನು ನಿಲ್ಲಿಸಿ ಎಂದು ತೆಲಂಗಾಣದ ರಾಜಕಾರಣಿ, ಮಾಜಿ ಸಚಿವ ಕೆಟಿಆರ್‌ಗೆ ಧ್ರುವರಾಠಿ ಅವರು ಹೇಳಿದ್ದಾರೆ.

ತೆಲಂಗಾಣದ ರಾಜಕಾರಣಿ ಕೆಟಿಆರ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಕ್ಷೇತ್ರಗಳ ಮರುವಿಂಗಡಣೆ ವಿಚಾರದಲ್ಲಿ ನಮ್ಮ ನಿಲುವು ಮೊದಲಿನಿಂದಲೂ ಸ್ಪಷ್ಟವಾಗಿದೆ. ದಕ್ಷಿಣ ಭಾರತದ ಸಂಸದೀಯ ಪ್ರಾತಿನಿಧ್ಯ ಕಡಿಮೆಯಾಗಬಾರದು. ತೆಲಂಗಾಣಕ್ಕೆ ಯಾವುದೇ ಅನ್ಯಾಯವಾಗಬಾರದು. ಸಂಸತ್ತಿನಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಈಗಿರುವ ಶೇ.24ರಷ್ಟು ಪ್ರಾತಿನಿಧ್ಯವನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂದು ನಾವು ನಿರಂತರವಾಗಿ ಒತ್ತಾಯಿಸುತ್ತಿದ್ದೇವೆ.
ಪ್ರಸ್ತಾಪಿಸಿರುವಂತೆ ಲೋಕಸಭಾ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸುವುದರಿಂದ ಈ ಪ್ರಮುಖ ಬೇಡಿಕೆ ಈಡೇರಲಿದೆ. ಅಲ್ಲದೆ, 2051ರವರೆಗೆ ರಾಜ್ಯಗಳ ನಡುವಿನ ಲೋಕಸಭಾ ಸ್ಥಾನಗಳ ಹಂಚಿಕೆಯ ಅನುಪಾತ ಬದಲಾಗದಂತೆ ರಕ್ಷಣೆ ಸಿಗಲಿದೆ. ಇದರಿಂದ ತೆಲಂಗಾಣದ ಲೋಕಸಭಾ ಸ್ಥಾನಗಳ ಸಂಖ್ಯೆ ಈಗಿರುವ 17ರಿಂದ 26ಕ್ಕೆ ಏರಿಕೆಯಾಗಲಿದೆ.
ತೆಲಂಗಾಣದ ಹಿತಾಸಕ್ತಿಗಳನ್ನು ಅತ್ಯಂತ ಪ್ರಮುಖವಾಗಿರಿಸಿಕೊಂಡು, ನಮ್ಮ ಮೂವರು ರಾಜ್ಯಸಭಾ ಸಂಸದರು ಪ್ರಸ್ತಾವನೆಯ ಪರವಾಗಿ ಮತ ಚಲಾಯಿಸಲಿದ್ದಾರೆ ಎಂದಿದ್ದಾರೆ. ಅಲ್ಲದೆ ನಾವು ಯಾವಾಗಲೂ ಮಹಿಳಾ ಮೀಸಲಾತಿಯನ್ನು ಬೆಂಬಲಿಸಿದ್ದೇವೆ ಮತ್ತು ಅದರ ಅನುಷ್ಠಾನಕ್ಕೆ ಬದ್ಧರಾಗಿದ್ದೇವೆ ಎಂದೂ ತೆಲಂಗಾಣದ ಮಾಜಿ ಸಚಿವ, ಹಾಲಿ ಶಾಸಕ ಕೆಟಿಆರ್ ಅವರು ಹೇಳಿದ್ದಾರೆ. ಇದಕ್ಕೆ ಯೂಟ್ಯೂಬರ್ ಧ್ರುವರಾಠಿ ಅವರು ಆಕ್ರೋಶ ಹೊರ ಹಾಕಿದ್ದಾರೆ.
Dhruv Rathee: ಯೂಟ್ಯೂಬರ್ ಧ್ರುವರಾಠಿ ಹೇಳಿದ್ದೇನು ?
ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಖ್ಯಾತ ಯೂಟ್ಯೂಬರ್ ಧ್ರುವರಾಠಿ ಅವರು, ದಕ್ಷಿಣ vs ಉತ್ತರದ ಈ ನಾಟಕವನ್ನು ನಿಲ್ಲಿಸಿ. ಚುನಾವಣಾ ಫಲಿತಾಂಶಗಳನ್ನು ಚಾಣಾಕ್ಷತನದಿಂದ ನಿರ್ವಹಿಸಲು ಕ್ಷೇತ್ರಗಳನ್ನು ಮರುವಿಂಗಡಿಸುವ ಬಿಜೆಪಿಯ ಕಾರ್ಯಸೂಚಿಯನ್ನು ನೀವು ಬಹಿರಂಗವಾಗಿ ಬೆಂಬಲಿಸುತ್ತಿದ್ದೀರಿ. ಭಾರತದ ಪ್ರಜಾಪ್ರಭುತ್ವದ ಕೊಲೆಯನ್ನು ನೀವು ಬೆಂಬಲಿಸುತ್ತಿದ್ದೀರಿ ಎಂದಿದ್ದಾರೆ.
ಅಖಿಲೇಶ್ ಯಾದವ್ ಹೇಳಿದ್ದೇನು ?
ಇನ್ನು ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರು, ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಸೂದೆಯು ಬಿಜೆಪಿಯ ರಾಜಕೀಯದಲ್ಲಿ ಅತಿ ದೊಡ್ಡ ತಪ್ಪು ಎಂದು ಸಾಬೀತಾಗುತ್ತದೆ ಎಂದಿದ್ದಾರೆ.




Click it and Unblock the Notifications
