'ಆಶಾ' ಹೋರಾಟದಲ್ಲಿ ಹೈಡ್ರಾಮಾ: ₹2,000 ಗೌರವಧನ ಹೆಚ್ಚಳ ಮಾಡಿದ ಸಿಎಂ, ಆದ್ರೂ ಹೋರಾಟ ಮುಂದುವರಿಕೆ?

ಬೆಂಗಳೂರು: ಮಾಸಿಕ 15,000 ರೂ. ಗೌರವಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 12 ದಿನಗಳಿಂದ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಹೋರಾಟವು ಶನಿವಾರ (ನವೆಂಬರ್ 28) ತೀವ್ರ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಹೌದು, ಜನವರಿ 1ರಿಂದ ಅನ್ವಯವಾಗುವಂತೆ ಆಶಾ ಕಾರ್ಯಕರ್ತೆಯರ ಗೌರವಧನ ಮಾಸಿಕ 2,000 ರೂಪಾಯಿ ಏರಿಕೆ ಮಾಡುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕೃತವಾಗಿ ಘೋಷಿಸಿದ್ದಾರೆ.

ಆರಂಭದಲ್ಲಿ ಈ ಪ್ರಸ್ತಾವನೆಗೆ ಒಪ್ಪಿದ್ದ ಸಂಘಟನೆಯ ಮುಖಂಡರು ಹೋರಾಟ ಹಿಂಪಡೆಯುವ ಸುಳಿವು ನೀಡಿದರೂ, ಪ್ರತಿಭಟನಾ ನಿರತ ಕಾರ್ಯಕರ್ತೆಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಸರ್ಕಾರದಿಂದ ಲಿಖಿತ ಭರವಸೆ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಪಟ್ಟು ಹಿಡಿದಿದ್ದಾರೆ.

Karnataka ASHA Workers Protest Drama CM D K Shivakumar Announces Rs 2 000 Hike From Jan 1

ದಿನವಿಡೀ ನಡೆದ ಸರಣಿ ಸಭೆಗಳ ಹೈಡ್ರಾಮಾ

ನವೆಂಬರ್ 17ರಿಂದ ಆರಂಭವಾಗಿದ್ದ ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ತೆರೆ ಎಳೆಯಲು ಆರೋಗ್ಯ ಸಚಿವ ಯು.ಟಿ. ಖಾದರ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ಇಡೀ ದಿನ ಸರಣಿ ಸಭೆಗಳನ್ನ ನಡೆಸಿದರು. ಬೆಳಗ್ಗೆ ಮುಖಂಡರೊಂದಿಗೆ ಸಭೆ ನಡೆಸಿದ ಸಚಿವ ಯು.ಟಿ. ಖಾದರ್, ಮೊದಲಿಗೆ 1,000 ರೂ. ಹಾಗೂ ನಂತರ 1,500 ರೂ. ಹೆಚ್ಚಳದ ಪ್ರಸ್ತಾಪ ಇಟ್ಟಿದ್ದರು. ಆದರೆ, ಮಾಸಿಕ 15,000 ರೂಪಾಯಿ ಗೌರವಧನಕ್ಕೆ ಪಟ್ಟು ಹಿಡಿದಿದ್ದ ಮುಖಂಡರು ಇದಕ್ಕೆ ಒಪ್ಪಿರಲಿಲ್ಲ.

ಬಳಿಕ ಮಧ್ಯಪ್ರವೇಶಿಸಿದ ಸಿಎಂ ಡಿ ಕೆ ಶಿವಕುಮಾರ್ ಅವರು ಸಂಘಟನೆಯ ನಾಯಕಿ ಡಿ. ನಾಗಲಕ್ಷ್ಮೀ ಹಾಗೂ ಇತರ ಪದಾಧಿಕಾರಿಗಳ ಮನವೊಲಿಸುವಲ್ಲಿ ಯಶಸ್ವಿಯಾದರು. ಮುಖಂಡರು 3,000 ರೂಪಾಯಿ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದರೂ, ಜನವರಿ 1ರಿಂದ 2,000 ರೂಪಾಯಿ ಗೌರವಧನ ಹೆಚ್ಚಿಸುವುದಾಗಿ ಸಿಎಂ ಭರವಸೆ ನೀಡಿದರು. ಸಭೆಯ ಬಳಿಕ ಮುಖಂಡರೊಂದಿಗೇ ಪತ್ರಿಕಾಗೋಷ್ಠಿ ನಡೆಸಿ ಈ ನಿರ್ಧಾರ ಪ್ರಕಟಿಸಿದಾಗ, ಸಂಘಟನೆ ಮುಖಂಡರು ಸಿಎಂ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದ್ದರು.

ಆಶಾ ಕಾರ್ಯಕರ್ತೆಯರಿಗೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ್ದ ಭರವಸೆ ಏನು ?
ಆಶಾ ಕಾರ್ಯಕರ್ತೆಯರಿಗೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ್ದ ಭರವಸೆ ಏನು ?

ಮುಖಂಡರ ನಿರ್ಧಾರಕ್ಕೆ ಕಾರ್ಯಕರ್ತೆಯರ ವಿರೋಧ

ಸಿಎಂ ಭೇಟಿಯ ಬಳಿಕ ಪ್ರತಿಭಟನಾ ಸ್ಥಳಕ್ಕೆ ಮರಳಿದ ಮುಖಂಡರು ಸರ್ಕಾರದ ನಿರ್ಧಾರವನ್ನ ಪ್ರಕಟಿಸುತ್ತಿದ್ದಂತೆಯೇ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಹಲವು ಆಶಾ ಕಾರ್ಯಕರ್ತೆಯರು ಮುಖಂಡರ ನಿಲುವಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಮಾಸಿಕ 15,000 ರೂಪಾಯಿ ನಿಗದಿಯಾಗುವವರೆಗೂ ಹೋರಾಟ ನಿಲ್ಲಿಸಬಾರದು ಎಂದು ಆಗ್ರಹಿಸಿದರು.

ಅಲ್ಲದೆ, ಸರ್ಕಾರದ ಘೋಷಣೆಗೆ ಲಿಖಿತ ಭರವಸೆಗೆ ಪಟ್ಟು ಹಿಡಿದಿದ್ದರಿಂದ, ಒತ್ತಡಕ್ಕೆ ಮಣಿದ ಮುಖಂಡರು ನಡಾವಳಿ ಕೈಸೇರುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಘೋಷಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ, "ಜನವರಿಯಿಂದ 2,000 ರೂಪಾಯಿ ಹೆಚ್ಚಳ ಹಾಗೂ ಮುಂದಿನ ಬಜೆಟ್‌ನಲ್ಲಿ ಮತ್ತೆ 1,000 ರೂಪಾಯಿ ಏರಿಕೆ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಇದನ್ನು ನಾವು ತುಂಬಾ ಸಂತೋಷದಿಂದೇನೂ ಒಪ್ಪಿಕೊಂಡಿಲ್ಲ" ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ನಯಾಪೈಸೆ ಹೆಚ್ಚಳವಾಗಿಲ್ಲ; ಎನ್‌ಡಿಎ ನಾಯಕರ ವಿರುದ್ಧ ಡಿಕೆಶಿ ವಾಗ್ದಾಳಿ!
ಕೇಂದ್ರ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ನಯಾಪೈಸೆ ಹೆಚ್ಚಳವಾಗಿಲ್ಲ; ಎನ್‌ಡಿಎ ನಾಯಕರ ವಿರುದ್ಧ ಡಿಕೆಶಿ ವಾಗ್ದಾಳಿ!

ಆಶಾ ಕಾರ್ಯಕರ್ತೆಯರ ವೇತನ ಲೆಕ್ಕಾಚಾರ ಹೇಗೆ?

ಪ್ರಸ್ತುತ ಆಶಾ ಕಾರ್ಯಕರ್ತೆಯರ ವೇತನ ವ್ಯವಸ್ಥೆಯಡಿ ರಾಜ್ಯ ಸರ್ಕಾರದಿಂದ 5,000 ರೂಪಾಯಿ ಹಾಗೂ ಕೇಂದ್ರ ಸರ್ಕಾರದಿಂದ 2,000 ರೂಪಾಯಿ ಸೇರಿ ಒಟ್ಟು 7,000 ರೂಪಾಯಿ ನಿಶ್ಚಿತ ಗೌರವಧನ ಸಿಗುತ್ತಿದೆ. ಇದರೊಂದಿಗೆ ಕಾರ್ಯನಿರ್ವಹಣೆಯ ಆಧಾರದಲ್ಲಿ 1,000 ದಿಂದ ಸರಾಸರಿ 2,000 ರೂಪಾಯಿ ಪ್ರೋತ್ಸಾಹಧನ ದೊರೆಯುತ್ತಿದೆ.

ಇದೀಗ ರಾಜ್ಯ ಸರ್ಕಾರವು ಜನವರಿ 1ರಿಂದ 2,000 ರೂಪಾಯಿ ಹೆಚ್ಚಳ ಮಾಡುವುದರಿಂದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಅಂದಾಜು 10,000 ರೂಪಾಯಿ ಗೌರವಧನ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+