SWR: ಕರಾವಳಿ ನಗರದಿಂದ ಕೊಲ್ಲಂಗೆ 4 ಟ್ರಿಪ್ ವಿಶೇಷ ರೈಲು ಸೇವೆ, ಬೆಂಗಳೂರು ರೈಲಿನ ಸಂಚಾರ ರದ್ದು!

Special Trains: ಶಬರಿಮಲೆ ಯಾತ್ರೆ, ಕ್ರಿಸ್‌ಮಸ್ ಮತ್ತು ಚಳಿಗಾಲದ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಮಂಗಳೂರು ಸೆಂಟ್ರಲ್ ಮತ್ತು ಕೊಲ್ಲಂ ನಡುವೆ ಸಾಪ್ತಾಹಿಕ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ರೈಲುಗಳಿಂದ ಪ್ರತಿ ದಿಕ್ಕಿನಲ್ಲಿಯೂ ತಲಾ ನಾಲ್ಕು ಟ್ರಿಪ್ ಸೇವೆ ಸಿಗಲಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್ ಮೊದಲ ವಾರದಿಂದ ಮಂಗಳೂರು ಸೆಂಟ್ರಲ್-ಕೊಲ್ಲಂ ನಡುವೆ ವಿಶೇಷ ರೈಲುಗಳು ಸಂಚಾರ ಮಾಡಲಿವೆ. ಇವುಗಳ ಸಂಚಾರ ಸಮಯ, ಬೋಗಿ, ನಿಲುಗಡೆ ನಿಲ್ದಾಣ ಮತ್ತು ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

SWR Operate Weekly Specail Trains Between Mangaluru Central to Kollam Timings Schedule is Here

ಸಾಪ್ತಾಹಿಕ ವಿಶೇಷ ರೈಲು

ಮಂಗಳೂರು ಸೆಂಟ್ರಲ್ - ಕೊಲ್ಲಂ ಸಾಪ್ತಾಹಿಕ ವಿಶೇಷ ರೈಲು (06231) ಡಿಸೆಂಬರ್ 04, 2026 ರಿಂದ 25ರವರೆಗೆ ಪ್ರತಿ ಶುಕ್ರವಾರ ಸಂಜೆ 17:55 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಡಲಿದೆ. ಮಾರನೇ ದಿನ ಬೆಳಗ್ಗೆ 07:15 ಗಂಟೆಗೆ ಕೊಲ್ಲಂ ನಿಲ್ದಾಣ ತಲುಪಲಿದೆ.

SWR: ಶಬರಿಮಲೆ, ಕ್ರಿಸ್‌ಮಸ್ ಪ್ರಯಾಣಿಕರಿಗೆ ಸಿಹಿಸುದ್ದಿ! ವಿಶೇಷ ರೈಲುಗಳ ಸೇವೆ 2027ರವರೆಗೆ ವಿಸ್ತರಣೆ, ವೇಳಾಪಟ್ಟಿ
SWR: ಶಬರಿಮಲೆ, ಕ್ರಿಸ್‌ಮಸ್ ಪ್ರಯಾಣಿಕರಿಗೆ ಸಿಹಿಸುದ್ದಿ! ವಿಶೇಷ ರೈಲುಗಳ ಸೇವೆ 2027ರವರೆಗೆ ವಿಸ್ತರಣೆ, ವೇಳಾಪಟ್ಟಿ

ಮರಳಿ ಅದೇ ಮಾರ್ಗದಲ್ಲಿ ಕೊಲ್ಲಂ-ಮಂಗಳೂರು ಸೆಂಟ್ರಲ್ ಸಾಪ್ತಾಹಿಕ ವಿಶೇಷ ರೈಲು (06232) ಡಿಸೆಂಬರ್ 05 ರಿಂದ 26 ರವರೆಗೆ ಪ್ರತಿ ಶನಿವಾರ ಬೆಳಗ್ಗೆ 09:15 ಗಂಟೆಗೆ ಕೊಲ್ಲಂನಿಂದ ಹೊರಡಲಿದೆ. ಅದೇ ದಿನ ರಾತ್ರಿ 21:30 ಗಂಟೆಗೆ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಬರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೈಲು ಸಂಚಾರ ಮಾರ್ಗ, ನಿಲುಗಡೆ ನಿಲ್ದಾಣಗಳು

ಈ ವಿಶೇಷ ಮಂಗಳೂರು ಸೆಂಟ್ರಲ್-ಕೊಲ್ಲಂ-ಮಂಗಳೂರು ಸೆಂಟ್ರಲ್ ರೈಲುಗಳು ಎರಡು ಕಡೆಯ ಸಂಚಾರದ ವೇಳೆ ಕಾಸರಗೋಡು, ಕಂಞಂಗಾಡ್, ಪಯ್ಯನೂರು, ಕಣ್ಣೂರು, ವಡಕರ, ಕೋಝಿಕ್ಕೋಡ್, ತಿರೂರು, ಶೊರನೂರು, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಶ್ಶೇರಿ, ತಿರುವಲ್ಲಾ, ಚೆಂಗನ್ನೂರು, ಮಾವೇಲಿಕರ, ಕಾಯಂಕುಲಂ, ಕರುನಾಗಪ್ಪಳ್ಳಿ ಮತ್ತು ಶಾಸ್ತಾಂಕೋಟ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

ಈ ವಿಶೇಷ ರೈಲುಗಳು ಒಟ್ಟು 18 ಬೋಗಿಗಳನ್ನು (ಕೋಚ್‌ಗಳನ್ನು) ಒಳಗೊಂಡಿರುತ್ತವೆ. ಇದರಲ್ಲಿ ಎಸಿ 2-ಟೈರ್, ಎಸಿ 3-ಟೈರ್, ಸ್ಲೀಪರ್ ಕ್ಲಾಸ್, ಜನರಲ್ ಕ್ಲಾಸ್ ಮತ್ತು ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳು ಇರಲಿವೆ.

ಡಿ.1ರಂದು ಬೆಂಗಳೂರಿನ ಈ ರೈಲು ಸಂಚಾರ ರದ್ದು

ಲುಮ್ಡಿಂಗ್ ವಿಭಾಗದ, ಲುಮ್ಡಿಂಗ್-ಬದರ್‌ಪುರ ಏಕ-ಮಾರ್ಗದ ವಿದ್ಯುದ್ದೀಕೃತ ಗುಡ್ಡಗಾಡು ಮಾರ್ಗದಲ್ಲಿ, ಬಂದರ್‌ಖಾಲ್ ಮತ್ತು ದಾಮ್‌ಚರಾ ನಿಲ್ದಾಣಗಳ ನಡುವೆ 'DN IOMB/IODT' ರೈಲು ಹಳಿ ತಪ್ಪಿದ ಪರಿಣಾಮವಾಗಿ ನವೆಂಬರ್ 28ರಂದು ಹೊರಟಿದ್ದ ರೈಲು ಸಂಚಾರ ರದ್ದಾಯಿತು.

SWR: ಅರಸೀಕೆರೆ-ಮೈಸೂರು, ಮೈಸೂರು-ಬೆಂಗಳೂರು ರೈಲು ರದ್ದು: ನೈಋತ್ಯ ರೈಲ್ವೆಯಿಂದ ಮಹತ್ವದ ಮಾಹಿತಿ
SWR: ಅರಸೀಕೆರೆ-ಮೈಸೂರು, ಮೈಸೂರು-ಬೆಂಗಳೂರು ರೈಲು ರದ್ದು: ನೈಋತ್ಯ ರೈಲ್ವೆಯಿಂದ ಮಹತ್ವದ ಮಾಹಿತಿ

ಶನಿವಾರ ಅಗರ್ತಲಾದಿಂದ ಹೊರಡಬೇಕಿದ್ದ ಅಗರ್ತಲಾ - ಎಸ್‌ಎಮ್‌ವಿಟಿ (SMVT) ಬೆಂಗಳೂರು ಹಮ್‌ಸಫರ್ ಎಕ್ಸ್‌ಪ್ರೆಸ್ ರೈಲು (12504), ಮತ್ತು ಮುಂದೆ ಡಿಸೆಂಬರ್ 01, 2026 ರಂದು ಎಸ್‌ಎಮ್‌ವಿಟಿ (SMVT) ಬೆಂಗಳೂರಿನಿಂದ ಹೊರಡಬೇಕಿರುವ ಎಸ್‌ಎಮ್‌ವಿಟಿ ಬೆಂಗಳೂರು - ಅಗರ್ತಲಾ ಹಮ್‌ಸಫರ್ ಎಕ್ಸ್‌ಪ್ರೆಸ್ ರೈಲು (12503) ರದ್ದು ಮಾಡಲಾಗಿದೆ ಎಂದು ರೈಲ್ವೆ ಪ್ರಕಟಣೆ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+