Bengaluru Metro: ಹಳಿಗೆ ಬಿದ್ದ 17 ಪ್ರಕರಣ ಬಳಿಕವೂ ಎಚ್ಚೆತ್ತುಕೊಳ್ಳದ ಮೆಟ್ರೋ! PSD ಅಳವಡಿಕೆಗೆ ಸಂಸದ ಮತ್ತೆ ಆಗ್ರಹ

ಬೆಂಗಳೂರು: ದೇಶದಲ್ಲೇ ಅತ್ಯಧಿಕ ಹೆಚ್ಚಿನ ಟಿಕೆಟ್ ದರ ಇರುವ ಬೆಂಗಳೂರು ನಮ್ಮ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮೂಲಸೌಕರ್ಯ ಇಲ್ಲದಿರುವುದು ಕಳವಳಕಾರಿ ಸಂಗತಿ. ಹೀಗಾಗಿಯೇ 2024ರ ಜನವರಿಯಿಂದ ಇಲ್ಲಿಯವರೆಗೆ (2 ವರ್ಷದಲ್ಲಿ) ಮೆಟ್ರೋ ಹಳಿಗಳ ಮೇಲೆ ಬಿದ್ದ 17 ಘಟನೆಗಳು ವರದಿಯಾಗಿವೆ. ಈ ಕುರಿತು ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮೂರನೇ ಬಾರಿಗೆ ಸಂಸದ ತೇಜಸ್ವಿ ಸೂರ್ಯ ಅವರು ಪತ್ರ ಬರೆದು ಮನವಿ ಮಾಡಿದ್ದಾರೆ.

ಮೂರನೇ ಜ್ಞಾಪನಾ ಪತ್ರವನ್ನು ಎಕ್ಸ್‌ ನಲ್ಲಿ ಹಂಚಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ ಅವರು, ಪ್ರಯಾಣಿಕರ ಸುರಕ್ಷತಾ ಮೂಲಸೌಕರ್ಯದಲ್ಲಿನ ಗಂಭೀರ ಕೊರತೆ ಎತ್ತಿ ತೋರಿಸಿದ್ದಾರೆ. 'ನಮ್ಮ ಮೆಟ್ರೋ' 103 ಜಾಲದಲ್ಲಿ ಜಾಲದಾದ್ಯಂತ 'ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್‌'ಗಳನ್ನು (PSDs) ತುರ್ತಾಗಿ ಮತ್ತು ನಿಗದಿತ ಕಾಲಮಿತಿಯೊಳಗೆ ಅಳವಡಿಸಬೇಕೆಂದು ಆಗ್ರಹಿಸಿದ್ದಾರೆ.

Tejasvi Surya Urges Krishna Byre Gowda for Platform Screen Doors on Namma Metro After 17 Incidents

ಪ್ರಯಾಣಿಕರ ಸುರಕ್ಷತೆಯೇ ಆದ್ಯತೆ ಆಗಲಿ

ನೇರಳೆ ಮಾರ್ಗದ ಹೊಸಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಮೊನ್ನೆ ನವೆಂಬರ್ 27 ರಂದು ದೃಷ್ಟಿಹೀನ ಪ್ರಯಾಣಿಕರೊಬ್ಬರು ಹಳಿ ಮೇಲೆ ಬಿದ್ದ ಘಟನೆ ನಡೆದಿದೆ. ಅದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 2024ರಿಂದ ಈವರೆಗೆ ಆತ್ಮಹತ್ಯೆ, ಹಳಿಗೆ ಜಿಗಿವ ಒಟ್ಟು 17 ಘಟನೆಗಳು ಅಧಿಕೃತವಾಗಿ ದಾಖಲಾಗಿವೆ ಎಂದು ನಿಲ್ದಾಣಗಳ ಸುರಕ್ಷತೆ ಇಲ್ಲದಿರುವುದು ಮತ್ತು ಅದಕ್ಕೆ ಆದ್ಯತೆ ನೀಡುವಂತೆ ಅವರು ವಿವರಿಸಿದ್ದಾರೆ.

Namma Metro: ಗೋರಗುಂಟೆಪಾಳ್ಯದಿಂದ ಬೊಮ್ಮಸಂದ್ರಕ್ಕೆ ಯಶಸ್ವಿ 'ಹೃದಯ' ಸಾಗಣೆ! 70 ನಿಮಿಷಗಳ ಜರ್ನಿ ಹೇಗಿತ್ತು?
Namma Metro: ಗೋರಗುಂಟೆಪಾಳ್ಯದಿಂದ ಬೊಮ್ಮಸಂದ್ರಕ್ಕೆ ಯಶಸ್ವಿ 'ಹೃದಯ' ಸಾಗಣೆ! 70 ನಿಮಿಷಗಳ ಜರ್ನಿ ಹೇಗಿತ್ತು?

'ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್

ಈ ಹಿಂದೆಯು ಇದೇ ವಿಚಾರವಾಗಿ ಮನವಿ ಮಾಡಿದ್ದೆ. ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಇನ್ನೂ 'ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್‌' ಅಳವಡಿಸಲಾಗಿಲ್ಲ. ಪದೇ ಪದೇ ನಿಲ್ದಾಣಗಳಲ್ಲಿ ಅಹಿತಕರ ಘಟನೆಗಳು ನಡೆಯುತ್ತಲೇ ಇದ್ದು, ರಾಜ್ಯ ಸರ್ಕಾರ ಕೂಡಲೇ ಕ್ರಮವಹಿಸಬೇಕು. ಪ್ರಯಾಣಿಕರ ಸುರಕ್ಷತೆಯು ಮೊದಲ ಆದ್ಯತೆ ಆಗಬೇಕು ಎಂದು ಹೇಳಿದ್ದಾರೆ.

ನಿತ್ಯ ಓಡಾಡುವ ಪ್ರಯಾಣಿಕರು, ವಿಶೇಷವಾಗಿ ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಪೀಕ್ ಸಮಯದಲ್ಲಿ ಜನದಟ್ಟಣೆ ವೇಳೆ ಸಮಸ್ಯೆ ಎದುರಾಗುತ್ತಿದೆ. "ಮೆಟ್ರೋ ಹಳಿಗಳ ಮೇಲೆ ಪ್ರಯಾಣಿಕರು ಬೀಳುವ/ಇಳಿಯುವ ಘಟನೆಗಳು ನಿಲ್ದಾಣದ ಮೂಲಸೌಕರ್ಯ ಕೊರತೆ ಎತ್ತಿತೋರಿಸುತ್ತದೆ. ಇದನ್ನು ಸರಿಪಡಿಸುವಂತೆ ರಾಜ್ಯ ಸರ್ಕಾರ ಮತ್ತು ಬಿಎಂಆರ್‌ಸಿಎಲ್ ಅಧಿಕಾರಿಗಳಿಗೂ ಅವರೂ ಒತ್ತಾಯಿಸಿದ್ದಾರೆ.

ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಕಾರ್ಯಕ್ಷಮತೆ ಲೆಕ್ಕಪರಿಶೋಧನಾ ವರದಿ ಸಂಖ್ಯೆ 7, 2026 ರಲ್ಲಿ ಮೆಟ್ರೋ ವ್ಯವಸ್ಥೆಯಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಬಾಗಿಲುಗಳನ್ನು ಸ್ಥಾಪಿಸುವಲ್ಲಿನ ವೈಫಲ್ಯ ಸ್ಪಷ್ಟವಾಗಿ ಗುರುತಿಸಲಾಗಿದೆ ಎಂಬುದನ್ನು ಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಬೆಂಗಳೂರಿನಲ್ಲೇ ದುಬಾರಿ ಮೆಟ್ರೊ ಸಂಚಾರ, ಸುರಕ್ಷತೆ ಇಲ್ಲ!

ಬೆಂಗಳೂರಿನ ಪ್ರಯಾಣಿಕರು ದೇಶದಲ್ಲಿ ಇತರ ನಗರಗಳ ಮೆಟ್ರೋಗಿಂತಲೂ ಹೆಚ್ಚಿನ ದರ ನೀಡಿ ಸಂಚಾರ ಮಾಡುತ್ತಿದ್ದಾರೆ. ಇಲ್ಲಿಯೇ ಜನರಿಗೆ ಸುರಕ್ಷತೆ ಇಲ್ಲದಂತಾಗಿದೆ. ಮುಂದೆ ಚಾಲಕರಹಿತ ರೈಲುಗಳು ಮತ್ತು ಅಟೆಂಡೆಂಟ್ ಟ್ರೈನ್ ಆಪರೇಷನ್ (ಯುಟಿಒ) ನಂತಹ ಸುಧಾರಿತ ವ್ಯವಸ್ಥೆಗಳನ್ನು ಸಂಯೋಜಿಸುವುದರಿಂದ, ಪ್ಲಾಟ್‌ಫಾರ್ಮ್‌ಗಳಲ್ಲಿ ಸುರಕ್ಷತಾ ಮೂಲಸೌಕರ್ಯ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

ಮೆಟ್ರೋ ಜಾಲದ ಎಲ್ಲ ನಿಲ್ದಾಣಗಳಲ್ಲಿ ಪಿಎಸ್‌ಡಿ ವ್ಯವಸ್ಥೆ ಸ್ಥಾಪಿಸಬೇಕು. ಹೆಚ್ಚಿನ ದಟ್ಟಣೆ ಕಂಡು ಬರುವ ಹಬ್‌ಗಳು, ಇಂಟರ್‌ಚೇಂಜ್ ನಿಲ್ದಾಣಗಳು, ಪದೇ ಪದೇ ಜನದಟ್ಟಣೆ ಹೆಚ್ಚಾಗುವ ಪ್ಲಾಟ್‌ಫಾರ್ಮ್‌ಗಳಿಗೆ ಹಂತ ಹಂತದ ರೋಲ್‌ಔಟ್ ವೇಳಾಪಟ್ಟಿಯಡಿಯಲ್ಲಿ ಹೆಚ್ಚಿನ ಆದ್ಯತೆ ಕೊಡಬೇಕು.

Metro Pink Line: ಟನಲ್ ಪಿಂಕ್ ಲೈನ್‌ನಲ್ಲಿ ಟ್ರಯಲ್ ರನ್‌ಗೆ ಸಿದ್ಧತೆ: ನಾಗವಾರ ತೆರಳಿದ್ರೆ ಬೆಂಗಳೂರು ಏರ್‍‌ಪೋರ್ಟ್ ಹತ್ತಿರ!
Metro Pink Line: ಟನಲ್ ಪಿಂಕ್ ಲೈನ್‌ನಲ್ಲಿ ಟ್ರಯಲ್ ರನ್‌ಗೆ ಸಿದ್ಧತೆ: ನಾಗವಾರ ತೆರಳಿದ್ರೆ ಬೆಂಗಳೂರು ಏರ್‍‌ಪೋರ್ಟ್ ಹತ್ತಿರ!

ಭವಿಷ್ಯ ನೂತನ ಎಲ್ಲಾ ಮೆಟ್ರೋ ಮಾರ್ಗಗಳು, ವಿಸ್ತರಣೆ ಯೋಜನೆಗಳಲ್ಲಿ ಸರ್ಕಾರ 'ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್'‌ಗಳನ್ನು ಕಡ್ಡಾಯ ಮಾಡಬೇಕು. ಅಗತ್ಯ ತಾಂತ್ರಿಕ ಮತ್ತು ಹಣಕಾಸಿನ ನಿಬಂಧನೆ ಎಲ್ಲವನ್ನು ವಿವರವಾದ ಯೋಜನಾ ವರದಿಗಳಲ್ಲಿ (ಡಿಪಿಆರ್‌ಗಳು) ಔಪಚಾರಿಕವಾಗಿ ಅಳವಡಿಸಬೇಕು. ಜೊತೆಗೆ, ಪ್ಲಾಟ್‌ಫಾರ್ಮ್-ಎಡ್ಜ್ ಸುರಕ್ಷತೆ, ಪ್ರಯಾಣಿಕರ ಚಲನೆ, ಪ್ರವೇಶಸಾಧ್ಯತೆ ಮತ್ತು ಜನದಟ್ಟಣೆ ಒಳಗೊಂಡ ಸಮಗ್ರ ಸುರಕ್ಷತಾ ಲೆಕ್ಕಪರಿಶೋಧನೆ ಆಗಬೇಕೆಂದು ಕೋರಿದರು.

ಬೆಂಗಳೂರಿನ ಮೆಟ್ರೋ ಜಾಲ ವಿಸ್ತರಣೆ ಹಾಗೂ ಪ್ರಯಾಣಿಕರ ಸಾಮರ್ಥ್ಯದ ಜೊತೆಗೆ ಸೇವೆಗಳ ಸುರಕ್ಷತೆ, ವಿಶ್ವಾಸಾರ್ಹತೆಯ ಕುರಿತು ಯೋಜಿಸಬೇಕು. ಮೆಟ್ರೋ ಪರಿಣಾಮಕಾರಿ ಸಾರ್ವಜನಿಕ ಸಾರಿಗೆಯಾಗಬೇಕಾದರೂ ಇಡೀ ಜಾಲದಲ್ಲಿ ಅನ್ವಯವಾಗುವ ಸುರಕ್ಷತಾ ಮಾನದಂಡಗಳ ಬಗ್ಗೆ ಪ್ರಯಾಣಿಕರಿಗೆ ವಿಶ್ವಾಸವಿರಬೇಕು ಎಂದು ಮೆಟ್ರೋ ಅಧಿಕಾರಿಗಳಿಗೆ ಈ ಹಿಂದೆ ತಿಳಿಸಿದ್ದಾಗಿ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+