ನಂದಿನಿ ಹಾಲಿನ ರೇಟ್ ಹೆಚ್ಚಿದ ಬೆನ್ನಲ್ಲೇ ಮೊಸರಿನ ದರವೂ ಭಾರಿ ಏರಿಕೆ: ಸಚಿವ ಕೃಷ್ಣ ಬೈರೇಗೌಡ ಹೇಳಿದ್ದೇನು? ಪರಿಷ್ಕೃತ ದರ ಇಲ್ಲಿದೆ

ರಾಜ್ಯದ ಜನತೆಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ದಿನನಿತ್ಯದ ಬಳಕೆಯ ಅಗತ್ಯ ವಸ್ತುಗಳಾದ ಹಾಲು ಮತ್ತು ಮೊಸರಿನ ದರದಲ್ಲಿ ದಿಢೀರ್ ಏರಿಕೆ ಮಾಡಲಾಗಿದೆ. ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ನಂದಿನಿ ಹಾಲಿನ ದರವನ್ನ ಪ್ರತಿ ಲೀಟರ್‌ಗೆ 8 ರೂಪಾಯಿಗಳಷ್ಟು ಏರಿಕೆ ಮಾಡಿದ ಬೆನ್ನಲ್ಲೇ, ಈಗ ಮೊಸರಿನ ಬೆಲೆಯಲ್ಲೂ ಭಾರಿ ಹೆಚ್ಚಳವಾಗಿದೆ.

ಪರಿಷ್ಕೃತ ದರಗಳು ನಾಳೆಯಿಂದಲೇ (ನವೆಂಬರ್ 1) ರಾಜ್ಯಾದ್ಯಂತ ಜಾರಿಗೆ ಬರಲಿವೆ. ಹೈನುಗಾರಿಕೆಯಲ್ಲಿ ನಷ್ಟ ಅನುಭವಿಸುತ್ತಿರುವ ರೈತರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

KMF Nandini Milk and Curd Price Hike in Karnataka Check the Latest 1 Litre Revised Rates Here

ನಂದಿನಿ ಮೊಸರಿನ ದರ ದಿಢೀರ್ ಏರಿಕೆ: 1 ಲೀ.ಗೆ 14 ರೂ. ಹೆಚ್ಚಳ

ಹಾಲಿನ ದರ ಏರಿಕೆಯ ಬೆನ್ನಲ್ಲೇ ಮೊಸರಿನ ದರವು ಗ್ರಾಹಕರ ಜೇಬಿಗೆ ಕತ್ತರಿ ಹಾಕಲಿದೆ. ಕೆಎಂಎಫ್ ಪರಿಷ್ಕೃತ ದರಪಟ್ಟಿಯ ಪ್ರಕಾರ, ಅರ್ಧ ಲೀಟರ್ ಮೊಸರಿನ ದರದಲ್ಲಿ ಬರೋಬ್ಬರಿ 6 ರೂ.ಗಳಷ್ಟು ಏರಿಕೆಯಾಗಿದೆ. ಅದೇ ರೀತಿ ಒಂದು ಕೆಜಿ ಮೊಸರಿನ ಪ್ಯಾಕ್‌ ಬೆಲೆಯಲ್ಲಿ 14 ರೂಪಾಯಿಗಳಷ್ಟು ಭಾರಿ ಹೆಚ್ಚಳ ಮಾಡಲಾಗಿದೆ.

ಇದು ಸಾಮಾನ್ಯ ಗ್ರಾಹಕರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಲಿದೆ. ಇನ್ನುಳಿದಂತೆ, ಶುಭಂ ಹಾಲು ಹಾಗೂ ಹೋಮೋಜಿನೈಸ್ಡ್ ಶುಭಂ ಹಾಲಿನ ದರದಲ್ಲಿ ಲೀಟರ್‌ಗೆ 12 ರೂಪಾಯಿಗಳವರೆಗೆ ಹೆಚ್ಚಳ ಕಂಡಿದ್ದು, ಉಳಿದ ಸಾಮಾನ್ಯ ಹಾಲಿನ ದರದಲ್ಲಿ 8 ರೂಪಾಯಿ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಹಾಲಿನ ದರಗಳು ಲೀಟರ್‌ಗೆ 54 ರೂಪಾಯಿ, 56 ರೂಪಾಯಿ, 58 ರೂಪಾಯಿ, 64 ರೂಪಾಯಿ, 65 ರೂಪಾಯಿ ಹಾಗೂ 68 ರೂಪಾಯಿಗಳಿಗೆ ತಲುಪಿವೆ.

ಹಾಲಿನ ಉತ್ಪನ್ನಗಳ ದರ ನಿಗದಿ ಒಕ್ಕೂಟಗಳಿಗೆ ಬಿಟ್ಟದ್ದು: ಸಚಿವ ಕೃಷ್ಣ ಬೈರೇಗೌಡ

ಹಾಲಿನ ದರ ಹೆಚ್ಚಳ ಹಾಗೂ ಮೊಸರಿನ ಬೆಲೆ ಏರಿಕೆ ಕುರಿತು ಪ್ರತಿಕ್ರಿಯಿಸಿರುವ ಸಚಿವ ಕೃಷ್ಣ ಬೈರೇಗೌಡ ಅವರು "ಹಾಲಿನ ದರವನ್ನು ಹೇಗೆ ನಿಗದಿ ಮಾಡಲಾಗುತ್ತದೆಯೋ, ಅದೇ ಆಧಾರದ ಮೇಲೆ ಹಾಲಿನ ಉತ್ಪನ್ನಗಳ ದರ ಕೂಡ ಸಹಜವಾಗಿಯೇ ನಿರ್ಧಾರವಾಗುತ್ತದೆ. ಹಾಲಿನ ಒಕ್ಕೂಟಗಳಿಗೆ ಬೆಲೆ ನಿಗದಿ ಮಾಡುವ ಕುರಿತಂತೆ ಕ್ಯಾಬಿನೆಟ್ ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಿ ತೀರ್ಮಾನಿಸಲಾಗಿದೆ. ಹಾಲಿನ ಉತ್ಪನ್ನಗಳ ಬೆಲೆಯನ್ನ ಏರಿಕೆ ಮಾಡುವ ಸಂಪೂರ್ಣ ಸಾಮರ್ಥ್ಯ ಹಾಗೂ ಅಧಿಕಾರವನ್ನ ನಾವು ಆಯಾ ಒಕ್ಕೂಟಗಳಿಗೆ ನೀಡಿದ್ದೇವೆ" ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ರೈತರ ಹಿತದೃಷ್ಟಿಯಿಂದ ಕರ್ನಾಟಕ ಹಾಲಿನ ದರ ಪರಿಷ್ಕರಣೆ ಅನಿವಾರ್ಯ

ಇನ್ನೂ ಈ ದಿಢೀರ್‌ ಬೆಲೆ ಏರಿಕೆಗೆ ಕಾರಣವನ್ನ ನೀಡಿರುವ ಕೆಎಂಎಫ್, ರಾಜ್ಯದಲ್ಲಿ ಎದುರಾಗಿರುವ ಬರಗಾಲದ ಪರಿಸ್ಥಿತಿ ಹಾಗೂ ಹೈನುಗಾರಿಕೆ ನಿರ್ವಹಣಾ ವೆಚ್ಚ ವಿಪರೀತವಾಗಿ ದುಬಾರಿಯಾಗಿರುವುದನ್ನು ಉಲ್ಲೇಖಿಸಿದೆ.

ಪಶು ಆಹಾರದ ಬೆಲೆ ಗಗನಕ್ಕೇರಿದ್ದು, ರೈತರು ಹೈನುಗಾರಿಕೆಯಲ್ಲಿ ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ನಷ್ಟದ ಕಾರಣಕ್ಕೆ ರೈತರು ಹೈನುಗಾರಿಕೆಯಿಂದ ಹಿಂದೆ ಸರಿಯಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಈ ಹಾಲಿನ ದರವನ್ನು ಲೀಟರ್‌ಗೆ 8 ರೂಪಾಯಿ ಹೆಚ್ಚಿಸಿದೆ.

ಈ ಏರಿಕೆಯಾದ 8 ರೂಪಾಯಿಗಳಲ್ಲಿ 1 ರೂಪಾಯಿಯನ್ನ ಹಾಲು ಒಕ್ಕೂಟಗಳ ನಿರ್ವಹಣೆಗೆ ನೀಡಲಾದರೆ, ಉಳಿದ 7 ರೂಪಾಯಿಗಳನ್ನ ನೇರವಾಗಿ ರೈತರಿಗೆ ಪಾವತಿಸಲು ನಿರ್ಧರಿಸಲಾಗಿದೆ. ಇದರಿಂದ ರೈತರ ಆರ್ಥಿಕ ಸಂಕಷ್ಟ ಸ್ವಲ್ಪ ಮಟ್ಟಿಗೆ ದೂರವಾಗಲಿದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

ಕೆಎಂಎಫ್ ರಾಜ್ಯದಾದ್ಯಂತ ಲಕ್ಷಾಂತರ ರೈತರಿಂದ ಹಾಲನ್ನ ಸಂಗ್ರಹಿಸಿ, ಗ್ರಾಹಕರಿಗೆ ಶುದ್ಧ ಹಾಗೂ ಗುಣಮಟ್ಟದ ಹಾಲನ್ನ ಪೂರೈಸುತ್ತಿದೆ. ಒಟ್ಟಾರೆಯಾಗಿ ಕೆಎಂಎಫ್ ನಂದಿನಿ ದರ ಏರಿಕೆ ಗ್ರಾಹಕರಿಗೆ ಆರ್ಥಿಕ ಹೊರೆಯಾದರೂ, ಸಂಕಷ್ಟದಲ್ಲಿರುವ ಹೈನುಗಾರರಿಗೆ ಇದು ಬಹುದೊಡ್ಡ ಆಸರೆಯಾಗಲಿದೆ.

ಗ್ರಾಹಕರು ನಾಳೆಯಿಂದಲೇ ಪರಿಷ್ಕೃತ ದರದಲ್ಲಿ ಹಾಲು ಮತ್ತು ಮೊಸರನ್ನ ಖರೀದಿಸಬೇಕಾಗಿದೆ. ಈ ದರ ಏರಿಕೆಯಿಂದಾಗಿ ಮುಂಬರುವ ದಿನಗಳಲ್ಲಿ ಹೋಟೆಲ್ ಉದ್ಯಮದಲ್ಲಿ ಟೀ, ಕಾಫಿ, ಮಜ್ಜಿಗೆ ಹಾಗೂ ಮೊಸರನ್ನದಂತಹ ತಿನಿಸುಗಳ ಬೆಲೆಯಲ್ಲೂ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+